Blog number 1853. ಮನುಷ್ಯ ಮತ್ತು ವನ್ಯಜೀವಿ ಸಂಘರ್ಷದ ಪರಕಾಷ್ಟೆಗೆ ಕಾರಣ ಏನು? ಪ್ರಸಕ್ತ ಸಾಲಿನ ವನ್ಯಜೀವಿ ಸಂರಕ್ಷಣಾ ಕಾಯ್ದೆ ಕಾನೂನು ಪುನರ್ ವಿಮರ್ಶೆ ಅನಿವಾರ್ಯವಾ?
#ಕಾಡು_ಪ್ರಾಣಿಗಳು_ಜನವಸತಿ_ಕೇಂದ್ರಗಳಿಗೆ_ಬರುತ್ತಿರುವುದು_ಏಕೆ
#ಹೆಚ್ಚುತ್ತಿರುವ_ಜನಸಂಖ್ಯೆ_ಕ್ಷೀಣಿಸುತ್ತಿರುವ_ಅರಣ್ಯ
#ಜನವಸತಿ_ಕೃಷಿ_ಜಮೀನುಗಳಲ್ಲಿ_ಲಗ್ಗೆ_ಇಡುತ್ತಿರುವ_ವನ್ಯಜೀವಿಗಳು.
#ಚಿಕ್ಕಮಗಳೂರಿನಲ್ಲಿ_ದಸರಾ_ಅಂಭಾರಿ_ಹೊರುವ_ಆನೆ_ಅರ್ಜುನದ_ಸಾವು.
#ಶಿವಮೊಗ್ಗ_ಜಿಲ್ಲೆ_ಪಶ್ಚಿಮಘಟ್ಟದ_ಕರ್ನಾಟಕ_ರಾಜ್ಯದ_ಪ್ರಮುಖ_ಜಿಲ್ಲೆ.
#ಕಸ್ತೂರಿ_ರಂಗನ್_ವರದಿಯಲ್ಲಿ_ಅತಿ_ಹೆಚ್ಚು_ಭೂಪ್ರದೇಶ_ಅರಣ್ಯಕ್ಕೆ_ಸೇರಿದೆ
#ಶಿವಮೊಗ್ಗ_ಜಿಲ್ಲೆಯಲ್ಲಿ_ನಡೆದ_ಈ_ಎರೆಡು_ಘಟನೆ_ನೀಡುವ_ಸಂದೇಶ_ಏನು?
#ಕಳೆದ_ವರ್ಷ_ಕಾಡಾನೆ_ರೈತರು_ಪಸಲು_ರಕ್ಷಣೆಗೆ_ಬೇಲಿಗೆ_ವಿದ್ಯುತ್_ನೀಡಿದ್ದರಿಂದ_ಮೃತ_ಪಟ್ಟಿದ_ಘಟನೆ.
#ನಮ್ಮ_ಊರಿನ_ಸಮೀಪದ_ಕುಣೆಹೊಸೂರಿನಲ್ಲಿ_ಉರುಳಿಗೆ_ಸಿಲುಕಿ_ಸತ್ತ_ಚಿರತೆ.
ದಸರಾ ಅಂಬಾರಿ ಹೊರುವ ಆನೆ ಅರ್ಜುನದ ಸಾವಿಗೆ ಕಾರಣ ನಾನಾ ರೀತಿಯಲ್ಲಿ ಬರುತ್ತಿದೆ ....
70 ವಷ೯ದ ಹಿಂದಿನ ದಟ್ಟ ಅರಣ್ಯ ಶಿವಮೊಗ್ಗ ಜಿಲ್ಲೆಯಲ್ಲಿದ್ದಾಗ ಕಾಡಾನೆ , ನರಭಕ್ಷಕಗಳ ಹಾವಳಿ ಇದ್ದಿತ್ತೆಂಬ ಅನೇಕ ಘಟನೆಗಳು ದಾಖಲಾಗಿದೆ ಆದರೆ ಈಗ ಅರಣ್ಯ ಪ್ರದೇಶವನ್ನೆಲ್ಲ ಜನವಸತಿ ಕೇಂದ್ರಗಳಾಗಿಸಿ ಆಗಿದೆ.
ಆದರೆ ಈಗ ಮತ್ತೆ ಕಾಡಾನೆ, ಹುಲಿ, ಚಿರತೆ, ಕಾಳಿಂಗ ಸರ್ಪ, ಕಾಡುಕೋಣಗಳು ಊರೊಳಗೆ ಬರುತ್ತಿರುವುದು ಏಕೆ?
ಸಂರಕ್ಷಿತ ಅರಣ್ಯದ ಗಡಿ ನಿಗದಿ ಆಗಿದೆ, ವನ್ಯ ಪ್ರಾಣಿಗಳ ಸಂರಕ್ಷಣೆಗಾಗಿ ಹಂದಿಯಂತ ಪ್ರಾಣಿಗಳನ್ನೂ ರೈತರು ಪಸಲು ಸಂರಕ್ಷಣೆಗಾಗಿ ಕೊಂದರೆ ಜೈಲಿಗೆ ಹಾಕುವ ಕಾನೂನಿದ್ದರೂ ಕಾಡಾನೆ, ಚಿರತೆಗಳು ಜೀವ ಕಳೆದ ಎರೆಡು ಘಟನೆಗೆ ಕಾರಣ ಏನು?
ಪಸಲು ರಕ್ಷಣೆಗಾಗಿ ಬೇಲಿಗೆ ವಿದ್ಯುತ್ ಹರಿಸಿದ ರೈತರಿಂದ ಆನೆ ಹತ್ಯೆ ಅಂತ ಜೈಲು ಕೇಸು ಮಾಡಬಹುದು ಅದೇ ರೀತಿ ಚಿರತೆ ಮೊಲ ಅಥವ ಕಾಡು ಹಂದಿಯ ಬೇಟೆಗಾಗಿ ಹಾಕಿದ್ದ ತಂತಿಯ ಉರುಳಿನಲ್ಲಿ ಸಿಲುಕಿ ನರಳಿ ಸತ್ತದ್ದಕ್ಕೆ ಕಾರಣರಾದವರನ್ನು ಬಂದಿಸಬಹುದು.
ವನ್ಯ ಸಂರಕ್ಷಣಾ ಕಾನೂನು ಕಠಿಣವಾದರೂ ರೈತರ ಪಸಲು ವನ್ಯ ಪ್ರಾಣಿಗಳ ಸಂರಕ್ಷಣೆಗೆ ಯಾವ ಮಾನದಂಡ ಜಾರಿ ಇದೆ?.. ರೈತರ ಪಸಲು ಉಳಿಯಬೇಕು ವನ್ಯ ಪ್ರಾಣಿಗಳೂ ಉಳಿಯಬೇಕೆಂಬ ರೀತಿಯ ಕಾನೂನು ಜಾರಿ ಆಗದಿದ್ದರೆ ಮು೦ದಿನ ದಿನಗಳಲ್ಲಿ ಇನ್ನೂ ಎಷ್ಟು ಇಂತಹ ಘಟನೆಗಳಿಗೆ ನಾವೆಲ್ಲ ಪ್ರತ್ಯಕ್ಷ ದರ್ಶಿಗಳಾಗಬೇಕೋ?
ರೈತರ ಅನದಿಕೃತ ವಿದ್ಯುತ್ ಹರಿಸಿದ ಬೇಲಿಗೆ ಸಿಲುಕಿ ಕೆಲ ತಿಂಗಳ ಹಿಂದೆ ಶಿವಮೊಗ್ಗ ಸಮೀಪದಲ್ಲಿ ಮೃತ ಪಟ್ಟ ಕಾಡಾನೆಗಳ ಮಾಹಿತಿ ಈ ಕೆಳಗಿನ ಬ್ಲಾಗ್ ಕ್ಲಿಕ್ ಮಾಡಿ ನೋಡಬಹುದು
https://arunprasadhombuja.blogspot.com/search?q=%E0%B2%95%E0%B2%BE%E0%B2%A1%E0%B2%BE%E0%B2%A8%E0%B3%86
Comments
Post a Comment