Blog number 1868. ಸಿಹಿ ತಿಂಡಿ,ಡ್ರೈಫ್ರೂಟ್ ಉದ್ಯಮದಲ್ಲಿ ನೂತನ ಪ್ಯಾಕಿಂಗ್ ತಂತ್ರಜ್ಞಾನ MAP ಬಳಸಿ ಆಕರ್ಷಕವಾದ ರಾಮಾಯಣದ ಚಿತ್ರಗಳ ಮುದ್ರಿಸಿ ಕರ್ನಾಟಕ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಪ್ಯಾಕ್ಟರಿ ಔಟ್ ಲೆಟ್ ಸರಣಿ ಪ್ರಾರಂಬಿಸಿ ಗ್ರಾಹಕರಿಂದ ಪ್ರಶಂಸೆ ಪಡೆಯುತ್ತಿರುವ 1600 ಕೋಟಿ ವಾರ್ಷಿಕ ವಹಿವಾಟಿನ ಬೋಳಾಸ್
#ಸಿಹಿ_ತಿನಿಸು_ಡ್ರೈಫ್ರೂಟ್_ಉದ್ಯಮದಲ್ಲಿ_ರುಚಿ_ಶುಚಿ_ಆಕರ್ಷಕ_ಪ್ಯಾಕಿಂಗ್
#ಸಾಗರದದಲ್ಲಿ_ಪ್ರಾರಂಭ_ಆಗಿದೆ_ಬೊಳಾಸ್_ಪ್ಯಾಕ್ಟರಿ_ಔಟ್_ಲೆಟ್
#ಇಲ್ಲಿ_ಮಾರಾಟ_ಮಾಡುವ_ಸಿಹಿತಿನಿಸು_ಡ್ರೈಫ್ರೂಟ್ಸ್_MAP_ತಂತ್ರಜ್ಞಾನದ_ಪ್ಯಾಕಿಂಗ್
#ಕಾರ್ಕಳ_ಮೂಲದ_ಬೋಳಾ_ರಾಘವೇಂದ್ರ_ಕಾಮತರ_ಉದ್ಯಮಶೀಲತೆಯ_ಕನಸು
#ಸ್ವಾತಂತ್ರ್ಯಪೂರ್ವ_1940ರಲ್ಲಿ_ಗೇರುಬೀಜ_ಉದ್ಯಮದಿಂದ_ಪ್ರಾರಂಭ
#ಮೂರನೆ_ತಲೆಮಾರಿನ_ಬೋಳಾ_ಸುರೇಂದ್ರಕಾಮತ್_ಸನ್ಸ್_ಹೆಸರಿನಲ್ಲಿ.
#ಒಂದುಸಾವಿರದ_ಆರು_ನೂರು_ಕೋಟಿ_ವಹಿವಾಟಿನ_ಡ್ರೈಪ್ರೂಟ್ಸ್_ಖಾದ್ಯತೈಲ_ಕಾಫಿ_ಜೀನು_ಸಿಹಿತಿಂಡಿ_ಸಾಫ್ಟ್_ವೇರ್_ಉದ್ಯಮ.
ನಮ್ಮ ಊರಿನ ಶುಂಠಿ ಉದ್ಯಮಿ #ಪ್ರಮೋದ್_ಶೇಟ್ ಕೆಲವು ದಿನಗಳ ಹಿಂದೆ ಬೋಳಾಸ್ ನವರ ಶಬರಿ ಸ್ವೀಟ್ ಬಾಕ್ಸ್ ದೀಪಾವಳಿ ಹಬ್ಬದ ಸಿಹಿ ಉಡುಗೊರೆಯಾಗಿ ನೀಡಿದ್ದರು ಅದರಲ್ಲಿ ತಾಜಾ ಕಾಜು ಕಟ್ಲಿ ಇತ್ತು ಮತ್ತು ಈ ಬಾಕ್ಸ್ ಆಧುನಿಕ ಪ್ಯಾಕಿಂಗ್ ತಂತ್ರಜ್ಞಾನವಾದ MAP (Modified Atmosphere Package) ಆದ್ದರಿಂದ ಈ ಬಗ್ಗೆ ಕುತೂಹಲವಾಗಿ ಅವರಲ್ಲಿ ಕೇಳಿದಾಗ ಬೋಳಾಸ್ ಪ್ಯಾಕ್ಟರಿ ಔಟ್ ಲೆಟ್ ಶೋ ರೂಂ ಸಾಗರದ ಮಾರ್ಕೆಟ್ ರಸ್ತೆಯಲ್ಲಿ ಮೈಸೂರು ಕಾಫಿ ಹೌಸ್ ಹತ್ತಿರ ತೆರೆದಿದ್ದಾರೆಂದಾಗ ಅಲ್ಲಿಂದ ಅವರ ಪ್ರಸಿದ್ಧವಾದ ಬಾದಾಮಿ ಹಲ್ವಾ, ಮೈಸೂರು ಪಾಕ್ ಇತ್ಯಾದಿ ನಿನ್ನೆ ಅವರಿಂದ ತರಿಸಿದ್ದೆ.
ಅನೇಕ ಉದ್ಯಮಿಗಳಿಗೆ ನಾನು ಅವರು ತಯಾರಿಸಿ ಮಾರಾಟ ಮಾಡುವ ತಿನಿಸುಗಳಿಗೆ ಆಕರ್ಷಕ - ಆರೋಗ್ಯಕರ ಪ್ಯಾಕಿಂಗ್ ಅಳವಡಿಸುವ ಬಗ್ಗೆ ಹೇಳುತ್ತಿರುತ್ತೇನೆ ಕೆಲವರು ಕೇಳುತ್ತಾರೆ ಕೆಲವರು ಗೇಲಿ ಮಾಡುತ್ತಾರೆ.
ಗುಣಮಟ್ಟ ಮಾತ್ರ ಅಲ್ಲ ಅದರ ಶೆಲ್ಪ್ ಲೈಫ್, ಮಾರಾಟದ ತಂತ್ರಜ್ಞಾನಗಳು ಹೆಚ್ಚು ಮಾಡುವ ಪ್ಯಾಕಿಂಗ್ ನಾವು ತಯಾರಿಸುವ ಉತ್ಪನ್ನಗಳಿಗೆ ರಾಕೇಟ್ ವೇಗದ ಚಾಲನೆ ನೀಡುತ್ತದೆ ಎಂಬುದು ನಿರಾಕರಿಸಲಾಗದ ವಾಸ್ತವ ಸತ್ಯ.
1940 ರಲ್ಲಿ ಕಾರ್ಕಳದ ಬೋಳಾಸ್ ರಾಘವೇಂದ್ರ ಕಾಮತ್ ಪ್ರಾರಂಬಿಸಿದ ಗೇರುಬೀಜ ಉದ್ಯಮ 1952 ರಲ್ಲಿ ಒಂದು ಕೋಟಿ ವಹಿವಾಟಿನಿಂದ ಅವರ ಮೂರನೆ ತಲೆಮಾರು ಈಗ ಡ್ರೈ ಪ್ರೂಟ್ - ಜೇನು - ಖಾದ್ಯ ತೈಲ_ ಸಾಫ್ಟ್ ವೇರ್ - ಸಿಹಿ ತಿಂಡಿ - ಕಾಫಿ ಉದ್ಯಮದಲ್ಲಿ ವಾರ್ಷಿಕ 1600 ಕೋಟಿ ವಹಿವಾಟು ಮಾಡುತ್ತಾ ನಮ್ಮ ಕರ್ನಾಟಕ - ಗೋವಾ ಮತ್ತು ಮಹಾರಾಷ್ಟ್ರದಲ್ಲಿ ತನ್ನ ಉತ್ಪನ್ನಗಳ ಮಾರಾಟದ ಪ್ಯಾಕ್ಟರಿ ಔಟ್ ಲೆಟ್ ಗಳ ಸರಣಿಯನ್ನು ತೆರೆಯುತ್ತಿದೆ ಅಂತಹ ಒಂದು ಔಟ್ ಲೆಟ್ ಸಾಗರದಲ್ಲಿ ತೆರೆದಿದ್ದಾರೆ ಮತ್ತು ಭರಪೂರ ವ್ಯಾಪಾರವೂ ಆಗುತ್ತಿದೆ.
ಹೊಸ ತಂತ್ರಜ್ಞಾನದ ಪ್ಯಾಕಿಂಗ್ ಎಂ- ಎ - ಪಿ ಪ್ಯಾಕ್ ಒಳಗಿನ ವಾತಾವರಣ ಮಾರ್ಪಾಡು ಮಾಡುತ್ತದೆ ಇದರಲ್ಲಿ ನೈಟ್ರೋಜನ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಗಳ ಸಂಯೋಜಿತ ಅನಿಲ ತುಂಬಿರುತ್ತಾರೆ ಇದರಿಂದ ಇಂತಹ ಪ್ಯಾಕ್ ಒಳಗಿನ ತಿನುಸುಗಳ ಶೆಲ್ಫ್ ಲೈಫ್ ವಿಸ್ತರಿಸುತ್ತದೆ ಕಾರಣ ಒಳಗಿನ ತಿನಿಸು ವಾತಾವರಣದಲ್ಲಿನ ಆಮ್ಲಜನಕಕ್ಕೆ ತೆರೆಯದಿರುವುದರಿಂದ ಹೆಚ್ಚು ದಿನಗಳ ಕಾಲ ಅದರ ಒಳಗಿನ ತಿನಿಸಿನ ತಾಜಾ ತನ ಉಳಿಯುತ್ತದೆ.
ಬೋಳಾಸ್ ಸಂಸ್ಥೆಯ ಮೂರನೆ ತಲೆಮಾರಿನವರು ನೂತನ ತಂತ್ರಜ್ಞಾನದ MAP ಪ್ಯಾಕಿಂಗ್ ಮೇಲೆ ಆಕರ್ಷಕವಾಗಿ ಡಿಸೈನ್ ಮಾಡಿದ್ದಾರೆ, ರಾಮಾಯಣದ ಕಥೆಗಳು ಚಿತ್ರಗಳು ಅಳವಡಿಸಿ ಅದರಲ್ಲಿ ನೂತನ ತಂತ್ರಜ್ಞಾನದಲ್ಲಿ ಶುದ್ಧ ತುಪ್ಪದಿಂದ ಆಮದು ಮಾಡಿಕೊಂಡ ಉತ್ಕೃಷ್ಟ ಬಾದಾಮಿ - ಪಿಸ್ಟಾ - ಗೇರು ಬೀಜ ಇತ್ಯಾದಿ ಬಳಸಿ ಸಿಹಿ ತಿಂಡಿ ಉದ್ಯಮ ವಿಸ್ತರಿಸಿದ್ದಾರೆ.
ಹಬ್ಬ ಹರಿದಿನಗಳಲ್ಲಿ, ಹುಟ್ಟುಹಬ್ಬ, ವಿವಾಹ, ವಾರ್ಷಿಕೊತ್ಸವಗಳಲ್ಲಿ ನಮ್ಮ ಬಜೆಟ್ ನಲ್ಲಿ ಸಿಹಿ ತಿಂಡಿ, ಡ್ರೈ ಫ್ರೂಟ್ಸ್ ಕೊಡುಗೆ ಆಗಿ ಕೊಡಲು ಅತ್ಯುತ್ತಮ ಆಯ್ಕೆ ಆಗಿದೆ.
ಈ ಯಶಸ್ವಿ ಉದ್ಯಮದ ಹಿಂದಿನ ಬೋಳಾಸ್ ಕಾಮತ್ ಕುಟುಂಬದ ಪರಿಶ್ರಮ ಉದ್ಯಮಿಗಳಿಗೆ ಮಾರ್ಗದರ್ಶಕ ಮತ್ತು ಪ್ರೇರಕವಾಗಿದೆ.
Comments
Post a Comment