Blog number 1869. ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯ ಸ್ಮಾರಕ ಆನಂದಪುರಂನ ಚಂಪಕ ಸರಸ್ಸುವಿನ 400 ನೆ ವರ್ಷಾಚಾರಣೆ ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ನೇತೃತ್ವ ವಹಿಸಲಿ ನಾಡಿನ ಮುಖ್ಯಮಂತ್ರಿ ಕರೆತಂದು ಉದ್ಘಾಟಿಸಲಿ ಎಂದು ಆಶಿಸುತ್ತೇನೆ.
#ಗೋಪಾಲಕೃಷ್ಣ_ಬೇಳೂರು
#ಮೂರನೆ_ಅವಧಿಯಲ್ಲಿ_ಶಾಸಕರಾಗಿ_ಮಂತ್ರಿ_ಆಗುವ_ನಿರೀಕ್ಷೆಯಲ್ಲಿದ್ದಾರೆ.
#ಕೆಳದಿ_ರಾಜ_ವೆಂಕಟಪ್ಪನಾಯಕರು_ನಿರ್ಮಿಸಿದ_ಪಟ್ಟಣ_ಸದಾಶಿವಸಾಗರವೇ
#ಈಗಿನ_ಸಾಗರ_ಪಟ್ಟಣ_ಸಾಗರ_ವಿಧಾನಸಭಾ_ಕ್ಷೇತ್ರದ_ಶಾಸಕರು
#ಅವರದೇ_ವಿದಾನಸಭಾ_ಕ್ಷೇತ್ರದ_ಸ್ಮಾರಕ_ಚಂಪಕ_ಸರಸ್ಸುವಿಗೆ_400ನೇ_ವಷಾ೯ಚಾರಣೆ.
#ಬರುವ_2024_ಮತ್ತು_2025_ಪೂರ್ತಿ_ವರ್ಷಾಚಾರಣೆ_ನಡೆಸ_ಬಹುದು
#ರಾಜ್ಯದ_ಮುಖ್ಯಮಂತ್ರಿ_ಕರೆಸಿ_ಅದ್ದೂರಿ_ಕಾರ್ಯಕ್ರಮ_ಹಮ್ಮಿಕೊಳ್ಳ_ಬಹುದು
#ಕೆಳದಿ_ಅರಸರ_ಮೂಲ_ದೀವರಾ_ಈ_ಬಗ್ಗೆ_ಸಂಶೋದನೆಗಳಾಗಲಿ.
ಕೆಳದಿ ಸಾಮ್ರಾಜ್ಯದಲ್ಲಿ ದೀರ್ಘ ಅವದಿ ಅಂದರೆ 43 ವರ್ಷ ಆಡಳಿತ ಮಾಡಿ ಸಾಮ್ರಾಜ್ಯ ವಿಸ್ತರಿಸಿದ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಸದಾಶಿವ ಸಾಗರ ಎಂಬ ಪಟ್ಟಣವೇ ಈಗಿನ ಸಾಗರ ಪಟ್ಟಣ.
ಕೆಳದಿ ರಾಜ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವ ನಾಯಕರ ಹೆಸರಲ್ಲಿ ಈ ಪಟ್ಟಣ ನಿರ್ಮಿಸಿದ್ದು ಈಗಿನ ಗಣಪತಿ ಕೆರೆಯೆ ಸದಾಶಿವ ಸಾಗರ.
ಯುದ್ಧದಲ್ಲಿ ಗೆದ್ದು ಬಂದಾಗ ಊರ ಮಧ್ಯದಲ್ಲಿ ಮಾರಿಕಾಂಬಾ ಗದ್ದಿಗೆ ಸ್ಥಾಪಿಸುತ್ತಾರೆ ಅದೇ ಸಾಗರದ ಈಗಿನ ಪ್ರಸಿದ್ಧವಾದ ಮಾರಿಕಾಂಬಾ ದೇವಿಯ ದೇವಾಲಯ ಮತ್ತು ಮೂರು ವರ್ಷಕೊಮ್ಮೆ ಈ ಜಾತ್ರೆ ರಾಜ್ಯದಲ್ಲೇ ಪ್ರಸಿದ್ದಿ ಪಡೆದಿದೆ.
ಈ ಐತಿಹಾಸಿಕ ಮಹತ್ವದ ಸಾಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವವರು ಇಡೀ ರಾಜ್ಯದ ಗಮನ ಸೆಳೆಯುವ ನಡೆ - ನುಡಿ - ವೇಷಭೂಷಣಗಳ ಗೋಪಾಲಕೃಷ್ಣ ಬೇಳೂರು ಇವರು ಮೂರನೇ ಬಾರಿ ಸಾಗರ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ ಇವರ ಸೀನಿಯಾರಿಟಿ ಮತ್ತು ಬಹುಸಂಖ್ಯಾತ ದೀವರ ಜಾತಿ ಆಧಾರದ ಮೇಲೆ ಮೊದಲ ಹಂತದ ಮಂತ್ರಿ ಮಂಡಳದಲ್ಲಿ ಮಂತ್ರಿಗಳಾಗುತ್ತಾರೆಂಬ ನಿರೀಕ್ಷೆ ಇತ್ತು ಆದರೆ ಎರಡನೆ ಅವಧಿಯ ಮಂತ್ರಿ ಆಗುವ ನಿರೀಕ್ಷೆ ಇದೆ.
ಗೆಳೆಯರಾದ ಗೋಪಾಲಕೃಷ್ಣ ಬೇಳೂರು 2013ರಲ್ಲಿ ಇವರು ಬಿಜೆಪಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಜೆಡಿಎಸ್ ಸೇರಿ ವಿಧಾನ ಸಭಾ ಚುನಾವಣೆಗೆ ಸ್ಪರ್ದಿಸಿದಾಗ ನಾನು ಸಾಗರ ತಾಲೂಕಿನ ಜೆಡಿಎಸ್ ಅಧ್ಯಕ್ಷ , ಆ ಚುನಾವಣೆಯಲ್ಲಿ ಕಾಗೋಡು ಕಾಂಗ್ರೆಸ್ ನಿಂದ ವಿಜಯಿ ಆದರು, ಜೆಡಿಎಸ್ ಗೋಪಾಲಕೃಷ್ಣ ಬೇಳೂರು 23 ಸಾವಿರ ಮತ ಗಳಿಸಿದ್ದರು, ಬಿಜೆಪಿಯಿಂದ ಸ್ಪರ್ಧಿಸಿದ್ದ ಶರಾವತಿ ಸಿ.ರಾವ್ 5 ಸಾವಿರ ಮತ ಪಡೆದಿದ್ದರು.
ರಾಜ ವೆಂಕಟಪ್ಪ ನಾಯಕ ಆನಂದಪುರಂ ಕೋಟೆಯಿಂದ (ಆಗ ಅದರ ಹೆಸರು ಯಡೇಹಳ್ಳಿ ಕೋಟೆ) ಕವಲೆದುರ್ಗ, ಬಿದನೂರಿಗೆ ಪ್ರಾತಃ ಕಾಲದಲ್ಲಿ ಕುದುರೆ ಸವಾರಿ ಮಾಡುತ್ತಾ ಹೋಗುತ್ತಿದ್ದಾಗ ಬಲ ಬಾಗದ ಆನಂದಪುರ೦ನ ಗುತ್ಯಮ್ಮ ದೇವರ ಗುಡಿಗೆ ನಮಸ್ಕರಿಸಿ ಎಡಕ್ಕೆ ತಿರುಗಿದರೆ ಅಲ್ಲಿನ ಮನೆ ಎದರು ಸುಂದರ ರಂಗೋಲಿ ನೋಡುತ್ತಿದ್ದರು ಇದು ಸುಂದರಿ ರಂಗೋಲಿ ಪ್ರವೀಣೆ ಬೆಸ್ತರ ಚಂಪಕಾಳ ಕೈಯಲ್ಲಿ ಅರಳುತ್ತಿದ್ದ ರಂಗೋಲಿ ಇದೇ ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾಳ ದುರಂತ ಪ್ರೇಮ ಕಥೆ.
ಮಾಂಸಹಾರಿ ಶೂದ್ರ ಹೆಣ್ಣು ಮಗಳ ರಂಗೋಲಿಯಿಂದ ಆಕರ್ಷಿತರಾಗಿ ಮದುವೆ ಆಗಿದ್ದು ಪಟ್ಟದ ರಾಣಿ ಭದ್ರಮ್ಮಾಜಿ ಅವರಿಗೆ ಆಗಿ ಬರದೆ ಅನ್ನಾಹಾರ ತ್ಯಜಿಸಿ ಮೃತರಾಗುತ್ತಾರೆ, ಇದು ರಾಜ ವೆಂಕಟಪ್ಪ ನಾಯಕರ ಮೇಲೆ ಪ್ರಜೆಗಳಲ್ಲಿ ಕೆಟ್ಟ ಅಭಿಪ್ರಾಯ ಉಂಟಾಗುತ್ತದೆ (ಇಟಲಿ ಪ್ರವಾಸಿ ಡೊಲ್ಲಾವಲ್ಲೆ ಈ ಸಂದರ್ಭದಲ್ಲಿ ರಾಜ ವೆಂಕಟಪ್ಪ ನಾಯಕರ ಬೇಟಿಗಾಗಿ ಆವಿನಳ್ಳಿಯಲ್ಲಿ ಕಾಯುತ್ತಿರುತ್ತಾರೆ ಅವರು ಇದನ್ನು ದಾಖಲಿಸಿದ್ದಾರೆ).
ಇದರಿಂದ ನೊಂದ ಬೆಸ್ತರ ರಾಣಿ ಚಂಪಕಾ ವಜ್ರದ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಚಂಪಕಾಳ ಸ್ಮರಣಾರ್ಥ ನಿರ್ಮಿಸಿದ ಪ್ರೇಮ ಸೌಧ, ಸ್ಮಾರಕ, ಸಮಾದಿ ಸ್ಥಳ #ಚಂಪಕ_ಸರಸ್ಸು ಇದರಿಂದಲೇ #ಆನಂದಪುರಂ ಎಂಬ ಹೆಸರು ಬಂತು.
ಈ ಸ್ಮಾರಕ ನಿರ್ವಹಣೆಗಾಗಿ ಸಮೀಪದ ಬನ್ನಿ ಮಂಟಪದ ಹತ್ತಿರ ಇದ್ದ ಮಹಾಂತರ ಮಠಕ್ಕೆ(ಉತ್ತರ ಭಾರತದ ಗೋರಕನಾಥದ ನಾಥ ಪಂಥದ್ದು, ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಸಂಬಂದಿಸಿದ್ದು) ವಹಿಸುತ್ತಾರೆ ಇದಕ್ಕಾಗಿ ಈ ಮಠಕ್ಕೆ ಅಡಿಕೆ ಬತ್ತ ಇತ್ಯಾದಿ ಸಾಗಾಣಿಕೆಗೆ ಸುಂಕದ ವಿನಾಯಿತಿ ನೀಡುತ್ತಾರೆ ಇದೆಲ್ಲ ದಾಖಲೆಗಳು ಲಭ್ಯವಿದೆ.
ಈ ಅಂತರ್ಜಾತಿ ವಿವಾಹ ರಾಜ ವೆಂಕಟಪ್ಪ ನಾಯಕರನ್ನ ಇತಿಹಾಸದಿಂದ ತೆಗೆದು ಹಾಕುವ ಕೆಲಸ ಆಗಿನ ಕೆಳದಿ ರಾಜ ವಂಶಸ್ಥರಲ್ಲಿ ನಡೆದು ಬಂದಿದ್ದು ಸುಳ್ಳಲ್ಲ.
ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯೇ ರಾಜ ವೆಂಕಟಪ್ಪ ನಾಯಕರನ್ನು ಜಾತಿ ಕಾರಣದಿಂದ ಇತಿಹಾಸದಲ್ಲಿ ಮುಸುಕು ಮಾಡಲು ಕಾರಣವಾಗಿದೆ, ರಾಜಾಶ್ರಯದ ಕವಿಗಳೂ ಇದನ್ನು ದಾಖಲಿಸಲು ಸಾಧ್ಯವೂ ಇಲ್ಲ.
ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಆನಂದಪುರಂನ ಚಂಪಕ ಸರಸ್ಸು ಅಭಿವೃದ್ದಿ ಪಡಿಸಲು ಮುಂದಾಗ ಬೇಕು.
ಕೆಳದಿ ಅರಸರ ಮೂಲ ಅವರು ಈ ಭಾಗದ ಬಹುಸಂಖ್ಯಾತ ದೀವರ ಜಾತಿಯವರ?...ಈ ಬಗ್ಗೆ 10 ನೇ ಶತಮಾನದ ಶಿಲಾ ಶಾಸನಗಳಲ್ಲಿ ಕಾಣಬಹುದಾದ ನಾಯಕರು ಯಾರು?... ಆದರೆ ಇದನ್ನು ಹೇಳಲು ಬರೆಯಲು ಅಗೋಚರ ಭಯ ಈ ಜನಾಂಗದಲ್ಲಿದೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋದನೆಗಳು ಆಗಬೇಕು.
ಕೆಳದಿ ಅರಸರ ಕೊನೆಯ ವಂಶಸ್ಥರು ಕೇರಳದ ಕುಂಬಳೆ ಭಾಗದ ರಾಮ ಕ್ಷತ್ರಿಯರು.
ಮಾನ್ಯ ಶಾಸಕರಲ್ಲಿ ವಿನಂತಿ, ಕೆಳದಿ ರಾಜ ವೆಂಕಟಪ್ಪ ನಾಯಕರ ಹೆಸರು ಚಿರಸ್ಥಾಯಿ ಮಾಡುವಂತೆ ಸಾಗರ ಪಟ್ಟಣದಲ್ಲಿನ ರಸ್ತೆ, ರಂಗಮಂದಿರಗಳಿಗೆ ಅವರ ಹೆಸರು ಇಡಬೇಕು.
ಆನಂದಪುರಂನಲ್ಲಿ ರಾಷ್ಟೀಯ ಹೆದ್ದಾರಿ ಕನ್ನಡ ಸಂಘದ ಎದುರು ಪದವಿ ಪೂರ್ವ ಕಾಲೇಜ್ ಮತ್ತು ಕೆ.ಎಂ.ಎಸ್ ರೈಸ್ ಮಿಲ್ ಮಧ್ಯದ ಹಾಳು ಬಿದ್ದಿರುವ ನಕಾಶೆ ಕಂಡ ಚಂಪಕ ಸರಸ್ಸುಗೆ ತಲುಪುವ ರಸ್ತೆ ರಾಜರು ನಿರ್ಮಿಸಿದ ಚಂಪಕ ಸರಸ್ಸು ರಸ್ತೆ ಇದನ್ನು ಸರಿಪಡಿಸಿ ಚಂಪಕ ಸರಸ್ಸುವಿಗೆ ವೀಕ್ಷಣೆಗೆ ಪ್ರವಾಸಿಗಳಿಗೆ ಅನುವು ಮಾಡಿ ಕೊಡಲು ವಿನಂತಿಸುತ್ತೇನೆ.
ಕೆಳದಿ ರಾಜ ವೆಂಕಟಪ್ಪ ನಾಯಕರ (ಆಡಳಿತ 1586-1629) ಪಟ್ಟದ ರಾಣಿ ಭದ್ರಮ್ಮಾಜಿ ಮರಣ 25 -ಆಕ್ಟೋಬರ್ - 1624, ಇತಿಹಾಸಕಾರ ಪಿಯೊತ್ರಾ ಡೊಲ್ಲಾವಲ್ಲೆ ಇಕ್ಕೇರಿ ಕೋಟಿಯಲ್ಲಿ ರಾಜ ವೆಂಕಟಪ್ಪ ನಾಯಕರ ಬೇಟಿ 8- ನವೆಂಬರ್ -1624.
ಚಂಪಕ ರಾಣಿ ಮರಣ ಅಂದಾಜು 1624ರ ನವೆಂಬರ್ ಅಥವ ಡಿಸೆಂಬರ್ ಆದ್ದರಿಂದ 2024-25 ಚಂಪಕ ರಾಣಿಯ ಸ್ಮಾರಕದ ನಾಲ್ಕು ನೂರನೇ ವರ್ಷಾಚಾರಣೆ ಆಗಿ ಆಚರಿಸ ಬೇಕು.
ಶಾಸಕರಾದ ಗೋಪಾಲಕೃಷ್ಣ ಬೇಳೂರು ಇದರ ನೇತೃತ್ವ ವಹಿಸಿ ರಾಜ್ಯದ ಮುಖ್ಯಮಂತ್ರಿಗಳನ್ನು ಕರೆಸಿ ಉದ್ಘಾಟಿಸಬೇಕು ವರ್ಷಪೂರ್ತಿ ಆಚರಣೆ ನಡೆಸಬೇಕು ಎಂದು ವಿನಂತಿಸುತ್ತೇನೆ.
ವಂದನೆಗಳೊಂದಿಗೆ
ಕೆ.ಅರುಣ್ ಪ್ರಸಾದ್.
17-ಡಿಸೆಂಬರ್ -2024.
Comments
Post a Comment