Blog number 1855. ಮತ್ತೆ ಮತ್ತೆ ಓದಬೇಕೆನ್ನಿಸುವ ಲಾರಾ ಇಂಗೆಲ್ಸ್ ವೈಲ್ಡರ್ ಬರೆದ 9 ಸರಣಿ ಕಥಾ ಪುಸ್ತಕಗಳು ಲಿಟಲ್ ಹೌಸ್ ಸಿರೀಸ್
#ಮತ್ತೆ_ಮತ್ತೆ_ಓದ_ಬೇಕೆನ್ನಿಸುವ
#ಲಾರಾ_ಇಂಗೆಲ್ಸ್_ವೈಲ್ಡರ್_ಬರೆದ
#ಲಿಟಲ್_ಹೌಸ್_ಸೀರೀಸ್
#ಪ್ರೊಪೆಸರ್_ಎಸ್_ಅನಂತನಾರಾಯಣರು_ಅನುವಾದಿಸಿದ
#ಪೂರ್ಣಚಂದ್ರ_ತೇಜಸ್ವಿ_ಪುಸ್ತಕ_ಪ್ರಕಾಶನ_ಪ್ರಕಟಿಸಿದ_ಸರಣಿ_ಪುಸ್ತಕಗಳು
#ಒಮ್ಮೆ_ಓದಲು_ಪುಟ_ತೆರೆದರೆ_ಕೊನೆಯ_ಪುಟದವರೆಗೆ_ಓದಿಸು_ಕೊಂಡು_ಹೋಗುವ_ಪುಸ್ತಕ.
ಲಾರಾ ಎಲಿಜಬೆತ್ ಇಂಗೆಲ್ಸ್ ವೈಲ್ಡರ್ ಅಮೆರಿಕಾದ ಪ್ರಖ್ಯಾತ ಸಾಹಿತಿ ಅವರ ಮನೆ ಸ್ಮಾರಕವಾಗಿ ಮಾಡಲಾಗಿದೆ.
1867ರಲ್ಲಿ ಜನಿಸಿದ ಇವರು ಚಿಕ್ಕವರಿದ್ದಾಗ ಇವರ ಕುಟುಂಬ ಸೂಕ್ತ ನೆಲೆಗಾಗಿ ಸೂಕ್ತ ಪರಿಸರ ಹುಡುಕಿ ವಲಸೆ ಹೋಗುವ ಆ ಸಂದರ್ಭದ ಪರಿಸರ ವಿಕೋಪಗಳು, ಅನುಭವಿಸಿದ ಕಷ್ಟ, ದೈರ್ಯಶಾಲಿ ತಂದೆಯ ಪರಿಶ್ರಮ, ಬುದ್ದಿವಂತ ತಾಯಿ ಕುಟುಂಬ ಸಲಹುತ್ತಾ ಮಕ್ಕಳಿಗೆ ಸಂಸ್ಕಾರವಂತರಾಗಿ ವಿದ್ಯಾವಂತರಾಗಿ ಮಾಡುವ ಆದಿನಗಳನ್ನು ಸ್ವತಃ ನೋಡಿದ ಬಾಲಕಿ ಲಾರಾ ಬರೆದ ಈ ಸರಣಿ 9 ಪುಸ್ತಕ ಪ್ರಸಿದ್ದವಾಗಿದೆ.
ವಿಶ್ವದಾದ್ಯಂತ ಎಲ್ಲಾ ಭಾಷೆಗೂ ಅನುವಾದವಾಗಿದೆ ಇದನ್ನು 1965 ರಲ್ಲಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲು ಪ್ರಾರಂಬಿಸಿದವರು ಪ್ರೋಪೆಸರ್ ಎಸ್. ಅನಂತನಾರಾಯಣರು ಇದು ಕನ್ನಡದ ಓದುಗರ ಮನಸೆಳೆದಿತ್ತು ಮತ್ತು ಪ್ರಸಿದ್ದಿ ಪಡೆಯುತ್ತಿದ್ದಂತೆ ಅನಂತನಾರಾಯಣರ ಆಕಾಲ ನಿರ್ಗಮನದಿಂದಾಗಿ ಲಾರಾ ಅವರ ಕೃತಿ ಪೂರ್ತಿ ಪ್ರಕಟವಾಗಲಿಲ್ಲ, ಕೆಲಸ ಅರ್ಧಕ್ಕೆ ನಿಂತಿತ್ತು.
2006 ರಲ್ಲಿ ಬೆಂಗಳೂರಿನ ಗಾಂಧಿನಗರದ ಸ್ವಫ್ನಾ ಬುಕ್ ಹೌಸ್ ನಲ್ಲಿ ಈ ಸರಣಿಯ 9 ಪುಸ್ತಕಗಳನ್ನು ಖರೀದಿಸಿ ತಂದಿದ್ದೆ.
ಭಾಗ 1. ದೊಡ್ಡ ಕಾಡಿನ ಪುಟ್ಟ ಮನೆ.
ಭಾಗ 2. ಹುಲ್ಲುಗಾವಲಿನ ಪುಟ್ಟ ಮನೆ.
ಭಾಗ 3 ರೈತರ ಹುಡುಗ.
ಭಾಗ 4. ಪ್ಲಮ್ ನದಿಯ ತೀರದಲ್ಲಿ.
ಭಾಗ 5. ಸಿಲ್ವರ್ ಲೇಖ್ ದಡದಲ್ಲಿ,
ಭಾಗ 6. ಚಳಿಯ ಸುಳಿಯಲ್ಲಿ.
ಭಾಗ 7. ಹುಲ್ಲುಗಾವಲಿನಲ್ಲಿ ಪುಟ್ಟ ಮನೆ.
ಭಾಗ 8. ಆ ಸೊಗಸಿನ ಬಂಗಾರದ ದಿನಗಳು.
ಭಾಗ 9. ಮೊದಲ ನಾಲ್ಕು ವರ್ಷಗಳು.
1932-1943 ರಲ್ಲಿ ಈ ಪುಸ್ತಕಗಳು ಇಂಗ್ಲೀಷ್ ಬಾಷೆಯಲ್ಲಿ ಪ್ರಕಟವಾಗಿ ಸಾಹಿತ್ಯ ಲೋಕದಲ್ಲಿ ದೊಡ್ಡ ಅಲೆ ಸೃಷ್ಟಿಸಿತ್ತಂತೆ ಅದರ ಕನ್ನಡ ಅನುವಾದ ಕೂಡ ಅದ್ಬುತವಾಗಿದೆ.
ಲಿಟಲ್ ಹೌಸ್ ಸೀರಿಸ್ ಟೀವಿ ಸೀರಿಯಲ್ ಆಗಿಯೂ ಪ್ರಸಿದ್ಧಿ ಪಡೆದಿದೆ.
ಲಾರಾ ಇಂಗಲ್ಸ್ ವೈಲ್ಡರ್ ಬರಹಗಾರ್ತಿ - ಶಿಕ್ಷಕಿ - ಪತ್ರಕರ್ತೆ - ಕೃಷಿಕಳಾಗಿ 1957 ರಲ್ಲಿ ತಮ್ಮ 90ನೆ ವಯಸ್ಸಿನಲ್ಲಿ ಇಹಲೋಕ ತ್ಯಜಿಸುತ್ತಾರೆ.
ಯುರೋಪಿನಿಂದ ಅಮೇರಿಕಾಗೆ ವಲಸೆ ಬಂದವರು ತಮ್ಮ ನೆಲೆಗಾಗಿ ಹೋರಾಡುವ, ಇವರಿಂದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ನರ ಅಸಹಕಾರ, ಪರಿಸರದಲ್ಲಿ ಸಂಪೂರ್ಣ ಬರ್ಪ ಆಗಿ ಪರಿಸರ ವಿಕೋಪ, ಸ್ಥಳಿಯ ಆಡಳಿತಗಳ ರೀತಿ ನೀತಿಗಳು, ಸಮುದಾಯದಲ್ಲಿ ಸ್ಥಳಿಯ ಶಾಲೆ, ಚರ್ಚ್ ಗಳು ಹೀಗೆ ರಸವತ್ತಾದ ಈ ಕುಟುಂಬದ ನಿಜ ಕಥೆಯ ಜೊತೆ 18ನೆ ಶತಮಾನದ ಅಮೇರಿಕಾದ ಇತಿಹಾಸ ಈ ಒಂಬತ್ತು ಪುಸ್ತಕದಲ್ಲಿ ಓದುತ್ತಾ ಓದುತ್ತಾ ಅನುಭವಿಸುವ ಈ ಸರಣಿ ಪುಸ್ತಕ ನೀವು ಓದಲೇ ಬೇಕು.
ಇದನ್ನು ನೀವು ಈ ಕೆಳಕಂಡ ಲಿಂಕ್ ಮೂಲಕ ಖರೀದಿಸಬಹುದು.
https://www.sapnaonline.com/books/dodda-kadinalli-putta-mane-putta-ananthanarayana-s-1234009757-5551234009750
Comments
Post a Comment