Blog number 1866. ತಿಂಡಿ ಕೃಷ್ಣಣ್ಣರಿಗೆ 88 ವರ್ಷ ಆದರೂ ಅವರೂ ಕ್ರಿಯಾಶೀಲರು ಅವರು ನನ್ನ ತಂದೆ ಕೃಷ್ಣಪ್ಪ, ಸ್ತ್ರೀ ಪಾತ್ರದಾರಿ ಕೆರೆಹಿತ್ತಲ ಲಿಂಗಾರ್ಜುನ ಗೌಡರು,ನಾಟಕ ನಿರ್ದೇಶಕ ಜೋಗಿ ಹನುಮಂತಣ್ಣ ಇವರೆಲ್ಲ 60 ರ ದಶಕದಲ್ಲಿ ಆನಂದಪುರಂನ ಸ್ಟಾರ್ ಗಳು
#ಆನಂದಪುರಂನ_ಚಿರಪರಿಚಿತ_ತಿಂಡಿ_ಕೃಷ್ಣಣ್ಣ.
#ಈಗ_ಇವರಿಗೆ_80_ ವರ್ಷ
#ಇಪ್ಪತ್ತರ_ಯುವಕರೂ_ನಾಚುವಂತೆ_ಕ್ರಿಯಾಶಿಲರು.
#ನನ್ನ_ತಂದೆ_ಕೆರೆಹಿತ್ತಲು_ಲಿಂಗಾರ್ಜುನಣ್ಣ_ಇವರೆಲ್ಲ_ಆ_ಕಾಲದ_ನಾಟಕ_ಪಾತ್ರಧಾರಿಗಳು.
#ಜೋಗಿ_ಹನುಮಂತಣ್ಣ_ನಾಟಕ_ನಿರ್ದೇಶಕರು
#ಜಾತ್ರೆ_ಸಂತೆಗಳಲ್ಲಿ_ತಿಂಡಿ_ಕೃಷ್ಣಣ್ಣರ_ಬೆಂಡು_ಬತ್ತಾಸು_ಮಂಡಕ್ಕಿ_ಬೊಂಡಾ_ಚಹಾದ_ಅಂಗಡಿ .
#ಕೃಷಿ_ಜಮೀನು_ಮಾಡುತ್ತಾರೆ.
ಹೋಟೆಲ್ ಕೃಷ್ಣಣ್ಣ, ತಿಂಡಿ ಕೃಷ್ಣಣ್ಣ ಅಂತೆಲ್ಲ ಕರೆಯುವ ಸದಾ ನಗುಮೊಗದ ಕೃಷ್ಣಣ್ಣರಿಗೆ ಈಗ 88 ವರ್ಷ ಆದರೆ ಅವರು 35 ವರ್ಷದವರಷ್ಟೆ ಕ್ರಿಯಾಶೀಲರು.
ಪ್ರತಿನಿತ್ಯ ಬೆಳಿಗ್ಗೆ ಸಂಜೆ ಅವರ ಕೃಷಿ ಕೆಲಸದ ಜೊತೆ ಆನಂದಪುರದಲ್ಲಿನ ಅವರ ಹೋಟೆಲ್ ವ್ಯವಹಾರ ನಿರಂತರ ನಡೆಸಿ ಕೊಂಡು ಬರುತ್ತಿದ್ದಾರೆ.
ಇದರ ಮಧ್ಯೆ ಸುತ್ತ ಮುತ್ತಲಿನ ಸಂತೆ ಮತ್ತು ಜಾತ್ರೆಯಲ್ಲಿ ಇವರ ಬೆಂಡು ಬತ್ತಾಸು, ಬೂಂದಿ ಖಾರ ಮತ್ತು ಮಂಡಕ್ಕಿ, ಬೊಂಡಾ ಮತ್ತು ಚಹಾ ಅಂಗಡಿ ಇರದಿದ್ದರೆ ನೆರೆದ ಜನ ಆ ವಷ೯ದ "ಜಾತ್ರೆ ಜೋರಾಗಿಲ್ಲ ... ತಿಂಡಿ ಕೃಷ್ಣಣ್ಣ ಅಂಗಡಿನೇ ಹಾಕಿಲ್ಲ ..." ಅನ್ನುವಷ್ಟರವರೆಗೆ ಇವರ ಪ್ರಸಿದ್ದಿ ಇದೆ.
ತಿಂಡಿ ಕೃಷ್ಣಣ್ಣರ ದೊಡ್ಡ ಮಗ ಪ್ರಕಾಶ ಕೃಷಿ ಮತ್ತು ತಂದೆಯ ಜೊತೆ ಹೋಟೆಲ್ ಉದ್ಯಮ ಮುಂದುವರಿಸಿದ್ದಾರೆ, ಸಣ್ಣ ಮಗ ರಾಘವೇಂದ್ರ ಶಾಮಿಯಾನ ಉದ್ಯಮ ನಡೆಸುತ್ತಿದ್ದಾರೆ.
1960 ರ ದಶಕದಲ್ಲಿ ನಮ್ಮ ತಂದೆ ಕೃಷ್ಣಪ್ಪ, ತಿಂಡಿ ಕೃಷ್ಣಣ್ಣ, ಸ್ತ್ರೀ ಪಾತ್ರದಾರಿ ಕೆರೆಹಿತ್ತಲು ಗ್ರಾಮದ ಲಿಂಗಾರ್ಜುನ ಗೌಡರು ಇವರೆಲ್ಲ ಆನಂದಪುರದ ಪ್ರಸಿದ್ದ ನಾಟಕ ಕಲಾವಿದರು, ನಮ್ಮ ತಂದೆಗೆ ಹೀರೋ ಪಾತ್ರವಂತೆ ಆದರೆ ಜೋಗಿ ಹನುಮಂತಣ್ಣ ನಾಟಕ ನಿದೇ೯ಶನ ಮಾಡುತ್ತಿದ್ದದ್ದು ನನಗೆ ಗೊತ್ತಾಗಿದ್ದೆ ಕೃಷ್ಣಣ್ಣರ ಹತ್ತಿರ ಮಾತಾಡಿದಾಗ.
ಜೋಗಿ ಹನುಮಂತಣ್ಣ ಆ ಕಾಲದಲ್ಲಿ ಆನಂದಪುರಂ ವಿಲೇಜ್ ಪ೦ಚಾಯತ್ ಸದಸ್ಯರು, ಮುಂದೆ ಮುಖ್ಯಮಂತ್ರಿಗಳಾದ ಆ ಕಾಲದ ಕಡಿದಾಳು ಮಂಜಪ್ಪನವರ ನಿಕಟವರ್ತಿಗಳು ಇವರ ಪುತ್ರ ಜೋಗಿ ನಾರಾಯಣ ಹಳೇ ಸಂತೆ ಮಾರ್ಕೆಟ್ ಹತ್ತಿರ ಜನರೇಟರು ವ್ಯಾನ್ ಮಾಡಿಕೊಂಡಿದ್ದಾರೆ.
ಆಗಿನ ಆನಂದಪುರಂನ ಪ್ರಸಿದ್ಧ ಹೋಟೆಲ್ ಕಿಣಿ ರಾಯರ ಕೋಮಲ ವಿಲಾಸ್ ಪಕ್ಕ 10 x 10 ಅಡಿಯ ಅತ್ಯಂತ ಸಣ್ಣದಾದ ಮಳಿಗೆ ಜೋಗಿ ಹನುಮಂತಣ್ಣನದ್ದು ಅದು ಭೂ ಮಾಲಿಕರಾದ ವೆಂಕಟಾಚಲಯ್ಯ0ಗಾರರಿಂದ (ಮಂತ್ರಿಗಳಾಗಿದ್ದ ಬದರಿನಾರಾಯಣ ಅಯ್ಯಂಗಾರರ ಸಹೋದರರಿಂದ) ಬಾಡಿಗೆ ಪಡೆದದ್ದು.
ಅಲ್ಲಿ ಏನುಂಟು ಏನಿಲ್ಲ! ಆಲೆಮನೆ ಬೆಲ್ಲ ಶೇಖರಣೆಗಾಗಿ ಹೊಸ ಟಿನ್ ತಗಡಿನ ಡಬ್ಬ ತಯಾರಿ, ಖಾಲಿಯಾದ ಎಣ್ಣೆ ಡಬ್ಬಕ್ಕೆ ದೊಡ್ಡ ಮುಚ್ಚುಳ ಅಳವಡಿಸುವುದು, ಛತ್ರಿ ರಿಪೇರಿ, ಟಾಚ್೯ ರಿಪೇರಿ, ಶಿಕಾರಿಗಾಗಿ ಹೆಡ್ ಲೈಟ್ ತಯಾರಿ ಹೀಗೆ ಸಣ್ಣ ಮಕ್ಕಳಾದ ನಮಗೆ ಜೋಗಿ ಹನುಮಂತಣ್ಣ ಒಂದು ರೀತಿ ವಿಸ್ಮಯ ಹಾಗೂ ವಿಜ್ಞಾನಿ ಅಂತೆ ಕಂಡು ಬರುತ್ತಿದ್ದರು.
ಇವರೆಲ್ಲ ಸಣ್ಣ ಊರಾಗಿದ್ದ ಆನಂದಪುರದಲ್ಲಿನ ಊರ ಸ್ವಾಸ್ಥ್ಯ ಕಾಪಾಡಿದವರು, ಊರಿನ ನ್ಯಾಯ ಪಂಚಾಯಿತಿ ಮಾಡುತ್ತಿದ್ದವರು, ಊರಿನ ಜನತೆಗೆ ಆಗಿನ ಕಾಲದಲ್ಲಿ ನಾಟಕ ಕಲಿತು ಆಡಿ ತೋರಿಸಿ ಜನರಿಗೆ ಮನೋರಂಜಿಸಿದವರು.
Comments
Post a Comment