Skip to main content

Posts

Showing posts with the label Ullas sheat famous kamakshi printer of sagar

Blog number 1177. ಒಂದು ಕಾಲದಲ್ಲಿ ಸಾಗರದ ಪ್ರಸಿದ್ಧ ಕಾಮಾಕ್ಷಿ ಮುದ್ರಣಾಲಯದ ಯಶಸ್ವಿ ಉದ್ಯಮ ನಡೆಸಿದ ಉಲ್ಲಾಸ್ ಶೇಟ್

#ಸಾಗರದ_ಕಾಮಾಕ್ಷಿ_ಪ್ರಿಂಟರ್_ಉಲ್ಲಾಸ್_ಶೇಟ್  #ಎರೆಡು_ದಶಕದ_ಮುದ್ರಣ_ಕ್ಷೇತ್ರದ_ಸಾದನೆ_ಸ್ಮರಣೀಯ. #ಜನಪರ_ಹೋರಾಟಗಳಿಗೆ_ಸದಾ_ಬೆಂಬಲ_ನೀಡಿದವರು   1980 ರಿಂದ 2000 ಇಸವಿವರೆಗಿನ ಎರೆಡು ದಶಕಗಳ ಕಾಲ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕ್ ಕೇಂದ್ರದಲ್ಲಿ ಸ್ಥಳಿಯ ದಿನ ಪತ್ರಿಕೆಗಳದ್ದೆ ಕಾರುಬಾರು, ಅತಿ ಹೆಚ್ಚು ಪತ್ರಿಕೆಗಳು ಸಾಗರದಲ್ಲಿ ಪ್ರಕಟ ಆಗುತ್ತಿತು.    ಆಗೆಲ್ಲ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸ್ಥಳಿಯ ಸುದ್ದಿಗೆ ಹೆಚ್ಚು ಪ್ರಾಮುಖ್ಯತೆ ಇಲ್ಲದ್ದರಿಂದ ಸ್ಥಳಿಯರಿಗೆ ಸ್ಥಳಿಯ ಪತ್ರಿಕೆಗಳು ಬೇಕೇ ಬೇಕು ಆಗಿತ್ತು.   ಸ್ಥಳಿಯ ಪತ್ರಿಕೆಗೆ ಅಂತಹ ಜಾಹಿರಾತು ಆದಾಯ ಇಲ್ಲದ ಕಾಲದಲ್ಲಿ ಪತ್ರಿಕೆಯ ಮಾಸಿಕ ಬಿಲ್ ಒಂದೇ ಸಂಪಾದಕರಿಗೆ ಪತ್ರಿಕೆ ಮುದ್ರಣಕ್ಕೆ, ಪತ್ರಿಕೆ ವಿತರಿಸುವವರಿಗೆ ಸಂಬಳ, ಪೋನ್ ಬಿಲ್, ಅಂಚೆ ವೆಚ್ಚ, ಪತ್ರಿಕಾ ಕಛೇರಿ ಬಾಡಿಗೆ ಮತ್ತು ತಿಂಗಳ ಉಟೋಪಚಾರಕ್ಕೆ ಮೂಲ ಆದಾಯ ಆಗಿತ್ತು.   ಸ್ಥಳಿಯವಾಗಿ ಸಾವ೯ಜನಿಕವಾಗಿ ಪತ್ರಿಕೆ ಸಂಪಾದಕರಿಗೆ ಬಡತನ ಇದ್ದರೂ ಅವರ ವೃತ್ತಿಗಾಗಿ ವಿಶೇಷ ಗೌರವ ಇರುತ್ತಿತ್ತು.   ಹೆಚ್ಚಿನ ಪತ್ರಿಕೆಗೆ ವರದಿಗಾರ ಸಂಪಾದಕ ಎರೆಡೂ ಹುದ್ದೆ ಒಬ್ಬರೇ ಆಗಿರುತ್ತಿದ್ದರು.   ಆಗ ದಿನ ಪತ್ರಿಕೆಯ ಸುದ್ದಿ ಬರೆದು ಮಧ್ಯಾಹ್ನ 3 ರ ಒಳಗೆ ಪ್ರಿಂಟಿಂಗ್ ಪ್ರೆಸ್ ಗೆ ತಲುಪಿಸಿದರೆ ಅಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲಿಕರು ಅಕ್ಷರದ ಮೊಳೆ ಜೋಡಿಸಿ ಪ್ರಿಂಟಿ...