#ಆನಂದಪುರಂ_ಸಮೀಪದಿಂದ_ಕಾಡಾನೆಗೆ_ಅವುಗಳ_ಮೂಲ_ನೆಲೆಗೆ_ದಾರಿ_ಏರ್ಪಡಿಸಿದಾಗ
#ಎರೆಡು_ಗಂಡಾನೆ_ಮತ್ತು_ಒಂದು_ಮರಿಯಾನೆ_ಮಾತ್ರ_ಇತ್ತು.
#ಮರಿಯಾನೆಯ_ತಾಯಿ_ಎಲ್ಲಿದೆ?
#ದೀರ್ಘ_ಕಾಲ_ಮರಿಯಾನೆ_ರಕ್ಷಿಸುತ್ತಾ_ತಮ್ಮ_ಜೊತೆ_ಕಾಪಾಡಿದ_ಎರೆಡು_ಗಂಡು_ಕಾಡಾನೆಗಳು.
#ಮಲೆಶಂಕರ_ಭಾಗದಲ್ಲಿ_ಸುತ್ತಾಡುತ್ತಿರುವುದು_ಈ_ಮರಿಯಾನೆಯ_ತಾಯಿಯಾ?
#ಕಾಡಾನೆಗಳು_ಸುರಕ್ಷಿತವಾಗಿ_ತಮ್ಮ_ಮೂಲ_ಸ್ಥಾನ_ಸೇರಲಿ
#ಮರಿಯಾನೆಗೆ_ತಾಯಿಯಾನೆ_ಸಿಗಲಿ
#ಈ_ಬಾಗದ_ಜನ_ಜಾನುವಾರು_ಕಾಡಾನೆಗಳಿಗೆ_ಯಾವುದೇ_ಜೀವಹಾನಿ_ಆಗದಿರಲಿ
#ಎಂದು_ನಮ್ಮ_ಊರಿನ_ವರಸಿದ್ಧಿ_ವಿನಾಯಕ_ದೇವರಿಗೆ_ಹರಕೆ_ಮಾಡಿದ್ದೇನೆ.
ಶಿವಮೊಗ್ಗ ಸಾಗರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ನಿನ್ನೆ (25- ಡಿಸೆಂಬರ್ - 2023) ಎಲ್ಲಾ ವಾಹನ ಸಂಚಾರ ನಿಲ್ಲಿಸಿ ಕಳೆದ 80 ದಿನಗಳಿಂದ ತನ್ನ ಮೂಲ ಸ್ಥಾನಕ್ಕೆ ವಾಪಾಸಾಗಲು ಬಂದ ದಾರಿಯಲ್ಲೇ ವಾಪಾಸು ಹೋಗಲು ಪ್ರಯತ್ನಿಸಿದಾಗೆಲ್ಲ ಈ ಭಾಗದ ರೈತರು ತಮ್ಮ ಜಮೀನು ತೋಟ ಸಂರಕ್ಷಣೆಗಾಗಿ ಸಿಡಿಸುವ ಆನೆ ಪಟಾಕಿಗಳಿಂದ (ಅರಣ್ಯ ಇಲಾಖೆ ಕೂಡ ಈ ಪಟಾಕಿ ತನ್ನ ಸಿಬ್ಬಂದಿಯಿಂದ ಸಿಡಿಸಿದೆ) ಬೆದರಿ ಪುನಃ ವಾಪಾಸು ಹೋಗುತ್ತಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಶ್ರಮದಿಂದ ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಮಾಡಿಸಿದೆ.
ಈ ಸಂದರ್ಭದಲ್ಲಿನ ವಿಡಿಯೋ ವೈರಲ್ ಆಗಿದೆ ಆದರೆ ರಾಷ್ಟ್ರೀಯ ಹೆದ್ದಾರಿ ದಾಟಿದ್ದು ಬಲಿಷ್ಟವಾದ ದಂತಗಳನ್ನು ಹೊಂದಿರುವ ಎರೆಡು ಗಂಡು ಸಲಗಗಳು ಅವುಗಳು ತಮ್ಮ ಜೊತೆಗೆ ಮರಿಯಾನೆಯನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ರಾಷ್ಟ್ರೀಯ ಹೆದ್ದಾರಿ ದಾಟಿದ್ದಾವೆ.
16 - ಅಕ್ಟೋಬರ್ -2023ರಂದು ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೈರದ ಮನೆಯಲ್ಲಿ ಸಂಜೆ 6.47 PM ಗೆ ಕ್ಯಾಮೆರಾದಲ್ಲಿ ತಾಯಿ ಆನೆ ಜೊತೆ ಮರಿಯಾನೆ ಇತ್ತು.
ಹಾಗಾದರೆ ತಾಯಿ ಆನೆಯಿಂದ ಮರಿಯಾನೆ ಬೇರೆ ಆಗಿದ್ದು ಹೇಗೆ? ತಾಯಿ ಆನೆ ಈಗ ಎಲ್ಲಿದೆ? ಗುಂಪಿನ ಗಂಡಾನೆಗಳು ಅನಾಥವಾದ ಮರಿಯಾನೆ ಕಾಪಾಡುವ ಸ್ವಭಾವ ಆನೆಗಳಲ್ಲಿದೆಯಾ? ಎಂಬ ಪ್ರಶ್ನೆಗಳು ಸಹಜ.
ಕಾಡಾನೆಗಳು ತಮ್ಮ ಗುಂಪಿನ ಮರಿಯಾನೆಯ ತಾಯಿ ಮೃತ ಪಟ್ಟರೆ ಉಳಿದ ಹೆಣ್ಣು ಆನೆಗಳು ಅವುಗಳನ್ನು ರಕ್ಷಿಸುತ್ತದೆ, ಅದೇ ರೀತಿ ಗುಂಪಿನ ಗಂಡಾನೆಗಳು ಅಂತಹ ಮರಿಯಾನೆ ಪ್ರಾಯಕ್ಕೆ ಬರುವ ತನಕ ಜೊತೆಯಲ್ಲಿರುತ್ತದೆಂಬ ಮಾಹಿತಿ ಇದೆ.
ಭದ್ರಾ ಅಭಯಾರಣ್ಯದಿಂದ ಒಂದು ಮರಿಯಾನೆ ಮತ್ತು ಅದರ ತಾಯಿ ಆನೆ ಹಾಗು ಎರೆಡು ಗಂಡಾನೆ ಈ ಭಾಗಕ್ಕೆ ಬಂದಿದ್ದು ಒಂದು ಆನೆ ಮಲೆಶಂಕರ ಭಾಗದಲ್ಲಿ ಸಂಚರಿಸುತ್ತಿದೆ ಎಂಬ ಮಾಹಿತಿ ಇದೆ ಹಾಗಾಗಿದ್ದಲ್ಲಿ ಈ ಮರಿ ಆನೆಯ ತಾಯಿ ಅದೇ ಆಗಿರಬೇಕು.
ನಮ್ಮ ಭಾಗದಲ್ಲಿ ಇಷ್ಟು ದಿನ ಸಂಚರಿಸುತ್ತಿರುವ ಕಾಡಾನೆಗಳು 16 ಬಾರಿ ವಾಪಾಸು ಹೋಗುವ ವಿಪಲ ಪ್ರಯತ್ನ ಮಾಡಿದ್ದಾವೆ ಎಂದು ಈ ಭಾಗದ ರೈತ ವಾಸಿಗಳು ಹೇಳುತ್ತಾರೆ.
ಅವುಗಳು ಬಂದ ನಿರ್ಧಿಷ್ಟ ಮಾರ್ಗದಲ್ಲೇ ವಾಪಾಸು ಆಗುವಾಗ ಅಲ್ಲಿನ ರೈತರು ತಮ್ಮ ತೋಟ ಆನೆಗಳು ನಾಶ ಮಾಡಿತೆಂಬ ಭಯದಿಂದ ಸಿಡಿಸುತ್ತಿದ್ದ ಆನೆ ಪಟಾಕಿ ಇತ್ಯಾದಿ ಶಬ್ದಗಳಿಂದ ಪುನಃ ದಿಕ್ಕಾಪಾಲಾಗಿ ದಾರಿ ತಪ್ಪಿದೆ, ಇಂತಹ ಸಂದರ್ಭದಲ್ಲಿ ತಾಯಿ ಆನೆ ಹೇಗೋ ವಾಪಾಸಾಗಿದೆ ಆದರೆ ದಾರಿ ತಪ್ಪಿದ ಮರಿ ಆನೆಗೆ ಎರೆಡು ಗಂಡಾನೆಗಳು ರಕ್ಷಿಸಿ ಕಾಪಾಡಿಕೊಂಡು ಇಷ್ಟು ದಿನ ಎಲ್ಲೆಲ್ಲೋ ತಿರುಗುತ್ತಿದ್ದವು.
ಈ ಕಾಡಾನೆಗಳು ಸುರಕ್ಷಿತವಾಗಿ ತಮ್ಮ ಮೂಲ ನೆಲೆಗೆ ಆದಷ್ಟು ಬೇಗ ಸೇರಲಿ, ಮರಿಯಾನೆಗೆ ತಾಯಿ ಆನೆ ಸಿಕ್ಕು ತಾಯಿಯ ಬೆಚ್ಚನೆ ಮಡಿಲು ಸೇರಲಿ, ಈ ಭಾಗದ ಜನ ಜಾನುವಾರುಗಳ ಮತ್ತು ಈ ಕಾಡಾನೆಗಳ ಜೀವಕ್ಕೆ ಯಾವುದೇ ಹಾನಿ ಆಗದಿರಲಿ ಎಂದು ನಮ್ಮ ಊರಿನ #ಶ್ರೀ_ವರಸಿದ್ಧಿ_ವಿನಾಯಕ_ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ 2024ರ ಫೆಬ್ರುವರಿ 13ರ ಮಂಗಳವಾರ ನಡೆಯುವ ಶ್ರೀ ವರಸಿದ್ಧಿ ವಿನಾಯಕ ದೇವರ ರಥೋತ್ಸವದಂದು 101 ಕಾಯಿ ದೇವರಿಗೆ ಸಮರ್ಪಿಸುವ ಹರಕೆ ಮಾಡಿದ್ದೇನೆ.
Comments
Post a Comment