Skip to main content

Posts

Showing posts with the label Homesickness made them to take dangerous way to reach home in Corana lockdown

ಕೊರಾನಾ ಲಾಕ್ ಡೌನ್ ಡೈರಿ 41. ''ಜೀವ ಇದ್ದರೆ ಬೇಡಿ ತಿನ್ನೋಣ ಆದಷ್ಟು ಬೇಗ ಹೇಗಾದರೂ ಊರು ಸೇರೋಣ" ಎಂಬ ದೃಡ ನಿದಾ೯ರ ದುಡಿಮೆಗಾಗಿ ಊರು ಬಿಟ್ಟ ಎಲ್ಲರ ತೀಮಾ೯ನ, ಇದಕ್ಕಾಗಿ ಅಪಾಯಕಾರಿ ಮಾಗ೯ ಹಿಡಿದವರ ಬಗ್ಗೆ ವಿಷಾದವಿದೆ.

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 41.    ದಿನಾ೦ಕ: 27-ಮೇ -2020 #ಕೊರಾನಾ_ಬರಲಿ_ಬಿಡಲಿ #ಸತ್ತರೂ_ಚಿOತೆಯಿಲ್ಲ_ಊರು_ಮುಟ್ಟಬೇಕು.     ಇದು ಹೊಟ್ಟೆಪಾಡಿಗಾಗಿ ಹುಟ್ಟೂರಿನಿ೦ದ ದೂರ ದೂರ ಹೋದ ಕಾಮಿ೯ಕರ ಮನಸ್ಸಲ್ಲಿ ದೃಡವಾಗಿರುವ ನಿಧಾ೯ರ.    Homesickness ಯಾವ ರೀತಿ ಮನುಷ್ಯನನ್ನ ಮಾಡುತ್ತದೆ ಎಂಬುದಕ್ಕೆ ಮನಶಾಸ್ತ್ರದಲ್ಲಿ ಹೆಚ್ಚಿನ ವಿವರ ಇರಬಹುದು.    ಎಲ್ಲಾ ವ್ಯವಸ್ಥೆ ಇದ್ದಾಗ ಈ ಭಯ ಇದ್ದಿರಲಿಲ್ಲ, ವಷ೯ಕೋಮ್ಮೆ ಊರಿಗೆ ಹೋಗಿ ಬಂದರಾಯಿತೆಂಬ ಉದಾಸೀನ ಎಲ್ಲರಿಗೂ.   ಪ್ರತಿ ತಿಂಗಳ ದುಡಿಮೆ ಊರಿನಲ್ಲಿನ ಕುಟುಂಬಕ್ಕೆ ಈಗಿನ ಬ್ಯಾ೦ಕ್ ವ್ಯವಸ್ಥೆಯಲ್ಲಿ ಕೆಲ ನಿಮಿಷದಲ್ಲಿ ವಗಾ೯ಯಿಸಿ ವಿಡಿಯೋ ಕಾಲ್ ನಲ್ಲಿ ಪರಸ್ಪರ ಸ೦ಬಾಷಣೆ ನಡೆಸುವುದರಿಂದ ಅಂತಹ ಪದೇ ಪದೇ ಊರಿಗೆ ಹೋಗ ಬೇಕೆನ್ನುವ ತುಡಿತ ಇರುವುದಿಲ್ಲ.   ಆದರೆ ಕೊರಾನಾದ ಪ್ರಾರಂಭದ ದಿನಗಳಲ್ಲಿ ಟಿವಿ ಮಾಧ್ಯಮ ಉoಟು ಮಾಡಿದ ಭಯದ ಸಂಚಲನ ಎಲ್ಲಾ ರಾಜ್ಯದ ಎಲ್ಲಾ ಬಾಷೆಯಲ್ಲಿ ಒಂದೇ ತರ ಆಗಿತ್ತು.   ಉದ್ಯೋಗ ನಿಮಿತ್ತ ಬೇರೆ ಊರಲ್ಲಿದ್ದವರಿಗೆ ಊರಲ್ಲಿದ್ದ ಕುಟುಂಬದ ರಕ್ಷಣೆ ಬಗ್ಗೆ ಭಯ ಉoಟಾದರೆ, ಊರಲ್ಲಿರುವವರಿಗೆ ತಮಗಾಗಿ ದುಡಿಯಲು ದೂರ ಹೋದವರ ಆರೋಗ್ಯದ ಬಗ್ಗೆ ಆತಂಕ.    ಜೀವ ಇದ್ದರೆ ಬೇಡಿ ತಿನ್ನ ಬಹುದು ಆದಷ್ಟು ಬೇಗ ಊರು ಸ...