Blog number 1872. ಮಾಜಿ ಮಂತ್ರಿ ಕೆ.ಹೆಚ್.ಶ್ರೀನಿವಾಸರಿಂದ ಸ್ಥಾಪಿಸಲ್ಪಟ್ಟ ಸಾಗರದ ಪ್ರತಿಷ್ಟಿತ ಲಾಲ್ ಬಹದ್ದೂರ್ ಕಾಲೇಜ್ .
#ಮಾಜಿ_ಮಂತ್ರಿ_ಪ್ರಖರ_ವಾಗ್ಮಿ_ಕೆ_ಹೆಚ್_ಶ್ರೀನಿವಾಸರಿಗೆ_85ನೇ_ಹುಟ್ಟುಹಬ್ಬದ_ಶುಭಾಷಯ.
#ಸಾಗರದ_ತಕ್ಷಶಿಲಾ_ವಿದ್ಯಾಲಯ_ಆಗಿರುವ_ಲಾಲ್_ಬಹದ್ದೂರು_ಕಾಲೇಜಿನ_ನಿರ್ಮಾತೃ.
#ರಾಜಕಾರಣದಲ್ಲಿ_ಉತ್ತುಂಗ_ಸ್ಥಾನದಲ್ಲಿದ್ದರು.
#ದಾನಿಗಳನ್ನು_ಪ್ರೇರೇಪಿಸಿ_ಬೃಹತ್_ವಿದ್ಯಾಸಂಸ್ಥೆ_ಸ್ಥಾಪಿಸಿದ್ದು_ಸಣ್ಣ_ಕೆಲಸವಲ್ಲ.
ನಾನು 8ನೇ ತರಗತಿಗೆ ಸಾಗರಕ್ಕೆ ಪ್ರತಿ ನಿತ್ಯ ಆನಂದಪುರಂನಿಂದ ರೈಲಿನಲ್ಲಿ ಹೋಗುತ್ತಿದ್ದಾಗ ಹೆಚ್ಚಿನವರು ಸಾಗರದ ಈ ಎಲ್.ಬಿ.ಕಾಲೇಜಿನ ವಿದ್ಯಾರ್ಥಿಗಳು.
ನಮ್ಮ ಊರಿನ ಗಣಪತಿ ಶೇಟ್ ಆ ಕಾಲದ ಎಲ್.ಬಿ.ಕಾಲೇಜಿನ ಬಾಲ್ ಬ್ಯಾಡ್ಮಿಂಟನ್ ಸ್ಟಾರ್ ಆಗಿದ್ದರು ಅವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆನಂದಪುರಂ ವಿದ್ಯಾರ್ಥಿಗಳನ್ನು ಜೋಗ್‌ಫಾಲ್ಸ್, ಇಕ್ಕೇರಿ, ವರದಳ್ಳಿಗೆ ಪಿಕ್ನಿಕ್ ಗೆ ಕರೆದೊಯ್ಯುತ್ತಿದ್ದ ಟೀಮ್ ಲೀಡರ್ ಆಗಿದ್ದರು.
ಆಗೆಲ್ಲ ಎಲ್.ಬಿ.ಕಾಲೇಜಿನಲ್ಲಿ ನಾಗೇಂದ್ರ ಪಂಡಿತರ ಕ್ರಿಕೆಟ್ ತಂಡದ ಆಟ ನೋಡಲು ನಾನು ಹೋಗುತ್ತಿದ್ದೆ (1977-78)
ಅಂತಹ ಸಂದರ್ಭದಲ್ಲಿ LB ಕಾಲೇಜಿನ ವಾರ್ಷಿಕೋತ್ಸವಕ್ಕೆ ಮಂತ್ರಿ ಕೆ.ಹೆಚ್.ಶ್ರೀನಿವಾಸ್ ಬಂದಿದ್ದರು ಅದೇ ನಾನು ಮೊದಲ ಬಾರಿಗೆ ನೋಡಿದ್ದು ಹಿಂದಿ ಸಿನಿಮಾದ ಹೀರೋಗೆ ಕಡಿಮೆ ಇರಲಿಲ್ಲ ಅವರು ಅವರ ವೇಷ ಭೂಷಣ ದುಬಾರಿ ಚರ್ಮದ ಬೂಟು ಧರಿಸಿದ್ದರು.
ಕಾಲೇಜಿನ ವಿಜ್ಞಾನ ಕೇಂದ್ರದ ಎದುರು ಕಾಲೇಜಿಗೆ ಖರೀದಿಸಿದ್ದ ಬೈನಾಕ್ಯೂಲರ್ ಅಲ್ಲಿನ ಅಧ್ಯಾಪಕ ವೃಂದ ಶ್ರೀನಿವಾಸರಿಗೆ ತೋರಿಸುತ್ತಾ ವಿವರಿಸುವಾಗ ನನಗೆ ಕುತೂಹಲ ಮತ್ತು ಬೈನಾಕ್ಯೂಲರ್ ನೋಡುವ ಅತ್ಯಾಸೆ ತಡೆಯಲಾರದೆ "ಸಾರ್ ನನಗೊಂಚೂರು ನೋಡಲು ಕೊಡಿ" ಅಂತ ಯಾಚಿಸಿಬಿಟ್ಟಿ (ಹಾಗೆ ಕೇಳಬಾರದೆಂಬ ಒಳ ಮನಸ್ಸು ಹೇಳುತ್ತಿದ್ದರೂ).. ಮಂತ್ರಿಗಳು ನನ್ನ ಕಡೆ ನೋಡಿದರು .. ಚಡ್ಡಿ ಅಂಗಿ ತೊಟ್ಟ ಹವಾಯಿ ಚಪ್ಪಲಿ ಮೆಟ್ಟಿದ ಹಳ್ಳಿ ಗುಗ್ಗನಾದ ನನ್ನನ್ನು ಅದ್ಯಾಪಕ ವೃಂದವೂ ಮಂತ್ರಿಗಳ ಜೊತೆ ಅಸಹನೀಯವಾಗಿ ನೋಡಿದ್ದು ಅವರ ಕಣ್ಣುಗಳಲ್ಲಿ ಪ್ರತಿಫಲಿಸಿದ್ದನ್ನು ನನ್ನ ಹೃದಯ ಗ್ರಹಿಸಿತು.
ಅವರೆಲ್ಲ ಬೇರೆ ಕಡೆ ಹೊರಟು ಹೋದ ನಂತರ ಅಲ್ಲಿನ ಸಿಬ್ಬಂದಿ ನನ್ನ ಕಣ್ಣಿಗೆ ಬೈನಾಕ್ಯೂಲರ್ ಹಿಡಿದರೂ ನನಗೇನು ಕಾಣಲಿಲ್ಲ ಅವತ್ತೇ ನನ್ನ ಮನಸ್ಸಲ್ಲಿ ದೊಡ್ಡವನಾದಾಗ ಬೈನಾಕ್ಯುಲರ್ ಖರೀದಿಸ ಬೇಕೆಂದು ತೀಮಾ೯ನಿಸಿದ್ದು ಇವತ್ತಿಗೂ ಈಡೇರಲೇ ಇಲ್ಲ ಇದು ಮರೆತು ಬಿಟ್ಟಿದ್ದೆ ಇವತ್ತು ಹಿರಿಯ ಪತ್ರಕತ೯ ವಿಚಾರವಾದಿ ರುದ್ರಪ್ಪನವರ FB ಪೋಸ್ಟ್ ಕೆ.ಹೆಚ್.ಶ್ರೀನಿವಾಸ್ 85 ಲೇಖನ ಓದಿದಾಗ ನೆನಪಾಯಿತು ಮತ್ತು ಇವತ್ತೇ ಬೈನಾಕ್ಯುಲರ್ ಗೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದೆ ಬಹುಕಾಲದ ಬಾಲ್ಯದ ಆಸೆ ಸದ್ಯದಲ್ಲೇ ಈಡೇರಲಿದೆ.
ಇದೇ ಸಂದರ್ಭದಲ್ಲಿ 1999 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರು ಸಾಗರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಬಿ ಪಾರಂ ನೀಡದಂತೆ ಕೆ.ಹೆಚ್.ಶ್ರೀನಿವಾಸರು ತಡೆದ ಘಟನೆ ನೆನಪಾಯಿತು ಅದನ್ನು ರುದ್ರಪ್ಪರ ಪೋಸ್ಟಿನಲ್ಲಿ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ದಾಖಲಿಸಿದ್ದೇನೆ ....
"ಆ ಕಾಲದಲ್ಲಿ ಎಲ್.ಬಿ. ಕಾಲೇಜು ಸ್ಥಾಪಿಸಲು ಸಂಚಾಲಕತ್ವ ವಹಿಸಿ, ದಾನಿಗಳನ್ನು ಓಲೈಸಿ ಯಶಸ್ವಿ ಆದದ್ದು ಸಣ್ಣ ವಿಷಯವಲ್ಲ ಈಗ ಕಾಲೇಜು ಆಡಳಿತ ಮಂಡಳಿ ಇವರ ಹಿಡಿತದಲ್ಲಿಲ್ಲ ಅಮುಲ್ ಸಂಸ್ಥೆ ಕುರಿಯನ್ ರಂತೆ ಆಯಿತು,
1999 ರಲ್ಲಿ ದೇವೇಗೌಡರು JDS ನಿಂದ ನನಗೆ ಸಾಗರದಲ್ಲಿ ಮತ್ತು ಹೊಸನಗರದಲ್ಲಿ #K_M_ಕೃಷ್ಣಮೂರ್ತಿ ಅವರಿಗೆ ವಿಧಾನಸಭಾ ಅಭ್ಯರ್ಥಿ ಮಾಡಲು ತೀಮಾ೯ನಿಸಿದ್ದರು ಆಗ ಲೋಕ ಸಭಾ ಅಭ್ಯರ್ಥಿ ಆಗಿ KH ರನ್ನು ಆಯ್ಕೆ ಮಾಡಿದಾಗ ಅವರು ನನಗೆ ಮತ್ತು KM ಗೆ ಬಿ ಪಾರಂ ಕೊಡಲೇ ಬಾರದು ಇಂತಹ ಗೂಂಡಾಗಳಿಗೆ ಟಿಕೇಟ್ ಕೊಟ್ಟರೆ ತಾನು ಲೋಕಸಬೆಗೆ ಸ್ಪರ್ದಿಸುವುದಿಲ್ಲ ಅಂತ ಹಠ ಹಿಡಿದರು, ನಾನು ಪಕ್ಷೇತರವಾಗಿ ನಿಂತೆ ಆಗ ಬಿ.ಆರ್.ಜಯಂತ್ ಜೆಡಿಎಸ್ ನಿಂದ ಸಾಗರ ಕ್ಷೇತ್ರದಿಂದ ಸ್ಪರ್ಧಿಸಿ 1300 ಮತ ಪಡೆದರು ನನಗೆ ಸುಮಾರು 10 ಸಾವಿರ ಮತ ನೀಡಿದರು ಸಾಗರದ ಜನತೆ.
Comments
Post a Comment