Skip to main content

Blog number 1884.ಕ್ರಿಸ್ಮಸ್ ವೈಲ್ಡ್ ಎಲಿಪಂಟ್ ಆಪರೇಷನ್.. 80 ದಿನದಿಂದ ಭದ್ರಾ ಅಭಯಾರಣ್ಯದಿಂದ ಬಂದು ದಾರಿ ತಪ್ಪಿದ ಕಾಡಾನೆಗಳನ್ನು ಅವುಗಳ ಮೂಲ ನೆಲೆ ಭದ್ರಾ ಅಭಯಾರಣ್ಯ ಸೇರಿಸುವ ಅರಣ್ಯ ಇಲಾಖೆಯ ಪ್ರಯತ್ನಗಳು.

https://youtu.be/LmvAQLj_r6E?feature=shared

#ಕಾಡಾನೆಗಳನ್ನು_70_ದಿನಗಳ_ನಂತರ_ಭದ್ರಾ_ಅಭಯಾರಣ್ಯಕ್ಕೆ_ಕಳಿಸುವ_ಕೆಲಸ_ಪ್ರಾರಂಭವಾಗಿದೆ.

#ಇದು_ಸಂತೋಷದ_ಸುದ್ದಿ

#ಇವತ್ತು_ಶಿವಮೊಗ್ಗ_ಸಾಗರ_ರಾಷ್ಟ್ರೀಯ_ಹೆದ್ದಾರಿ_69_ದಾಟಿದ_ಕಾಡಾನೆಗಳು

#ಆನಂದಪುರಂ_ಸಮೀಪದ_ಗಿಳಾಲಗುಂಡಿಯಲ್ಲಿ_ರಸ್ತೆ_ದಾಟಿದೆ.

#ತುಪ್ಪೂರಿನಿಂದ_ಗಿಳಾಲಗುಂಡಿ_ತನಕ_ಮೂರು_ಗಂಟೆ_ರಾಷ್ಟ್ರೀಯ_ಹೆದ್ದಾರಿ_ವಾಹನ_ಸಂಚಾರ_ತಡೆಯಲಾಗಿತ್ತು.

#ಮುಂದೆ_ಅಯನೂರು_ರಿಪ್ಪನಪೇಟೆ_ರಸ್ತೆ_ದಾಟಿದರೆ_ಈ_ಕಾಡಾನೆಗಳು_ಮೂಲ_ನೆಲೆ_ತಲುಪಲಿದೆ.

#ಜಿಲ್ಲಾಧಿಕಾರಿಗಳಿಗೆ_ಅಭಿನಂದನೆಗಳು

#ದೀರ್ಘಾವದಿ_ದಾರಿ_ತಪ್ಪಿದ_ಕಾಡಾನೆಗಳಿಗೆ_ಹ್ಯಾಪಿ_ಜರ್ನಿ_ಬೈ_ಬೈ.

#ಕ್ರಿಸ್_ಮಸ್_ವೈಲ್ಡ್_ಎಲಿಪಂಟ್_ಆಪರೇಷನ್_ಯಶಸ್ವಿ_ಆಗಲಿ_25_ಡಿಸೆಂಬರ್_2023.

    ವಿಳಂಭವಾದರೂ ಅಂತಿಮವಾಗಿ 80 ದಿನಗಳ ನಂತರ ಭದ್ರಾ ಅಭಯಾರಣ್ಯದಿಂದ ಅರಸಾಳು- ಕೆ೦ಚನಾಲ- ಕೆರೆಹಿತ್ತಲು - ಗಿಳಾಲಗುಂಡಿ - ಪತ್ರೆಹೊಂಡ-ಚೊರಡಿ - ಕುಂಸಿ - ಅಯನೂರು - ಅಂಬ್ಲಿಗೋಳ - ಬೈರಾಪುರ ಭಾಗದಲ್ಲಿ ದಾರಿ ತಪ್ಪಿ ಸಂಚರಿಸುತ್ತಿದ್ದ ಕಾಡಾನೆಗಳನ್ನು ಅವುಗಳು ಮಾನವ ಸಂಘರ್ಷ ಮಾಡುವ ಮೊದಲೇ ಅವುಗಳ ಮೂಲ ನೆಲೆ ಭದ್ರಾ ಅಭಯಾರಣ್ಯ ತಲುಪಿಸುವ ಕೆಲಸ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಮಾಡಬೇಕು ಇಲ್ಲದಿದ್ದರೆ ಈ ಭಾಗದ ಜನರ ಜೀವ ಮತ್ತು ಕಾಡಾನೆಗಳ ಜೀವಕ್ಕೆ ಆಪತ್ತು ಎಂದು ಸುದ್ದಿ ಆಗಿತ್ತು.
  ಮೂರು ಆನೆ ಮತ್ತು ಒಂದು ಮರಿ ಆನೆ ಈ ಭಾಗದಲ್ಲಿ ಸಂಚರಿಸುತ್ತಿತ್ತು ಇವತ್ತು ಜಿಲ್ಲಾಡಳಿತ ಅರಣ್ಯ ಇಲಾಖೆ ದಾರಿ ತಪ್ಪಿದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯ ಸೇರಿಸುವ ಕೆಲಸ ಪ್ರಾರಂಬಿಸಿದೆ.
  ಇವತ್ತು ಮಧ್ಯಾಹ್ನ ರಾ.ಹೆದ್ದಾರಿ 69ರ ಶಿವಮೊಗ್ಗ ಸಾಗರ ಮಾರ್ಗದಲ್ಲಿ ತುಪ್ಪೂರಿನಿಂದ ಗಿಳಾಲಗುಂಡಿ ತನಕ ವಾಹನ ಸಂಚಾರ ನಿರ್ಬಂದಿಸಲಾಗಿದೆ ಎಂಬ ಸುದ್ದಿ ಬಂದಿತ್ತು.
  ಅರಣ್ಯ ಇಲಾಖೆಯ ಪರಿಶ್ರಮದಿಂದ ಆನಂದಪುರಂ ಸಮೀಪದ ಗಿಳಾಲಗುಂಡಿ ಸಮೀಪ ಎರೆಡು ಕಾಡಾನೆಗಳು ರಾಷ್ಟ್ರೀಯ ಹೆದ್ದಾರಿ ದಾಟಿದ ವಿಡಿಯೋ ಇಲ್ಲಿದೆ.
   ಇಲ್ಲಿಂದ ಪತ್ರೆಹೊಂಡ, ಗಿಳಾಲಗುಂಡಿ, ಕೆರೆಹಿತ್ತಲು, ಲಕ್ಕವಳ್ಳಿ, ಮಾದಾಪುರ, ಕೆಂಚನಾಲ ದಾಟಿ ಅಯನೂರು - ರಿಪ್ಪನಪೇಟೆ ರಾಜ್ಯ ಹೆದ್ದಾರಿ ದಾಟಿಸಿ ಬಿಟ್ಟರೆ ಅರಸಾಳು ನಂತರ ಭದ್ರಾ ಅಭಯಾರಣ್ಯ ಸೇರಲಿದೆ ಮಾರ್ಗ ಮದ್ಯದಲ್ಲಿ ಇವರಿಬ್ಬರಿಗೆ ಕಾಯುತ್ತಿರುವ ತಾಯಿ ಮಗು ಸೇರಿಕೊಂಡು ತಮ್ಮ 80 ದಿನಗಳ ದೀರ್ಘಾವದಿ ಅತಂತ್ರದ ದಾರಿ ತಪ್ಪಿದ ಕಷ್ಟದ ಜೀವನ ಕೊನೆಗೊಳ್ಳಲಿದೆ.
  ಈ ಪ್ರಯತ್ನಕ್ಕೆ ಸಹಕರಿಸಿದ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...