Blog number 984. ಆನಂದಪುರಂ ಇತಿಹಾಸ ಸಂಖ್ಯೆ 82. ಕೆಳದಿ ಶಿವಪ್ಪನಾಯಕ ಕೃಷಿ- ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯತ್ ನ 777 ಎಕರೆಯಲ್ಲಿ ಪ್ರಾರಂಭವಾಗಿ ಮೊದಲ ಘಟಿಕೋತ್ಸವ ಸಮಾರಂಭ ನಡೆಯಲಿದೆ
#ಆನಂದಪುರಂ_ಇತಿಹಾಸ_82. #ಆನಂದಪುರಂ_ಹೋಬಳಿಯ_ಇರುವಕ್ಕಿಯಲ್ಲಿ #ಕೆಳದಿ_ಶಿವಪ್ಪನಾಯಕ_ಕೃಷಿ_ತೋಟಗಾರಿಕಾ_ವಿಜ್ಞಾನ_ವಿಶ್ವವಿದ್ಯಾಲಯ_ಪ್ರಾರಂಭ_ಆಗಿದೆ. #ರಾಷ್ಟ್ರೀಯ_ಹೆದ್ದಾರಿ_69_ಯಡೇಹಳ್ಳಿ_ಅಂಬೇಡ್ಕರ್_ವೃತ್ತದಿಂದ_ಹೊಸನಗರ_ರಸ್ತೆಯಲ್ಲಿ_3_ಕಿಮಿ_ಅಂತರದಲ್ಲಿದೆ #ರಾಷ್ಟ್ರದಲ್ಲಿ_777_ಎಕರೆ_ಅರಣ್ಯದಲ್ಲಿರುವ_ಏಕೈಕ_ಕೃಷಿ_ತೋಟಗಾರಿಕಾ_ವಿಜ್ಞಾನ_ವಿಶ್ವವಿದ್ಯಾಲಯ. 28- ಸೆಪ್ಟೆಂಬರ್ -2022 ರಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದ ನೂತನ ಅವರಣದಲ್ಲಿ ಮೊದಲ ಘಟಿಕೋತ್ಸವ ಸಮಾರಂಭ ನಡೆಯಲಿದೆ, ಘನವೆತ್ತ ರಾಜ್ಯಪಾಲರಾದ ಗೆಹ್ಲೋಟ್ ಆಗಮಿಸಲಿದ್ದಾರೆ. ಸದರಿ ವಿಶ್ವ ವಿಶ್ವವಿದ್ಯಾಲಯದ 7 ನೇ ಘಟಿಕೋತ್ಸವ ಇದು ಮೊದಲಿನ ಆರು ಘಟಿಕೋತ್ಸವ ಇರುವಕ್ಕಿಯ ನೂತನ ಕಾಂಪ್ಲೆಕ್ಸ್ ಕಾಮಗಾರಿ ಪೂರ್ಣವಾಗದ್ದರಿಂದ ಶಿವಮೊಗ್ಗದ ಕೃಷಿ ಕಾಲೇಜಿನ ಆವರಣದಲ್ಲೇ ನಡೆಸಲಾಗಿತ್ತು. ಕೃಷಿ ವಿಶ್ವವಿದ್ಯಾಲಯಕ್ಕೆ ಜಿಲ್ಲೆಯಲ್ಲಿನ ಇರುವಕ್ಕಿ ಮತ್ತು ಹಾಯ್ ಹೊಳೆ ಹತ್ತಿರ ಭೂಮಿ ಗುರುತಿಸಲಾಗಿತ್ತು ಮತ್ತು ಹಾಯ್ ಹೊಳೆಯ ಭೂಮಿಯಲ್ಲೇ ಕೃಷಿ ವಿಶ್ವವಿದ್ಯಾಲಯ ಮಾಡಬೇಕೆಂಬ ಒತ್ತಡವಿತ್ತು ಕಾರಣ ಅಲ್ಲಿ ಬೇನಾಮಿ ಹೆಸರಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಭೂಮಿ ಖರೀದಿಸಿದ್ದರು ಅವರ ಭೂಮಿಗೆ ಬಂಗಾರದ ಬೆಲೆ ಬರಬೇಕೆಂದರೆ ಕೃಷಿ ವಿಶ್ವವಿದ್ಯಾಲಯ ಬರಬೇಕು ಎಂಬುದು. ...