Blog number 1688. ಲಿಂಗಾಯಿತ ದಳವಾಯಿ ಅಕ್ಕಮ್ಮನಿಗೆ ನ್ಯಾಯ ಕೊಡಿಸಿದ ದೀವರ ಮಂಡಾನಿ ಯುವಕ ಅದಕ್ಕೆ ಪಂಚಾಯಿತಿದಾರರ ನ್ಯಾಯ ಪಂಚಾಯಿತಿ ತೀರ್ಪು ನ್ಯಾಯವೆ?... ದುರಂತ ಕಥೆ.
#ಸುದೀಂದ್ರಭಂಡಾರ್ಕರ್_ಸಶೇಷ_ಐತಿಹಾಸಿಕ_ಕಾದಂಬರಿಯಲ್ಲಿ.
#ದಳವಾಯಿ_ವಂಶದ_ಅಕ್ಕಮ್ಮ_ಮಾಸ್ತಿಯಾದ_ನಿಜಕಥೆ.
#ದೀವರಮಂಡಾನಿ_ಯುವಕನನ್ನ_ನೇಣಿಗೇರಿಸಿ_ಲಿಂಗಾಯಿತ_ಅಕ್ಕಮ್ಮನ_ಸತಿ_ಮಾಡಿದ_ಪ೦ಚಾಯಿತಿ.
#ಅವಳನ್ನು_ಅಕ್ಕಮಹಾದೇವಿಗೆ_ಹೋಲಿಕೆ_ಮಾಡಿ_ಗುಡಿ_ಕಟ್ಟಿದ್ದಾರೆ.
#ಕೆಳದಿಸಂಸ್ಥಾನದ_ಪ್ರಥಮ_ಕವಿ_ತುರಂಗಬಾರತ_18ಪರ್ವ_ರಚಿಸಿದ_ಲಕ್ಷ್ಮೀಷ್_ನಿಟ್ಟೂರಿನವರು.
#ಭೀಮನಕೋಣೆಯ_ಲಕ್ಷ್ಮೀನಾರಾಯಣ_ದೇವಾಲಯದ_ಅರ್ಚಕರಾಗಿರುತ್ತಾರೆ.
#ಹೆಗ್ಗೋಡಿನ_ರಸ್ತೆಗೆ_ಕವಿ_ಲಕ್ಷ್ಮೀಷ್_ನಾಮಕರಣ_ಮಾಡಿದ್ದಾರೆ.
ಅಕ್ಕಮ್ಮ.....ಹಿಂದೆ ಅಳಿದು ಹೋದ ದಳವಾಯಿ ಲಿಂಗಪ್ಪನ ವಂಶದವಳು.
ಟಿಪ್ಪು ಅಂತ್ಯವಾಗಿ ಮೈಸೂರಿನವರ ಆಡಳಿತ ಮುಗಿದ ಬಿದನೂರು ಸಾಮ್ರಾಜ್ಯದಲ್ಲಿ ಯಾರು ಬಲಿಷ್ಟರೋ ಆ ಜಮೀ ನ್ದಾರನದೇ ಸುಬೇದಾರಿಕೆ. ಆ ಗ್ರಾಮ ಬಲಿಷ್ಟ ದೀವರು - ಶೈವ ದಳವಾಯಿಗಳ ಪ್ರದೇಶ ಅಲ್ಲಿಯವರೆಗೆ ಅನ್ಯೋನ್ಯವಾಗಿದ್ದರು.
ಇಲ್ಲಿದ್ದರು ದಳವಾಯಿ ವಂಶದ ಸಹೋದರರು... ಅಣ್ಣ ಶಿವಪ್ಪ ಗೌಡ ತಮ್ಮ ವೀರಭದ್ರಪ್ಪ ಗೌಡ,
ಶಿವಪ್ಪ ಗೌಡ ಸಾದು, ಸಾತ್ವಿಕ.ಪತ್ನಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿನ ಸಂಸಾರ.
ತಮ್ಮ ವೀರಭದ್ರಗೌಡ ಇದಕ್ಕೆ ತದ್ವಿರುದ್ದ. ಕ್ರೂರಿ ಇಂತಹ ಕಾಲದಲ್ಲೇ ಅಣ್ಣ ಶಿವಪ್ಪ ಗೌಡ ತೀರಿಕೊಳ್ಳುತ್ತಾರೆ, ಶಿವಪ್ಪ ಗೌಡನ ಪತ್ನಿ, ಮಗ ಮತ್ತು ಪುತ್ರಿ ದುಷ್ಟ ವೀರಭದ್ರಪ್ಪನ ಅಡಿಯಲ್ಲಿ ಬಾಳಬೇಕಾಗುತ್ತದೆ.
ಅಣ್ಣನ ಸಣ್ಣ ಬಾಲಕನನ್ನು ಕೋಣ ಮೇಯಿಸುವ ಕೆಲಸಕ್ಕೆ ಹಾಕುತ್ತಾನೆ, ಆಷಾಡದ ಮಳೆಗಾಲದಲ್ಲಿ ಕೋಣಗಳು ಬಾಲಕನ ಕಣ್ತಪ್ಪಿಸಿ ಗದ್ದೆ ತಿಂದಿದ್ದ ನೋಡಿ ಕ್ರೂರಿ ವೀರಭದ್ರಪ್ಪ ಅಣ್ಣನ ಮಗನ ಕಪಾಳ ಮೋಕ್ಷ ಮಾಡಿದಾಗ ಉಸಿರು ನಿಂತು ಹೋದ ಬಾಲಕನ ಶವ ಗದ್ದೆಯ ಕೆಸರಲ್ಲಿ ಕಾಲಿಂದ ಮೆಟ್ಟಿ - ಮೆಟ್ಟಿ ಕೆಸರಿನ ಆಳದಲ್ಲಿ ಹುಗಿದು ಬಿಡುತ್ತಾನೆ.
ಇದನ್ನು ಒಬ್ಬ ಹಸಲರವನು ಮೀನಿನ ಬೇಟೆಗೆ ಹೋದವನು ನೋಡಿ ಬಿಡುತ್ತಾನೆ ಗೌಡ ಅವನನ್ನು ಬೆದರಿಸಿ, ದಿನವಹಿ ಹೆಂಡದ ಆಸೆ ತೋರಿಸಿ ಬಾಯಿ ಮುಚ್ಚಿಸುತ್ತಾನೆ.
ಸಂಜೆ ಕೋಣಗಳು ಮನೆಗೆ ಬಂದರೂ ಸಣ್ಣ ಬಾಲಕ ಬರದಿದ್ದಾಗ ತಾಯಿ ಆತಂಕದಿಂದ ವೀರಭದ್ರಗೌಡನಿಗೆ ಕೇಳಿದರೆ ಅಜ್ಜಿ ಮನೆಗೆ ಹೋಗಿರಬಹುದು ಅನ್ನುತ್ತಾನೆ.
ಮರುದಿನ ಊರೆಲ್ಲ ಹುಡುಕಿದರು ಬಾಲಕ ಪತ್ತೆ ಇಲ್ಲ ಗೌಡ ಹೊಸ ಸುದ್ದಿ ಹರಡುತ್ತಾನೆ ಬಾಲಕನನ್ನು ಕಾಡು ಕುರುಕ ಹೊತ್ತಿ ಒಯ್ಯಿತು ಎಂದು.
ತನ್ನ 11 ವರ್ಷದ ಮಗಳ ಜೊತೆ ಊರೆಲ್ಲ ಹುಡುಕುತ್ತಾ ತಾಯಿ ಹಸಲವರ ಮನೆ ಹಿಂದೆ ಬಂದಾಗ ಕುಡಿದ ಮತ್ತಿನಲ್ಲಿ ತನ್ನ ಮಗನಿಗೆ ಬೈಯುತ್ತಾ "ಗೌಡರು, ಹುಡುಗನ್ನ ಕೊಂದ ಹಾಗೆ ನಿನ್ನ ಕೊಲ್ತೀನಿ ಕಾಣು" ಅನ್ನುವಾಗ ಬಾಲಕನ ತಾಯಿ ದಂಗಾಗುತ್ತಾಳೆ ಊರೆಲ್ಲ ಕೇಳಿಕೊಂಡರೂ ಒಬ್ಬರೂ ಮುಂದೆ ಬರೊಲ್ಲ.
ಆಕೆ ನೇರ ಮ೦ಡಾನಿಯ ದೀವರ ದೊಡ್ಡ ಮನೆಗೆ ಹೋಗಿ ಎಲ್ಲಾ ವಿಚಾರ ತಿಳಿಸುತ್ತಾಳೆ ಅವರ ಮಗ ಕೋವಿ ಸ್ವಚ್ಚ ಮಾಡುತ್ತಾ ನೇರವಾಗಿ ಕೇಳುತ್ತಾನೆ " ಆ ಕ್ರೂರಿ ಗೌಡನ ಕೊಂದರೆ ಏನು ಕೊಡ್ತೀ?" ಅದಕ್ಕೆ ಬಾಲಕನ ತಾಯಿ "ನಾನೇನು ಕೊಡಲಿ ನನ್ನ ಆಸ್ತಿ ಅಂದರೆ ಈ ಒಬ್ಬ ಮಗಳೇ ಮತ್ತೇನಿದೆ... ಭೂಮಿ, ಆಸ್ತಿ ಎಲ್ಲಾ ವೀರಭದ್ರಗೌಡನ ಪಾಲಾಗಿದೆ..ನನ್ನ ಈ ಮಗಳನ್ನೆ ನಿನಗೆ ಧರ್ಮಧಾರೆ ಎರೆಯುವೆ " ಅನ್ನುತ್ತಾಳೆ.
ಏನೂ ಅರಿಯದ ಅಕ್ಕಮ್ಮನ ಹೆಸರಲ್ಲಿ ರಣವೀಳ್ಯ ಪಡೆದ ಮ೦ಡಾನಿಯ ಯುವಕ ಮುಂದೇನಾಗ ಬಹುದೆಂಬ ಯೋಚನೆ ಮಾಡಲಿಲ್ಲ.
ಮರುದಿನ ಐವತ್ತು ಆಳಿನ ದೊಡ್ಡ ನಟ್ಟಿಯಲ್ಲಿ ಹಾಳಿಯ ಮೇಲೆ ನಿಂತ ಗೌಡರು ಎದುರಿಗೆ ಕೋವಿ ಹಿಡಿದ ಮ೦ಡಾನಿ ಯುವಕ.
ಗೌಡರೆ ಇದೆ೦ತಾ ಕಂಪದ ಗದ್ದೆ! ಇಡೀ ಹೆಣ ಹುಗಿದರೂ ಗೊತ್ತಾಗೊಲ್ಲ ಅಂದಾಗ ಗೌಡರು ಸಾವರಿಸಿಕೊಂಡು ಕೇಳುತ್ತಾರೆ ತಮ್ಮಾ ಎತ್ತ ಹೊಂಟಿಯೋ? ಅದಕ್ಕೆ ಮ೦ಡಾನಿ ಹುಡುಗ ಅದೇ ಇಲ್ಲೆಲ್ಲೋ ಕಾಡು ಕುರುಕ ಇದೆಯಂತೆ ನೀವೇ ಹೇಳಿದರಂತೆ! ಅದ ಶಿಕಾರಿ ಮಾಡಲು ಹೊಂಟೆ ಅಂತ ಮೀಸೆಯಲಿ ನಕ್ಕ.
ಗೌಡರ ಮುಖ ಕಪ್ಪಿಟ್ಟಿತು, ಮಾತು ಮುಂದುವರಿಸಲಿಲ್ಲ, ತಗ್ಗಿಸಿದ ತಲೆ ಗೌಡ ಎತ್ತುವುದರೊಳಗೆ ಮ೦ಡಾನಿ ಯುವಕ ಗೌಡರೆದೆಗೆ ಕೋವಿ ಗುಂಡು ಹಾರಿಸಿದ.
ದೀವರ ಹುಡುಗ ಲಿಂಗಾಯಿತರ ಕೊಂದಿದ ದೊಡ್ಡ ಗಲಾಟೆ ಆಯಿತು, ಜಾತಿಯ ವಿಷ ಬೀಜ ಚಿಗುರಿತು.
ಪಂಚಾಯಿತಿ ಕಟ್ಟೆಗೆ ಅಕ್ಕಮ್ಮನನ್ನು ಕರೆದುಕೊಂಡು ಬಂದ ತಾಯಿ ತಾನು ರಣವೀಳ್ಯ ಕೊಟ್ಟ ವಿಚಾರ ತಿಳಿಸುತ್ತಾಳೆ ಮ೦ಡಾಣಿ ಯುವಕನೂ ಒಪ್ಪುತ್ತಾನೆ.
ದೀವರ ಗುಂಪು ಹುಡುಗಿಯ ಆಮಿಷ ತೋರಿಸಿದ್ದರಿಂದ ನಮ್ಮ ಹುಡುಗ ಕೊಲೆ ಮಾಡಿದ ಅಂತ.
ಮಾತಿನಂತೆ ಹನ್ನೊಂದರ ಬಾಲೆ ಶೈವ ಅಕ್ಕಮ್ಮನ ಜೊತೆ ದೀವರ ಮಂಡಾನಿ ಜೊತೆ ಮದುವೆ ಆಗಲಿ ಎಂದಿತು ಪಂಚಾಯಿತಿ,ಹಾರ ಅರಿಶಿಣ ಕೊಂಬು ತ೦ದು ಕಟ್ಟಿಸಿಯೇ ಬಿಡುತ್ತೆ, ಬಾಲೆ ಅಕ್ಕಮ್ಮ ಕಕ್ಕಾಬಿಕ್ಕಿಯಾಗುತ್ತಾಳೆ, ಕಣ್ಣೀರಾಗುತ್ತಾಳೆ.
ಪಂಚಾಯಿತಿ ಮತ್ತೊಂದು ತೀಪು೯ ನೀಡುತ್ತದೆ " ಕೊಲೆಗಾರ ಮಂಡಾಣಿ ಹುಡುಗನನ್ನು ನೇಣಿಗೆ ಹಾಕುವುದು"! ನೋಡ ನೋಡುತ್ತಲೇ ಮಾವಿನ ಮರಕ್ಕೆ ಒಯ್ದು ನೇಣು ಹಾಕಿಯೇ ಬಿಡುತ್ತಾರೆ.
ಆ ಕ್ಷಣಕ್ಕೆ ಕೆಲ ಸಮಯ ಮುಂಚೆ ತಾಳಿ ಕಟ್ಟಿಸಿಕೊಂಡ ಅಕ್ಕಮ್ಮ ಈಗ ವಿದವೆ, ತಮ್ಮ ಹುಡುಗ ನೇಣಾದ ಬಗ್ಗೆ ಕನಲಿದ ದೀವರು ನಿಮ್ಮ ವಿಧವೆ ಹುಡುಗಿ ಸಹಗಮನ ಮಾಡಲಿ ಎ೦ದು ಲಿಂಗಾಯತರಿಗೆ ಒತ್ತಾಯಿಸಿತು.
ಪತಿ ಮ೦ಡಾಣಿಯ ದೀವರ ಹುಡುಗನ ಜೊತೆ ಅಕ್ಕಮ್ಮನ ಸಹಗಮನ ಮಾಡಲಿ ಎಂದಿತು ಪಂಚಾಯಿತಿ.
ಸಹಗಮನ ವಿರೋದಿಸಿ ಪ್ರತಿಭಟಿಸಿದ ಅಕ್ಕಮ್ಮನ ಹೋರಾಟ ವ್ಯರ್ಥವಾಯಿತು " ಯಾರನ್ನೂ ಕಾಯದ ಈ ದೇವರು, ಮಠ ಸರ್ವನಾಶವಾಗಲಿ " ಎಂದು ಶಾಪ ಹಾಕುತ್ತಾಳೆ.
ಮಂಡಾಣಿಯ ಸುತ್ತಮುತ್ತಲಿನ ದೀವರು ಮುಂದೆ ಅಕ್ಕಮ್ಮನಿಗೆ ಜಕಣಿ ಕೂರಿಸುವ ಕಾರ್ಯ ಮಾಡಿ ಸ್ಥಾನ ಕೊಡುತ್ತಾರೆ ಅಕ್ಕಮ್ಮ ಮಾಸ್ತಿಯಾಗುತ್ತಾಳೆ.
ನಂತರ ಅಕ್ಕಮ್ಮನಿಗೆ ಒಂದು ಗುಡಿಯಾಗುತ್ತದೆ.
*** **** **** **** ****
#ಬಿದನೂರು_ಸಂಸ್ಥಾನದ_ಮೊದಲ_ಕವಿ.
ತುರಂಗ ಭಾರತ ಎಂಬ 18 ಪರ್ವಗಳ ಮಹಾಬಾರತ ಕಾವ್ಯ ರೂಪದಲ್ಲಿ ರಚಿಸಿದ ಬಿದನೂರು ಸಂಸ್ಥಾನದ ಪ್ರಥಮ ಕವಿ ಲಕ್ಷ್ಮೀಶ್ ಕವಿ ಹುಟ್ಟಿ ಬೆಳೆದದ್ದು ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ.
ತುರಂಗ ಭಾರತ ಇದನ್ನು ಖರ ಪುಟ ಕುದುರೆಯ ಓಟದ ಶಬ್ದದ ತಾಳದಲ್ಲಿ ಓದುವುದೇ ಹಾಡುವುದೇ ಒಂದು ಸುಂದರ ಅನುಭವ.
ಇವರು ಸಾಗರ ತಾಲ್ಲೂಕಿನ ಹೆಗ್ಗೋಡಿನ ಸಮೀಪದ ಭೀಮನ ಕೋಣೆಯ ಲಕ್ಷ್ಮೀನಾರಾಯಣ ದೇವಾಲಯದ ಅರ್ಚಕರಾಗಿ ಜೀವಿಸುತ್ತಾರೆ.
ಹೆಗ್ಗೋಡಿನ ಒಂದು ರಸ್ತೆಗೆ ಕವಿ ಲಕ್ಷ್ಮೀಷರ ಹೆಸರು ಇಟ್ಟಿದ್ದಾರೆ.
ಹೀಗೆ ಅನೇಕ ವಿಷಯಗಳು #ಸಶೇಷ ಐತಿಹಾಸಿಕ ಕಾದಂಬರಿಯಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ.
ಈ ಕಾದಂಬರಿ ಬೇಕಾದವರು ಲೇಖಕರಾದ ಸುದೀಂದ್ರ ಭಂಡಾರ್ಕರ್ ಸಂಪರ್ಕ ಸಂಖ್ಯೆ 94488 85151 ಸಂಪರ್ಕಿಸ ಬಹುದು.
Comments
Post a Comment