Blog number 1857. ನನ್ನ ಜೀವಮಾನದ ಮೊದಲ ಪತ್ರಿಕಾ ಲೇಖನ ಪ್ರಕಟವಾಗಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಛಲಗಾರ ದಿನ ಪತ್ರಿಕೆಯಲ್ಲಿ ಆಗ ನನಗೆ 12 ವರ್ಷ ಪ್ರಾಯ.
#ನನ್ನ_ಜೀವಮಾನದ_ಮೊದಲ_ಲೇಖನ_ಪ್ರಕಟವಾಗಿದ್ದು_ಛಲಗಾರ_ಪತ್ರಿಕೆಯಲ್ಲಿ
#ಕಾಡಿನ_ನ್ಯಾಯ_ಎಂಬ_ಶಿರೋನಾಮೆ_ನೀಡಿದ್ದು_ಸಂಪಾದಕ_ಗಣಪತಿಯವರು
#ನನಗೆ_ಆಗ_ಹನ್ನೆರೆಡು_ವರ್ಷ.
ತೀರ್ಥಹಳ್ಳಿಯ #ಛಲಗಾರ_ಪತ್ರಿಕೆ ನನ್ನ ಪೇಸ್ ಬುಕ್ ಲೇಖನ ಪತ್ರಿಕೆಯಲ್ಲಿ ಪುನರ್ ಪ್ರಕಟಿಸಿದೆ ಸಂಪಾದಕರಾದ ನಿಶಾಂತ್ ಗೆ ದನ್ಯವಾದಗಳು.
ಇಲ್ಲಿ ಕ್ಲಿಕ್ ಮಾಡಿ ಆ ಲೇಖನ ಓದಿ
https://arunprasadhombuja.blogspot.com/2023/12/blog-number-1854.html
ನನ್ನ ಅಣ್ಣ 1975 ರಿಂದ ಈ ಪತ್ರಿಕೆಯ ಆನಂದಪುರಂನ ವರದಿಗಾರ ಮತ್ತು ಏಜೆಂಟ್ ಆಗಿದ್ದರು.
1976 ಅಥವ 1977 ರಲ್ಲಿ ಹಕ್ಕಿಪಿಕ್ಕಿ ಸಮುದಾಯದ ಮೈಲಪ್ಪ ಎಂಬಾತ ಕಾಡು ಕೋಳಿ ಮಾರಾಟಕ್ಕೆ ನಮ್ಮ ಮನೆ ಎದುರಿನ ಯಡೇಹಳ್ಳಿ ವೃತ್ತಕ್ಕೆ ಬಂದಿದ್ದ ಆಗ ಅಲ್ಲಿಗೆ ಬಂದ ಚೋರಡಿ ರೇಂಜರ್ ಜೀಪಿನಲ್ಲಿ ಮೈಲಪ್ಪನನ್ನು ಹೊಡೆದು ಬಡಿದು ಹಾಕಿಕೊಂಡು ಹೋಗಿದ್ದರು.
ನಾವೆಲ್ಲ ಆಗೆಲ್ಲ ಆರನೇ ಕ್ಲಾಸೋ ಅಥವ ಏಳನೆ ಕ್ಲಾಸಿನ ವಿದ್ಯಾರ್ಥಿಗಳು ನಮಗೆ ದುಃಖ ಮತ್ತು ಅಧಿಕಾರಿಗಳ ಮೇಲೆ ಕೋಪ ಹಾಗೆಯೇ ಮೈಲಪ್ಪನನ್ನು ಬಿಟ್ಟು ಕಳಿಸುತ್ತಾರೋ ಇಲ್ಲವೊ? ಅವನ ಕ್ಯಾಂಪ್ ನಮ್ಮ ಮನೆ ಹಿಂದಿನ ಮುಸ್ಲಿಂ ಸ್ಮಶಾನದ ಗೋಳಿ ಮರದ ನೆರಳಲ್ಲಿತ್ತು.
ಸಂಜೆ ಮೈಲಪ್ಪ ನಾಟದ ಲಾರಿಯಲ್ಲಿ ಬಂದಿಳಿದಾಗ ಅವನ ಬೆನ್ನು ಪೂರ್ತಿ ಬಾಸುಂಡೆಗಳಿಂದ ಚಿತ್ತಾರ ಮೂಡಿಸಿತ್ತು. ಅರಣ್ಯಾಧಿಕಾರಿಗಳು ಇವನು ಶಿಕಾರಿ ಮಾಡಿದ್ದ ಕಾಡು ಕೋಳಿ ಇವನಿಂದಲೇ ಹಸೆ ಮಾಡಿಸಿ ಉಂಡಿದ್ದಾರೆ.
ಇದನ್ನೇ ನನ್ನ ನೋಟ್ ಬುಕ್ ನ ಹಾಳೆಯಲ್ಲಿ ನನ್ನ ಬಾಲ್ಯದ ಆ ಕಾಲದ ಬರವಣಿಗೆಯಲ್ಲಿ ಬರೆದು ಪ್ರತಿ ನಿತ್ಯ ಸಂಜೆ ಸಾಗರದಿಂದ ತೀರ್ಥಹಳ್ಳಿಗೆ ಹೋಗುವ #ಶಂಕರ್ ಬಸ್ಸಿನ ಡ್ರೈವರ್ ಹತ್ತಿರ ನನ್ನ ಅಣ್ಣ ಕಳಿಸುತ್ತಿದ್ದ ನಿತ್ಯ ವರದಿಗಳ ಜೊತೆ ಕಳಿಸಿದ್ದೆ.
ಎರೆಡು ದಿನದ ನಂತರ ಏನಾಶ್ಚರ್ಯ ಛಲಗಾರ ದಿನ ಪತ್ರಿಕೆಯ ಮುಖ ಪುಟದಲ್ಲಿ #ಕಾಡಿನ_ನ್ಯಾಯ ಎಂಬ ಶಿರ್ಷಿಕೆಯಲ್ಲಿ ನನ್ನ ಲೇಖನ ನನ್ನ ಹೆಸರಲ್ಲಿ ಬಾಕ್ಸ್ ಲೇಖನವಾಗಿ ಪ್ರಕಟವಾಗಿತ್ತು.
ಇದು ನನ್ನ ಜೀವಮಾನದ ಮೊದಲ ಪತ್ರಿಕಾ ಲೇಖನ ಎಂಬ ಹೆಮ್ಮೆ ನನ್ನದು ಇವತ್ತು ಗಣಪತಿಯವರ ಮಗ ನಿಶಾಂತ್ ನನ್ನ FB ಲೇಖನ ಛಲಗಾರದಲ್ಲಿ ಪ್ರಕಟಿಸಿದ್ದು ನೋಡಿ ನೆನಪಾಯಿತು.
Comments
Post a Comment