ಕೊರಾನಾ ಲಾಕ್ ಡೌನ್ ಲೆಟರ್ 25 - ಭಾರತೀಯ ರೈಲೈ ಭಾರತದ ರಕ್ತನಾಡಿಯ೦ತೆ ದೇಶವಾಸಿಗಳನ್ನ ಬೆಸೆದಿದೆ, ಕೊರಾನಾ ಲಾಕ್ಡೌನ್ ನಿ೦ದ ಸಂಪೂಣ೯ ಸ್ಥಬ್ದವಾಗಿದೆ
#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_25 #ದಿನಾ೦ಕ_28_ಏಪ್ರಿಲ್_2020 #ಭಾರತೀಯ_ರೈಲ್ವೇ #ಕೊರಾನಾ_ವೈರಸ್ ಬಾರತದಲ್ಲಿ ರೈಲು ಇಷ್ಟು ದೀಘ೯ಕಾಲ ಇಡೀ ದೇಶದಲ್ಲಿ ಸ್ಥಗಿತವಾಗಿರುವುದು ಇದೇ ಮೊದಲ ಸಲ. 13 ಲಕ್ಷಕ್ಕಿ೦ತ ಹೆಚ್ಚು ಉದ್ಯೋಗಸ್ಥರು ಭಾರತೀಯ ರೈಲ್ವೆಯಲ್ಲಿ ಕೆಲಸ ನಿವ೯ಹಿಸುತ್ತಾರೆ, ಪರೋಕ್ಷವಾಗಿ ಅಷ್ಟೇ ಜನರಿಗೆ ಒಂದಲ್ಲ ಒಂದು ರೀತಿ ಭಾರತೀಯ ರೈಲ್ವೆಯ ಪಯಾ೯ಯ ಉದ್ಯೋಗ ಲಭಿಸಿದೆ. ಸುಮಾರು 7500 ರೈಲು ನಿಲ್ದಾಣದ ಮೂಲಕ ಇಡೀ ಭಾರತವನ್ನ ಜೋಡಿಸಿರುವ ರೈಲು ಭಾರತೀಯರ ಜೀವನಾಡಿ ಆಗಿದೆ. ಸುಮಾರು ವಾಷಿ೯ಕ 2 ಲಕ್ಷ ಕೋಟಿ ಆದಾಯ ತರುವ ಈ ಸಕಾ೯ರಿ ಸಂಸ್ಥೆ ಅತಿ ಕಡಿಮೆ ಹಣದಲ್ಲಿ ಜನ ಸಂಚಾರಕ್ಕೆ ಅನುವು ಮಾಡಿದೆ. ಕನ್ಯಾಕುಮಾರಿಯಿ೦ದ ಕಾಶ್ಮಿರದ ಜಮ್ಮು ತಾವಿ ರೈಲು ನಿಲ್ದಾಣಕ್ಕೆ ಸುಮಾರು 400O ಕಿ.ಮಿ. ಕೇವಲ ರೂ 1270 ರಲ್ಲಿ ಪ್ರಯಾಣಿಸ ಬಹುದೆ೦ದರೆ ಬಾರತೀಯ ರೈಲ್ವೆ ಅಷ್ಟು ಜನ ಸ್ನೇಹಿ. ವಿದ್ಯಾಥಿ೯ಗಳಿಗೆ, ಅಂಗವಿಕಲರಿಗೆ, ಚಿಕಿತ್ಸೆಗೆ ಹೋಗುವ ರೋಗಿಗಳಿಗೆ, ವೃದ್ದರಿಗೆ ಬಾರೀ ರಿಯಾಯಿತಿ ಇದೆ. ಇಂತಹ ಭಾರತೀಯ ರೈಲನ್ನು ಕೊರಾನಾದಂತ ಕಣ್ಣಿಗೆ ಕಾಣದ ವೈರಸ್ ಸಂಪೂಣ೯ ನಿಲ್ಲಿಸಿದೆ ಅಂದರೆ ಯೋಚಿಸಲು ಸಾಧ್ಯವಿಲ್ಲ. ಪ್ರತಿ ದಿನ ಕೇಂದ್ರ ಸಕ...