Blog number 1749. ಗಿಣಿವಾರದ ನರಹಂತಕ ಆನೆ ಕೆಲವು ದಶಕದಿಂದ ಆಗುಂಬೆ ಭಾಗದಲ್ಲಿ ಪ್ರತಿ ವರ್ಷ ಕಾಣಿಸುತ್ತಿದೆ ಜನರು ತಮ್ಮ ಸೆಲ್ ಫೋನಿನಲ್ಲಿ ಸೆರೆ ಹಿಡಿದ ಈ ಆನೆಯ ಚಿತ್ರ.
#ಗಿಣಿವಾರದ_ನರ_ಹಂತಕ_ಆನೆ. #ಸಾಗರ_ತಾಲ್ಲುಕಿನ_ಆವಿನಹಳ್ಳಿ_ಗಿಣಿವಾರದಲ್ಲಿ_ಮಹಿಳೆಯ_ಕೊಂದ_ಕಾಡಾನೆ. #ಇವತ್ತಿಗೂ_ತೀರ್ಥಹಳ್ಳಿಯ_ಆಗು೦ಬೆ_ಭಾಗದಲ್ಲಿ_ಆಗಾಗ್ಗೆ_ಕಾಣಿಸುತ್ತಾ_ಜನರಲ್ಲಿ_ಆತಂಕ_ಸೃಷ್ಟಿಸುತ್ತಿದೆ. #ಆನೆ_ಸೆರೆಹಿಡಿಯಲಾಗದಿದ್ದರೂ_ಜನರು_ತಮ್ಮ_ಸೆಲ್_ಪೋನಿನಲ್ಲಿ_ಸೆರೆ_ಹಿಡಿದಿದ್ದಾರೆ. #ಈ_ಒಂಟಿ_ಆನೆಯ_ಸಂಚಾರದ_ಮಾಗ೯_ವಿಶಿಷ್ಟ. #ಶಿವಮೊಗ್ಗ_ಜಿಲ್ಲೆಯ_ಅರಸಾಳಿನಲ್ಲಿ_ಆ_ಕಾಲದ_ಆನೆ_ಖೆಡ್ಡಾದಲ್ಲಿ_ಕಾಡಾನೆ_ಹಿಡಿದ_ಪ್ರಕರಣ. ಶಿವಮೊಗ್ಗ ಜಿಲ್ಲೆ ಈ ಸಾರಿ ಸರ್ಕಾರದ ಲೆಖ್ಖದಲ್ಲಿ ಬರ ಪೀಡಿತ ಎಂದು ಘೋಷಣೆ ಆಗಿದೆ ಹಾಗಂತ ಪ್ರತಿ ಮುಂಗಾರಿನಲ್ಲಿ ಹೆಚ್ಚು ಮಳೆ ಸುರಿಯುವುದು ಶಿವಮೊಗ್ಗ ಜಿಲ್ಲೆಯ ಸಾಗರ - ಹೊಸನಗರ- ತೀರ್ಥಹಳ್ಳಿ ಭಾಗದಲ್ಲಿ ಮಾತ್ರ. ಮಲೆನಾಡು ಕ್ಷೀಣಿಸುತ್ತಿದೆ ಬಯಲು ಸೀಮೆ ವಿಸ್ತರಿಸುತ್ತಾ ಬಂದಿದೆ, 1995ರಲ್ಲಿ ಕುಂಸಿ ಭಾಗದಲ್ಲಿ ಮಳೆ ಕಡಿಮೆ ಆಗುತ್ತಿದ್ದು ಈಗ ಚೋರಡಿ ದಾಟಿದೆ ಮುಂದಿನ 30 ವರ್ಷದಲ್ಲಿ ಆನಂದಪುರ೦ ಬಯಲು ಸೀಮೆ ಆಗಬಹುದು ಎಂಬ ಅನುಮಾನ ಇದೆ. #ಇದು_ಮಲೆನಾಡಿನ_ಎಲ್ಲಾ_ಹಳ್ಳಿಗಳ_ಕಥೆ. ಶಿವಮೊಗ್ಗ ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಇವತ್ತಿಗೂ ಕಾಡಾನೆಗಳು ಅವುಗಳ ಕಾರಿಡಾರ್ ಇದೆ, ಶರಾವತಿ ಅಭಯಾರಣ್ಯದಲ್ಲಿ ಶರಾವತಿ ನದಿಗೆ ಆಣೆಕಟ್ಟು ಕಟ್ಟಿದ ನಂತರ ಕಾಡಾನೆಗಳು ಇಲ್ಲ. ಆದರೆ ಒಂದು ಒಂಟಿ ಸಲಗ ತೀರ್ಥಹಳ್ಳಿಯ ಆಗು೦ಬೆ ಭಾಗದಲ್ಲಿ ಪ್ರತಿ ವರ್ಷ ನಿಗದಿತ...