https://youtube.com/shorts/3EoD6ZXKp3E?feature=shared
#ಪದ್ಮಶ್ರೀ_ಪ್ರಶಸ್ತಿ_ವಿಜೇತ_ಮಂಜಮ್ಮ_ಜೋಗತಿ_ನನ್ನ_ಅತಿಥಿ.
#ಮೂರು_ವರ್ಷದ_ನಂತರ_ಈ_ಬೇಟಿ
#ನಿರಂತರ_ಓದು_ಪೇಸ್_ಬುಕ್_ಟ್ವೀಟರ್_ಎಲ್ಲಾ_ಜಾಲತಾಣದಲ್ಲಿ_ಸಕ್ರಿಯ.
#ತೃತಿಯ_ಲಿಂಗಿ_ಮಕ್ಕಳಾದರೆ_ಯಾವುದೇ_ತಾರತಮ್ಯ_ತೋರದೆ_ವಿದ್ಯೆ_ಕೊಡಿ_ಎಂಬ_ಅವರ_ಅಭಿಯಾನ_ಪ್ರಾರಂಬ.
#ಅವರ_ಬಗ್ಗೆ_ಹರ್ಷಭಟ್_ಬರೆದ_ಇಂಗ್ಲೀಷ್_ಪುಸ್ತಕ_ಮತ್ತು_ನೆನಪಿನ_ಕಾಣಿಕೆ_ಪ್ರೀತಿಯಿಂದ_ನೀಡಿದ್ದಾರೆ
#ನಮ್ಮ_ಸಂಸ್ಥೆ_ವತಿಯಿಂದ_ಅವರನ್ನು_ಸನ್ಮಾನಿಸಿ_ಶ್ರೀಕೃಷ್ಣಕಥಾ_ಮಂಜರಿ_ಮತ್ತು_ನನ್ನ_ಬಿಲಾಲಿಬಿಲ್ಲಿ_ಪುಸ್ತಕ_ನೀಡಿದೆ.
ನಿನ್ನೆ ಪದ್ಮಶ್ರೀ ಪ್ರಶಸ್ತಿ ವಿಜೇತ ಮಂಜಮ್ಮ ಜೋಗತಿ ಅವರು ನಾಳೆ ನಿಮ್ಮ ಊರಿಗೆ ಬರುತ್ತಿದ್ದೇನೆ ಅಂದಾಗ ತುಂಬಾ ಸಂತೋಷದಿಂದ ಸ್ವಾಗತಿಸಿದ್ದೆ.
ಇವತ್ತು ಮಂಜಮ್ಮ ಜೋಗತಿ ಅವರು ಬಂದಾಗ ನಮಗೆಲ್ಲ ಸಂಭ್ರಮ ಒಂದು ವಿಶೇಷ ಅಂದರೆ ಮಂಜಮ್ಮ ಜೋಗತಿ ನಮ್ಮ ಎಲ್ಲಾ ಸಿಬ್ಬಂದಿಗಳಿಗೆ ಅವರ ಟೀವಿ ಸಂದರ್ಶನಗಳಿಂದ ಚಿರಪರಿಚಿತರು ಅಷ್ಟೇ ಅಲ್ಲ ಇವರ ಸಂದರ್ಶನದಿಂದ ಇವರೆಲ್ಲರೂ ಕಣ್ಣೀರು ಸುರಿಸಿದವರೆ.
ನಮ್ಮ ಸಂಸ್ಥೆ ವತಿಯಿಂದ ನಾನು ನನ್ನ ಸಹೋದರ ನಾಗರಾಜ್ ಮತ್ತು ಅವರ ಪುತ್ರ, ನನ್ನ ಪುತ್ರ, ನನ್ನ ವ್ಯವಸ್ಥಾಪಕರಾದ ಅನಿಲ್, ಕಣ್ಣೂರು ನಾಗರಾಜ್ ಸೇರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ನೆನಪಿನ ಕಾಣಿಕೆಯಾಗಿ ಕುಂಟಿಕಾನು ಮಠ ಬಾಲಕೃಷ್ಣ ಭಟ್ಟರು ಬರೆದ #ಶ್ರೀಕೃಷ್ಣ_ಕಥಾ_ಮಂಜರಿ, ನನ್ನ ಸಣ್ಣ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ಮತ್ತು 2024ರ ನಮ್ಮ ಸಂಸ್ಥೆಯ ಟೀಬಲ್ ಕ್ಯಾಲೆಂಡರ್ ನೀಡಿದೆ.
ಮಂಜಮ್ಮ ಜೋಗತಿ ಅವರು ನನಗೆ ಅವರ ಅಭಿಯಾನದ ಟ್ಯಾಗ್ ಲೈನ್ ಸ್ಲಿಪ್, ಶೃತಿಯಾಕಾರದ ಸುಂದರ ನೆನಪಿನ ಕಾಣಿಕೆ ಮತ್ತು ಇವರ ಆತ್ಮಚರಿತ್ರೆ ಹರ್ಷಾ ಭಟ್ ಬರೆದ ಇಂಗ್ಲೀಷ್ ಪುಸ್ತಕ ನನಗೆ ನೀಡಿದರು.
ನನ್ನ ಮತ್ತು ಮಂಜಮ್ಮ ಜೋಗತಿ ಅವರನ್ನು ಗೆಳೆತನದ ಬಂದನಕ್ಕೆ ಸೇರಿಸಿದ್ದು ನನ್ನ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ದಿನಾ೦ಕಾ 17 ಜನವರಿ 2021 ರಂದು ರಾಜ್ಯ ಜನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರು ಕಾರ್ಯಕ್ರಮದ ನಿಮಿತ್ತ ಆಯೋಜಕರು ನಮ್ಮ ಲಾಡ್ಜ್ ನಲ್ಲಿ ಅವರನ್ನು ಉಳಿಸಿದ್ದರು ಆಗ ನಾನು ಅವರಿಗೆ ಈ ಕಾದಂಬರಿ ನೀಡಿದ್ದೆ.
ಅವರು ನನ್ನ ಕಾದಂಬರಿ ಓದುವ ನಿರೀಕ್ಷೆ ನನಗೆ ಇರಲಿಲ್ಲ ನಾನು ಇವರ ಫೋನ್ ನಂಬರ್ ಪಡೆಯಲಿಲ್ಲ ಅವರೂ ನನ್ನ ಫೋನ್ ನಂಬರ್ ಕೇಳಲಿಲ್ಲ ಆದರೆ ಒಂದೆರೆಡು ದಿನದ ನಂತರ ಫೋನ್ ಕರೆ ಸ್ವೀಕರಿಸಿದಾಗ "ನಾನು ಮಂಜಮ್ಮ ಜೋಗತಿ ... ಅರುಣ್ ಪ್ರಸಾದ್ ಅವರಾ?... ಅಂದಾಗಲೇ ಗೊತ್ತಾಗಿದ್ದು ನನ್ನ ಕಾದಂಬರಿ ಪುಸ್ತಕದಲ್ಲಿ ಅಚ್ಚಾದ ನನ್ನ ನಂಬರ್ ನೋಡಿ ಫೋನ್ ಮಾಡಿದ್ದಾರೆ ಅಂತ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿನೋಡಿ ನನ್ನ ಕಾದಂಬರಿ ಓದಿ ಅವರು ಏನು ಮಾತಾಡಿದ್ದಾರೆ ಅಂತ.
https://m.facebook.com/story.php?story_fbid=pfbid06EDf1RzcUccR42j1oH7X3qYvXaae8fFQwdiaQG1xwZBzDf6WvATBgyXrf1HJDi4Dl&id=1556115154684584&mibextid=Nif5oz.
ನಾನು ಇವರ ಆತ್ಮಚರಿತ್ರೆ ಅರುಣ್ ಜೋಳದ ಕೂಡ್ಲಿಗೆ ಬರೆದ "ನಡುವೆ ಸುಳಿವ ಹೆಣ್ಣು" ಓದಿದ್ದೆ ಈ ಪುಸ್ತಕದಿಂದ ನಾನು ಅವರ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗಿತ್ತು.
ಇವತ್ತು ಸಂಜೆ ಇವರಿಗೆ ಸಮೀಪದ ಮುರುಘಾ ಮಠದಲ್ಲಿ ನಡೆಯುವ ಕಾರ್ತಿಕ ಮಹೋತ್ಸವದಲ್ಲಿ #ರಾಣಿ_ಚೆನ್ನಮ್ಮ_ಪ್ರಶಸ್ತಿ ನೀಡುವ ಕಾರ್ಯಕ್ರಮ ಇದೆ.
ಅಲ್ಲಿ ತನಕ ಮಂಜಮ್ಮ ಜೋಗತಿ ಅವರೊಂದಿಗೆ ಅನೇಕ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಆಯಿತು.
ಮಂಜಮ್ಮ ಜೋಗತಿ ಅವರೊಂದಿಗೆ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಮುನ್ನ ರಾಷ್ಟ್ರಪತಿಗಳಿಗೆ #ದೃಷ್ಟಿ ತೆಗೆದ ಬಗ್ಗೆ, ಜೀವನದಲ್ಲಿ ಅವರು ಯಾವುದನ್ನೂ ಬಯಸದೇ ಬಂದ ಭಾಗ್ಯದ ಬಗ್ಗೆ, ಮುಂದೆ ನಿಮ್ಮನ್ನು ರಾಜ್ಯಸಭಾ ಸದಸ್ಯರಾಗಿ ನಾಮಕರಣ ಮಾಡಿದರೆ?.... ಇಂತಹ ಪ್ರಶ್ನೆಗಳಿಗೆ ಅವರ ಉತ್ತರಗಳ ಕೆಲ ಕಂತುಗಳ ಸಂದರ್ಶನ ಕೂಡ ಮಾಡಿದ್ದೇನೆ.
ನಾಳೆ ಮಂಜಮ್ಮ ಜೋಗತಿ ಅವರ ಸಂದರ್ಶನದ ಮೊದಲ ಭಾಗದ ಪೋಸ್ಟ್ ಮಾಡುತ್ತೇನೆ.
Comments
Post a Comment