#ಜ್ಞಾನದ_ಭಂಡಾರವಾಗಿರುವ_ಶ್ರೀಕಂಠ_ಕೂಡಿಗೆ_ಅವರ_ಬೆಳಗಿನ_ಪೋನು.
#ಅವರಿಗಾಗಿ_ನನ್ನ_ಪ್ರೀತಿಯ_ಶಂಭೂರಾಮನ_ಸೌತೆಕಾಯಿ_ಸಮರ್ಪಣೆಯ_ಇವತ್ತಿನ_ವಿಡಿಯೋ.
#ರಾಟ್_ವೀಲರ್_ನಿನ್ನೆ_ಕೊಡಗಿನಲ್ಲಿ_ಮನೆಗೆ_ಬಂದ_ಆರೋಗ್ಯ_ಕಾಯ೯ಕತೆ೯_ಮೇಲೆ_ದಾಳಿ.
https://youtu.be/peEskYb3Vl0
ಬೆಳಿಗ್ಗೆ ಏಳಕ್ಕೆ ಫೋನ್ ಬಂತು "ವಾಕಿಂಗ್ ಮಾಡ್ತಾ ಇದೀರಾ ?"...
ಹೌದು ಸಾರ್ ನಿಮ್ಮ ಆರೋಗ್ಯ ಹೇಗಿದೆ ಅಂದೆ.
"ಆರಾಮಾಗಿದೀನಿ ನಿನ್ನೆ ಬೆಳಿಗ್ಗೆ ಪುಟ್ಟಯ್ಯ ಹೊಸ ಬಾಡಿಗೆ ಮನೆಯಲ್ಲಿದಾರೆ ಒಂದೂವರೆ ಕಿ.ಮಿ ದೂರ ಅಲ್ಲಿಗೆ ವಾಕಿಂಗ್ ನಲ್ಲಿ ಹೋಗಿ ಮಾತಾಡಿಸಿ ಬಂದೆ ನಿಮ್ಮ ಜೊತೆ ರಾಟ್ ವೀಲರ್ ನಾಯಿ ಜೊತೆಗೆ ಇದೆಯಾ? " ಅಂದರು.
ಆ ಸಮಯದಲ್ಲೆ ನಾನು ಯೋಚಿಸುತ್ತಾ ಇದ್ದದ್ದು ನಿನ್ನೆ ಕೊಡಗಿನಲ್ಲಿ ರಾಟ್ ವೀಲರ್ ಸಾಕು ನಾಯಿ ಆರೋಗ್ಯ ಕಾಯ೯ಕರ್ತೆಗೆ ಕಚ್ಚಿದ ಸಾಮಾಜಿಕ ಜಾಲ ತಾಣದ ಸುದ್ದಿ.
ಪೋನ್ ಮಾಡಿದವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನವರಾದ ಅನೇಕ ಪದವಿ, ಪಿ ಹೆಚ್ ಡಿ - ನೂರಾರು ಪ್ರಶಸ್ತಿ, ಅನೇಕ ಅಕಾಡಮಿಗಳ ನಿರ್ದೇಶಕರಾಗಿ, ರಾಜ್ಯ ಸರ್ಕಾರದ ಪುಸ್ತಕ ಪ್ರಾಧಿಕಾರದ ಅದ್ಯಕ್ಷರೂ ಆಗಿದ್ದ, ಚಿನ್ನದ ಪದಕ ವಿಜೇತರು, ಸುಂದರವಾದ ಕನ್ನಡ ಅಕ್ಷರ ಬರೆಯುವ ಶ್ರೀಕಂಠ ಕೂಡಿಗೆ ಅವರು.
ರಾಟ್ ವೀಲರ್ ಯಾವ ದೇಶದಲ್ಲೂ ಬ್ಯಾನ್ ಮಾಡಿಲ್ಲ ನಮ್ಮ ದೇಶದಲ್ಲೂ ಬ್ಯಾನ್ ಮಾಡಿಲ್ಲ, ಅಮೆರಿಕನ್ ಪಿಟ್ ಬುಲ್ US ನ ಕೆಲ ಪ್ರಾಂತ್ಯದಲ್ಲಿ, ದೆಹಲಿ ಹೊರ ಬಾಗ ಗುರು ಗಾಂ ಮತ್ತು ಉತ್ತರ ಪ್ರದೇಶದಲ್ಲಿ ಸಾಕಲು ಕೆಲ ಶರತ್ತು ಅನುಮತಿ ಪಡೆಯ ಬೇಕಾಗಿದೆ.
ಮೂಡಿಯಾದ ರಾಟ್ ವೀಲರ್ ಗೆ ಸರಿಯಾಗಿ ತರಬೇತಿ ಸಣ್ಣಿಂದಲೇ ನೀಡದಿದ್ದರೆ ಈ ರೀತಿ ಅನಾಹುತಗಳು ಶತಸಿದ್ಧ ಆದ್ದರಿಂದ ಮನೆಯ ಗೇಟ್ ಗಳನ್ನು ಯಾವತ್ತೂ ಲಾಕ್ ಮಾಡಿರ ಬೇಕು, ಚೈನ್ ಇಲ್ಲದೆ ಇವುಗಳು ತಿರುಗಾಡಲು ಬಿಡುವ ಜಾಗ ಸರಿಯಾದ ರಕ್ಷಣಾ ವಲಯವಾಗಿ ಪರಿವತಿ೯ಸ ಬೇಕು ಇಂತಹ ಮುಂಜಾಗೃತೆ ರಾಟ್ ವೀಲರ್ ಸಾಕುವವರು ಮಾಡಲೇ ಬೇಕು.
ರಾಟ್ ವೀಲರ್ ತನ್ನ ಸಾಕುವವರಿಗೆ ವಿಧೇಯವಾಗಿರುತ್ತದೆ ನನ್ನ ರಾಟ್ ವೀಲರ್ ನನ್ನ ಬೆಡ್ ರೂಂನ ನನ್ನ ಮಂಚದ ಪಕ್ಕದಲ್ಲೇ ಕೆಳಗೆ ಅವನ ಬೆಡ್ ಮೇಲೆ ಮಲಗುತ್ತಾನೆ.
ಕೊಡಗಿನ ಘಟನೆ ಬಗ್ಗೆ ಯಾರೊ ಒಬ್ಬರು ಇದು ಹುಲಿ ಮತ್ತು ನಾಯಿಯಿಂದ ಬಂದ ತಳಿ ಅಂತ ಬರೆದಿದ್ದಾರೆ ಇದು ತಪ್ಪು ಜರ್ಮನ್ ದೇಶದಲ್ಲಿ ಹುಲಿ ಇಲ್ಲ.
Comments
Post a Comment