#ರಾಜ್ಯ_ಮಟ್ಟದ_ನಾಯಕತ್ವ_ಹೊಂದಬಹುದಾಗಿದ್ದ_ಕಾಗ೯ಲ್_ಅಜಿತ್_ಪಾಲ್.
#ಆ_ದಿನಗಳ_ಹೀರೋ
#ಜೋಗ್_ಕಾರ್ಗಲ್_ಪಟ್ಟಣ_ಪಂಚಾಯತ್_ಮೊದಲ_ಚುನಾವಣೆಯಲ್ಲಿ_ಜಯಬೇರಿಗೆ_ಕಾರಣಕರ್ತರು.
#ಶ್ರೀಮಂತ_ಜೈನ_ಕುಟುಂಬದ_ಕುಡಿ.
#ಲಿಂಗನಮಕ್ಕಿ_ಆಣೆಕಟ್ಟಿನಿಂದ_ಮುಪ್ಪಾನೆಯಲ್ಲಿ_ಮುಳುಗಡೆ_ಹೊಂದಿದ_ಕುಟುಂಬ
#ಕಾಗ೯ಲ್_ಸುಭಾಷ್_ಮಹಾಲೆ_ರೈಸ್_ಮಿಲ್ಲಿಗೆ_ಜಾಗ_ನೀಡಿದ_ಕುಟುಂಬ
#ಮುಪ್ಪಾನೆ_ಧನಪಾಲ್_ಗೌಡರು_ಕಾರ್ಗಲ್_ಧನಪಾಲಗೌಡರಾದರು.
1985 ರಲ್ಲಿ ಕಾರ್ಗಲ್ ಧನಪಾಲ ಗೌಡರ ತಂಗಿ ಮಗ ಶ್ರೀಕಾಂತ್ ಮತ್ತು ಲೋಕರಾಜ ಜೈನ್ ಸಾಗರ ಪೇಟೆಯ ಕನ್ನಡ ಪ್ರಭ ಪತ್ರಿಕೆಯ ಏಜೆನ್ಸಿ ನಡೆಸುತ್ತಿದ್ದರು ಆಗ ಸಾಗರ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಮಾರ್ಕ್ 4 ಡಿಸೇಲ್ ಪ್ಲೋರ್ ಗೇರಿನ ನನ್ನ ಅಂಬಾಸಡರ್ ಕಾರ್ ಇತ್ತು ನನಗಿಂತ ಮೊದಲು ಈ ಕಾರ್ ತಂದವರು ಕುಂಠೆ ಬ್ರದರ್ಸ್ ನವರು.
ಬೆಂಗಳೂರಿನ ಸೆಂಟ್ ಮಾರ್ಕ್ಸ್ ರೋಡಿನ ಹಿಂದೂಸ್ಥಾನ್ ಕಾರ್ ಸಂಸ್ಥೆಗೆ ಡಿಡಿ ಕೊಟ್ಟು 10 ತಿಂಗಳ ನಂತರ ಕಲ್ಕತ್ತಾದಿಂದ ರಸ್ತೆ ಮೂಲಕ ಬೆಂಗಳೂರಿಗೆ ತಲುಪಿ ಡಿಲವರಿ ಪಡೆದ ಅಂಬಾಸಡರ್ ಕಾರ್ ಇದು.
ಇದನ್ನು ಪ್ರತಿ ನಿತ್ಯ ಬೆಳಿಗ್ಗೆ ಶಿವಮೊಗ್ಗದಿಂದ ರಿಪ್ಪನ್ ಪೇಟೆ ಮಾರ್ಗವಾಗಿ ಸಾಗರಕ್ಕೆ ಕನ್ನಡ ಪ್ರಭ ಪತ್ರಿಕೆಯ ತಲುಪಿಸುವ ಬಾಡಿಗೆಗೆ ಬಿಟ್ಟಿದ್ದೆ ನನ್ನ ನೆನಪಿನ ಪ್ರಕಾರ ನಿತ್ಯ 125 ರೂಪಾಯಿ ಬಾಡಿಗೆಗೆ ನಂತರ ಲೋಕಲ್ ಬಾಡಿಗೆಗೆ ನನ್ನ ಕಾರು ಸಾಗರ ಸರಕಾರಿ ಆಸ್ಪತ್ರೆ ಎದುರಿನ ಟ್ಯಾಕ್ಸಿ ಸ್ಟಾಂಡ್ ಲ್ಲಿ ನಿಲ್ಲುತ್ತಿತ್ತು.
ಈ ಶ್ರೀಕಾಂತ್ ಮತ್ತು ಲೋಕರಾಜರಿಂದ ದನಪಾಲ ಗೌಡರ ಮತ್ತು ಅವರ ಪುತ್ರ ಅಜಿತ್ ಪಾಲರ ಪರಿಚಯ ಆಯಿತು ಅವರ ಕುಟುಂಬದ ಪ್ರವಾಸಗಳಿಗೆ ನನ್ನ ಕಾರು ಬಾಡಿಗೆಗೆ ಹೋಗುತ್ತಿತ್ತು.
ಈ ರೀತಿ ಸಂಪರ್ಕಕ್ಕೆ ಬಂದ ಅಜಿತ್ ಪಾಲ್ ಜೆ.ಹೆಚ್.ಪಟೇಲರ ಆತ್ಮೀಯ ವಲಯಕ್ಕೆ ಸೇರಿದರು, ರಾಜ್ಯ ಮಟ್ಟದ ಯುವ ಜನತಾ ದಳದ ಸಮಾವೇಷ / ತರಬೇತಿ ಶಿಭಿರಗಳಗಳನ್ನು ಯಶಸ್ವಿಯಾಗಿ ಜೋಗ್ ಫಾಲ್ಸ್ ನಲ್ಲಿ ನಡೆಸಿದ ಕೀರ್ತಿ ಇವರದ್ದಾಯಿತು ಈ ಮೂಲಕ ಜನತಾ ದಳದ ಎಲ್ಲಾ ರಾಜ್ಯ ಮಟ್ಟದ ನಾಯಕರಿಗೆ ಅಜಿತ್ ಪಾಲ್ ಗೆಳೆಯರಾದರು.
2001 ರಲ್ಲಿ ಜೋಗ್ ಕಾರ್ಗಲ್ ಅಧಿಸೂಚಿತ ಪ್ರಾಜೆಕ್ಟ್ ಏರಿಯಾವನ್ನು ಪಟ್ಟಣ ಪಂಚಾಯತ್ ಮಾಡಿ ಅದಕ್ಕೆ ಚುನಾವಣೆ ಘೋಷಿಸಲು ಅವತ್ತು ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪನವರು ಯಶಸ್ವಿ ಆಗಿದ್ದರು.
ಈ ಪ್ರಾಜೆಕ್ಟ್ ಏರಿಯಾದಲ್ಲಿನ ಮೊದಲ ಸ್ಥಳಿಯ ಸಂಸ್ಥೆಯ ಚುನಾವಣೆ ಆದ್ದರಿಂದ ಮತದಾರರಲ್ಲಿ ಹುಮ್ಮಸ್ಸು ಜಾಸ್ತಿ ಇತ್ತು ಆಡಳಿತ ರೂಡ ಕಾಂಗ್ರೇಸ್ ಪಕ್ಷಕ್ಕೆ ಇದು ಸುಲಭದ ಜಯ ತರುತ್ತದೆ ಎಂಬ ನಿರೀಕ್ಷೆ ಇತ್ತು ಆದರೆ ಅಜಿತ್ ಪಾಲ್ ಎಲ್ಲಾ ಕ್ಷೇತ್ರಗಳಿಗೆ ಸಂಯುಕ್ತ ಜನತಾದಳದ ಅಭ್ಯರ್ಥಿಗಳನ್ನು ಇಳಿಸಿ ಗೆಲ್ಲಿಸಿ ಮೊದಲ ಜೋಗ್ ಕಾರ್ಗಲ್ ಪಟ್ಟಣ ಪಂಚಾಯಿತಿ ಬೋರ್ಡ್ ಸ್ಥಾಪಿಸಲು ಕಾರಣರಾದರು.
ಈ ಚುನಾವಣೆಯಲ್ಲಿ ನಾನು ಜಾರ್ಜ್ ಪರ್ನಾಂಡೀಸರ ಸಮತಾ ಪಾಟಿ೯ಯ ಕರ್ನಾಟಕ ರಾಜ್ಯದ ಪ್ರದಾನ ಕಾರ್ಯದಶಿ೯ ಆಗಿ ಸಮತಾ ಪಾಟಿ೯ಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆ ಕೇಂದ್ರದ ಮಂತ್ರಿ ಶ್ರೀನಿವಾಸ್ ಪ್ರಸಾದರನ್ನು ಪ್ರಚಾರಕ್ಕೆ ಕರೆತಂದಿದ್ದೆ.
ಜಾಜ್೯ ಸಹೋದರ ಮೈಕಲ್ ಪರ್ನಾಂಡೀಸರನ್ನು ಕರೆ ತಂದಿದ್ದೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವಿವರ ಓದಬಹುದು
https://arunprasadhombuja.blogspot.com/2022/12/blog-number-1103.html.
https://arunprasadhombuja.blogspot.com/2022/12/blog-number-1106-2.html
ಇವರ ತಂದೆ ದನ ಪಾಲ್ ಗೌಡರು ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದಿಂದ ಮುಪ್ಪಾನೆಯಲ್ಲಿ ಮುಳುಗಡೆಯಿಂದ ನೂರಾರು ಎಕರೆ ಕೃಷಿ ಭೂಮಿ ಕಳೆದುಕೊಂಡು ನಂತರ ಕಾರ್ಗಲ್ ಗೆ ಬಂದು ನೆಲೆಸಿದರು, ಕಾರ್ಗಲ್ ನ ಪ್ರತಿಷ್ಟಿತ ಉದ್ಯಮಿ ಸುಭಾಷ್ ಮಹಾಲೆ ಅವರಿಗೆ ಅಕ್ಕಿ ಗಿರಣಿ ಉದ್ಯಮ ಸ್ಥಾಪನೆಗೆ ಇವರದ್ದೇ ಜಾಗ ನೀಡಿದವರು.
ಸದಾ ಕಪ್ಪು ಕೋಟು, ಬಿಳಿ ಪಂಚೆ, ಬೂಟು ಧರಿಸಿ ಮನೆಯಿಂದ ಹೊರಬರುತ್ತಿದ್ದ ದನಪಾಲಗೌಡರ ಗತ್ತೇ ಬೇರೆ ತರನದ್ದು ಅವರೂ ಈಗ ಇಲ್ಲ.
ಇವರ ಏಕೈಕ ಪುತ್ರ ಅಜಿತ್ ಪಾಲ್ ದಂಪತಿಗಳು ಚಿಕ್ಕ ವಯಸ್ಸಲ್ಲೇ ಇಹ ಲೋಕ ತ್ಯಜಿಸಿದರು ಇವರ ಏಕೈಕ ಪುತ್ರ ಸೂರಜ್ ಪಾಲ್ ಇಡೀ ಆಸ್ತಿ ಜಮೀನು ತೋಟ ನಿರ್ವಹಣೆ ಮಾಡುತ್ತಿದ್ದಾರೆ.
ಅಜಿತ್ ಪಾಲ್ ರನ್ನು ರಾಜ್ಯ ಮಟ್ಟದಲ್ಲಿ ಅವರು ಬದುಕಿದ್ದಾಗ ಅವರು ಬೆಂಬಲಿಸುತ್ತಿದ್ದ ಜನತಾ ಪರಿವಾರದಲ್ಲಿ ಸೂಕ್ತ ಸ್ಥಾನಮಾನ ನೀಡಿ ಗೌರವಿಸದಿದ್ದದ್ದು ಬೇಸರದ ಸಂಗತಿ.
ಕಾಲ ಎಲ್ಲವನ್ನೂ ಮರೆಸುತ್ತದೆ ಎಂಬಂತೆ ಕಾರ್ಗಲ್ ಅಜಿತ್ ಪಾಲ್ ಮರೆತು ಹೋಗುವ ಮುನ್ನ ಅವರ ಈ ನೆನಪು ದಾಖಲೆ ಆಗಿರಲಿ ಎಂದು ಆಶಿಸುತ್ತೇನೆ.
Comments
Post a Comment