Blog number 1878. ದಂಡಾವತಿ ನದಿ ಆಣೆಕಟ್ಟು ವಿರೋದಿ ಹೋರಾಟ ಸಮಿತಿಯ ಅಧ್ಯಕ್ಷರು, ಎಸ್.ಆರ್.ಹಿರೇಮಠರ ಜನ ಸಂಗ್ರಾಮ ಪರಿಷತ್ ರಾಜ್ಯ ಉಪಾಧ್ಯಕ್ಷರಾದ ವಾಮದೇವ ಗೌಡರು ನನ್ನ ಕಛೇರಿಯಲ್ಲಿ.
#ದಂಡಾವತಿ_ನದಿ_ಆಣೆಕಟ್ಟು_ವಿರೋದಿ_ಹೋರಾಟದ_ದಂಡಾನಾಯಕ
#ವಾಮದೇವ_ಗೌಡರು .
#ಎಸ್_ಆರ್_ಹಿರೇಮಠರ_ರಾಜ್ಯ_ಭ್ರಷ್ಟಾಚಾರಿ_ವಿರೋದಿ_ಆಂದೋಲನದ_ಜನಸಂಗ್ರಾಮ_ಪರಿಷತ್ತಿನ
#ರಾಜ್ಯ_ಉಪಾದ್ಯಕ್ಷರು.
#ನಾವೆಲ್ಲ_ಇವರ_ಹೋರಾಟದ_ಸ್ಥಳಕ್ಕೆ_ಹೋಗಿ_ಹೋರಾಟಕ್ಕೆ_ನಮ್ಮ_ಬೆಂಬಲ_ಘೋಷಿಸಿದ್ದ_ನೆನಪುಗಳು
#ಹೋರಾಟಗಾರ_ಟಿ_ಆರ್_ಕೃಷ್ಣಪ್ಪರ_ಜೊತೆ_ನನ್ನ_ಕಛೇರಿಗೆ_ಬಂದಾಗಿನ_ಮಾತುಕಥೆ_ನೆನಪುಗಳು
ಅವತ್ತು ಅನಿರೀಕ್ಷಿತವಾಗಿ (18-ಡಿಸೆಂಬರ್ -2016 ) ಸೊರಬದ ವಾಮದೇವ ಗೌಡರು ರಿಪ್ಪನಪೇಟೆಯ ಹೋರಾಟಗಾರರಾದ ಟಿ.ಆರ್.ಕೃಷ್ಣಪ್ಪರ ಜೊತೆ ನನ್ನ ಕಛೇರಿಗೆ ಬಂದಿದ್ದರು.
ಅವರು ಸೊರಬದ ದಂಡಾವತಿ ಆಣೆಕಟ್ಟು ವಿರೋದಿ ಹೋರಾಟ ಸಮಿತಿ ಅಧ್ಯಕ್ಷರು,ಹಾಲಿ ಎಸ್.ಆರ್.ಹಿರೇಮಠರ ರಾಜ್ಯ ಭ್ರಷ್ಟಾಚಾರಿ ವಿರೋದಿ ಆಂದೋಲನದ ಜನಸಂಗ್ರಾಮ ಪರಿಷತ್ ನ ರಾಜ್ಯ ಉಪಾಧ್ಯಕ್ಷರು.
ಚಹಾ ಸ್ವೀಕರಿಸುತ್ತಾ "ದಂಡಾವತಿ ಆಣೆಕಟ್ಟು ವಿರೋದಿ ಹೋರಾಟದ ಸಂದಭ೯ದಲ್ಲಿ ಅರುಣ್ ಪ್ರಸಾದ್ ನಮ್ಮ ಹೋರಾಟದ ಸ್ಥಳಕ್ಕೆ ಬಂದು ಬೆಂಬಲಿಸಿ ನಿತ್ಯದ ಊಟದ ವೆಚ್ಚಕ್ಕಾಗಿ ದೇಣಿಗೆ ನೀಡಿದ್ದನ್ನ ಮರೆತಿಲ್ಲ, ನಮ್ಮ ಖಚು೯ ವೆಚ್ಚದ ಪಟ್ಟಿ ನೋಡಿದಾಗಲೆಲ್ಲ ಅವರು ನೆನಪಾಗುತ್ತಾರೆ" ಅಂದರು.
ನಾನು ಮರೆತು ಬಿಟ್ಟಿದ್ದೆ ... ಆ ದಿನ ಸಾಗರದಿಂದ ನಾನು, ಕಾಗೋಡು ಹೋರಾಟದ ನೇತಾರರಾದ ಗಣಪತಿಯಪ್ಪ, ತೀ.ನಾ.ಶ್ರೀನಿವಾಸ್, ಮಾಜಿ ಶಾಸಕರಾದ ಸ್ವಾಮಿ ರಾವ್, ಕಲ್ಲೂರು ಮೇಘರಾಜ್, ಪತ್ರಕತ೯ರಾದ ಎಂ.ರಾಘು, ಚಾವಾ೯ಕ ರಾಘು ಮತ್ತು ಗೆಳೆಯರು ದಂಡಾವತಿ ಹೋರಾಟದ ಸ್ಥಳಕ್ಕೆ ಹೋಗಿದ್ದೆವು ಅದರ ಹಿಂದಿನ ದಿನ ಗೌರಿ ಗಣಪತಿ ಹಬ್ಬ ಇತ್ತು, ಹೋರಾಟಗಾರರು ಮಣ್ಣಿನ ಗಣಪತಿ ವಿಗ್ರಹ ಪೂಜೆ ಮಾಡಿ ನಿಯೋಜಿತ ಆಣೆಕಟ್ಟು ಪ್ರದೇಶದ ನೀರಲ್ಲಿ ವಿಸಜ೯ನೆ ಮಾಡಿದ್ದರು.
ಮಳೆಗಾಲದ ಆ ದಿನದಲ್ಲೇ ದಂಡಾವತಿ ನದಿ ಸಣ್ಣ ಹಳ್ಳದಂತೆ ಇತ್ತು, ಹಿಂದಿನ ದಿನ ವಿಸಜ೯ನೆ ಮಾಡಿದ ಗಣಪತಿಯೇ ಮುಳುಗಿರಲಿಲ್ಲ, ಆಗ ಗಣಪತಿಯಪನವರು ಕೈ ಮುಗಿದು "ಮಹಾಗಣಪತಿ ಇಲ್ಲಿ ದಂಡಾವತಿ ಆಣೆಕಟ್ಟು ಕಟ್ಟದಂತೆ ನೋಡಿಕೊಂಡು ಈ ರೈತರ ಹೋರಾಟಕ್ಕೆ ಜಯ ತಂದು ಕೊಡು" ಅಂತ ಬೇಡಿಕೊಂಡರು, ರೈತ ಪರ ಹೋರಾಟಗಾರ ಗಣಪತಿಯಪರ ಪ್ರಾಥ೯ನೆಯಂತೆ ಮತ್ತು ವಾಮದೇವ ಗೌಡರ ಪ್ರಾಮಾಣಿಕ ಹೋರಾಟದಿಂದ ದಂಡಾವತಿ ಆಣೆಕಟ್ಟು ನಿಮಾ೯ಣ ಆಗಿಲ್ಲ ಇದೆಲ್ಲ ಅವತ್ತು ನೆನಪಾಯಿತು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಪ್ರವಹಿಸುವ ಸಣ್ಣ ನದಿ ದಂಡಾವತಿ ಉಗಮ ಸ್ಥಾನ ಸೊರಬ ಪಟ್ಟಣದ ದಕ್ಷಿಣಕ್ಕೆ 15 ಕಿ.ಮಿ.ದೂರದ ಕುಪ್ಪೆ ಗ್ರಾಮದ ಹತ್ತಿರದ ಕಟ್ಟಿನ ಕೆರೆ.
ಮಳೆಗಾಲದಲ್ಲಿ ಕಟ್ಟಿನಕೆರೆ ತುಂಬಿದಾಗ ಈ ಕೆರೆ ಕೋಡಿ ನೀರಿನ ಜೊತೆ ಸುತ್ತ ಮುತ್ತಲಿನ ಹರಿವು ಸೇರಿ ದಂಡಾವತಿ ನದಿ ಆಗಿ ಹರಿಯುತ್ತದೆ,ಸೊರಬ ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನ ಈ ನದಿ ದಂಡೆ ಮೇಲಿದೆ.
ಉಗಮ ಸ್ಥಳದಿಂದ 55 ಕಿ.ಮಿ. ಹರಿದು ಆನವಟ್ಟಿ ಬಳಿಯ ಬಂಕಸಾಣ ಎಂಬ ಸ್ಥಳದಲ್ಲಿ ವರದಾ ನದಿಗೆ ಸೇರುತ್ತದೆ, ನಂತರ ವರದಾ ನದಿ ತುಂಗ ಭದ್ರಾ ನದಿಗೆ ಸೇರಿ ನಂತರ ತುಂಗಾಭದ್ರ ಕೃಷ್ಣಾ ನದಿಗೆ ಸೇರಿ ಬಂಗಾಳಕೊಲ್ಲಿ ಸಮುದ್ರಕ್ಕೆ ಸೇರುತ್ತದೆ.
ಸೊರಬದ ಚೀಲನೂರು ಗ್ರಾಮದ ಹತ್ತಿರ ದಂಡಾವತಿ ನದಿಗೆ ಆಣೆಕಟ್ಟು ಕಟ್ಟಿದರೆ ಸೊರಬ ಮತ್ತು ಶಿಕಾರಿಪುರದ ಸುಮಾರು 50 ಸಾವಿರ ಎಕರೆಗೆ ನೀರಾವರಿ ಆಗುತ್ತದೆ, 4 TMC ನೀರು ಶೇಖರಿಸ ಬಹುದು ಎಂಬುದು ಯೋಜನೆ.
ದಂಡಾವತಿ ನದಿ ವಿರೋದಿ ಹೋರಾಟ ಸಮಿತಿ ಹೇಳುವುದು "ರಾಜಕೀಯ ಕಾರಣಗಳಿಂದ ಈ ಯೋಜನೆ ಜಾರಿಗೊಳಿಸುವ ಪ್ರಯತ್ನ ನಡೆಸಿದ್ದಾರೆ, ಮಳೆಕಾಡು ಮತ್ತು ಕೃಷಿ ಭೂಮಿ ಮುಳುಗಿಸಿ ಶುಷ್ಕ ಖುಷ್ಕಿ ಭೂಮಿ ನೀರಾವರಿ ಮಾಡಿಕೊಳ್ಳುವ ಯೋಜನೆ ಇದಾಗಿದೆ" ಎಂದು ಈ ಯೋಜನೆಯ ತಾರ್ಕಿಕತೆಯನ್ನು ಪ್ರಶ್ನಿಸಿದೆ.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ವಾಮದೇವ ಗೌಡರ ನೇತೃತ್ವದ ದಂಡಾವತಿ ನದಿ ವಿರೋದಿ ಹೋರಾಟ ಸಮಿತಿಯ ಹೋರಾಟವನ್ನು ಬೆಂಬಲಿಸಿದ್ದರು.
ವಾಮದೇವ ಗೌಡರು ಆ ಹೋರಾಟದ ದಿನದಲ್ಲಿ ಸಿದ್ದರಾಮಯ್ಯ ನಮ್ಮ ಜೊತೆ ಕುಳಿತು ನಮ್ಮ ಹೋರಾಟ ಬೆಂಬಲಿಸಿದ್ದರು, ಈಗ ಮುಖ್ಯಮಂತ್ರಿ ಆಗಿದ್ದಾರೆ ಆದರೆ ಸಂಪುಟ ಸಭೆಯಲ್ಲಿ ಈವರೆಗೆ ಆಣೆಕಟ್ಟು ಕಟ್ಟಬೇಕೆಂಬ ಹಿಂದಿನ ಸಕಾ೯ರದ ನಿಣ೯ಯ ಮಾತ್ರ ಎಷ್ಟು ಸಾರಿ ನೆನಪಿಸಿದರೂ ರದ್ದು ಮಾಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು.
Comments
Post a Comment