Skip to main content

Blog number 1859. ಸಂಪ್ರದಾಯಿಕ ದೇಸಿ ಗೃಹ ಬಳಕೆಯ ಕೋಳಿ ಸಾಕಾಣಿಕೆ ಈಗಿಲ್ಲ ಇದು ಹಳ್ಳಿಯ ಪ್ರತಿ ಕುಟುಂಬದ ಆಹಾರ ಸ್ವಾವಲಂಬನೆ ಮತ್ತು ಆರ್ಥಿಕ ಸಬಲತೆಗೆ ಪೂರಕವಾಗಿತ್ತು.

#ಕುಟುಂಬದ_ಆರ್ಥಿಕ_ಸಬಲತೆಗೆ_ಕಾರಣವಾಗಿದ್ದ

#ಗೃಹಬಳಕೆಯ_ಕೋಳಿ_ಸಾಕಾಣಿಕೆ.

#ಒಂದು_ಕಾಲದಲ್ಲಿ_ಕುಟುಂಬದ_ಆರ್ಥಿಕ_ಬದ್ರತೆಗೆ_ಉರುಗೋಲಾಗಿತ್ತು.

#ಅದುನಿಕ_ಡೈರಿ_ಪೌಲ್ಟ್ರಿ_ಕೈಗಾರಿಕೆಗಳಾದ್ದರಿಂದ_ಗೃಹ_ಕೋಳಿ_ಸಾಕಾಣಿಕೆ_ನಶಿಸಿದೆ.

#ಸಮ_ಪಾಲಿನ_ಕೋಳಿ_ಹಾವಿನ_ವಿಷ_ನಿವಾರಣೆಯ_ಕಪ್ಪು_ಕೋಳಿ

#ಮಂತ್ರವಾದಿಗಳು_ಕೇಳುವ_ಕೆಂಪು_ಕೋಳಿ_ಹಳ್ಳಿಯ_ದೈವಕ್ಕೆ_ಹರಕೆಯ_ಕೋಳಿ

#ಆಗೆಲ್ಲ_ಹಳ್ಳಿಯ_ದೈವ_ಬೂತಗಳು_ಪಾರಂ_ಕೋಳಿ_ಬಲಿ_ಒಪ್ಪಿಕೊಂಡಿರದ_ಕಾಲ

#ಇದು_ಸೋಷಿಯಲ್_ಸೈನ್ಸ್_ಸಂಶೋದನೆ_ವಿಷಯವೇ_ಆಗಿದೆ.

  ಆಗೆಲ್ಲ ಅಂದರೆ ಬಹಳ ದಿನ ಆಗಿಲ್ಲ, 30 ವರ್ಷದ ಹಿಂದೆ ಈ ಪಾಟಿ ಕೋಳಿ ಮಾಂಸದ ಪೋಲ್ಟ್ರಿ ಉದ್ಯಮ ಬೆಳೆದಿರಲಿಲ್ಲ, ಹಳ್ಳಿಗಳ ದೈವಗಳು ಬೂತಗಳು ಪಾರಂ ಕೋಳಿ ಬಲಿ ಒಪ್ಪಿಕೊಂಡಿರದ ಕಾಲದಲ್ಲಿ ಹಳ್ಳಿಯ ಪ್ರತಿ ಮನೆಯಲ್ಲೂ ಕೋಳಿ ಗೂಡು ಇರುತ್ತಿತ್ತು ಅದರಲ್ಲಿ ಕನಿಷ್ಟ ಹತ್ತಿಪ್ಪತ್ತು ಕೋಳಿಗಳು ಇರುತ್ತಿದ್ದವು.
  ಮನೆಯ ಅತ್ಯಂತ ಕಿರಿಯ ವಯಸ್ಸಿನ ಸದಸ್ಯನಿಗೆ ಬೆಳಿಗ್ಗೆ ಕೋಳಿ ಗೂಡಿನ ಬಾಗಿಲು ತೆಗದು ಕೋಳಿ ಹೊರಬಿಡುವುದು ಅವು ಸೂರ್ಯ ಮುಳುಗುವ ಸಮಯದಲ್ಲಿ ಹೊಟ್ಟೆ ತುಂಬಿಸಿಕೊಂಡು ಗೂಡಿಗೆ ಮರಳುವಾಗ ಗೂಡಿಗೆ ಕೂಡಿ ಬಾಗಿಲು ಭದ್ರ ಮಾಡುವ ಕೆಲಸ.
  ಕೋಳಿ ಗೂಡಿನಲ್ಲಿ ಮೊಟ್ಟೆ ಸಂಗ್ರಹಿಸುವುದು, ಮೊಟ್ಟಿ ಮರಿ ಮಾಡಲು ಕಾವು ನೀಡಲು ಕುಳಿತ ಕೋಳಿ ಆರೈಕೆಗಳು ಮಾಡ ಬೇಕಿತ್ತು.
 ಹತ್ತಾರು ಹೆಣ್ಣು ಕೋಳಿಗೆ ಒಂದೆರೆಡು ಗಂಡು ಹುಂಜಾ ಇರುತ್ತಿತ್ತು, ಇದರ ಮಧ್ಯದಲ್ಲಿ ದೈವಗಳಿಗೆ, ಬೂತಗಳಿಗೆ ಮೀಸಲಿಟ್ಟ ಹರಕೆ ಕೋಳಿ ಹುಂಜಗಳು ಇರುತ್ತಿದ್ದವು.
  ಕೋಳಿ ಮೊಟ್ಟೆ ತಿನ್ನಲು ಬರುವ ನಾಗರ ಹಾವು, ಕೋಳಿ ಮರಿ ಎತ್ತಿಕೊಂಡು ಹೋಗುವ ಗಿಡುಗಗಳು, ಇಡೀ ದೊಡ್ಡ ಕೋಳಿಯನ್ನೆ ಕಬಳಿಸುವ ಕಾಡಿನ ನರಿಗಳು ಮತ್ತು ಕೋಳಿ ಮಾಂಸ ಪ್ರಿಯ ಕೋಳಿ ಕಳ್ಳರ ಕಾಟವೂ ಇರುತ್ತಿತ್ತು.
  ಅವಿಭಕ್ತ ಕುಟುಂಬದಲ್ಲಿ ಆಯಾ ಸೊಸೆಯಿಂದರ ಕೋಳಿಗಳು ಅವಿಭಕ್ತ ಕೋಳಿ ಗೂಡಿನಲ್ಲಿ ಇರುತ್ತಿದ್ದವು ಮತ್ತು ಅವರವರ ಅಂದು ಬಂದುಗಳು ಬಂದಾಗ ಅವರ ಕೋಳಿ ಪಲ್ಯ ಆಗುತ್ತಿತ್ತು. ಸಾಕು ಕೋಳಿಗಳಿಂದ ಕುಟುಂಬದಲ್ಲಿ ವ್ಯಾಜ್ಯಗಳು, ಇರುಸು ಮುರುಸುಗಳಾಗಿ ಕುಟುಂಬಗಳಲ್ಲಿ ಹಿಸ್ಸೆಗಳಾಗಿದ ಉಧಾಹರಣೆಗಳಿದೆ.
   ಹಾವು ಕಚ್ಚಿದರೆ ವಿಷ ತೆಗೆಯಲು ಬೇಕಾದ ಕಪ್ಪು ಬಣ್ಣದ ಒಂದೆರೆಡು ಕೋಳಿಗಳು, ಮಾಟ ಮಂತ್ರ ತೆಗೆಯಲು ಮಂತ್ರವಾದಿಗಳಿಗೆ ಬೇಕಾದ ಕೆಂಪು ಬಣ್ಣದ ಹುಂಜಾಗಳಿಗೂ ಗೂಡಿನಲ್ಲಿ ಸ್ಥಾನವಿರುತ್ತಿತ್ತು.
  ಸಮ ಪಾಲಿನ ಕೋಳಿಗಳದ್ದೆ ಬೇರೆ ಕಥೆ, ವೀಳ್ಯದ ಎಲೆ ಮತ್ತು ಮೀನು ವರ್ಷ ಪೂರ್ತಿ ವಾರ ವಾರ ನೀಡಿ ಅದರ ಬೆಲೆಯ ಬತ್ತ ವರ್ತನೆಗೆ ಪಡೆಯುತ್ತಿದ್ದ ಬಾಯಮ್ಮಗಳು ಹಾಗೂ ಬೂಬಮ್ಮಗಳು ಎಲ್ಲಿಂದಲೋ ಕೋಳಿ ಮರಿ (ವಿಶಿಷ್ಟ ಬಣ್ಣ ಮತ್ತು ಜಾತಿಯದ್ದು ) ಸಾಕಲು ತಂದು ಕೊಡುತ್ತಿದ್ದರು ಅದರ ಮೊಟ್ಟೆಯಿಂದ ಬಂದ ಮರಿಗಳು ಅರ್ಧ ಸಾಕಿದವರಿಗೆ ಉಳಿದ ಅದ೯ ಸಂಖ್ಯೆ ಮರಿ ಬಾಯಮ್ಮ ಅಥವ ಬೂಬಮ್ಮರದ್ದು.
  ಆಗಾಗ ಕಾಡುವ ಕೋಳಿ ಕಾಯಿಲೆಯಿಂದ ಕೋಳಿ ಗೂಡು ಗೂಡೇ ಖಾಲಿ ಆಗುತ್ತಿದ್ದಾಗ ಮನೆಯ ಗೃಹಿಣಿಯರ ಪರದಾಟ ನೋಡುವಂತಿಲ್ಲ, ಆಗಾಗ್ಗೆ ಕೋಳಿ ಹೇನು ಆಗಿ ಅದರಿಂದ ಆಗುತ್ತಿದ್ದ ಪೀಡನೆಗಳು ಹೀಗೆ ಒಂದೇ ಎರಡೇ? ಸಮಸ್ಯೆಗಳು.
  ಮೊದಲೆಲ್ಲ ಬತ್ತ ಒನಕೆಯ ಒರಳಲ್ಲಿ ಕುಟ್ಟಿ ಅಕ್ಕಿ ಮಾಡಿ ಹಸನು ಮಾಡಿದಾಗ ಉಳಿಯುತ್ತಿದ್ದ ನುಚ್ಚು, ನೆಲ್ಲಕ್ಕಿ ಕೋಳಿ ಮತ್ತು ಎಮ್ಮೆ ದನಗಳಿಗೆ ಆಹಾರ ಆಗುತ್ತಿತ್ತು ಕಾಲ ಬದಲಾದಂತೆ ಅಕ್ಕಿ ಗಿರಣಿಯ ನುಚ್ಚು, ನೆಲ್ಲಕ್ಕಿ ಜೊತೆಗೆ ತೌಡು  ಇವುಗಳಿಗೆ ಬಳಕೆ ಆಗಲು ಪ್ರಾರಂಬಿಸಿತು.
  ಕೆಲ ವರ್ಷದ ಹಿಂದೆ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಪಶು ಸಂಗೋಪನಾ ಅಧಿಕಾರಿಯೋರ್ವರು ಎಷ್ಟೋ ಲಕ್ಷ ಕೋಳಿಗಳಿಗೆ ಲಸಿಕೆ ನೀಡಿದ್ದಾಗಿ ನೀಡಿದ ಹೇಳಿಕೆ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಆಗಿತ್ತು (ಸುಳ್ಳು ಲೆಕ್ಕ) .
  ಈಗ ಪೌಲ್ಟ್ರಿ ಉದ್ದಿಮೆ ಆಗಿದೆ, ಹಳ್ಳಿಯ ಗಲ್ಲಿಗಲ್ಲಿಗಳಲ್ಲಿ ಕೋಳಿ ಮಾಂಸದ ಅಂಗಡಿ ಬಂದಿದೆ, ಕೋಳಿ ಸಾಕುವ ನಾಜೂಕಿನ ಗೃಹಿಣಿಯರು ಈಗಿಲ್ಲ, ತಂದೂರಿ ಕೋಳಿ ಗ್ರಿಲ್ ಕೋಳಿ ಅಂತ ನವೀನ ಕೋಳಿ ಪದಾರ್ಥಗಳು ಸೇರಿಕೊಂಡಿದೆ.
  ಮಲೆನಾಡಿನ ಕೋಳಿ ಕಜ್ಜಾಯ, ಕರಾವಳಿಯ ಕೋರಿ ರೊಟ್ಟಿ, ಕೋಳಿ ತಾಳ್ ಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದೆ.
  ಬತ್ತ ಬೆಳೆದರೆ ನಷ್ಟ ಅಂತಾಗಿದೆ, ಊಟಕ್ಕೆ ತರಹಾವಾರಿ ಅಕ್ಕಿ ಖರೀದಿ ನಡೆದಿದೆ,ಒ0ದು ಕಾಲದ ನೆಲ್ಲಕ್ಕಿ, ನುಚ್ಚು ಮತ್ತು ತೌಡು ಹೊಸ ತಲೆಮಾರಿಗೆ ಗೊತ್ತೂ ಇಲ್ಲ.
  ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ಕೋಳಿ ಅಂಗಡಿ ತ್ಯಾಜ್ಯ ಎಸೆಯುತ್ತಾರೆ ಅದನ್ನು ತಿಂದು ಬೀದಿಯಲ್ಲಿ ಹೋಗುವವರನ್ನು ಗುರಾಯಿಸುವ ಬೀದಿ ನಾಯಿಗಳು ತಂಡ ತಂಡವಾಗಿ ಬಲಿಷ್ಟವಾಗಿ ಮಕ್ಕಳ ಮೇಲೆ ಎರಗುತ್ತಿದೆ.
  ಹೀಗೆ ಸಮಾಜದಲ್ಲಿ ಕೋಳಿ ಸಾಕಾಣಿಕೆ ಉದ್ಯಮದ ರೂಪ ಪಡೆಯುವ ಮೊದಲು ಗೃಹ ಬಳಕೆಗಾಗಿ ಕೋಳಿ ಸಾಕಾಣಿಕೆ ಹಳ್ಳಿಯ ಪ್ರತಿ ಮನೆಯ ಆಹಾರ ನಿರ್ವಹಣೆಗೆ, ಹಬ್ಬ ಹರಿದಿನಗಳಲ್ಲಿ ಸಮಾರಾಧನೆಗೆ ಬಳಕೆ ಆಗಿ ಆರ್ಥಿಕ ಸಬಲತೆ ಮತ್ತು  ಆಹಾರ ಸ್ವಾವಲಂಬನೆ ನೀಡಿತ್ತು ಎಂಬುದು ಈಗ ನೆನಪು ಮಾತ್ರ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...