Blog number 1888. ನಮ್ಮ ಊರಿನ ಶಾಲೆಗೆ ಶತಮಾನೋತ್ಸವ ಆಚರಿಸುವ ಮಹತ್ವಾಕಾಂಕ್ಷೆ ಹೊಂದಿರುವ ಮುಖ್ಯೋಪಾದ್ಯಾಯರು ಮತ್ತು ಶಾಲಾಭಿವೃದ್ದಿ ಸಮಿತಿಯ ಬೇಟಿ.
#ನಮ್ಮ_ಊರಿನ_ನಾನು_ಓದಿದ_ಸರ್ಕಾರಿ_ಪ್ರಾಥಮಿಕ_ಶಾಲೆಗೆ_ಶತಮಾನೋತ್ಸವದ_ಗರಿ.
#ನನ್ನ_ಸಹೋದರ_ಸಹೋದರಿ_ಮಾತ್ರವಲ್ಲ_ನನ್ನ_ತಂದೆ_ಕೂಡ_ಓದಿದ_ಸರ್ಕಾರಿ_ಪ್ರಾಥಮಿಕ_ಶಾಲೆ
#ಆನಂದಪುರಂ_ಜಾಮಿಯ_ಮಸೀದಿ_ಎದುರಿನ_ಶಾಲೆ
#ವಿದ್ಯಾಮಂತ್ರಿ_ಬದರಿನಾರಾಯಣ_ಅಯ್ಯಂಗಾರ್_ಓದಿದ_ಪ್ರಾಥಮಿಕ_ಶಾಲೆ
#ಕೆಳದಿರಾಜ_ವೆಂಕಟಪ್ಪನಾಯಕರು_ರಂಗೋಲೆಯಿಂದ_ಪ್ರೇಮಾಂಕುರವಾಗಿ_ದುರಂತ_ಪ್ರೇಮಕಥೆ_ಆದ
#ಬೆಸ್ತರ_ರಾಣಿ_ಚಂಪಕಾಳ_ಮೂಲ_ಮನೆ_ಸ್ಥಳದಾನ_ನೀಡಿದ__ಶಾಲೆ
#ಗುಂಡೂರಾವ್_ರಾಮಕೃಷ್ಣಹೆಗಡೆ_ಇಬ್ಬರೂ_ಮುಖ್ಯಮಂತ್ರಿಗೆ_ಆಪ್ತಕಾಯ೯ದಶಿ೯_ಆಗಿದ್ದ_ತಾಳಗುಪ್ಪ_ರಾಮಪ್ಪ_ಓದಿದ_ಶಾಲೆ
#ಈಗಿನ_ಉತ್ಸಾಹಿ_ಮುಖ್ಯೋಪಾಧ್ಯಯರಾದ_ಲೋಕಪ್ಪ_ಅವರ_ಕನಸುಗಳು
#ಇವರಿಗೆ_ಬೆನ್ನೆಲುಬಾಗಿ_ನಿಂತಿರುವ_ಪ್ರಭಾಕರ್_ಕುಮಾರ್_ರಂಗನಾಥ್.
ಇವತ್ತು ಕಿರಿಯ ಗೆಳೆಯ ಕ್ರಿಯಾಶೀಲ ಯುವಕ ರಂಗನಾಥ ಮತ್ತು ಆನಂದಪುರಂ ಜಾಮೀಯ ಮಸೀದಿ ಎದುರಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಲೋಕಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ್ ಮತ್ತು ಕುಮಾರ್ ಬಂದಿದ್ದರು.
ನಾಡಿದ್ದು ನಡೆಯುವ ವಾರ್ಷಿಕೋತ್ಸವದ ಆಹ್ವಾನ ಪತ್ರಿಕೆ ನೀಡಿದರು ನಾನು ಈ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದದ್ದು ಅವತ್ತು ನಮಗೆ ಮುಖ್ಯೋಪಾದ್ಯಾಯರು ರಿಚರ್ಡ್ ಲೋಬೋ ಮತ್ತು ಅವರ ಪತ್ನಿ ಲಿಲ್ಲಿ ಬಾಯಿ ಮೇಡಂ ನೀಡಿದ ಶಿಕ್ಷಣದಿಂದ.
https://arunprasadhombuja.blogspot.com/2021/05/19.html
ಈ ಶಾಲೆಗೆ ಅನೇಕ ಇತಿಹಾಸದ ಸಂಬಂದ ಇದೆ, 16ನೇ ಶತಮಾನದಲ್ಲಿ ತನ್ನ ರಂಗೋಲಿಗಳಿಂದ ಕೆಳದಿ ರಾಜ ವೆಂಕಟಪ್ಪ ನಾಯಕ ಪ್ರೀತಿಸಿ ಮದುವೆ ಆಗಿ ಆನಂದಪುರ೦ ಕೋಟೆಯಲ್ಲಿಟ್ಟಿದ್ದ ಸುಂದರಿ ಬೆಸ್ತರ ರಾಣಿ ಚಂಪಕಾಳ ಸ್ವಂತ ವಾಸದ ಮನೆಯ ಜಾಗ ಈ ಶಾಲೆಗೆ ಅವರ ವಂಶಸ್ತರು ಚಂಪಕಾ ರಾಜನ ಮದುವೆ ಆಗಿದ್ದು ಶಾಪ ಗ್ರಸ್ತ ಎಂಬ ಮೂಡನಂಬಿಕೆಯಿಂದ ಬ್ರಿಟಿಷ್ ಸರಕಾರಕ್ಕೆ ಶಾಲೆ ನಿಮಿ೯ಸಲು ದಾನವಾಗಿ ನೀಡಿದ ಜಾಗ.
ಇಲ್ಲಿ ಓದಿದ ಬದರಿನಾರಾಯಣ ಅಯ್ಯಂಗಾರ್ ನಮ್ಮ ಮೈಸೂರು ರಾಜ್ಯದ ಮುಖ್ಯಮಂತ್ರಿ ದೇವರಾಜ ಅರಸರ ಸರ್ಕಾರದಲ್ಲಿ ವಿದ್ಯಾ ಮಂತ್ರಿಗಳಾಗಿ ಕರ್ನಾಟಕ ರಾಜ್ಯ ನಾಮಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
https://arunprasadhombuja.blogspot.com/2021/04/blog-post_16.html
ಇಲ್ಲಿ ವ್ಯಾಸಂಗ ಮಾಡಿದ ತಾಳಗುಪ್ಪ ರಾಮಪ್ಪ ಮುಖ್ಯಮಂತ್ರಿಗಳಾಗಿದ್ದ ಗುಂಡೂರಾವ್ ಮತ್ತು ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಆಪ್ತ ಕಾರ್ಯದರ್ಶಿಗಳಾಗಿದ್ದರು.
ಇಲ್ಲಿ ಶಿಕ್ಷಣ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಕೃಷ್ಣ ಮೂರ್ತಿ ಮಾಸ್ಟರ್ (ಕನ್ನಡ ಸಂಘದ ಲಕ್ಷ್ಮೀಶ್ ತಂದೆ) , ಶೇಷಾಚಾರ್ (ಆನಂದ ರೈಸ್ ಮಿಲ್ ಪ್ರಾಣೇಶ್ ಆಚಾರ್ ತಂದೆ), ಟೀಕಪ್ಪ ಮಾಸ್ಟರ್ ಈ ಶಾಲೆಗೆ ಭೂದಾನ ನೀಡಿದ ಸ್ಕೂಲ್ ಪುಟ್ಟಪ್ಪರ ಮನೆತನದ ಅಳಿಯ (ಪತ್ರಕರ್ತ ಬಿ.ಡಿ. ರವಿ ತಂದೆ) ಇವರೆಲ್ಲರ ಕುಟುಂಬ ಇಲ್ಲೇ ನೆಲೆಸಿದೆ.
https://arunprasadhombuja.blogspot.com/2021/05/22-125.html.
ಈ ಶಾಲೆಗೆ ನಿರ್ಮಿಸಿ 2006 ರಲ್ಲಿ ಶತಮಾನ ಆಗಿರುವ ದಾಖಲೆ ಇದೆ, ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ 1996 ರಲ್ಲಿ ಈ ಶಾಲಾ ಶತ ಮಾನೋತ್ಸವ ಆಚರಿಸುವ ಉತ್ಸಾಹ ಈ ಶಾಲೆಯ ಶಿಕ್ಷಕ ವೃಂದ ವ್ಯಕ್ತ ಪಡಿಸಿತ್ತು ಆದರೆ ಆಗೆಲ್ಲಾ ಈಗಿನಂತೆ ಪ್ರೋಟೋ ಕಾಲ್ ಪಾಲಿಸುವ ಜನಪ್ರತಿನಿಧಿಗಳು ಇರಲಿಲ್ಲ ಆನಂದಪುರಂನ ಆಗಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ನನ್ನ ವಿರೋದಿಸುತ್ತಿದ್ದರಿಂದ ಬಹುಶಃ ನಾನು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರಿಂದ ಸಾಧ್ಯವಾಗಲಿಲ್ಲ.
ಇವತ್ತು ಈ ಶಾಲಾ ಮುಖ್ಯೋಪಾಧ್ಯಾಯರಾದ ಲೋಕಪ್ಪನವರಿಗೆ ನನ್ನ ಪ್ರಶ್ನೆ ನಿಮ್ಮ ಮಕ್ಕಳು ಓದಿದ್ದು ಯಾವ ಶಾಲೆ ? ಅವರ ಉತ್ತರ ಸರ್ಕಾರಿ ಶಾಲೆಯಲ್ಲೇ ಓದಿದ ಅವರ ಮಗ MBBS ಮಾಡುತ್ತಿರುವ ಮಾಹಿತಿ ನನಗೆ ಅವರ ಬಗ್ಗೆ ಹೆಮ್ಮೆ ಅನ್ನಿಸಿತು.
ವಿದ್ಯಾ ಮಂತ್ರಿ ನೀಡಿದ ಈ ಶಾಲೆಯ ಶತಮಾನೋತ್ಸವ ಆಚರಣೆಗೆ ಇವರಿಗೆ ಜೊತೆಯಾಗಿ ಬೆಂಬಲಿಸುತ್ತಿರುವ ರಂಗನಾಥ ತನ್ನ ಸ್ವಯಂ ಉದ್ಯೋಗದ ಜೊತೆ ವಿದ್ಯಾರ್ಥಿಗಳಿಗೆ ಟ್ಯೂಷನ್ - ಮಾರ್ಗದರ್ಶನದ ಮಾಸ್ಟರ್ ಆಗಿದ್ದಾರೆ ಇವರು 2008ರಲ್ಲಿ ನಾನು ಸೇರಿದ್ದ ಸಿದ್ಧ ಸಮಾದಿ ಯೋಗ ತರಬೇತಿಯ ಬ್ಯಾಚಿನ ಕಿರಿಯ ಗೆಳೆಯ.
ಈ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ್ ಪ್ರಧಾದಿಕಾರಿ ಎಲೆ ಮಂಜಣ್ಣನ ಅಳಿಯ ಕುಮಾರ್ ಉತ್ಸಾಹದಿಂದ ಈ ಶಾಲೆಯ ಶತಮಾನೋತ್ಸವ ಆಚರಿಸಲು ತಯಾರಾಗಿದ್ದಾರೆ.
ಈ ಶಾಲೆಯಲ್ಲಿ ನಾನು, ನನ್ನ ಇಬ್ಬರು ಅಕ್ಕಂದಿರು ಮತ್ತು ನನ್ನ ಅಣ್ಣ ಮಾತ್ರ ಅಲ್ಲ ನನ್ನ ಪತ್ನಿ ಹಾಗೂ ನನ್ನ ತಂದೆ S.ಕೃಷ್ಣಪ್ಪ ಸುಬ್ಬಣ್ಣಾಚಾರ್ ಕೂಡ ಓದಿದ ಶಾಲೆ ಇದು ಆದ್ದರಿಂದ ನಾನು ಈ ಶಾಲಾ ಶತಮಾನೋತ್ಸವ ಸಂಭ್ರಮಾಚಾರಣೆಗೆ ನನ್ನ ಸಂಸ್ಥೆಯಿಂದ ಹತ್ತು ಸಾವಿರ ರೂಪಾಯಿ ದೇಣಿಗೆ ಘೋಷಿಸಿದ್ದೇನೆ ಮತ್ತು ಯಾವುದೇ ಸಾರ್ವಜನಿಕ ಸಭೆ - ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂಬ ನನ್ನ 2014ರ ಶಪಥ ಅವರಿಗೆ ನೆನಪಿಸಿ ನನ್ನ ಗೈರು ಹಾಜರಿ ಅವರಿಗೆ ಒಪ್ಪಿಸಿದ್ದೇನೆ.
Comments
Post a Comment