#ಬಯಸಿದ್ದೆಲ್ಲಾ_ಸಿಗುವುದಿಲ್ಲ
#ಸಿಕ್ಕಿದ್ದೆಲ್ಲ_ಬಯಸಿದ್ದಲ್ಲ
#ಬೈನಾಕ್ಯುಲರ್_ಖರೀದಿಸುವ_ಆಸೆ_ಇವತ್ತು_ನನ್ನ_ಕೈ_ಸೇರಿತು
#ನಲವತೈದು_ವರ್ಷದ_ಹಿಂದಿನ_ಕನಸು.
https://youtu.be/ugRl9HhXyCM?feature=shared
ಈ ಬಗ್ಗೆ ಕೆಲ ದಿನಗಳ ಹಿಂದೆ ಬರೆದಿದ್ದೆ ಬಹುಶಃ ಆ ಕಾಲದಲ್ಲಿ ಸಿಕ್ಕಿದ್ದರೆ ಇಂದಿಗಿಂತ ಹೆಚ್ಚಿನ ಥ್ರಿಲ್ ಉಂಟಾಗುತ್ತಿತ್ತಾ? ಗೊತ್ತಿಲ್ಲ ಆದರೆ ಇವತ್ತು ಬೈನಾಕುಲರ್ ಕೋರಿಯರ್ ನಲ್ಲಿ ಬಂದು ತಲುಪಿದೆ.
ಸಾಮಾಜಿಕ ಜಾಲತಾಣದ ಸಹೋದರಿ ಒರ್ವರು ನನ್ನ ಲೇಖನ ಓದುತ್ತಾ ಅವರೇ ಬೈನಾಕ್ಯುಲರ್ ನನಗೆ ಕೊಡಿಸ ಬೇಕೆನ್ನಿಸಿದಂತೆ ಆದರೆ ನನ್ನ ಲೇಖನದ ಕೊನೆಯಲ್ಲಿ ನಾನು ಬೈನಾಕ್ಯುಲರ್ ಗೆ ಆರ್ಡರ್ ಮಾಡಿದ್ದು ಕ್ರಿಸ್ಮಸ್ ಗೆ ತಲುಪುವ ನಿರೀಕ್ಷೆ ಬರೆದದ್ದು ನೋಡಿ ಸುಮ್ಮನಾದೆ ಎಂದದ್ದು ಅವರ ಮಾತೃ ಹೃದಯದ ಭಾವನೆಗೆ ನಾನು ಆಭಾರಿ.
ಬೇರೆಯವರಿಗೆ ಸಿಲ್ಲಿ ಅನ್ನಿಸಬಹುದಾದ್ದು ನಮಗೆ ವಿಶೇಷ ಅನ್ನಿಸಲು ಕಾರಣ ಏನು?... ನಮ್ಮ ದೇಹದಲ್ಲಿ ಉತ್ಪಾದನೆ ಆಗುವ ಹ್ಯಾಪಿ ಹಾರ್ಮೋನ್ ಎನ್ನುವುದು.
ಇಷ್ಟ ಪಟ್ಟಿದ್ದು ಪಡೆದಾಗ ಈ ಹಾರ್ಮೋನು ನಮಗೆ ನೀಡುವ ತೃಪ್ತಿ ಸಂತೋಷಗಳು ಕೃತಕವಾಗಿ ಮಾದಕ ಪದಾರ್ಥದಿಂದಲೂ ಉದ್ದೀಪನಗೊಳಿಸಿ ಪಡೆಯಲು ಸಾಧ್ಯ.
ನನಗೆ ಬೈನಾಕ್ಯುಲರ್ ದೊಡ್ಡವನಾದಾಗ ಖರೀದಿಸ ಬೇಕನ್ನಲು ಕಾರಣವಾದ ಘಟನೆ ಈ ಲಿಂಕ್ ಕ್ಲಿಕ್ ಮಾಡಿ ಓದಿ.https://arunprasadhombuja.blogspot.com/2023/12/blog-number-1872.html
ಎಷ್ಟು ದೂರ ನೋಡಲು ಸಾಧ್ಯ ಇತ್ಯಾದಿ ಪ್ರಯೋಗ ನಾಳೆಯಿಂದ ಪ್ರಾರಂಭ ಆಗಲಿದೆ.
Comments
Post a Comment