Skip to main content

Blog number 1704. ಪ್ರತಿಭಾವಂತ ಐಟಿ ಉದ್ಯಮಿ ನವೀನ್ ನಮ್ಮ ಜಿಲ್ಲೆಯ ಕೋಣಂದೂರಿನವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಅವರಿಗೆ ಪ್ರೇರಣೆ ಆಗಿ ನನ್ನ ಬಗ್ಗೆ ಬರೆಯಲು ಕಾರಣವಾದ 43 ವರ್ಷದ ಹಿಂದಿನ ನನ್ನ ಸಣ್ಣ ಅಂಗಡಿ ಪೋಟೊ.

#ನನಗೆ_ಪರಿಚಯವಾಗುವ_ಒಳ್ಳೆಯವರಲ್ಲಿ_ಕೋಣಂದೂರಿನ_ನವೀನ್_ಒಬ್ಬರು.

#ಬೆಂಗಳೂರಿನ_ಐಟಿ_ಉದ್ಯಮಿ

#ನನ್ನ_ಬ್ಲಾಗ್_2017ರಲ್ಲಿ_ಮಾಡಿಕೊಟ್ಟವರು.


   ಮೊನ್ನೆ ನನ್ನ ಪೋಸ್ಟ್ ಒಂದಕ್ಕೆ ಅವರ ಮನದಾಳದ ಪ್ರತಿಕ್ರಿಯೆ ನೀಡಿದ್ದಾರೆ ಅವರು ನನ್ನ ಆತ್ಮೀಯರಲ್ಲಿ ಒಬ್ಬರು ದೇಶ ವಿದೇಶ ಪ್ರಯಾಣ ಮಾಡುತ್ತಾ ಹೊಸ ಹೊಸ ವ್ಯವಹಾರಿಕ ಅವಿಷ್ಕಾರ ಮಾಡುತ್ತಿರುತ್ತಾರೆ.
   ನಮ್ಮ ಸಂಸ್ಥೆಯ ಎಲ್ಲಾ ವಿಚಾರಗಳಿಗೆ ನಾವು ಅವರಿಂದ ಸಲಹೆ ಪಡೆಯುತ್ತೇವೆ ಅವರ ಸಂಸ್ಥೆಯ ಸೇವೆ ಪಡೆಯುವ ಗ್ರಾಹಕ ನಾನು.
    ನವೀನ್ ನನ್ನ ಎಲ್ಲಾ ಲೇಖನ ಪ್ರಾರಂಭದಿಂದ ಓದುತ್ತಾರೆ ಆದ್ದರಿಂದ ಅವರೇ ನನಗೆ ನನ್ನ ಎಲ್ಲಾ ಲೇಖನ ಕಳೆದು ಹೋಗ ಬಾರದೆಂದು ಬ್ಲಾಗ್ ಮಾಡಿ ಕೊಟ್ಟಿದ್ದಾರೆ 2017ರಲ್ಲಿ.
   1 ಜನವರಿ 2017 ರಿಂದ ಇವತ್ತಿಗೆ ನಾನು ಬರೆದ ಈ ಲೇಖನ ಸೇರಿ 1704 ಲೇಖನ ಬಹುಶಃ ನನ್ನಂತ ಸಾದಾರಣ ವ್ಯಕ್ತಿಗೆ ಇದು ದೊಡ್ಡ ದಾಖಲೆ.
   2010ರಿಂದ ಲ್ಯಾಪ್ ಟಾಪ್ ನಲ್ಲಿ FB ನಲ್ಲಿ 2017ರ ವರೆಗೆ ಬರೆದ ಲೇಖನಗಳು ಸಿಗುತ್ತಿಲ್ಲ.
   ನಾನು ಕಂಪ್ಯೂಟರ್ ಕಲಿತದ್ದು ಮಗ ಮತ್ತು ಮಗಳನ್ನು ಬೆಂಗಳೂರಿನ ಸ್ವಪ್ನ ಪುಸ್ತಕ ಮಳಿಗೆಗೆ ಕರೆದೊಯ್ದಾಗ ಅವರು ಅಲ್ಲಿ ತೆಗೆದು ಕೊಟ್ಟ ತೇಜಸ್ವಿಯವರ "ಕಂಪ್ಯೂಟರ್ ಕಲಿಯಿರಿ" ಪುಸ್ತಕದಿಂದ.
    ಸಾಮಾಜಿಕ ಜಾಲ ತಾಣ ಮತ್ತು ಗೂಗಲ್ ನಿಂದ ಜ್ಞಾನ ವೃದ್ದಿ - ಸಂಪರ್ಕ ಮತ್ತು ಒಳ್ಳೆಯ ಹವ್ಯಾಸಗಳಿಗೆ ಹೆಚ್ಚಿನ ದಾರಿ ಇದೆ (ದಾರಿ ತಪ್ಪಲು ಅಡ್ಡ ದಾರಿಯೂ ಇದೆ) ಅಂತಹ ಮಾರ್ಗದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಗೋಲ್ಡ್ ಮೆಡಲ್ ವಿಜೇತ ನವೀನ್ ಸಂಪರ್ಕ ಕೂಡ.
   ಅವರು ನನ್ನ ಬಗ್ಗೆ ನಾನಿರುವುದಕ್ಕಿಂತ ತುಂಬಾ ಜಾಸ್ತಿ ಹೊಗಳಿದ್ದಾರೆಂಬ ಮುಜುಗುರ ನನಗೆ ಏನೇ ಆದರೂ ಅವರು ನನ್ನ ಬಗ್ಗೆ ಬರೆದ ಸದಾಭಿಪ್ರಾಯದ ಅಕ್ಷರಗಳಿಗೆ ನಾನು ಚಿರಋಣಿ ಅವರ ಪ್ರೀತಿ ವಿಶ್ವಾಸ ಸದಾ ಇರಲಿ ಅವರಿಗೆ ದೇವರು ಆರೋಗ್ಯ - ಆಯಸ್ಸು- ಐಶ್ವಯ೯ ದಯಪಾಲಿಸಲಿ ಎಂದು ಹಾರೈಸುತ್ತೇನೆ.
  ಅವರಿಗೆ ಈ ಪ್ರತಿಕ್ರಿಯೆ ಬರೆಯಲು ಕಾರಣ ಆದದ್ದು ಸುಮಾರು 43 ವರ್ಷದ ನನ್ನು ಈ ಪೋಟೋ


ಅವರು ಬರೆದ ಪ್ರತಿಕ್ರಿಯೆ ಇಲ್ಲಿದೆ....
 By Naveen konandoor.

A True Visionary and Inspiring Entrepreneur 

Hello everyone,

Today, i want to shine a spotlight on a truly exceptional individual whose life journey has been nothing short of inspiring - Mr. Arun Prasad Sir. From a young age, he embarked on a path that showcased his versatility and remarkable talents.

Arun Prasad Sir's journey began with a multitude of experiences - from various jobs to becoming a prominent politician in the early stages of his career. His ability to adapt and excel in diverse fields is a testament to his unwavering determination and passion for success.

Beyond politics, Arun Prasad Sir's creative prowess shines as a gifted writer. His words have the power to captivate hearts and minds, leaving a lasting impact on all who have had the pleasure of reading his works.

But his journey doesn't stop there - his entrepreneurial spirit led him to establish ventures that embody his innovative thinking and drive. Hombuja Residency, Hombuja Gardenia, and Mallika Veg stand as a testament to his dedication and vision. These establishments not only reflect his entrepreneurship qualities but also provide spaces of comfort, beauty, and sustenance to countless individuals.

What truly sets Arun Prasad Sir apart is his role as a mentor and guide. Through his guidance, many have found their dream jobs and pathways to success. His vast network of contacts spanning the entire world demonstrates the impact he has had on people's lives far and wide.

Despite his numerous accomplishments, Arun Prasad Sir remains a humble and down-to-earth person. His compassion and genuine concern for others shine through in every interaction. His heart of gold has touched countless lives, making him not just an entrepreneur but a great human being.

With his unparalleled qualities, it's clear that Arun Prasad Sir possesses all the attributes needed to excel even in higher realms of service. His potential to become an MP and a central minister is undeniable, as his leadership, vision, and dedication stand as an example to us all.

Let us take a moment to celebrate the incredible journey of Arun Prasad Sir. His achievements, his impact, and his enduring legacy remind us that with determination, passion, and a kind heart, anything is possible. We are fortunate to have such an inspiring figure in our midst.

Here's to Arun Prasad Sir, a true visionary, entrepreneur, and above all, an exceptional human being.

#Inspiration #Entrepreneurship #VisionaryLeader #ArunPrasadSir

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ