Blog number 1873. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿ ಸಮೀಪದ ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಹಿತ್ತಿಲು ಗ್ರಾಮದಲ್ಲಿ ಕಾಡಾನೆ ಬಂದಿತ್ತು (19- ಡಿಸೆಂಬರ್ - 2023)
#ನಿನ್ನೆ_ರಾತ್ರಿ_ಕಾಡಾನೆಗಳು_ಬಂದ_ಸುದ್ದಿ
#ಆಚಾಪುರ_ಗ್ರಾಮಪಂಚಾಯತಿ_ಗಿಳಾಲಗುಂಡಿ_ಕೆರೆಹಿತ್ತಲಲ್ಲಿ
#ಸಾಗರ_ತಾಲೂಕಿನ_ಆನಂದಪುರ೦_ಹೋಬಳಿ_ಕೇಂದ್ರಕ್ಕೆ_4_ಕಿಲೋ_ಮೀಟರ್_ಸಮೀಪಕ್ಕೆ.
#ಐವತ್ತು_ವರ್ಷದ_ಹಿಂದೆ_ಇಲ್ಲಿಗೆ_ಕಾಡಾನೆ_ಬಂದಿತ್ತು.
ನಿನ್ನೆ ಮಧ್ಯ ರಾತ್ರಿ 2 ರ ಸಮಯದಲ್ಲಿ ಆನಂದಪುರಂ ಹೋಬಳಿ ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಹಿತ್ತಲು ಗ್ರಾಮದಲ್ಲಿನ ದಿವಂಗತ ಲಿಂಗಾರ್ಜುನ ಗೌಡರ ಪುತ್ರ ಗಿರೀಶ್, ಸಹೋದರ ಮನೋಹರ್, ದಾನೇಂದ್ರಪ್ಪ, ಮಾಜಿ ಗ್ರಾ.ಪಂ. ಸದಸ್ಯ ಷಣ್ಮುಖಪ್ಪ, ಮಲ್ಲಿಕಾರ್ಜುನಪ್ಪ, ದೇವರಾಜ್ ಬಿನ್ ಕೃಷ್ಣಪ್ಪ ಇವರ ಜಮೀನಿಗೆ ಕಾಡಾನೆ ಬಂದ ಸುದ್ದಿ ಆಗಿದೆ.
ಕಾಡಾನೆಗಳು ಈ ಊರಿಗೆ ಕಳೆದ 15 ದಿನಗಳಲ್ಲಿ ಮೂರನೆ ಸಾರಿ ಬಂದಿದೆ, ದೊಡ್ಡ ರೀತಿಯಲ್ಲಿ ಬೆಳೆ ನಾಶ ಮಾಡಿಲ್ಲವಾದರೂ ಕಾಡಾನೆ ಆಗಮನ ಈ ಪ್ರದೇಶದಲ್ಲಿ ಜನರಲ್ಲಿ ಭಯ ಉಂಟು ಮಾಡಿದೆ ಇವತ್ತು ಅರಸಾಳಿನಿಂದ ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿ ತೆರಳಿದ್ದಾರೆ.
ಕೆರೆಹಿತ್ತಲು ಮತ್ತು ಗಿಳಾಲಗುಂಡಿ ಹಿಂಭಾಗದ ಗಾಳಿಮರಡಿ ಮತ್ತು ಸೀಗೆಮರಡಿ ಗುಡ್ಡದಿಂದ ಈ ಆನೆಗಳು ಇಳಿದು ಬಂದಿದೆ ಮತ್ತು ಪುನಃ ಇದೇ ಮಾರ್ಗದಲ್ಲಿ ವಾಪಾಸು ಹೋಗಿರಬಹುದೆಂದು ಗ್ರಾಮಸ್ಥರ ಅಂದಾಜು.
ಈ ಗುಡ್ಡದ ಹಿಂದೆ ತೋಟದಕೆರೆ ಮತ್ತು ಈಟಿಕೆರೆ ಪ್ರದೇಶದಿಂದ ಆ ಭಾಗದಲ್ಲಿನ ಒಂದು ಕಾಲದ ಮ್ಯಾಂಗನೀಸ್ ಗಣಿ ಪ್ರದೇಶಗಳಿಂದ ಈ ಕಾಡಾನೆ ಬಂದಿರ ಬಹುದೆಂಬ ಗುಮಾನಿ.
ಆರಸಾಳು-ಮಸರೂರು - ಆಲವಳ್ಳಿ -ಕಮ್ಮದೂರು - ತೋಟದಕೆರೆ - ಕೆರೆಹಿತ್ತಲು ಮಾರ್ಗದಲ್ಲಿ ಸಂಚರಿಸುವ ಈ ಕಾಡಾನೆಗಳ ಅಂತಿಮ ಗಮ್ಯ ಸ್ಥಳ ಯಾವುದು? ಈ ಪ್ರದೇಶ ದಾಟಿ ಶರಾವತಿ ಹಿನ್ನೀರಿನ ಪ್ರದೇಶಕ್ಕೆ ತಲುಪುವುದಾ? ಅಥವ ಬಂದ ದಾರಿಯಲ್ಲಿ ತಿರುಗಿ ಹೋಗುತ್ತದಾ? ಗೊತ್ತಿಲ್ಲ.
ಇದೇ ಕೆರೆಹಿತ್ತಲು ಗ್ರಾಮಕ್ಕೆ 50 ವರ್ಷದ ಹಿಂದೆ 1972 ರಲ್ಲಿ ಕಾಡಾನೆ ಬಂದು ಸ್ಥಳಿಯ ಗುಮ್ಮಿ ನಾಗಣ್ಣರ ಬತ್ತದ ಗದ್ದೆ ತುಳಿದು ಹೋಗಿದ್ದು ಹಳೆಯ ನೆನಪು.
ಆನಂದಪುರಂ ಕೇಂದ್ರದಿಂದ ಕೆರೆಹಿತ್ತಲು ರಸ್ತೆ ಮಾರ್ಗದಲ್ಲಿ 6 ಕಿ.ಮಿ. ಆಕಾಶ ಮಾರ್ಗದಲ್ಲಿ 3 ರಿಂದ 4 ಕಿ.ಮಿ. ಬಹುಶಃ ಇಷ್ಟು ಸಮೀಪದಲ್ಲಿ ಕಾಡಾನೆ ಸಂಚಾರ ಆಶ್ಚರ್ಯವೇ ಸರಿ.
Comments
Post a Comment