Blog number 1865. ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಸಂದರ್ಶನ ಭಾಗ - 1 (ಅರುಣ್ ಪ್ರಸಾದ್ ಆನಂದಪುರಂ 12 - ಡಿಸೆಂಬರ್ - 2023)
https://youtu.be/Qe-ZUT337vQ?feature=shared
#ಸಂದರ್ಶನ_ಭಾಗ_1.
#ಪದ್ಮಶ್ರೀ_ಪುರಸ್ಕೃತ_ಮ೦ಜಮ್ಮ_ಜೋಗತಿ.
#ಇವರ_ಕಣ್ಣಲ್ಲಿ_ನೀರು_ತರಿಸಿದ_ನಮ್ಮ_ಊರಿನ_ರಂಗೋಲಿ_ಪ್ರವೀಣೆ_ಚಂಪಕಾಳ_ನಿಜ_ಕಥೆ
#ಮೊನ್ನೆ_ನನ್ನ_ಕಛೇರಿಯಲ್ಲಿ_ನಡೆದ_ನಮ್ಮಿಬ್ಬರ_ಮಾತುಕತೆ
#ಮೊದಲ_ಭಾಗದಲ್ಲಿ.
ಪದ್ಮಶ್ರೀ ಪುರಸ್ಕೃತರು, ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷರು, ನಿರ್ದೇಶಕರು, ರಾಜ್ಯ ಪ್ರಶಸ್ತಿ ವಿಜೇತರೂ ಆಗಿದ್ದ ಮಂಜಮ್ಮ ಜೋಗತಿ ಇಡೀ ದೇಶದಲ್ಲಿಯೇ ಮೊದಲ ತೃತಿಯ ಲಿಂಗಿ ಒಬ್ಬರು ಈ ಎಲ್ಲಾ ಗೌರವ ಸ್ಥಾನ ಮಾನಕ್ಕೆ ಭಾಜನರಾದವರು ಅಂದರೆ ಅವರಿಗೆ ಒಲಿದು ಬಂದ ಈ ಮಾನ ಸಮ್ಮಾನಗಳು ದೇಶದ ಇಡೀ ತೃತಿಯ ಲಿಂಗ ಸಮುದಾಯಕ್ಕೆ ದೊರೆತದ್ದು ಎನ್ನುವ ನಿರ್ಲಿಪ್ತ ಭಾವನೆ ಮಂಜಮ್ಮ ಜೋಗತಿ ಅವರದ್ದು.
ಅದರಲ್ಲೂ ಕನ್ನಡತಿ ವಿಜಯನಗರ ಜಿಲ್ಲೆಯ ಬಳ್ಳಾರಿ ಪಟ್ಟಣದ ವಾಸಿ ಮಂಜಮ್ಮ ಜೋಗತಿ ನಮ್ಮ ರಾಜ್ಯದವರೆಂಬ ಹೆಮ್ಮೆ ನಮ್ಮದು.
ಮಂಜಮ್ಮ ಜೋಗತಿ ಮೊದಲಿದ್ದ ಗುಡಿಸಲು ಹೇಗಿತ್ತು ಗೊತ್ತಾ ಅದರ ಪೋಟೋ ಲಗತ್ತಿಸಿದ್ದೇನೆ ನೋಡಿ, ನಂತರ ಪುಟ್ಟದಾದ ಮನೆ ಕಟ್ಟಿ ಉದ್ಘಾಟನೆ ಮಾಡಿದ್ದಾರೆ ಉದ್ಘಾಟನೆಯ ದಿನದಿಂದಲೇ ಇವರೊಂದು ಅಭಿಯಾನ ಪ್ರಾರಂಬಿಸಿದ್ದಾರೆ "ಯಾರ ಮನೆಯಲ್ಲಿ ನನ್ನಂತಹ ಮಗು ಹುಟ್ಟಿದರೆ ಕಡೆಗಾಣಿಸಬೇಡಿ, ವಿದ್ಯಾಭ್ಯಾಸ ನೀಡಿ " ಎಂಬ ಇದಕ್ಕಾಗಿ ಇವರದ್ದೇ ಒಂದು ಸಂದೇಶ ಮುದ್ರಿಸಿ ಹಂಚುತ್ತಿದ್ದಾರೆ ಇವರಿಂದ ಪ್ರೇರಣೆ ಆಗಿ ಕೇರಳ ತಮಿಳುನಾಡಿನಲ್ಲೂ ಈ ಅಭಿಯಾನ ವಿಸ್ತರಿಸಿದೆ.
ಮಹಾನ್ ಸಾಧಕಿ -ಮಾನವತವಾದಿ - ಸಮಾಜದಲ್ಲಿ ಕಡೆಗಾಣಿಸಲ್ಪಟ್ಟ ಸಮುದಾಯದ ಹಕ್ಕು ಗೌರವಗಳಿಗೆ ಹೋರಾಡುವ ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ನೀಡಿದ ನೆನಪಿನ ಕಾಣಿಕೆಗೆ ನನ್ನ ಕಛೇರಿಯ ನನ್ನ ಟೇಬಲ್ ನಲ್ಲಿ ಶಾಶ್ವತ ಜಾಗ ಇಟ್ಟಿದ್ದೇನೆ.
ಸದಾ ಹಸನ್ಮುಖಿಯಾಗಿ -ನಿಖರವಾಗಿ -ನೇರವಾಗಿ ಮತ್ತು ಅಗಾದ ನೆನಪಿನ ಶಕ್ತಿಯ ಮಂಜಮ್ಮ ಜೋಗತಿ ಅವರ ಸಂದರ್ಶನದ ಮೊದಲ ಬಾಗ ಇಲ್ಲಿದೆ.
ನಾಳೆ ಭಾಗ 2 ...
Comments
Post a Comment