Blog number 1887. ಕ್ರಿಸ್ಮಸ್ ಹಬ್ಬಕ್ಕೂ ಪ್ಲಮ್ ಕೇಕ್ ಇರುವ ಸಂಬಂದ ... ಕೇಕ್ ಗೆ ಬೆಣ್ಣೆ ಬೆರೆಸಲು ರೋಮನ್ ಚಚ್೯ ರೆಗ್ಯೂಲೇಷನ್ ನಿಶೇದ ಇತ್ತು, ಪೋಪ್ ಇನ್ನೋಸೆಂಟ್ VIII 1490ರಲ್ಲಿ ನಿಶೇದ ತೆರವು ಮಾಡಿ ಅನುಮತಿ ನೀಡುತ್ತಾರೆ.
#ಕ್ರಿಸ್ಮಸ್_ಹಬ್ಬಕ್ಕೂ_ಪ್ಲಮ್_ಕೇಕಿಗೂ_ಇರುವ_ಸಂಬಂದ
#ಪ್ಲಮ್_ಕೇಕ್_ಮೂಲ_ರೋಮನ್
#ಪ್ಲಮ್_ಕೇಕಿಗೆ_ಬೆಣ್ಣೆ_ಬಳಸಲು_ಲಿಖಿತ_ಅನುಮತಿ_ಪೋಪರಿಂದ_1499ರಲ್ಲಿ
#ರೋಮನ್_ಚರ್ಚ್_ರೆಗ್ಯೂಲೇಷನ್_ಕೇಕಿನಲ್ಲಿ_ಬೆಣ್ಣೆ_ಬಳಸಲು_ನಿಷೇದವಿತ್ತು.
#ಇತಿಹಾಸದಲ್ಲಿ_ದಾಖಲೆಯಾಗಿ_ಉಳಿದ_ಬಟರ್_ಲೆಟರ್_ಗೊತ್ತಾ ?.
ವಿಶ್ವದಾದ್ಯಂತ ಕ್ರೈಸ್ತರು ಕ್ರಿಸ್ ಮಸ್ ಗೆ ಪ್ಲಮ್ ಕೇಕ್ ಹೆಚ್ಚು ಬಳಸುತ್ತಾರೆ, ಕ್ರಿಸ್ಮಸ್ ಅಂದರೆ ಕೇಕ್ ನೆನಪಾಗದೇ ಇರುವುದಿಲ್ಲ ಎಲ್ಲಾ ಸಿಹಿ ತಿಂಡಿ ಅಂಗಡಿಗಳಲ್ಲಿ ಕೇಕ್ ಮಾರಾಟಕ್ಕೆ ಇಡುತ್ತಾರೆ, ಕ್ರಿಸ್ಮಸ್ ಹಬ್ಬದ ಕೇಕ್ ವಹಿವಾಟು ವಿಶ್ವದಾದ್ಯಂತ ಹಲವು ಸಾವಿರ ಕೋಟಿ ಗಳ ಗಾತ್ರದ್ದು,
ಪ್ಲಮ್ ಕೇಕ್ ಅಂತ ಹೆಸರೇಕೆ ಅಂತ ಸ್ಪಷ್ಟವಿಲ್ಲ ಆದರೆ ಪುರಾತನ ರೋಮನ್ ರು ಬಾಲಿ೯ ಹಿಟ್ಟು ಬಳಸಿ ಈ ಕೇಕ್ ತಯಾರಿಸುತ್ತಿದ್ದರಂತೆ ನಂತರ ಜೇನು ತುಪ್ಪ, ಸಂಸ್ಕರಿಸಿದ ಹಣ್ಣು ಮತ್ತು ಮಸಾಲೆ ಪದಾರ್ಥ (spice) ಬಳಕೆ ಪ್ರಾರಂಭ ಆಯಿತು.
ನಂತರ ಈ ಕೇಕ್ ಖಾದ್ಯ ಯೋಗ್ಯವಾಗಲು ಸ್ಪಿರಿಟ್ ಬಳಕೆ ಪ್ರಾರಂಭ ಆಯಿತು ಆದರೆ ಈ ಕೇಕ್ ತಯಾರಿಸಲು ಬೆಣ್ಣೆ ಬಳಸಲು ಮಾತ್ರ ಚರ್ಚ್ ರೆಗ್ಯೂಲೇಷನ್ ನಲ್ಲಿ ಅನುಮತಿ ಇರಲಿಲ್ಲ!!.
1490ರಲ್ಲಿ ಪೋಪ್ ಇನ್ನೊಸೆಂಟ್ VIII ಪ್ಲಮ್ ಕೇಕ್ ನಲ್ಲಿ ಬೆಣ್ಣೆ ಬಳಸಲು ಬಹು ಜನರ ಬಹು ಕಾಲದ ಮನವಿಗಾಗಿ ಲಿಖಿತವಾಗಿ ವಿಶೇಷವಾಗಿ ಅನುಮತಿ ನೀಡಿದರು, ಈ ಲಿಖಿತ ಅನುಮತಿ ಬಟರ್ ಲೆಟರ್ (Butter letter) ಎಂದೇ ಇತಿಹಾಸದಲ್ಲಿ ಪ್ರಖ್ಯಾತವಾಗಿದೆ.
16ನೇ ಶತಮಾನದಲ್ಲಿ ಅಮೇರಿಕಾದಿಂದ ಆಮದಾದ ಸಕ್ಕರೆಯಿಂದ ಈ ಕೇಕ್ ತಯಾರಿಕೆಯಲ್ಲಿ ಬಳಕೆ ಪ್ರಾರಂಭ ಆಯಿತು ಮತ್ತು ಸಕ್ಕರೆ ಅತ್ಯುತ್ತಮ ಪ್ರಿಸರ್ವೇಟೀವ್ ಆಂತ ತಿಳಿದ ಮೇಲೆ ಹೆಚ್ಚು ವೈವಿಧ್ಯದ ಹಣ್ಣು ಬಳಕೆ ಹೆಚ್ಚಾಯಿತು ಇದರಿಂದ ಪ್ಲಮ್ ಕೇಕ್ ಹೆಚ್ಚು ಜನಪ್ರಿಯವಾಗಲೂ ಕಾರಣ ಆಯಿತು.
ಆಲ್ಕೋಹಾಲ್ ಲೇಪನದಿಂದ ದೀರ್ಘ ಕಾಲ ಖಾದ್ಯದ ತಾಜ ತನ ಉಳಿಯುವುರಿಂದ ಈ ಕೇಕ್ ತಯಾರಿಯಲ್ಲಿ ಆಲ್ಕೋಹಾಲ್ ಬಳಕೆ ಇದೆ.
106 ವರ್ಷದ ಪ್ಲಮ್ ಕೇಕ್ ಹಾಳಾಗದೆ ತಾಜಾತನ ಉಳಿಸಿಕೊಂಡಿದ ದಾಖಲೆ ಇದೆ.
ಭಾರತದಲ್ಲಿ ಪ್ಲಮ್ ಕೇಕ್ ಕಿಲೋ ಒಂದಕ್ಕೆ ಗರಿಷ್ಠ ಸಾವಿರ ರೂಪಾಯಿ ಇದೆ, ನನಗೆ ಕ್ರಿಸ್ಮಸ್ ಉಡುಗೊರೆ ಕಳಿಸಿದ ಈ ಕೇಕಿನ ಬೆಲೆ ಕಿಲೋಗೆ ಒ0ದು ಸಾವಿರ ಇದೆ.
ಪ್ಲಮ್ ಕೇಕ್ ಮತ್ತು ಅವರು ಕಳಿಸಿದ ಕರ್ಜಿಕಾಯಿ, ಚಕ್ಕುಲಿ ಜೊತೆ ಮನೆಯ ಸಿಹಿ ಹೆಸರು ಕಾಳಿನ ಕಿಚಡಿ (ಬೆಲ್ಲ ಮತ್ತು ತೆಂಗಿನ ತುರಿ) ಇವತ್ತಿನ ನನ್ನ ಉಪಹಾರ ಆಯಿತು.
Comments
Post a Comment