Blog number 1977. ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಪಾಕಿಸ್ತಾನದಿಂದ ಬಿಡುಗಡೆಗೆ ನಾಳೆ ಐದು ವರ್ಷ ಆದರೆ ಸಾರ್ವಜನಿಕರ ನೆನಪು ಕ್ಷಣಿಕ
#ಭಾರತೀಯ_ರಾಜಕಾರಣದಲ್ಲಿ_ಆಸಕ್ತಿ_ಇರುವರು_ತಪ್ಪದೆ_ಓದಿ. #ಕೇವಲ_90_ಸೆಕೆಂಡ್_ಕಾಲದ_ರೋಚಕ_ವಾಯುದಾಳಿ #ಸಾವ೯ಜನಿಕರ_ನೆನಪು_ಕ್ಷಣಿಕ #ಭಾರತದ_ಹೀರೋ_ಅಭಿನಂದನ್_ವರ್ತಮಾನ್ #ಪಾಕಿಸ್ತಾನದಿಂದ_ಬಿಡುಗಡೆ_ಆಗಿ_ಬಂದು_ನಾಳೆಗೆ_ಐದು_ವಷ೯ #ಶಾಲಿನಿ_ಹೂಲಿ_ಅವರ_ಆಕೃತಿ_ಕನ್ನಡದಲ್ಲಿ #ವಿಂಗ್_ಕಮ್ಯಾಂಡರ್_ಸುದರ್ಶನ್_ಬರೆದ_ಲೇಖನ_ಇಲ್ಲಿ_ಇನ್ನೊಮ್ಮೆ. ಐದು ವಷ೯ದ ಹಿಂದೆ 28- ಪೆಬ್ರವರಿ -2019 ಇದೇ ದಿನ ರಾತ್ರಿ ಇಡೀ ಬಾರತ ದೇಶವಾಸಿಗಳದ್ದು ಒಂದೇ ಪ್ರಾಥ೯ನೆ ನಮ್ಮ ಹೆಮ್ಮೆಯ ದೇಶ ರಕ್ಷಕ ಅಭಿನಂದನ್ ಯಾವುದೇ ತೊಂದರೆ ಆಗದೇ ಪಾಕಿಸ್ತಾನದಿಂದ ಬಿಡುಗಡೆ ಆಗಿ ಬರಲಿ ಎಂಬುದು ಆಗಿತ್ತು. ಮಾಚ೯ 1 ರ ಸಂಜೆವರೆಗೆ ಪಂಜಾಬ್ ನ ವಾಘಾ ಬಾಡ೯ರ್ ನಲ್ಲಿ ಅಭಿನಂದನ್ ಬಿಡುಗಡೆ ಕ್ಲೈಮಾಕ್ಸ್ ಇಡೀ ದೇಶವನ್ನ ಕೊನೆ ಬಾಲ್ 4ರನ್ ಗೆ ದೇಹ ಮನಸ್ಸು ಕೈಯಲ್ಲಿ ಹಿಡಿದು ಕುಳಿತಂತೆ ಕಾದಿತ್ತು. ಅಂತೂ ತಡವಾಗಿ ಆಗಿಯೂ ಬಿಡುಗಡೆ ಆಗಿದ್ದು ಇಡೀ ದೇಶ ನಿಟ್ಟುಸಿರು ಬಿಟ್ಟ0ತೆ ಆಯಿತು. ನಂತರದ್ದು ಇತಿಹಾಸ... ದೇಶದ ಸಾವ೯ತ್ರಿಕ ಚುನಾವಣೆಯಲ್ಲಿ ಜನಸಾಮಾನ್ಯರು ಅಭಿನಂದನ್ ಬಿಡುಗಡೆಗಾಗಿ ಬಿಜೆಪಿಗೆ ಬೆಂಬಲಿಸುವುದಾಗಿ ಚುನಾವಣಾ ಪೂವ೯ ಸಮೀಕ್ಷೆಗಳಲ್ಲಿ ನೇರವಾಗಿ ಹೇಳಿದರು. ನಾಳೆಗೆ ಅಭಿನಂದನ್ ಬಿಡುಗಡೆ ಆಗಿ ಬಂದು ಐದನೇ ವಾಷಿ೯ಕೋತ್ಸವ ಆದರೆ ಆ ಸಂಭ್ರಮ ಈಗ ಕಂಡು ಬರುತ್ತಿಲ್ಲ ಬಹುಷಃ ಸಾವ೯ಜನಿಕರ ನೆನಪು ಕ್ಷಣಿಕ ಎಂಬುದು ಸತ...