Blog number 1711.ಮಲೆನಾಡು ಗಿಡ್ಡ ಗೋ ಸಂರಕ್ಷಣೆಗಾಗಿ ತ್ರಿಮದುರಾ ದೇಶಿಯಾ ಪಾರಮ್ಸ್ ನ ಅಭಿಯಾನದಲ್ಲಿ ಉದ್ದಿಮೆದಾರ ರವೀಂದ್ರ ರಾವ್ ಸಾರಥ್ಯ.
#ದೇಶಿ_ಗೋತಳಿ_ಮಲೆನಾಡು_ಗಿಡ್ದ_ಸಂರಕ್ಷಣೆಗಾಗಿ_ಅಭಿಯಾನ
#ಉಡುಪಿ_ಜಿಲ್ಲೆಯ_ತ್ರಿಮದುರ_ದೇಶಿಯಾ_ಪಾರಂನ
#ಪಂಚಗವ್ಯ_ಪ್ರಾಡಕ್ಟಗಳು_ಪರಿಸರ_ಸ್ನೇಹಿ
#ದೇಶದಾದ್ಯಂತ_ಮಾರುಕಟ್ಟೆಯಲ್ಲಿ_ದಾಪುಗಾಲು_ಇಡುತ್ತಿದೆ
#ಮಠಗಳು_ಗೋಶಾಲೆಗಳು_ಈ_ಸಂಸ್ಥೆ_ಜೊತೆ_ಕೈ_ಜೋಡಿಸಿದೆ.
#ಇದು_ವಾಣಿಜ್ಯ_ಉದ್ದೇಶದ_ಸಂಸ್ಥೆ_ಅಲ್ಲ.
#ಉತ್ಸಾಹಿ_ಉದ್ದಿಮೆದಾರ_ರವೀಂದ್ರರಾವ್_ಪ್ರಾಯೋಜಕತ್ವದಲ್ಲಿ.
https://youtu.be/64i6_Fnd4-I
ಉಡುಪಿ ಜಿಲ್ಲೆಯ ಗಂಗೊಳ್ಳಿಯ ಉತ್ಸಾಹಿ ಉದ್ದಿಮೆದಾರರಾದ ರವೀಂದ್ರ ರಾವ್ ತಮ್ಮ ಮಲೆನಾಡು ಗಿಡ್ದ ಸಂರಕ್ಷಣೆಯ ಅಭಿಯಾನದಲ್ಲಿ ತ್ರಿಮದುರ ದೇಶಿಯಾ ಪಾರಮ್ಸ್ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮಲೆನಾಡು ಗಿಡ್ಡ ಜಾನುವಾರುಗಳಿಂದ ನಾಲ್ಕುನೂರಕ್ಕೂ ಹೆಚ್ಚು ಉತ್ಪನ್ನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ ಇವರ ಸಂಸ್ಥೆ ಈಗ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಿದೆ.
ಇವರ ಸಂಸ್ಥೆಯು ಮಲೆನಾಡು ಗಿಡ್ಡದ ಹಾಲಿನಿಂದ ತಯಾರಿಸಿದ A - 2 ಮಿಲ್ಕ್ ಸೋಪಿಗೆ ಮತ್ತು ಚಾರ್ ಕೋಲ್ ಸೋಪಿಗೆ ತುಂಬಾ ಬೇಡಿಕೆ ಇದೆ
ಇವರ ಸಂಸ್ಥೆಯ ಡಿಶ್ ವಾಷ್ ದೇಸಿ ಗೋಮಯ ಭಸ್ಮ ನಿಂಬೆಹಣ್ಣು ಕಡಲೆ ಹಿಟ್ಟು ಇತ್ಯಾದಿ ಬಳಸಿ ತಯಾರಿಸಿದ್ದು ಇದು ಪಾತ್ರೆ ತೊಳೆಯುವವರ ಕೈ ಚರ್ಮಕ್ಕೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ.
ಇವರ ಸಂಸ್ಥೆಯ ದಂತ ಮಂಜನ, ಹರ್ಬಲ್ ಪಿನಾಲ್, ಕೇಶ ತೈಲ, ಗ್ಯಾಸ್ಟ್ರಿಕ್ ಗುಳಿಗೆ, ನೋಸಲ್ ಡ್ರಾಪ್, ಚರ್ಮ ರೋಗ ಉಪಶಮನಕ್ಕಾಗಿ ಚರ್ಮ ಶೋದಕ ಸ್ಕಿನ್ ಕೇರ್ ಪ್ರಸಿದ್ದಿ ಪಡೆದಿದೆ.
ಇವರ ಪುತ್ರ ರಂಜಿತ್ ರಾವ್ ಗವ್ಯ ಪಂಡಿತ ತರಬೇತಿ ಪಡೆದು ಸಂಸ್ಥೆಯ ಜವಾಬ್ದಾರಿ ವಹಿಸಿದ್ದಾರೆ.
ಅವರ ಸಂಸ್ಥೆಯ ಕೆಲವು ಉತ್ಪನ್ನಗಳನ್ನು ಬಳಸಿ ನೋಡಲು ನೀಡಿದ್ದಾರೆ ಒಂದು ವಿಶೇಷ ಅಂದರೆ ಈ ಎಲ್ಲಾ ದೇಶಿ ಗೋ ಉತ್ಪನ್ನಗಳಿಗೆ ಅತ್ಯುತ್ತಮ ಪ್ಯಾಕಿಂಗ್ ಮಾಡಿದ್ದಾರೆ ಇದರಿಂದ ಮಾರುಕಟ್ಟೆಯ ಸ್ಪರ್ಧಾತ್ಮಕ ಯುಗದಲ್ಲಿ ಇವರ ಉತ್ಪನ್ನಗಳು ಜನರ ಗಮನ ಸುಲಭವಾಗಿ ಸೆಳೆಯಲಿದೆ.
ಒಂದು ಕಾಲದಲ್ಲಿ ಭಾರತೀಯ ಕುಟುಂಬದಲ್ಲಿ ಒಬ್ಬ ಮನುಷ್ಯನಿಗೆ 5 ಹಸುಗಳಿರುತ್ತಿತ್ತಂತೆ ಈಗ ನೂರು ಜನರಿಗೆ ಒಂದು ಹಸುವೂ ಇಲ್ಲ, ಮಲೆನಾಡು ಗಿಡ್ದ ಗೋತಳಿಯಲ್ಲಿ ಅತ್ಯುತ್ತಮ ಔಷದಿ ಗುಣವಿದೆ ಮತ್ತು ಮಲೆನಾಡು ಗಿಡ್ದ ತಳಿಯ ಜಾನುವಾರಿನ ತುಪ್ಪಕ್ಕೆ ಬಾರೀ ಬೇಡಿಕೆಯಿದೆ ಒಂದು ಕಿಲೋ ಮಲೆನಾಡು ಗಿಡ್ಡ ತುಪ್ಪ ತಯಾರಿಗೆ 25 ಲೀಟರ್ ಮಲೆನಾಡು ಗಿಡ್ಡದ ಹಾಲು ಬೇಕಂತೆ.
ಮುಂದಿನ ದಿನಗಳಲ್ಲಿ ಈ ಸಂಸ್ಥೆ ಗೋಶಾಲೆಗಳನ್ನ ಸ್ಥಾಪಿಸಿ ಆ ಮೂಲಕ ಗೋ ಉತ್ಪನ್ನಗಳ ಹೆಚ್ಚು ತಯಾರಿಗೆ ಮತ್ತು ಅನೇಕ ರೋಗಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡುವ ಉದ್ದೇಶವೂ ಈ ಸಂಸ್ಥೆಗಿದೆ.
ಪ್ರತಿ ಮನೆಯಲ್ಲಿ ಎಷ್ಟು ಜನ ಇರುತ್ತಾರೆ ಅಷ್ಟು ಗೋವುಗಳು ಇರಲಿ ಎಂಬ ಉದ್ದೇಶ ತ್ರಿಮದುರ ದೇಶಿಯಾ ಪಾರಮ್ಸ್ ನ ಗುರಿ ಆಗಿದೆ.
ಈ ಪಂಚಗವ್ಯ ಪ್ರಾಡಕ್ಟ್ ನ ಸಂಸ್ಥೆ ವಿಳಾಸ...
ತ್ರಿಮದುರ ದೇಶಿಯಾ ಪ್ರಾಡಕ್ಟ್ಸ್
ರಾಮ ಗೋದಾಮ
ಗುಜ್ಜಾಡಿ ಅಂಚೆ ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ 576247.
ಸೆಲ್ ಫೋನ್ ನಂಬರ್ 7353329900.
ಆನ್ ಲೈನ್ ನಲ್ಲಿ ಈ ಸಂಸ್ಥೆಯ ಉತ್ಪನ್ನ ಖರೀದಿಗಾಗಿ ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ
https://trimadhuradesiyafarms.com
Comments
Post a Comment