Blog number 1861. ಗ್ರೀಸಿನಲ್ಲಿ ಜೈಲಿನ ಖೈದಿಗಳಿಗೆ ಶಿಕ್ಷೆ ನೀಡಲು ಬಳಸುತ್ತಿದ್ದ ಮ್ಯಾನ್ಯೂಯಲ್ ಕ್ಲಿಪ್ಪರ್ ಬಾಲ್ಯದಲ್ಲಿ ನಮ್ಮ ಕ್ಷೌರದಲ್ಲಿ ಆಗಿನ ನಮ್ಮ ಆನಂದಪುರಂನ ಹೈಟೆಕ್ ಸಲೂನ್ ಮಾಲಿಕ ರಾಮಣ್ಣ ಬಳಸುತ್ತಿದ್ದರು ಅದು ಆ ಕಾಲದ ಆದುನಿಕ ಸಲೂನಿನ ಶೋ ಪೀಸ್ ಆಗಿತ್ತು.
#ಮ್ಯಾನ್ಯೂಯಲ್_ಕ್ಲಿಪ್ಪರ್_ನಮ್ಮ_ಬಾಲ್ಯದಲ್ಲಿ_ಅತಿಹೆಚ್ಚು_ನೋವು_ತರಿಸಿದ_ಕ್ಷೌರಿದ_ಯಂತ್ರ.
#ಪ್ರತಿತಿಂಗಳು_ಇದನ್ನು_ಎದುರಿಸ_ಬೇಕಾದ_ಭಯ.
#ಇಂಜೆಕ್ಷನ್_ಕೊಡುವಾಗ_ಆಸ್ಪತ್ರೆಯಲ್ಲಿ_ಮಕ್ಕಳು_ಅಳುತ್ತಿದ್ದಂತೆ
#ಸಲೂನಿನಲ್ಲಿ_ರಚ್ಚೆ_ಹಿಡಿಯುತ್ತಿದ್ದರು
#ಮಕ್ಕಳ_ತಲೆಯನ್ನು_ಅಲುಗಾಡದಂತೆ_ಪೋಷಕರು_ಹಿಡಿದುಕೊಳ್ಳುತ್ತಿದ್ದರು
#ಈ_ಯಂತ್ರ_ಬಳಸಲೇ_ಬೇಕೆಂಬ_ಹಠ_ಸಲೂನ್_ಮಾಲಿಕರದ್ದು
#ಈಗಿನ_1980ರ_ನಂತರದಲ್ಲಿ_ಜನಿಸಿದ_ತಲೆಮಾರಿಗೆ_ಇದು_ಗೊತ್ತಿಲ್ಲ
ನನ್ನ ಬಾಲ್ಯದಲ್ಲಿ ಪ್ರಬಾವ ಬೀರಿದ ಡುಮಿಂಗ್ ರೆಬೆಲೋ ಲೇಖನ ಬರೆದಿದ್ದೆ ಅದರಲ್ಲಿ ಅವರು ಪ್ರತಿ ತಿಂಗಳು ಆನಂದಪುರದ ರಾಮಣ್ಣನ ಸಲೂನಿನಲ್ಲಿ ಕಷ್ಟಪಟ್ಟು ನನ್ನ ಕ್ಷೌರ ಮಾಡಿಸಿಕೊಂಡು ಬರುತ್ತಿದ್ದ ಬಗ್ಗೆ ಅಲ್ಲಿನ ಮಿಷನ್ ಒಂದರ ಬಗ್ಗೆ ಬರೆದಿದ್ದೆ, ಆ ಕಾಲಮಾನದ ಬಾಲ್ಯದಲ್ಲಿದ್ದ ಅನೇಕರಿಗೆ ಈ ಯಂತ್ರ ಯಮಯಾತನೆ ನೀಡಿತ್ತಂತೆ.
ಇಲ್ಲಿ ಕ್ಲಿಕ್ ಮಾಡಿ ಆ ಲೇಖನ ಓದ ಬಹುದು https://arunprasadhombuja.blogspot.com/2020/12/blog-post_7.html
ಇದರ ಹೆಸರು ಮ್ಯಾನ್ಯೂಯಲ್ ಕ್ಲಿಪ್ಪರ್ ಇದನ್ನು ಸೆರಿಬಿಯನ್ ದೇಶದ ಬಾಬ೯ರ್ ನಿಕೋಲಾ ಬಿಜುಮಿಲ್ ಎಂಬಾತ 1850-1890 ರ ಅವದಿಯಲ್ಲಿ ತಯಾರಿಸಿ ಅದನ್ನು ಕಾಲಕಾಲಕ್ಕೆ ಅಭಿವೃದ್ದಿ ಮಾಡುತ್ತಾನೆ.
ಈ ಮ್ಯಾನ್ಯೂಯಲ್ ಕ್ಲಿಪ್ಪರ್ ನ ಆ ಕಾಲದ ಸೈನಿಕರ ಕ್ಷೌರಕ್ಕಾಗಿ ಮಿಲಿಟರಿಗಳಲ್ಲಿ, ಜೈಲಿನ ಖೈದಿಗಳ ಕ್ಷೌರಕ್ಕಾಗಿ ಜೈಲಿನಲ್ಲಿ ನಂತರ ಶಾಲಾ ವಿದ್ಯಾಥಿ೯ಗಳಾದ ಗಂಡು ಮಕ್ಕಳ ಕ್ಷೌರಕ್ಕಾಗಿ ಬಳಸುತ್ತಿದ್ದರಂತೆ.
ರಷಿಯಾದ ಸ್ಯೆನ್ಯದಲ್ಲಿ ಇದನ್ನ ಬಳಸಿ ಸೈನಿಕರ ಕ್ಷೌರ ಮಾಡುತ್ತಿದ್ದರಂತೆ.
#ಹಾಗಾದರೆ_ಬಾರತದಲ್ಲಿ_ಯಾಕಾಗಿ_ನಮ್ಮ_ಬಾಲ್ಯದಲ್ಲಿ_ಇದನ್ನು_ನಮ್ಮ_ತಲೆಗೆ_ಶಿಕ್ಷೆ_ನೀಡಿದರು?
Comments
Post a Comment