Blog number 1881. ಪ್ಯಾಷನ್ ಪ್ರೂಟ್ ಒಳಗಿನ ಸುವಾಸನ ಯುಕ್ತ ರುಚಿಕರ ತಿರಳು... ದಿನಕ್ಕೊಂದು ಪ್ಯಾಷನ್ ಪ್ರೂಟ್ .... ಪ್ರತಿ ಮನೆಯಲ್ಲಿರಲಿ ಈ ಹಣ್ಣಿನ ಬಳ್ಳಿ ....
https://youtu.be/u6fA-WrWJlo?feature=shared
#ಪ್ಯಾಷನ್_ಪ್ರೂಟ್_ದಿನಕ್ಕೊಂದು
#ಗಟ್ಟಿ_ಕವಚದ_ಹಣ್ಣಿನ_ಒಳಗೆ_ರುಚಿಕರ_ಸುವಾಸನೆಯ_ತಿರುಳು.
#ಚಮಚದಿಂದ_ತೆಗೆದು_ನಾಲಿಗೆ_ಮೇಲೆ_ಇಟ್ಟರಾಯಿತು
#ಷ್ಯಾಷನ್_ಪ್ರೂಟ್_ಮತ್ತು_ಅದರ_ಸಸಿ_ನೀಡಿದ_ಪ್ರೆಂಚ್_ಪ್ರವಾಸಿ
#ಈಗ_ನಮ್ಮ_ಮನೆಯಲ್ಲಿ_ಪ್ಯಾಷನ್_ಫ್ರೂಟ್_ರಾಶಿ
#ಹೊಸ_ಸಸಿಗಳು_ತಯಾರಿದೆ.
2014ರಲ್ಲಿ ಫ್ರೆಂಚ್ ಪ್ರವಾಸಿ ಒಬ್ಬರು ಕೊಡೈಕೆನಾಲ್ ನಿಂದ ಗೋವಾಕ್ಕೆ ತೆರಳುವಾಗ ಅವರ ಬೈಕಿನ ಪೆಟ್ರೋಲ್ ಟ್ಯಾಂಕ್ ಲೀಕ್ ಆಗುತ್ತಿದ್ದರಿಂದ ನಮ್ಮಲ್ಲಿ ಅವರು ಅವರ ಮಗ ತಂಗಿದ್ದರು.
ಪುನಃ 2015ರಲ್ಲಿ ಕಾರಿನಲ್ಲಿ ಬಂದು ಹಳೆಯ ಪರಿಚಯದಿಂದ ನಮ್ಮಲ್ಲೇ ತಂಗಿದ್ದರು ಇವರ ಪತ್ನಿ ಗೋವಾದವರು, ಇವರ ಒಡೆತನದ ಮನೆ ಆಸ್ತಿ ಕೊಡೈಕೆನಾಲ್ ನಲ್ಲಿದೆ, ಮಗ ಗೋವಾದಲ್ಲಿ ಹಳೆಯ ಮಾಡೆಲ್ ಬೈಕ್ ಗಳನ್ನು ನವೀಕರಿಸಿ ಬೈಕ್ ರೈಡರ್ ಗಳಿಗೆ ಮಾರಾಟ ಮಾಡುವ ಉದ್ಯೋಗವಂತೆ ಪ್ರತಿ ವರ್ಷ ಕೊಡೈಕೆನಾಲ್ ಗೆ ಬಂದು ಕೆಲ ಕಾಲ ತಂಗುತ್ತಾರೆ ನಂತರ ಗೋವಾ ತಲುಪಿ ಅಲ್ಲಿಂದ ಅವರ ದೇಶಕ್ಕೆ ವಾಪಾಸಾಗುತ್ತಾರೆ.
ಅವರು ನನಗೆ ಈ ಪ್ಯಾಷನ್ ಫ್ರೂಟ್ ತಿನ್ನಲು ನೀಡಿದ್ದರು ಅದೇ ಮೊದಲು ನಾನು ಈ ಹಣ್ಣು ನೋಡಿದ್ದು ಜೊತೆಗೆ ಈ ಹಣ್ಣಿನ ಬಳ್ಳಿಯ ಸಣ್ಣ ಸಸಿ ಒಂದು ನೀಡಿದ್ದರು.
ಈಗ ನಮ್ಮ ಕಾಟೇಜಿನ ಗಾರ್ಡನ್ ನಲ್ಲಿ ಪ್ಯಾಷನ್ ಫ್ರೂಟ್ ನ ನಾಕಾರು ಬಳ್ಳಿ ಕಾಡು ಬಾದಾಮಿ ಮರಕ್ಕೆ ಹಬ್ಬಿ ರಾಶಿ ಹಣ್ಣುಗಳು ನೀಡುತ್ತಿದೆ.
ಪ್ಯಾಷನ್ ಪ್ರೂಟ್ ಜ್ಯೂಸ್ ಅನುಕೂಲಗಳ ಬಗ್ಗೆ ಬರೆದ ಲೇಖನ ಇಲ್ಲಿ ಕ್ಲಿಕ್ ಮಾಡಿ ನೋಡಿ https://arunprasadhombuja.blogspot.com/2023/08/blog-number-1719.html.
ಪ್ರತಿ ನಿತ್ಯ ಬೆಳಿಗ್ಗೆ ನನ್ನ ವಾಕಿಂಗ್ ಮುಗಿಸಿ ವಾಕಿಂಗ್ ಸಂಗಾತಿ ರಾಟ್ ವೈಲರ್ ಶಂಭೂರಾಮನ ಜೊತೆ ಮನೆಗೆ ಬಂದ ನಂತರ ಯೋಗಾಸನ ಪ್ರಾಣಾಯಾಮಗಳು ಪ್ರಾರಂಬಿಸುವ ಮೊದಲು ಹಣ್ಣು ತಿನ್ನುತ್ತೇನೆ ಈಗ ನಮ್ಮದೇ ಪ್ಯಾಷನ್ ಫ್ರೂಟ್ ಸಿಗುತ್ತಿರುವುದರಿಂದ ಪ್ರತಿ ದಿನ ಒಂದು ಪ್ಯಾಷನ್ ಪ್ರೂಟ್ ಅಡ್ಡ ತುಂಡರಿಸಿ ಚಮಚದಿಂದ ಹಣ್ಣಿನ ತಿರಳು ತಿನ್ನುತ್ತೇನೆ.
Comments
Post a Comment