ಪ್ಯಾಷನ್_ಪ್ರೂಟ್_ಕೃಷ್ಣಫಲದಲ್ಲಿ_ಇರುವ_ಸಮೃದ್ಧ_ಔಷದಿ_ಗುಣಗಳು.
ಮದುಮೇಹಿಗಳಿಗೆ_ಉಪಯುಕ್ತವಾದ_ಹಣ್ಣು
ಹೃದಯ_ಸಂಬಂದಿ_ಕಾಯಿಲೆಗೆ_ದಿವ್ಯ_ಔಷದ
ಫ್ರೆಂಚ್_ಪ್ರವಾಸಿ_ನೀಲಗಿರಿ_ಪ್ರಾಂತ್ಯದಿಂದ_ತಂದುಕೊಟ್ಟ_ ಸಸಿಗಳು
ಈಗ_ನಮ್ಮ_ಮನೆಯಲ್ಲಿ_ನಿತ್ಯ_ಪ್ಯಾಷನ್_ಫ್ರೂಟ್_ಜ್ಯೂಸ್
https://youtu.be/2p5yIhg_b_k?feature=shared
ಪ್ರೆಂಚ್ ಪ್ರವಾಸಿ ಮತ್ತು ಅವರ ಗೋವನ್ ಪತ್ನಿಯ ಮಗ 2013ರಿಂದ ಪ್ರತಿವಷ೯ ಅವರ ಊಟಿಯ ಮನೆಯಿಂದ ಗೋವಾಗೆ ಹೋಗುವಾಗ ನಮ್ಮ ಲಾಡ್ಜ್ ನಲ್ಲಿ ತಂಗುತ್ತಿದ್ದರು ಅವರು ಒಂದು ವರ್ಷ ಊಟಿಯ ನೀಲಗಿರೀಸ್ ಪ್ರಾಂತ್ಯದ ಪ್ಯಾಷನ್ ಪ್ರೂಟ್ ತಳಿಯ ಸಸಿಗಳ ಒಂದೆರೆಡು ಸಣ್ಣ ಪಾಟ್ ಗಳನ್ನು ನನಗೆ ಉಡುಗೊರೆ ಆಗಿ ನೀಡಿ ಈ ಹಣ್ಣು ಅತ್ಯಂತ ವಿಟಮನ್ ಹೊಂದಿದೆ ಅಂದಿದ್ದರು ಆ ಪೋಟೋ ನನ್ನ ಸಂಗ್ರಹದಲ್ಲಿ ಹುಡುಕಿದರೂ ಸಿಗಲಿಲ್ಲ.
ಅವರು ನೀಡಿದ ಸಸಿಯೊ ಅಥವ ಬೇರೆಯದೊ ಗೊತ್ತಿಲ್ಲ ನಮ್ಮ ಮನೆಯಲ್ಲಿ ಕಾಡು ಬಾದಾಮಿ ಗಿಡಕ್ಕೆ ಹಬ್ಬಿರುವ ಪ್ಯಾಷನ್ ಪ್ರೂಟ್ ಬಳ್ಳಿ ಭರಪೂರ ಪ್ಯಾಷನ್ ಪ್ರೂಟ್ ಕೊಡುತ್ತಿದೆ.
ಈ ಹಣ್ಣಿನ ಮೂಲ ಬ್ರಿಜಿಲ್ ಅನ್ನುವ ಮಾಹಿತಿ ಇದೆ ಆದರೂ ಇದು ಊಟಿಯ ನೀಲಗಿರಿ ಅರಣ್ಯದಲ್ಲಿ ನೂರಾರು ವರ್ಷದಿಂದ ಬೆಳೆದಿದೆ ಇದಕ್ಕೆ ಕೃಷ್ಣ ಫಲ ಎಂದು ಭಾರತೀಯ ಆಯುರ್ವೇದದಲ್ಲಿ ಗುರುತಿಸಿದೆ ಇದರ ಹೂವಿಗೆ ಕೃಷ್ಣ ಕಮಲ ಎಂಬ ಹೆಸರೂ ಇದೆ.
ಇದರಲ್ಲಿರುವ ಸಮೃದ್ಧ ವಿಟಮಿನ್ ಗಳು, ಪೈಬರ್ ಮನುಷ್ಯನ ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ ಮತ್ತು ಮದುಮೇಹಿಗಳು ಇದನ್ನು ಬಳಸಿದರೆ ದೇಹದಲ್ಲಿ ಇನ್ಸುಲಿನ್ ಹೆಚ್ಚು ಉತ್ಪಾದನೆ ಆಗುತ್ತದೆ ಎಂಬ ವೈಜ್ಞಾನಿಕ ಸಂಶೋದನೆಗಳಾಗಿದೆ.
ಎರೆಡು ಪ್ಯಾಷನ್ ಪ್ರೂಟ್ ಒಳಗಿನ ತಿರುಳು ತೆಗೆದು ತಣ್ಣಗಿನ ಒಂದು ಗ್ಲಾಸ್ ನೀರಿಗೆ ರುಚಿಗೆ ಬೇಕಾಗುವಷ್ಟು ಸಕ್ಕರೆ ಅಥವ ಬೆಲ್ಲ ಅಥವ ಜೇನು ತುಪ್ಪ ಬೆರಸಿ ಕುಡಿಯಿರಿ.
ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಈ ಬಳ್ಳಿ ಬೆಳೆಸಿಕೊಂಡರೆ ಯಾವುದೇ ಖರ್ಚಿಲ್ಲದೆ ಆರೋಗ್ಯ ವರ್ಧಕ ಪಾನಿಯ ಸೇವಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ.
Comments
Post a Comment