#ಕಲೀಮುಲ್ಲಾ_ಆಚಾಪುರ_ಗ್ರಾಮಪಂಚಾಯತ್_ನೂತನ_ಅಧ್ಯಕ್ಷರು.
#ಬಡವರ_ಒಡನಾಟ_ಹೆಚ್ಚು_ಇವರಿಗೆ.
#ಕೋಳಿ_ಮೊಟ್ಟೆಯ_ವ್ಯಾಪಾರದಲ್ಲಿ_ಇವರು_ದೊಡ್ಡ_ವ್ಯಾಪಾರಿಗಳು.
#ನನ್ನ_ಕಛೇರಿಗೆ_ಬಂದಿದ್ದ_ಇವರನ್ನು_ಗೌರವಿಸಿ_ಶುಭ_ಹಾರೈಸಿದೆ.
#ಸಾಗರ_ತಾಲ್ಲೂಕಿನಲ್ಲಿ_ಮುಸ್ಲಿಂ_ಸಮಾಜದ_ಏಕೈಕ_ಗ್ರಾಮಪಂಚಾಯತ್_ಅಧ್ಯಕ್ಷರು.
ಎರಡನೆ ಅವಧಿಗೆ ಸಾಗರ ತಾಲೂಕಿನ ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಆಚಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆದ ಕಿರಿಯ ಗೆಳೆಯ ಕಲೀಮುಲ್ಲಾ ಅವರು ಯಡೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಾನಂದ ಮತ್ತು ಶುಂಠಿ ವ್ಯಾಪಾರಿಗಳಾದ ಪ್ರಮೋದ್ ಶೇಟ್ ರ ಜೊತೆ ಬಂದಿದ್ದರು.
ಬಹುಶಃ ಸಾಗರ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಲ್ಲಿ ಇವರು ಏಕೈಕ ಮುಸ್ಲಿಂ ಅಧ್ಯಕ್ಷರಿರ ಬೇಕು ನಾನು 1995 - 2000ದಲ್ಲಿ ಈ ಭಾಗದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾಗ ಕಲೀಮುಲ್ಲಾ ಉತ್ಸಾಹಿ ಯುವಕ ಆಗಿನಿಂದ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ.
ಆಚಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಸ್ಲಾಂಪುರದಲ್ಲಿ ಗೋವಾದ ಉದ್ಯಮಿಗಳು ಪ್ರಾರಂಬಿಸಿದ್ದ ಪೋಲ್ಟ್ರಿ ಪಾರಂನಲ್ಲಿ ಮೊಟ್ಟೆ ವ್ಯಾಪಾರ ಪ್ರಾರಂಬಿಸಿ ಈಗ ಸ್ವತಂತ್ರವಾಗಿ ವಾರಕ್ಕೆರೆಡು ಟ್ರಕ್ ಮೊಟ್ಟೆ ಜಿಲ್ಲೆಯಾದ್ಯಂತ ಮಾರಾಟ ಮಾಡುವ ದೊಡ್ಡ ಉದ್ಯಮಿ ಕಲೀಮುಲ್ಲಾ ಗ್ರಾಮ ಪಂಚಾಯಿತಿ ಅದ್ಯಕ್ಷರಾಗಿದ್ದಾರೆ.
2012ರಲ್ಲಿ ನನಗೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೇಸ್ ಪಕ್ಷ ಆಹ್ವಾನಿಸಿ ಕೊನೆಯ ಕ್ಷಣದಲ್ಲಿ ಬಿ ಪಾರಂ ನೀಡದಿದ್ದಾಗ ನನ್ನೆಲ್ಲ ಗೆಳೆಯರ ಒತ್ತಾಯದಿಂದ ಪಕ್ಷೇತರನಾಗಿ ಬಸ್ ಚಿಹ್ನೆಯಲ್ಲಿ ಸ್ಪರ್ಧಿಸಿದ್ದೆ ಆಗ ಆಚಾಪುರ ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಕಲೀಮುಲ್ಲಾ ಕಾಂಗ್ರೇಸ್ ಪಕ್ಷದಿಂದ ಸ್ಪರ್ದಿಸಿದ್ದರು.
ಆಗ ಇಡೀ ಆಚಾಪುರ ಪಂಚಾಯಿತಿ ಮತದಾರರು ಜಿಲ್ಲಾ ಪಂಚಾಯತ್ ಗೆ ನನ್ನ ಬಸ್ಸು ಗುರುತಿಗೆ ಮತ್ತು ತಾಲ್ಲೂಕು ಪಂಚಾಯಿತಿಗೆ ಕಲೀಮುಲ್ಲಾರ ಹಸ್ತದ ಗುರುತಿಗೆ ಮತ ಹುರುಪಿನಿಂದ ನೀಡಿದ್ದರು ಆದರೆ ಪಲಿತಾಂಶ ಬಂದಾಗ ನಾನು 89 ಮತಗಳಿಂದ ಸೋತಿದ್ದೆ, ಕಲೀಮುಲ್ಲಾ ಕೂಡ ಸೋತಿದ್ದರು.
ಆಗಿದ್ದೇನೆಂದರೆ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಒಟ್ಟಿಗೆ ನಡೆಯುವುದರಿಂದ ಮೊದಲಿಗೆ ಜಿಲ್ಲಾ ಪಂಚಾಯತ್ ಬ್ಯಾಲೆಟ್ ನಂತರ ತಾಲ್ಲೂಕ್ ಪಂಚಾಯ್ತಿಯ ಬ್ಯಾಲೆಟ್ ನೀಡುವುದಾಗಿ ಚುನಾವಣಾ ಅಧಿಕಾರಿಗಳು ಘೋಷಿಸಿದ್ದರು ಆದರೆ ಮತ ಕೇಂದ್ರದಲ್ಲಿ(ಉದ್ದೇಶ ಪೂರ್ವಕವಾಗಿ) ಮೊದಲಿಗೆ ತಾಲ್ಲೂಕ್ ಪಂಚಾಯ್ತಿಯ ಬ್ಯಾಲೆಟ್ ನೀಡಿದ್ದಾರೆ ಅದರಲ್ಲಿ ಬಸ್ಸು ಗುರುತಿಗೆ ಆಚಾಪುರದ ಮತದಾರರು ಜಿಲ್ಲಾ ಪಂಚಾಯತ್ ಗೆ ಸ್ಪರ್ದಿಸಿದ್ದ ನನಗೆ ಅಂತ ಮತ ಒತ್ತಿದ್ದಾರೆ ಆದರೆ ಪಕ್ಷೇತರವಾಗಿ ತಾಲ್ಲೂಕ್ ಪಂಚಾಯ್ತಗೆ ಸ್ಪರ್ಧಿಸಿದ್ದ ನನ್ನ ಕ್ಲಾಸ್ ಮೇಟ್ ಬಸ್ ಏಜೆಂಟ್ ಚಂದು ಎನ್ನುವವರು ನನ್ನ ಪ್ರತಿ ಸ್ಪರ್ಧಿಯಿಂದ ನನ್ನ ಸೋಲಿಸಲು ಕಂಟ್ರಾಕ್ಟ್ ಪಡೆದು ಅವರು ಬಸ್ಸು ಗುರುತಲ್ಲಿಯೇ ಸ್ಪರ್ದಿಸಿದ್ದರು ಅವರಿಗೆ ಯಾವುದೇ ಪ್ರಚಾರ ಇಲ್ಲದೆ ಆರು ನೂರಕ್ಕೂ ಹೆಚ್ಚು ಓಟು ಸಿಕ್ಕಿತ್ತು.
ನಂತರ ನೀಡಿದ್ದು ಜಿಲ್ಲಾ ಪಂಚಾಯತ್ ಬ್ಯಾಲೆಟ್ ಅದರಲ್ಲಿ ಕಲೀಮುಲ್ಲಾರದೆಂದು ಹಸ್ತಕ್ಕೆ ಮತ ಹಾಕಿದ್ದಾರೆ ಅದು ಜಿಲ್ಲಾ ಪಂಚಾಯಿತಿಗೆ ಸ್ಪರ್ದಿಸಿದ್ದ ರತ್ನಾಕರ ಹೊನಗೋಡಿಗೆ ಹೋಗಿದ್ದರಿಂದ ಕಲೀಮುಲ್ಲಾ ಸೋತರು ಇಲ್ಲದಿದ್ದರೆ ಕಲೀಮುಲ್ಲಾ 2012ರಲ್ಲಿ ತಾಲ್ಲೂಕ್ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಆಗಿರುತ್ತಿದ್ದರು.
ಈ ರೀತಿ ನಾನು ಮತ್ತು ಕಲೀಮುಲ್ಲಾ ಸಮಾನ ದುಃಖಿಗಳು ಇದೆಲ್ಲ ಮೊನ್ನೆ ಬಂದಾಗ ನೆನಪಿಸಿಕೊಂಡೆವು, ಕಲೀಮುಲ್ಲಾರಿಗೆ ನಮ್ಮ ಸಂಸ್ಥೆವತಿಯಿಂದ ಗೌರವಿಸಿ ಅವರಿಗೆ ನೆನಪಿನ ಕಾಣಿಕೆ ಆಗಿ ಅವರ ಊರಿನ ಕಥೆ ಇರುವ ನನ್ನ ಸಣ್ಣ ಕಥೆಗಳ ಬಿಲಾಲಿ ಬಿಲ್ಲಿ ಅಭ್ಯಂಜನ ಪುಸ್ತಕ ನೀಡಿ ಮುಂದಿನ ದಿನಗಳಲ್ಲಿ ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳ್ಳೆಯ ಕೆಲಸಗಳು ಮಾಡಿ ಎಂದು ಹಾರೈಸಿದೆ.
Comments
Post a Comment