#ಮಲೆನಾಡಿನ_ಪತ್ರಕರ್ತರಲ್ಲಿ_ಹೊಸತನದ_ಕೊರತೆ_ಆಗದಿರಲಿ.
#ಸುದ್ದಿ_ಆಗದ್ದನ್ನು_ಸುದ್ದಿ_ಮಾಡಲಿ
#ಸುದ್ದಿ_ಆಗದ_ಸುದ್ದಿ_ಎಂಬ_ಲೋಪವಾಗದಿರಲಿ
#ಸತ್ತಂತೆ_ಇರುವ_ವ್ಯವಸ್ಥೆ_ಬಡಿದೆಚ್ಚರಿಸುವ೦ತ_ಕೆಲಸ_ಪತ್ರಕರ್ತರಿಂದ_ಸಾದ್ಯವಿದೆ
#ಪತ್ರಿಕೆ_ಮತ್ತು_ಪತ್ರಕರ್ತರು_ಸ್ಥಳಿಯ_ಸುದ್ದಿ_ಮೂಲಗಳನ್ನು_ಕಡೆಗಾಣಿಸದಿರಲಿ.
ನಾನು ಸಣ್ಣಿಂದನೇ ಪತ್ರಿಕೆಗಳನ್ನು ಓದುತ್ತಾ ಬಂದವನು ಆಗ ಪೇಪರ್ ಯಾವ ಕಾರಣಕ್ಕೂ ಕಾಲಿನಿಂದ ತುಳಿಯಬಾರದಂತ ಸರಸ್ವತಿ ದೇವಿಯಾಗಿದ್ದಳು,ಗೊತ್ತಿಲ್ಲದೆ ಕಾಲು ತಾಗಿಸಿದರೆ ಪಶ್ಚಾತ್ತಾಪದಿಂದ ಅದಕ್ಕೆ ನಮಸ್ಕರಿಸಿ ಕ್ಷಮೆ ಕೇಳುತ್ತಿದ್ದೆವು.
ಆಗೆಲ್ಲ ಪತ್ರಕರ್ತರೆಂದರೆ ಬಡ ಬ್ರಾಹ್ಮಣ ಪುರೋಹಿತರಂತೆ ಸಮಾಜದ ಅಂಕು ಡೊಂಕು ತಿದ್ದ ಬೇಕು, ಸಂವಿಧಾನಕ್ಕೆ ಚ್ಯುತಿ ಬಂದರೆ ಎಚ್ಚರಿಸ ಬೇಕು, ಕಾನೂನು ಸುವ್ಯವಸ್ಥೆ ಕಾಪಾಡಲು ಅವೇಳೆಯಲ್ಲೂ ಎದ್ದು ಬರಬೇಕು ಆದರೆ ಅವನಿಗೆ ಸಂಭಾವನೆ ? ಸಮಾಜದಲ್ಲಿ ಗೌರವ? ಈಗಿನ ರೀತಿ ಇರಲಿಲ್ಲ.
ಈಗ ಎಲ್ಲದೂ ಇದೆ, ಸಂಖ್ಯೆಯೂ ಬರಪೂರ ಆದರೆ ಸುದ್ದಿಯಾಗದ ಸುದ್ದಿಗಳು ಮತ್ತು ಸುದ್ದಿಯ ಬರಗಾಲ ಸೃಷ್ಟಿ ಆಗಿದೆ.
ಈಗ ಪ್ರತಿ ನಿತ್ಯ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಸುದ್ದಿಗಳು ಪತ್ರಿಕಾ ಗೋಷ್ಟಿ - ಶಂಕುಸ್ಥಾಪನೆ - ಸನ್ಮಾನಗಳು ಆದ್ದರಿಂದ ಜನ ಸಾಮಾನ್ಯರಿಗೆ ಉಪಯೋಗ ಆಗುವಂತ ತನಿಖಾ ಲೇಖನಗಳು ಪ್ರಕಟವಾಗುವುದು ತುಂಬಾ ಅಪರೂಪ.
ರಾಜ್ಯದಲ್ಲೇ ರಾಜಕೀಯ ಕ್ಷೇತ್ರದಲ್ಲಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೇಂದ್ರ ಸ್ಥಾನದಲ್ಲಿರುವ ಶಿವಮೊಗ್ಗದಲ್ಲಿ ಇರುವ ಪತ್ರಿಕೋದ್ಯಮ ಮತ್ತು ಮೈಸೂರಿನಲ್ಲಿ ಇರುವ ಪತ್ರಿಕೋದ್ಯಮ ಹೋಲಿಸಿ ನೋಡಿದರೆ ಅರ್ಥವಾದೀತು.
ರಾಜಕೀಯ ಕ್ಷೇತ್ರದಂತೆ ಪತ್ರಿಕಾ ಕ್ಷೇತ್ರ ಕೂಡ ಕುಲಷಿತ ಆಗಿರುವುದರಿಂದ ರಾಜ್ಯ ಮಟ್ಟದ ಪತ್ರಿಕೆಗಳ ಪತ್ರಕರ್ತರಿಗೆ ಅನೇಕ ಮಿತಿಗಳಿದೆ, ಲಕ್ಷ್ಮಣ ರೇಖೆ ದಾಟಿದರೆ ಉದ್ಯೋಗಕ್ಕೆ ಕತ್ತರಿ ಬೀಳುವುದು ಸುಳ್ಳಲ್ಲ.
ಪತ್ರಕರ್ತರ ಮೇಲೆ ಹಲ್ಲೆ, ಜಗಳಗಳೂ ಮಾಡುವ ಭಯ ಉಂಟು ಮಾಡುವ, ಮಾತು ಕೇಳದಿದ್ದರೆ ಪತ್ರಕರ್ತನನ್ನೇ ಬ್ಲಾಕ್ ಮೇಲ್ ಪತ್ರಕರ್ತ ಎಂದು ಹಣೆ ಪಟ್ಟಿ ಹಚ್ಚುವ ನಿತ್ಯದ ಸವಾಲುಗಳೂ ಎದುರಿಸ ಬೇಕಾಗಿದೆ.
ಪತ್ರಿಕಾ ವಲಯದಲ್ಲಿ ಒಳ್ಳೆಯವರೂ ಕೆಟ್ಟವರೂ ಇರುವುದು ಸಹಜ, ಎಲ್ಲರೂ ಇರಲಿ ಪತ್ರಿಕಾ ಧರ್ಮ ಉಳಿಯಲಿ, ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಸುಧಾರಣೆಗೆ, ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಂವಿದಾನದ ಚೌಕಟ್ಟಿನಲ್ಲಿ ಶಾಸಕಾಂಗ - ಕಾಯಾ೯ಂಗ - ನ್ಯಾಯಾಂಗ ಕಾರ್ಯ ನಿರ್ವಹಿಸಲು ಎಚ್ಚರಿಕೆಯ ಗಂಟೆ ಆದ್ದರಿಂದ ಪತ್ರಿಕೆ ಮತ್ತು ಪತ್ರಕರ್ತರನ್ನು ನಾವು ಗೌರವಿಸಿ ಪ್ರೋತ್ಸಾಹಿಸಬೇಕು.
ಇವತ್ತೂ ಹಾಯ್ ಬೆಂಗಳೂರು ಪತ್ರಿಕೆ ಇರಬೇಕು ಅನ್ನಿಸುತ್ತದೆ, 1989 ರಲ್ಲಿ ಖ್ಯಾತ ಪತ್ರಕರ್ತರಾದ ವಿ.ಎನ್.ಸುಬ್ಬರಾವ್ ಸಾಗರ ವಿಧಾನಸಭಾ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪರ ಸಂದರ್ಶನ ವ್ಯವಸ್ಥೆ ಮಾಡಲು ಕೇಳಿದಾಗ ನನ್ನ ಶಿಷ್ಟ #ಶೇಖ್ಅಮೀರ್ ಹಳೇ ಮನೆಯಲ್ಲಿ ಕಾಗೋಡು ಮತ್ತು ಸುಬ್ಬರಾವ್ ಸಂದರ್ಶನದ ವ್ಯವಸ್ಥೆ ಮಾಡಿದ್ದೆ.
ಇವತ್ತು ಉತ್ಸಾಹಿ ಯುವ ಪತ್ರಕರ್ತ #ದೇಶಾದ್ರಿ_ಹೊಸಮನೆ ಫೇಸ್ ಬುಕ್ ಪೋಸ್ಟ್ ಲ್ಲಿ ಲೋಕಲ್ ಪೇಪರ್ V/s ಸ್ಟೇಟ್ ಪೇಪರ್ ವರದಿಗಾರರ ವಿಚಾರದಲ್ಲಿ ಲೇಖನ ಒಂದನ್ನ ಬರೆದದ್ದು ಓದಿದಾಗ ಈ ಕೆಳಗಿನ ನನ್ನ ಅನುಭವದ ಪ್ರತಿಕ್ರಿಯೆ ಬರೆದಿದ್ದೆ .....
ಮಲೆನಾಡಿನ ಪತ್ರಕರ್ತರಲ್ಲಿ ಹೊಸತನದ ಕೊರತೆ ಆಗದಿರಲಿ,ನಾನು ನನ್ನ ತಾಲ್ಲೂಕಿನ ಅಂಚಿನ ಹೆರಿಟೇಜ್ ಬ್ರಿಡ್ಜ್ ನಿರ್ನಾಮ ಮಾಡಿದ ಸರ್ಕಾರದ ಈಗಿನ ವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಬರೆದಿದ್ದೆ
https://arunprasadhombuja.blogspot.com/search?q=%E0%B2%B9%E0%B3%86%E0%B2%B0%E0%B2%BF%E0%B2%9F%E0%B3%87%E0%B2%9C%E0%B3%8D
ಶಿರಸಿ ವಿಧಾನಸಭಾ ಕ್ಷೇತ್ರದ ಇದನ್ನು ನಾಡಿನ ಪತ್ರಿಕೆ ಟೀವಿ ಚಾನಲ್ ಈ ಕ್ಲೂ ಬಳಸಿಕೊಂಡು ವರದಿ ಮಾಡಿ ಸಂಬಂದಿಸಿದವರನ್ನು ಪ್ರಶ್ನಿಸುತ್ತಾರೆಂದು ನಿರೀಕ್ಷೆ ಮಾಡಿ ಎಲ್ಲಾ ಮೀಡಿಯ ಗ್ರೂಪಿಗೆ ಹಾಕಿದ್ದೆ ಯಾರೂ ಮುಂದುವರಿಸಲಿಲ್ಲ.
ಈಗ ನಮ್ಮ ಭಾಗದಲ್ಲಿ 70 ದಿನಗಳಿಂದ ದಾರಿ ತಪ್ಪಿ ಸಂಚರಿಸುತ್ತಿರುವ ಕಾಡಾನೆಗೆ ಸುಲಭ ಮಾರ್ಗ ತೋರಿಸಿ ಭದ್ರಾ ಅರಣ್ಯಕ್ಕೆ ತಲುಪಿಸ ಬೇಕು ಎಂದು ನಾನು ಅನೇಕ ಲೇಖನ ಬರೆದಿದ್ದೇನೆ ಆದರೆ ಈ ಬಗ್ಗೆ ಸಂಬಂದ ಪಟ್ಟ ಇಲಾಖೆಗಳು ಕ್ರಿಯಾಶೀಲರಾದ ಬಗ್ಗೆ ಅನುಮಾನ ಇದೆ https://arunprasadhombuja.blogspot.com/2023/12/blog-number-1879-68.html
ಇದು ಕೇವಲ ಸುದ್ದಿ ಆಗಬಾರದು, ಸಂಬಂದ ಪಟ್ಟವರನ್ನ ಈ ಬಗ್ಗೆ ಕ್ರಿಯಾಶೀಲರನ್ನಾಗಿ ಮಾಡುವ ಶಕ್ತಿ ಪತ್ರಿಕೋದ್ಯಮಕ್ಕೆ ಇದೆ ಆದರೆ ಅದನ್ನು ಮರೆಯಬಾರದು... #ಸತ್ತಂತೆ_ಇರುವವರನ್ನು_ಬಡಿದೆಬ್ಬಿಸುವ_ಕೆಲಸ_ಶಿವಮೊಗ್ಗ_ಪತ್ರಕರ್ತರಿಂದ_ಆಗಲಿ.
Comments
Post a Comment