ಆನ್ ಲೈನ್ ಕ್ರೌಡ್ ಪಂಡಿಂಗ್ ಪ್ಲಾಟ್ ಪಾರಂ ಮೂಲಕ ಆಥಿ೯ಕ ಸಹಾಯ ಪಡೆದು ಪುನರ್ ನಿಮಾ೯ಣ ಆಗಲಿರುವ ಮೈಸೂರಿನ ಸೈಯದ್ ಇಷಾಕರ ಸುಟ್ಟು ಹೋದ ಕನ್ನಡ ಪುಸ್ತಕದ ಗ್ರಂಥಾಲಯ
#Ketto_ಭಾರತೀಯ_ಆನ್ಲೈನ್_ಕ್ರೌಡ್_ಪಂಡಿಂಗ್_ಪ್ಲಾಟ್_ಪಾರಂ . #ಮೈಸೂರಿನ_ಕನ್ನಡ_ಪ್ರೇಮಿ_ಸ್ಯೆಯದ್_ಇಷಾಕ್_ಗ್ರಂಥಾಲಯ_ಪುನರ್_ನಿಮಾ೯ಣಕ್ಕೆ #ದಾನಿಗಳಿಂದ_ಸಹಾಯ_ಮಾಡಲು_ಮುಂದೆ_ಬಂದಿದೆ. ಈ ಕ್ಷಣದ ತನಕ ketto ಸಂಗ್ರಹಿಸಿದ ಹಣ ರೂ ಹನ್ನೆರೆಡು ಲಕ್ಷದ ಐವತ್ತೆರೆಡು ಸಾವಿರದ ನೂರಾ ಇಪ್ಪತ್ತು ಇದರ ಗುರಿ ಇಪ್ಪತ್ತು ಲಕ್ಷ! ಹೌದು ಈ ಎಲ್ಲಾ ದಾಖಲೆ ಪಾರದರ್ಶಕ. ಇಲ್ಲಿ ಎರೆಡು ವಿಚಾರ ಇದೆ ಕನ್ನಡ ಪ್ರೇಮಿ ಮುಸ್ಲಿ೦ ದಮಿ೯ಯರಾದ ಮೈಸೂರಿನ ಪ್ಲಂಬಿಂಗ್ ವೃತ್ತಿಯ ಆದರೆ ಕನ್ನಡ ಗ್ರಂಥಾಲಯ ನಡೆಸುವ ಪ್ರವೃತ್ತಿಯ ಸೈಯದ್ ಇಷಾಕರ ಗ್ರಂಥಾಲಯ ಕಿಡಿಗೇಡಿಗಳು ಸುಟ್ಟಿದ್ದಾರೆ ಇದನ್ನು ಅನೇಕರು ಖಂಡಿಸಿದ್ದಾರೆ ಪುನಃ ಇವರಿಗೆ ಗ್ರಂಥಾಲಯ ಕಟ್ಟಿಸಿ ಕೊಡಬೇಕೆಂದು ಬಯಸಿದ್ದಾರೆ ಆದರೆ ಹೇಗೆ? ಗೊತ್ತಿಲ್ಲ? ಹಣವಂತರು ಮತ್ತು ಸಕಾ೯ರ ಮನಸ್ಸು ಮಾಡಿದರೆ ಮಾತ್ರ ಸಾಧ್ಯ ಎಂದು ನಿಟ್ಟುಸಿರು ನಮ್ಮದೆಲ್ಲ ಅಲ್ಲವೆ?. ಆದರೆ ಇದಕ್ಕೆಲ್ಲ ಪರಿಹಾರ ಸಾಧ್ಯ ಅಂತ ಅದನ್ನು ಸಾದಿಸಿ ತೋರಿಸುವ ಅನೇಕ ಕ್ರೌಡ್ ಪಂಡಿಂಗ್ ಸಂಸ್ಥೆಗಳು ಭಾರತದಲ್ಲಿದೆ ಇದರಲ್ಲಿ Ketto ಎಂಬ ಆನ್ ಲೈನ್ ಕ್ರೌಡ್ ಪಂಡಿಂಗ್ ಪ್ಲಾಟ್ ಪಾರಂ ನ ಕೆಲಸ ಗಮನಾರ್ಹ. ಮುಂಬೈ ಕೇಂದ್ರ ಕಛೇರಿ ಹೊಂದಿರುವ ಈ ಸಂಸ್ಥೆಗೆ 55 ಲಕ್ಷಕ್ಕೂ ಹೆಚ್ಚಿನ ದಾನಿಗಳಿದ್ದಾರೆ, ಈವರೆಗೆ ಇದು ಸಾಮಾಜಿಕ ಕಳಕಳಿಗಾಗಿ ಸಂಗ...