ಹೀಗೂ ಉಂಟೇ... ಇಷ್ಟು ಕಡಿಮೆ ಬೆಲೆಯಲ್ಲಿ ಅಡಿಕೆ ಸಸಿ ಸಿಗುತ್ತಾ? ... #ಮಲೆನಾಡಿನಲ್ಲಿ_ಕೇವಲ_20_ರೂಪಾಯಿಗೆ_ಅಡಿಕೆ_ಸಸಿ_ಲಭ್ಯವಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಸಮೀಪದ ಶಾಂತಪುರದಲ್ಲಿ ( ರಿಪ್ಪನಪೇಟೆ ಹೊಸನಗರ ಮುಖ್ಯ ರಸ್ತೆಯಲ್ಲಿ) #ಮಂಜುಶ್ರೀ_ನರ್ಸರಿ ಇದೆ. ಇದು ನನ್ನ ಆಪ್ತ ಗೆಳೆಯರಾದ ಮಂಜುನಾಥ ಭಟ್ಟರದ್ದು ಇವತ್ತು ಅವರು ತಮ್ಮ ಪೇಸ್ ಬುಕ್ ಪೋಸ್ಟ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ ಅವರಲ್ಲಿ #ಅಡಿಕೆ_ಸಸಿಗಳು_ಲಭ್ಯವಿದೆ_ಬೆಲೆ_20ರೂಪಾಯಿ. ಇದು ಕೇಳಿದವರು ಆಶ್ಚರ್ಯ ಪಡುತ್ತಾರೆ ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅಡಿಕೆ ಕೃಷಿ ಹೆಚ್ಚಾಗುತ್ತಿದೆ ಇದರಿಂದ ಅಡಿಕೆ ಸಸಿಗಳಿಗೆ ವಿಪರೀತ ಬೇಡಿಕೆ ಇದೆ ಆದರೆ ಅಡಿಕೆ ಸಸಿ ಬೆಲೆ ಒಂದಕ್ಕೆ 100 ರಿಂದ 150 ರ ತನಕ ಆಗಿದೆ. ಹಾಗಂತ ಇವರು ನರ್ಸರಿ ಕ್ಷೇತ್ರಕ್ಕೆ ಹೊಸಬರಲ್ಲ 1985 ರಿಂದ ಇವರು ಈ ಕ್ಷೇತ್ರದಲ್ಲಿದ್ದಾರೆ ಸುಮಾರು 40 ವರ್ಷದ ಅನುಭವ ಇವರದ್ದು ಇವರ ನರ್ಸರಿಯ ಯಾವುದೇ ಸಸಿ ಕೂಡ ಉತ್ಕೃಷ್ಟ ದರ್ಜೆಯದ್ದೇ ಆಗಿದೆ. #ಜೇನಿಮಂಜುನಾಥಭಟ್ಟರ ಜೀವನ ಶೈಲಿಯೇ ಬೇರೆ ಅವರಿಗೆ ಆಸೆ ಇಲ್ಲವೇ ಇಲ್ಲ ಅಲ್ಲಿ ದುರಾಸೆ ಎಲ್ಲಿ ಬರಬೇಕು? ... ಕಳೆದ ವರ್ಷ ಇವರಲ್ಲಿ ಅಡಿಕೆ ಸಸಿ ಬೆಲೆ ಕೇವಲ 12 ಇತ್ತು. ಅವರ ಕಂಡೀಷನ್ ಏನೆಂದರೆ ನೇರವಾಗಿ ರೈತರಿಗೆ ಮಾತ್ರ ಅಡಿಕೆ ಸಸಿ ಮಾರಾಟ ಮಾಡುತ್ತಾರೆ ...