Skip to main content

Posts

Showing posts with the label Farooq good writer in Facebook

Blog number 1381. ಒಮ್ಮೆಯೂ ಮುಖತಃ ಬೇಟಿ ಆಗದ ಆದರೆ ನನ್ನ ಸಂಪೂರ್ಣ ಬಲ್ಲವರಾದ ಗರ್ತಿಕೆರೆ ಪಾರೂಕ್ ಕಳಿಸಿದ ಅವರ ತೋಟದ ಲಕ್ಷ್ಮಣ ಫಲ

#ಕೋಣಂದೂರಿನ_ಪಾರೂಕ್_ಎಂಬ_ತತ್ವ_ಜ್ಞಾನಿ_ಗೆಳೆಯ.     ಪೇಸ್ ಬುಕ್ ನಲ್ಲಿ ಇವರ ಪೋಟೋ ಸಿಗುವುದಿಲ್ಲ ಆದರೆ ಎಲ್ಲಾ ಬಹು ಮುಖ್ಯ ಚಚೆ೯ಯಲ್ಲಿ Faruk Gkr ಎಂಬ ಹೆಸರು ಕಾಣುತ್ತಿರುತ್ತದೆ.   ಕೊಪ್ಪದ ಮಹೇಂದ್ರ ಕುಮಾರ್ ಗೆಳೆಯರು ಕೂಡ.     ಪ್ರಗತಿ ಪರ ಚಿಂತನೆ, ದೇಶಾಭಿಮಾನ, ಮೂಡ ನಂಬಿಕೆ ವಿರೋದ ,ಸಾಹಿತ್ಯ ಚಿಂತನೆ, ಸಂವಿದಾನದ ಪರವಾಗಿ ಅನ್ಯಾಯದ ವಿರುದ್ದವಾಗಿ ಇವರ ಲೇಖನಗಳು ಇದೆ.     ಒಂದು ವಿಶೇಷ ಅಂದರೆ ನಾನು ಇವರನ್ನು ಮುಖಃತವಾಗಿ ಈ ವರೆಗೆ ಬೇಟಿ ಆಗಲಾಗಲಿಲ್ಲ ಆದರೆ ಅವರು ನನ್ನ ಎಲ್ಲಾ ಚಟುವಟಿಕೆ ನೋಡಿದ್ದಾರೆ.    ಇನ್ನೂ ಒಂದು ವಿಶೇಷ ಅಂದರೆ ನಾನು ಈ ಭಾಗದ ಅನೇಕ ಅನಾಮದೇಯ ವ್ಯಕ್ತಿ ಪರಿಚಯ ಬರೆದರೆ ಪಾರೂಕ್ ಅವರನ್ನು ನಮ್ಮ ಊರ ಭಾಗದಲ್ಲಿ ಅವರನ್ನು ನೋಡಿದ ಬಗ್ಗೆ ದ್ವನಿಸುತ್ತಾರೆ ಅಂದರೆ ಎಲ್ಲವನ್ನೂ ಗ್ರಹಿಸುವ ಶಕ್ತಿ ಹೊಂದಿದ್ದಾರೆ.     ಮೊನ್ನೆ ಲಕ್ಷ್ಮಣ ಫಲ (ಸುಮಾರು ಒಂದು ಕೆಜಿ ತೂಕದ್ದು) ಕಳಿಸಿ ಕೊಟ್ಟಿದ್ದರು, ಈ ಹಣ್ಣು ತಿಂದರೆ ಕ್ಯಾನ್ಸರ್ ತಡೆಯುತ್ತದೆಂಬ ನಂಬಿಕೆಯಿಂದ ಇದರ ಬೆಲೆ ಕನಿಷ್ಟ 500 ರಿಂದ ಸಾವಿರದ ತನಕ ಇದೆ ಮತ್ತು ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ, ಈ ಹಣ್ಣನ್ನು ಸುಮಾರು 5 ವರ್ಷದಿಂದ ಚಿತ್ರದಲ್ಲಿ ಮಾತ್ರ ನೋಡಿದ್ದೆ ಈಗ ಪಾರೂಕರಿಂದ ಕೈ ಮುಟ್ಟಿ, ಸುವಾಸನೆ ಆಗ್ರಾಹಿಣಿಸಿ ಸ್ವತಃ ರುಚಿ ನೋಡುವಂತಾಯಿತು. ...