Blog number 1890. ಕುವೆಂಪು ಅವರ ಕುಪ್ಪಳ್ಳಿಯ ಕವಿಶೈಲದಲ್ಲಿ ಕವಿ ಕುವೆಂಪು ಸ್ಮಾರಕದ ಮಾರ್ಗದರ್ಶಿ ಆಗಿ ಸಾರ್ಥಕ ಸೇವೆ ಸಲ್ಲಿಸಿದ ಉಂಟೂರು ಮಾನಪ್ಪ ಗೌಡರು ನನಗೆ ಸದಾ ನೆನಪಾಗುತ್ತಲೇ ಇರುತ್ತಾರೆ.
https://youtu.be/kRXXOCiP8wU
#ಕವಿಶೈಲದಲ್ಲಿ_ಮಾನಪ್ಪಗೌಡರಂತ_ಗೈಡ್
#ಇನ್ನೊಬ್ಬರು_ಈವರೆಗೆ_ಸಿಕ್ಕಿಲ್ಲ
#ಕುವೆಂಪು_ಅವರ_113ನೇ_ಹುಟ್ಟು_ಹಬ್ಬದಂದು_ನಮಗೆ_ಮಾರ್ಗ_ದರ್ಶಕರಾಗಿದ್ದರು
#ಅವತ್ತಿನ_ವಿಡಿಯೋ_ಇಲ್ಲಿದೆ
#ಉಂಟೂರು_ಮಾನಪ್ಪ_ಗೌಡರು_ಈಗಿಲ್ಲ
#ಆದರೂ_ಅವರ_ಮರೆಯಲುಂಟೆ.
#ಕುವೆಂಪು_119ನೇ_ಜನ್ಮದಿನದಂದು_ಅವರ_ನೆನಪು
ದಿನಾಂಕ 29- ಡಿಸೆಂಬರ್ -2017 ರಂದು ಕುವೆಂಪು ಅವರ 113ನೇ ಜನ್ಮ ದಿನದಂದು ನಾನು ಕವಿಶೈಲಕ್ಕೆ ಹೋದಾಗ ಅಲ್ಲಿನ ನಿವ೯ಹಣೆ ನೋಡಿ ಸಂತೋಷ ಆಯಿತು, ಕವಿ ಸಮಾದಿ ಹತ್ತಿರ ಗೈಡ್ ಒಬ್ಬರು ಸಿಕ್ಕಿದ್ದರು ಅವರ ಬಾಯಿ ತುಂಬಾ ಮಲೆನಾಡಿನ ರಸಗವಳ ತುಂಬಿತ್ತು.
ಇಲ್ಲಿನ ವಿವರ ನೀಡುತ್ತೀರಾ ಅಂದೆ... ಖಂಡಿತಾ ಅಂದ ಅವರು ಕುವೆಂಪುರವರ ಹುಟ್ಟು ಸಾವಿನ ಮದ್ಯದ ಘಟನೆಗಳನ್ನು ಕುವೆಂಪು ಅವರ ರಚನೆಯ ಕವನಗಳ ಸಾಲು ಸಾಲುಗಳನ್ನು ಸಂದರ್ಭಕ್ಕೆ ತಕ್ಕಂತೆ ಜೋಡಿಸುತ್ತಾ ಕುವೆಂಪು ಅವರ ಸಂಬಂದಿಗಳ ಹೆಸರು, ಮಕ್ಕಳು, ಮರಿ ಮಕ್ಕಳುಗಳ ವಿವರಗಳು ತೆರೆ ತೆರೆಯಾಗಿ ರಾಗವಾಗಿ ಗದ್ಯ - ಪದ್ಯದ ರೂಪವಾಗಿ ಹೇಳಿದರು, ಇದನ್ನು ಕೇಳಿ ನಮಗೆಲ್ಲ ಸಂತೋಷ ಆಯಿತು ಅಷ್ಟೇ ಅಲ್ಲ ಅವತ್ತು ಕವಿ ಶೈಲ ವೀಕ್ಷಿಸಲು ಬಂದ ಅನೇಕರಿಗೆ ರಸ ಕವಿಯ ರಸಗವಳ ಸವಿದಂತೆ ಆಗಿತ್ತು ಗೈಡ್ ಮಾನಪ್ಪ ಗೌಡರ ಕವಿಶೈಲದ ಮಾರ್ಗದರ್ಶನ,ಇವರ ನೆನಪಿನ ಶಕ್ತಿ ನೋಡಿ ನಮಗೆಲ್ಲ ಆಶ್ಚಯ೯ವಾಯಿತು.
ಕುವೆಂಪು ಅವರ ಕವನದಲ್ಲಿನ ಸಾಲುಗಳು.. ಬೆಳಕು... ನೆರಳು ಅವರ ಬಾಯಲ್ಲಿ ರಸವತ್ತಾಗಿ ಹರಿದು ಬರುವಾಗ ಕವಿಶೈಲಲ್ಲಿ ಸೂರ್ಯಾಸ್ತದ ಸಮಯ ಆಗಿತ್ತು ನನ್ನ ವಿಡಿಯೋದಲ್ಲಿ ಕವಿ ಶೈಲದಲ್ಲಿನ ಮಾನಪ್ಪ ಗೌಡರ, ಕುವೆಂಪು ಸಮಾದಿಗಳ ಮೇಲೆ ಕಾಕತಾಳಿಯವಾಗಿ ಸೂಯ೯ನ ಬೆಳಕಿನ ನೆರಳಿನ ಸಾಲುಗಳೂ ಗಮನಿಸಿ.
ಇವರಿಗೆ ಕವಿಶೈಲ ಟ್ರಸ್ಟ್ ಮಾಸಿಕ ವೇತನ 10 ಸಾವಿರ ನೀಡುತ್ತದೆಯಂತೆ,ವಷ೯ದಿಂದ ವಷ೯ಕ್ಕೆ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆಯ೦ತೆ, ಈಗ ವಾಷಿ೯ಕ ಒಂದು ಲಕ್ಷದ ಅರವತ್ತು ಸಾವಿರ ಜನ ಭೇಟಿ ನೀಡುತ್ತಿದ್ದಾರಂತೆ ಅಂತೆಲ್ಲ ಅವತ್ತು (2017) ತಿಳಿಸಿದರು.
ಮಳೆಗಾಲದಲ್ಲಿ ಬರುವವರು ಕಡಿಮೆ ಇರಬೇಕು ಅಂದೆ... ಅದಕ್ಕೆ ಅವರು ಹೇಳಿದ್ದು ಮಳೆಗಾಲದಲ್ಲಿಯೇ ಬೆಂಗಳೂರಿನವರು ಅತಿ ಹೆಚ್ಚು ಬರುತ್ತಾರೆ ಅಂದರು.
ಗೈಡ್ ಮಾನಪ್ಪ ಗೌಡರು ನನಗೆ ತುಂಬಾ ಇಷ್ಟವಾದರು ಅವರು ಕವಿಶೈಲದ ಮಾರ್ಗದರ್ಶಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿರುವುದು ನೋಡಿ ಸಂತೋಷದಿಂದ ಬರುವಾಗ ಅವರಿಗಿ ಭಕ್ಷೀಸು ನೀಡಲೇ ಬೇಕೆನ್ನಿಸಿ ಹಣ ಕೊಡಲು ಹೋದಾಗ ಅವರು ನಿರಾಕರಿಸಿದರು.
ಇವರ ಹೆಸರು ಉಂಟೂರು ಮಾನಪ್ಪ ಗೌಡರು ಇವರು ಕವಿಶೈಲದ ಸಮೀಪದ ಹಳ್ಳಿಯವರು ಇವರು ಪಡೆಯುವ ವೇತನಕ್ಕಿಂತ ಕೆಲವು ಪಟ್ಟು ಹೆಚ್ಚು ಕೆಲಸ ಮಾಡುತ್ತಾರೆ.
23 ಮೇ 2021 ರಂದು ಉಂಟೂರು ಮಾನಪ್ಪ ಗೌಡರು ಇಹಲೋಕ ತ್ಯಜಿಸಿದ್ದಾರೆ ಆದರೂ ಕುವೆಂಪು -ಕವಿಶೈಲ ನೆನಪಾದಾಗೆಲ್ಲ ಅಲ್ಲಿಗೆ ಹೋದಾಗೆಲ್ಲ ಉಂಟೂರು ಮಾನಪ್ಪ ಗೌಡರ ನೆನಪಾಗದೇ ಇರುವುದಿಲ್ಲ.
Comments
Post a Comment