Skip to main content

Posts

Showing posts with the label one of my 43 years old photo inspired him

Blog number 1704. ಪ್ರತಿಭಾವಂತ ಐಟಿ ಉದ್ಯಮಿ ನವೀನ್ ನಮ್ಮ ಜಿಲ್ಲೆಯ ಕೋಣಂದೂರಿನವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಅವರಿಗೆ ಪ್ರೇರಣೆ ಆಗಿ ನನ್ನ ಬಗ್ಗೆ ಬರೆಯಲು ಕಾರಣವಾದ 43 ವರ್ಷದ ಹಿಂದಿನ ನನ್ನ ಸಣ್ಣ ಅಂಗಡಿ ಪೋಟೊ.

#ನನಗೆ_ಪರಿಚಯವಾಗುವ_ಒಳ್ಳೆಯವರಲ್ಲಿ_ಕೋಣಂದೂರಿನ_ನವೀನ್_ಒಬ್ಬರು. #ಬೆಂಗಳೂರಿನ_ಐಟಿ_ಉದ್ಯಮಿ #ನನ್ನ_ಬ್ಲಾಗ್_2017ರಲ್ಲಿ_ಮಾಡಿಕೊಟ್ಟವರು.    ಮೊನ್ನೆ ನನ್ನ ಪೋಸ್ಟ್ ಒಂದಕ್ಕೆ ಅವರ ಮನದಾಳದ ಪ್ರತಿಕ್ರಿಯೆ ನೀಡಿದ್ದಾರೆ ಅವರು ನನ್ನ ಆತ್ಮೀಯರಲ್ಲಿ ಒಬ್ಬರು ದೇಶ ವಿದೇಶ ಪ್ರಯಾಣ ಮಾಡುತ್ತಾ ಹೊಸ ಹೊಸ ವ್ಯವಹಾರಿಕ ಅವಿಷ್ಕಾರ ಮಾಡುತ್ತಿರುತ್ತಾರೆ.    ನಮ್ಮ ಸಂಸ್ಥೆಯ ಎಲ್ಲಾ ವಿಚಾರಗಳಿಗೆ ನಾವು ಅವರಿಂದ ಸಲಹೆ ಪಡೆಯುತ್ತೇವೆ ಅವರ ಸಂಸ್ಥೆಯ ಸೇವೆ ಪಡೆಯುವ ಗ್ರಾಹಕ ನಾನು.     ನವೀನ್ ನನ್ನ ಎಲ್ಲಾ ಲೇಖನ ಪ್ರಾರಂಭದಿಂದ ಓದುತ್ತಾರೆ ಆದ್ದರಿಂದ ಅವರೇ ನನಗೆ ನನ್ನ ಎಲ್ಲಾ ಲೇಖನ ಕಳೆದು ಹೋಗ ಬಾರದೆಂದು ಬ್ಲಾಗ್ ಮಾಡಿ ಕೊಟ್ಟಿದ್ದಾರೆ 2017ರಲ್ಲಿ.    1 ಜನವರಿ 2017 ರಿಂದ ಇವತ್ತಿಗೆ ನಾನು ಬರೆದ ಈ ಲೇಖನ ಸೇರಿ 1704 ಲೇಖನ ಬಹುಶಃ ನನ್ನಂತ ಸಾದಾರಣ ವ್ಯಕ್ತಿಗೆ ಇದು ದೊಡ್ಡ ದಾಖಲೆ.    2010ರಿಂದ ಲ್ಯಾಪ್ ಟಾಪ್ ನಲ್ಲಿ FB ನಲ್ಲಿ 2017ರ ವರೆಗೆ ಬರೆದ ಲೇಖನಗಳು ಸಿಗುತ್ತಿಲ್ಲ.    ನಾನು ಕಂಪ್ಯೂಟರ್ ಕಲಿತದ್ದು ಮಗ ಮತ್ತು ಮಗಳನ್ನು ಬೆಂಗಳೂರಿನ ಸ್ವಪ್ನ ಪುಸ್ತಕ ಮಳಿಗೆಗೆ ಕರೆದೊಯ್ದಾಗ ಅವರು ಅಲ್ಲಿ ತೆಗೆದು ಕೊಟ್ಟ ತೇಜಸ್ವಿಯವರ "ಕಂಪ್ಯೂಟರ್ ಕಲಿಯಿರಿ" ಪುಸ್ತಕದಿಂದ.     ಸಾಮಾಜಿಕ ಜಾಲ ತಾಣ ಮತ್ತು ಗೂಗಲ್ ನಿಂದ ಜ್ಞಾನ ವೃದ್ದಿ - ಸ...