#ಬಹುದಿನದ_ನಿರೀಕ್ಷೆ_ಇವತ್ತು_ಈಡೇರಿತು
ನಮ್ಮ ಊರು "ಆನಂದಪುರ" ಎಂಬ ಹೆಸರು ಬರಲು ಕಾರಣಳಾದವಳು #ಚಂಪಕಾ ಇವಳ ಮತ್ತು ಕೆಳದಿ ರಾಜಾ ವೆಂಕಟಪ್ಪ ನಾಯಕರ ಪ್ರೇಮ ಕಥೆ ಪ್ರಾರಂಭ ಆಗುವುದು ಸು೦ದರಿ ಚಂಪಕಳು ರಾಜರಿಗಾಗಿ ಬಿಡಿಸುತ್ತಿದ್ದ ಸುಂದರ ರಂಗೋಲಿ .
ಚಂಪಕಳಿಗಾಗಿ #ಯಡೇಹಳ್ಳಿ ಕೋಟೆ ಎಂಬ ಹೆಸರು ಬದಲಿಸಿ #ಆನಂದಪುರ ಎಂಬ ಹೆಸರು ಇಟ್ಟವರು ರಾಜ ವೆಂಕಟಪ್ಪ ನಾಯಕರು.
ದೀಘ೯ ಕಾಲ ಕೆಳದಿ ರಾಜ್ಯಬಾರ ಮಾಡಿದ ಮತ್ತು ರಾಜ್ಯ ವಿಸ್ತಾರ ಮಾಡಿದ ವೆಂಕಟಪ್ಪ ನಾಯಕರು ಈಗಿನ ಸಾಗರ ಪಟ್ಟಣದ ನಿರ್ಮಾತರು.
ಜಾತಿ ಮತ್ತು ಆಹಾರ ಪದ್ಧತಿಯ ಕಾರಣದಿಂದ ತಿರಸ್ಕೃತಳಾಗುವ ಚಂಪಕಾ ಹಾಲಿನಲ್ಲಿ ವಜ್ರ ಸೇರಿಸಿ ಹಾಲಾಹಲ ಸೇವಿಸುವ ದುರ೦ತ ಪ್ರೇಮ ಕಥೆ.
ಚಂಪಕಳ ಸ್ಮಾರಕವಾಗಿ ಆನಂದಪುರದಿಂದ ಶಿಕಾರಿಪುರ ಮಾಗ೯ದ ಮಲಂದೂರಿನಲ್ಲಿ ನಿರ್ಮಿಸಿರುವ ಸುಂದರ #ಚಂಪಕ_ಸರಸ್ಸು.
ಇವೆಲ್ಲ ಇಟಲಿ ಪ್ರವಾಸಿ ಡೊಲ್ಲಾ ವಲ್ಲೆ ಮತ್ತು ಗೆಜೆಟಿಯರ್ ನಲ್ಲಿ ಲಭ್ಯ.
ಇದು ಆನಂದಪುರದ ಜನಪದ ಕಥೆ, ನಿಜ ಕಥೆ.
ಇದನ್ನೆಲ್ಲ ಆದರಿಸಿ ಹತ್ತು ವರ್ಷದ ಹಿಂದೆ ನಾನು ಬರೆದ ಕಾಲ್ಪನಿಕ ದುರಂತ ಪ್ರೇಮ ಕಥೆ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರ_ರಾಣಿ_ಚಂಪಕಾ
ಕಾದಂಬರಿ ಆಗಿ ಇವತ್ತು ಗೆಳೆಯರು ಆತ್ಮೀಯರೂ ಆದ ಹಾಯ್ ಬೆಂಗಳೂರು ವಾರಪತ್ರಿಕೆ "ರೋವಿಂಗ್ ರಿಪೋರ್ಟರ್ " ಮತ್ತು ಶಿವಮೊಗ್ಗ #ಜನಹೋರಾಟ ದಿನಪತ್ರಿಕೆ ಸಂಪಾದಕರಾದ #ಶೃಂಗೇಶ್ ಬಿಡುಗಡೆ ಮಾಡಿದರು.
ನನ್ನ ಸಹೋದರ ಮತ್ತು ಆನಂದಪುರದ ಪ್ರತಿಷ್ಠಿತ ಕನ್ನಡ ಸಂಘದ ಸಂಸ್ಥಾಪಕ ಕೆ. ನಾಗರಾಜ್, ಸ್ಥಳಿಯ ಪತ್ರಕತ೯ ಮಿತ್ರರಾದ ಬಿ.ಡಿ. ರವಿ, ಚಂದ್ರಶೇಖರ್, ಮಲ್ಲಿಕಾಜು೯ನ್ ಮತ್ತು ಜಗನ್ನಾಥ ಮತ್ತು ಆತ್ಮೀಯ ಗೆಳೆಯರಾದ ಶಿವರಾಂ ಪಾಟೀಲ್, ರಿಪ್ಪನ್ ಪೇಟೆಯ ಶಿವಕುಮಾರ್ ಸಾಕ್ಷಿಗಳಾದರು.
Comments
Post a Comment