https://youtu.be/vCsLsR_tzSc?feature=shared
#ಸಂದರ್ಶನ_ಭಾಗ_2
#ಪದ್ಮಪ್ರಶಸ್ತಿ_ಪುರಸ್ಕಾರ_ನೀಡುವ_ರಾಷ್ಟ್ರಪತಿ_ಅವರಿಗೇ_ದೃಷ್ಟಿ_ನಿವಾಳಿಸಿದ
#ಮಂಜಮ್ಮ_ಜೋಗತಿ
#ಹೀಗೇಕೆ_ಮಾಡಿದಿರಿ_ಎಂಬ_ಪ್ರಶ್ನೆಗೆ_ಅವರ_ಉತ್ತರ
ಕನ್ನಡತಿ ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರಿ ಪ್ರಶಸ್ತಿ ಘೋಷಣೆ ಆಗಿದ್ದು ಒಂದು ರೀತಿಯ ವೈರಲ್ ಸುದ್ದಿ ಆದರೆ ಪದ್ಮಶ್ರೀ ಪ್ರಶಸ್ತಿ ರಾಷ್ಟ್ರಪತಿ ರಾಮನಾಥ ಕೋವಿಂದರಿಂದ ಸ್ವೀಕರಿಸುವಾಗ ಮಂಜಮ್ಮ ಜೋಗತಿ ಅವರ ದೃಷ್ಟಿ ನಿವಾಳಿಸಿದ್ದು ಮತ್ತೊಂದು ವೈರಲ್ ಸುದ್ದಿ ಆಗಿತ್ತು.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ youtube ನಲ್ಲಿ ಆ ಘಟನೆಯ ದೃಶ್ಯ ವೀಕ್ಷಿಸಿ
https://youtube.com/shorts/-kv6mGBeBkY?feature=shared.
ವೇದಿಕೆಗೆ ಕರೆದಾಗ ಗಂಭೀರವಾಗಿ ನಡೆದು ಬಂದು ವೇದಿಕೆ ಮೆಟ್ಟಲಿಗೆ ನಮಸ್ಕರಿಸಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲು ತಯಾರಾಗಿದ್ದ ರಾಷ್ಟ್ರಪತಿಗಳಿಗೆ ಸೆರಗಿನಿಂದ ದೃಷ್ಟಿ ನಿವಾಳಿಸಿ ತಮ್ಮ ಎರೆಡು ಕೈ ಬೆರಳುಗಳನ್ನು ನೆಲಕ್ಕೆ ಒತ್ತಿ ನೆಟಿಗೆ ತೆಗೆದರು ... ನೆರೆದ ಸಭಿಕರಿಂದ ಚಪ್ಪಾಳೆ ಸುರಿಮಳೆ ಆಯಿತು,ಆಗ ರಾಷ್ಟ್ರಪತಿಗಳು ಸ್ವಲ್ಪ ಗೊಂದಲದಿಂದ ಒಂದು ಹೆಜ್ಜೆ ಹಿಂದೆ ಇಟ್ಟರು....
ನಂತರ ಅವರು ಮಂಜಮ್ಮ ಜೋಗತಿ ಅವರಲ್ಲಿ ಏನೋ ಕೇಳಿ ಉತ್ತರ ಪಡೆದು ಹಸನ್ಮುಖರಾಗಿ ಜೋಗತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಮಾಡಿದರು.
ನನಗೆ ಕುತೂಹಲ ಇತ್ತು ಆದ್ದರಿಂದ ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಿದ್ದೆ ಅದಕ್ಕೆ ಅವರು ಉತ್ತರಿಸಿದ್ದಾರೆ ಅದೇನೆಂದರೆ ಪ್ರಶಸ್ತಿ ಸ್ವೀಕರಿಸುವ ಮುನ್ನ ಹೇಗೆ ನಡೆದು ಬರಬೇಕು, ಹೇಗೆ ನಿಲ್ಲಬೇಕು, ಹೇಗೆ ಸ್ವೀಕರಿಸಬೇಕು ಇತ್ಯಾದಿ ತಾಲೀಮು ಮಾಡಿಸಿರುತ್ತಾರೆ ಆಗ ಈ ದೃಷ್ಟಿ ತೆಗೆಯುವುದು ಇರಲಿಲ್ಲ ಅಷ್ಟೇ ಅಲ್ಲ ಇಂತದ್ದಕ್ಕೆ ಅವಕಾಶವೂ ಇರುವುದಿಲ್ಲ.
ಕೊರಾನಾದಿಂದ ಎರೆಡು ವರ್ಷದ ಸಾಲಿನ ಪದ್ಮ ಪ್ರಶಸ್ತಿ ವಿತರಣೆ ಮಾಡಲಾಯಿತು ಆದ್ದರಿಂದ ಮೂರು ದಿನಗಳ ಕಾಲ ರಾಷ್ಟ್ರಪತಿಗಳು ಇದಕಾಗಿ ಆಯಾಸಗೊಂಡಿದ್ದು ಅವರ ಮುಖಭಾವದಿಂದ ಮಂಜಮ್ಮ ಜೋಗತಿ ಗಮನಿಸಿದ್ದರಂತೆ.
ಆ ವಯಸ್ಸಲ್ಲಿ ಸಾಲು ಸಾಲು ಪ್ರಶಸ್ತಿ ಪ್ರದಾನ ಮಾಡುವುದು ಕುಳಿತುಕೊಳ್ಳುವುದು ನಂತರ ಎದ್ದು ನಿಲ್ಲುವುದು ಮಾಡಲೇ ಬೇಕಾಗಿತ್ತು.
ಮಂಜಮ್ಮ ಜೋಗತಿ ಅವರ ಹೆಸರು ಕರೆದಾಗ ಎದ್ದು ಸ್ವೀಕರಿಸಲು ನಡೆದು ಹೋಗುವಾಗ ಇದ್ದಕ್ಕಿದ್ದಂತೆ ಮಂಜಮ್ಮ ಜೋಗತಿ ಅವರಿಗೆ ರಾಷ್ಟ್ರಪತಿ ಅವರ ದೃಷ್ಟಿ ನಿವಾಳಿಸ ಬೇಕೆನ್ನಿಸಿದೆ ಆಗ ಅವರಿಗೆ ಅವರ ತಾಯಿ ಮಂಜಮ್ಮ ಜೋಗತಿ ಅವರಿಗೆ ಬಾಲ್ಯದಲ್ಲಿ ದೃಷ್ಟಿ ನಿವಾಳಿಸುವುದು ನೆನಪಾಗಿದೆ, ತಕ್ಷಣ ಮಂಜಮ್ಮ ಜೋಗತಿ ದೃಷ್ಟಿ ನಿವಾಳಿಸಲು ಸೆರಗು ಮೂರು ಸಾರಿ ಬೀಸಲು ರಾಷ್ಟ್ರಪತಿಗಳು ಒಂದು ಹೆಜ್ಜೆ ಹಿಂದಡಿ ಇಟ್ಟು "ಯೇ ಕ್ಯಾ ಹೈ" ಅಂದಿದ್ದಾರೆ ಆಗ ಮಂಜಮ್ಮ ಜೋಗತಿ "ನಜರ್ ನಿಖಾಲ್ ರಾ ಹೂಂ" ಅಂದಾಗ ರಾಷ್ಟ್ರಪತಿಗಳು ನಿರಾಳರಾಗಿ ಮುಗುಳು ನಗೆ ಬೀರಿ " ಅಚ್ಚಾ " ಅಂದಿದ್ದಾರೆ.
Comments
Post a Comment