Blog number 1893. ಜೆ.ಹೆಚ್.ಪಟೇಲರು .. ಕೊಡೇಸ್ ತ್ರಿಬಲ್ ಎಕ್ಸ್ ರಂ ... ಕುಡುಕರಿಂದ ಕುಡಿಯೋರ ಮರ್ಯಾದೆ ಹೋಗೋ ಪ್ರಸಂಗ...
#ಹೊಸ_ವರ್ಷ_2024_ಸ್ಟಾಗತಿಸುವ_ಸಂದರ್ಭದಲ್ಲಿ
#ಇದನ್ನು_ಓದಿ_ನಕ್ಕು_ಬಿಡಿ.
#ಹೊಸವರ್ಷದ_ಶುಭ_ಹಾರೈಕೆಗಳು.
#ಹೊಸ_ವರ್ಷ_2024_ಸ್ಟಾಗತಿಸುವ_ಸಂದರ್ಭದಲ್ಲಿ
#ಇದನ್ನು_ಓದಿ_ನಕ್ಕು_ಬಿಡಿ.
#ಹೊಸವರ್ಷದ_ಶುಭ_ಹಾರೈಕೆಗಳು.
ಹೊಸ ಕ್ಯಾಲೆಂಡರ್ ವರ್ಷ 2024 ಇವತ್ತು ರಾತ್ರಿ 12 ಕಳೆದಾಕ್ಷಣ ಪ್ರಾರಂಭವಾಗಲಿದೆ, ಕಳೆದ ವಷ೯ ಒಬ್ಬೊಬ್ಬರಿಗೆ ಒಂದೊಂದು ಅನುಭವ ಕೆಲವರಿಗೆ ಕಷ್ಟ.. ಕೆಲವರಿಗೆ ಸುಖ... ಕೆಲವರಿಗೆ ದುಖಃಕ್ಕೆ ಕಾರಣ ಆಗಿರಬಹುದು.
ಮುಂದಿನ ವರ್ಷ ಎಲ್ಲರಿಗೂ ಶುಭ ಲಾಭ ತರಲಿ, ಎಲ್ಲರ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇನೆ.
ನಾನು ಕೆಲ ವರ್ಷಗಳ ಹಿಂದೆ ಹೊಸ ವರ್ಷಗಳ ಸ್ವಾಗತಿಸುವ ಜೋಷ್ ನ ಪಾರ್ಟಿಗಳಲ್ಲಿ ಸೇರುತ್ತಿದ್ದೆ ಆದರೆ 2000 ಇಸವಿಯಿಂದ ಅವತ್ತು ಬೇಗ ಮಲಗಿ ಬಿಡುತ್ತೇನೆ.
ನಮ್ಮ ಲಾಡ್ಜ್ ರೆಸ್ಟೋರೆಂಟ್ ಗಳಲ್ಲಿ ಹೊಸ ವರ್ಷದ ಪಾರ್ಟಿಗಳಿಗೆ ಯಾವುದೇ ಅವಕಾಶ ಯಾವತ್ತೂ ನೀಡುವುದಿಲ್ಲ, ಸಿಬ್ಬಂದಿಗಳಿಗೆ ನಾಳೆ ಸಿಹಿ ಊಟ ನಮ್ಮ ಸಂಸ್ಥೆಯ ಟೇಬಲ್ ಕ್ಯಾಲೆಂಡರ್ ಉಡುಗೊರೆ ಇರುತ್ತದೆ.
ನಮ್ಮ ಬಾಲ್ಯದಲ್ಲಿ ಮನೆ ಸಮೀಪದ ಇಗರ್ಜಿಯ ಪ್ರಾರ್ಥನೆ ಮತ್ತು ರಾತ್ರಿ 12 ಗಂಟೆ ದಾಟಿದಾಗ ಗಂಟೆ ನಿನಾದ ಹೊಸ ವಷ೯ ನೆನಪಿಸುತ್ತಿತ್ತು.
1995 ರಲ್ಲಿ ಆನಂದಪುರಂನಲ್ಲಿ ಮೂರ್ತಿ ಎಂಬ ಸರಾಯಿ ಅಂಗಡಿ ಮಾಲಿಕರು ಆನಂದಪುರ೦ ಬಸ್ ಸ್ಟಾಂಡ್, ದಾಸಕೊಪ್ಪ ಸರ್ಕಲ್ ಮತ್ತು ಯಡೇಹಳ್ಳಿ ಸರ್ಕಲ್ ಗಳಲ್ಲಿ ಪಟಾಕಿ ಸಿಡಿಸುತ್ತಿದ್ದರು.
1998 ರ ಹಿಂದಿನ ದಿನ ಬೆಂಗಳೂರಿನ ಆನಂದರಾವ್ ಸರ್ಕಲ್ ನ ಟೂರಿಸ್ಟ್ ಲಾಡ್ಜ್ ನಲ್ಲಿ ನಾನು, ರಿಪ್ಪನಪೇಟೆ ಅಮೀರ್ ಹಂಜಾ, ಬಿ. ಪಿ.ರಾಮಚಂದ್ರ (ನಂತರ ಜಿಲ್ಲಾ ಪಂಚಾಯತ್ ಸದಸ್ಯರಾದರು) ಉಳಿದಿದ್ದ ರೂಂ ನಂಬರ್ 98 ಆದ್ದರಿಂದ ಅವತ್ತು ರಾತ್ರಿ ಅಲ್ಲಿ ಹೊಸ ವರ್ಷದ ದೊಡ್ಡ ಪಾರ್ಟಿ ಮಾಡಿದ್ದೆವು ಚಲನ ಚಿತ್ರ ನಟರಾದ ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್, ಕರಿಬಸಯ್ಯ, ಅರವಿಂದರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಿದ್ದೆ.
ಈ ಪಾರ್ಟಿಗೆ ಹರತಾಳು ಹಾಲಪ್ಪ (ನಂತರ ಶಾಸಕರು ಮಂತ್ರಿಗಳು ಆದರು) ಚಂದ್ರ ಕುಮಾರ್ ಬೋವಿ (ನಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದರು) ಅವತ್ತು ಹಾಡು ಡ್ಯಾನ್ಸ್ ಗಳ ಜೊತೆ Hercules rum ಹರಿದಿತ್ತು.
ಇದೆಲ್ಲ ನೆನಪು ಮಾತ್ರ, ಈಗಿನ ದಿನಗಳಲ್ಲಿ ವಿಪರೀತ ಕುಡಿದು ಮಿತಿಮೀರಿದ ವೇಗದಲ್ಲಿ ಡ್ರೈವ್ ಮಾಡಿ ಆಸ್ಪತ್ರೆ ಸೇರುವ ಯುವ ಜನತೆಗೆ ಈ ಕೆಳಗಿನ ಜೆ.ಹೆಚ್.ಪಾಟೀಲರ ಮಾತುಗಳು ನೀತಿ ಪಾಠದಿಂದ ಇದೆ.
ಒಮ್ಮೆ ಓದಿ ನಕ್ಕು ಬಿಡಿ ಹೊಸ ವರ್ಷ 2024 ಸ್ವಾಗತಿಸಲು ತಯಾರಾಗಿ ಬಿಡಿ.
_____________________________________________
#ಕುಡುಕರಿಂದ_ಕುಡಿಯೋರ
#ಮಯಾ೯ದೆ_ಹೋಗ್ತಾ_ಇದೆ
-#ಜೆ_ಹೆಚ್_ಪಟೇಲರು
ಶಿವಮೊಗ್ಗದಲ್ಲಿ ಮಿತ್ರರಾದ ಬ್ಯಾಂಕ್ ಕೃಷ್ಣಮೂರ್ತಿ ಅವರ ಭದ್ರಾವತಿ ರಸ್ತೆಯ ಮಲವಗೊಪ್ಪದಲ್ಲಿ ಕದಂಬ ಹೋಟೆಲ್ ಉದ್ಫಾಟನೆ ಇತ್ತು ಅಲ್ಲಿ ಜೆ.ಹೆಚ್.ಪಟೇಲರ ಒಡನಾಡಿ ಸಂಯುಕ್ತ ಜನತಾದಳದ ಲೋಕಪಾಲ ಜೈನರ ಭಾಷಣ ಅವತ್ತಿನ ಸಭೆಯ ಹೈಲೈಟ್ ಆಗಿತ್ತು.
ಸಭೆಯಲ್ಲಿ ಅನೇಕ ಗೌರವಾನ್ವಿತ ದಂಪತಿಗಳು ಉಪಸ್ಥಿತರಿದ್ದರು.
ಅವರು ತಮ್ಮ ಬಾಷಣದ ಪ್ರಾರಂಭದಲ್ಲಿ ಕುಡಿಯೋರೆ ಬೇರೆ ಕುಡುಕರೇ ಬೇರೆ ಆದರೆ ನೀವು ಹೆಣ್ಣು ಮಕ್ಕಳು ಕುಡಿಯೋರನ್ನೆಲ್ಲ ಕುಡುಕರ ಸಾಲಿಗೆ ಸೇರಿಸಿ ಬಿಡುತ್ತೀರಿ.... ಇದನ್ನ ಪಟೇಲರು ಒಂದು ಘಟನೆಯಲ್ಲಿ ಹೇಳಿದ್ದು ನೆನಪಾಯಿತು ಕೇಳಿ ಅಂತ ಶುರುಮಾಡಿದರು.
....... ಆಗ ಶಾಸಕರ ಭವನದಿಂದ ಮೆಜೆಸ್ಟಿಕ್ ತನಕ ಜನ ಸಂಚಾರ ವಿರಳ, ಸಂಜೆ 8 ಆಗುತ್ತಿದ್ದಂತೆ ಪಟೇಲರು ಕೋಡೇಸ್ xxx ರಮ್ಮು (ತ್ರಿಬಲ್ ಎಕ್ಸ್) ತರಲು ಹುಡುಗರಾದ ನಮ್ಮ ಹತ್ತಿರ ಹಣ ಕೊಟ್ಟು ಕಳಿಸಿದ್ದರು, ಅವತ್ತು ಒಂದು ದಿನ ನಾವು ರಮ್ ಬಾಟೆಲ್ ತೆಗೆದುಕೊಂಡು ಬರುವಾಗ ಶಾಸಕರ ಭವನದ ಎದರು ಇಬ್ಬರು ಹೊಟ್ಟೆ ತುಂಬಾ ಕುಡಿದು ಕೊಂಡು ಜಗಳವಾಡುತ್ತಿದ್ದರು, ಅದನ್ನ ನಾವೆಲ್ಲ ನೋಡುತ್ತಾ ನಿಂತವರಿಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ.
ಆಗ ಮೊಬೈಲ್ ಇಲ್ಲ, ಪಟೇಲರಿಗೆ ಕುಡಿಯುವ ಸಮಯ ಮೀರಿದ್ದರಿಂದ ಚಟಪಟಿಕೆಯಿಂದ ಕೋಪ ಬಂದಿತ್ತು, ಅಂತೂ ಇವರು ಅವರ ರಮ್ಮಿನ ಜೊತೆ ಪಟೇಲರ ಕೋಣೆಗೆ ತಲುಪಿದಾಗ ಪಟೇಲರು "ಯಾಕಯ್ಯ ಲೇಟ್ ಮಾಡಿದಿರಿ?" ಅಂದಾಗ ಇವರು ಕೆಳಗೆ ಇಬ್ಬರು ಪುಲ್ ಟೈಟ್ ಆಗಿ ಜಗಳ ಹೊಡೆದಾಟ ಆಗ್ತಾ ಇತ್ತು ಅದನ್ನು ನೋಡುತ್ತಾ ನಿಂತು ಬಿಟ್ಟಿದ್ದೆವು ಹಾಗಾಗಿ ಲೇಟ್ ಆಯಿತು ಅಂದೆವು.
ಆಗ ಸ್ವಲ್ಪ ಹೊತ್ತು ಸುಮ್ಮನಾದ ಪಟೇಲರು ತಮ್ಮ ಗಂಟಲು ರಮ್ಮಿನಿಂದ ಒದ್ದೆ ಮಾಡಿಕೊಂಡವರು #ಈ_ಕುಡುಕರಿOದ_ಕುಡಿಯೋರ_ಮಯಾ೯ದೆ_ಹೋಗ್ತಾ_ಇದೆ_ಅಂದರು.
ನಮಗೆ ಇದು ಅಥ೯ ಆಗಲಿಲ್ಲ ವಿವರಿಸಿ ಅಂತ ನಾವೆಲ್ಲ ದಂಬಾಲು ಬಿದ್ದಾಗ, ಆಗಷ್ಟೇ ಕೊಡೇಸ್ ತ್ರಿಬಲ್ ಎಕ್ಸ್ ರಮ್ಮಿನ ಲಯಕ್ಕೆ ಬಂದಿದ್ದ ಪಟೇಲರು ಹೇಳಿದ್ದು ಏನೆಂದರೆ... ಹೆಚ್ಚಿನ ಜನ ರಿಲ್ಯಾಕ್ಸ್ ಗೆ, ಪ್ಯಾಷನ್ ಗೆ ಅಥವ ಟೈo ಪಾಸ್ ಗೆ ಅಂತ ಕುಡಿತಾರೆ ಇವರಿಂದ ಅವರ ಕುಟುಂಬಕ್ಕೆ, ಸಮಾಜಕ್ಕೆ ಯಾವತ್ತೂ ತೊಂದರೆ ಇಲ್ಲ....
ಆದರೆ ಈ ಕುಡುಕ ನನ್ನ ಮಕ್ಕಳು ಕುಡಿದು ಬೈಯ್ದಾಡಿ, ಹೊಡೆದಾಟ ಮಾಡಿ ಚರಂಡಿಗೆ ಬಿಳುತ್ತಾರೆ....ಇದರಿಂದ ಕುಡಿಯೋರು ಅಂದರೆ ಹೆಣ್ಣು ಮಕ್ಕಳೆಲ್ಲ ಎಲ್ಲರೂ ಹಿಂಗೆ ಇತಾ೯ರೆ ಅಂತ ತಿಳಿದಿರುತ್ತಾರೆ... ಹಾಗಾಗಿ ಕುಡಿಯೋರ ಮಯಾ೯ದಿ ಈ ಕುಡುಕರಿಂದ ಹೋಗ್ತಾ ಇದೆ.... ಅಂತ ಪಟೇಲರು ಹೇಳಿದರು ಅಂತ ಲೋಕಪಾಲ್ ಜೈನ್ ಮಾತು ನಿಲ್ಲಿಸಿದಾಗ ಇಡೀ ಕಾಯ೯ಕ್ರಮದಲ್ಲಿ ಭಾಗವಹಿಸಿದವರಿಂದ ಚಪ್ಪಾಳೆ ಮತು ನಗುವಿನ ಕಲರವ ತುಂಬಾ ಹೊತ್ತು ನಿಂತಿರಲಿಲ್ಲ.
Comments
Post a Comment