Blog number 1703. ಬೇಲೂರು ಗೋಪಿ ಮುಖತಃ ಬೇಟಿ ಆಗಲು ಸಾಧ್ಯವಾಗಲೇ ಇಲ್ಲ ಎಂಬ ಕೊರಗು ನನ್ನ ಹೃದಯವನ್ನು ಈಗಲೂ ಕೊರೆಯುತ್ತದೆ.
#ನನ್ನ_ಬಗ್ಗೆ_ಅವರಿಗೆ_ಗೊತ್ತಿತ್ತು_ಆದರೆ_ನನಗೆ_ಅವರ_ಮುಖತಃ_ಪರಿಚಯ_ಇರಲಿಲ್ಲ.
#ಅವರ_ಬೇಟೆಗೆ_ಕಾದಿದ್ದೆ_ಆದರೆ_ವಿದಿಯಾಟ_ ಸಾಧ್ಯವಾಗಲಿಲ್ಲ.
#ಪೇಸ್ಬುಕ್ ಗೆಳೆಯ ಬರಹಗಾರ ಚಿ೦ತಕ ಶ್ರಮ ಜೀವಿ ಗೋಪಿ ಬೇಲೂರು ಆತ್ಮಕ್ಕೆ ಸದ್ಗತಿ ಸ್ವಗ೯ಪ್ರಾಪ್ತಿಗಾಗಿ ಪ್ರಾಥ೯ನೆ.
#40ವಷ೯ದಲ್ಲಿ ಇಹಲೋಕ ಯಾತ್ರೆ ಮುಗಿಸಿದ (27-ಡಿಸೆಂಬರ್_2019).
#ಸೋಷಿಯಲ್_ಮೀಡಿಯಾದಲ್ಲಿ_ಗೆಳೆಯರಾದೆವು.
#ಒಮ್ಮೆಯೂ_ಬೇಟಿ_ಆಗಿದೆ_ಇಹಲೋಕದಿಂದ_ನಿರ್ಗಮಿಸಿದರು.
ನಮ್ಮ ಊರು ಆನಂದಪುರದಲ್ಲಿ ಜೆ.ಪಿ.ನಾರಾಯಣಸ್ವಾಮಿಯವರ ಸರಾಯಿ ಕ೦ಪನಿಯಲ್ಲಿ ಕೆಲಸ ಮಾಡಿದ ಬಗ್ಗೆ ಹೇಳಿದ್ದರು ಅವರಿಗೆ ನಮ್ಮ ಊರು ಚಿರಪರಿಚಿತ ಜೀವನಕ್ಕಾಗಿ ಬಸ್ ಕಂಡಕ್ಟರ್ ಆಗಿದ್ದು ಈಗ ಬೇಲೂರಿನಲ್ಲಿ ಹಣ್ಣಿನ ಅಂಗಡಿ ನಡೆಸುವುದಾಗಿ ತಿಳಿಸಿದ್ದರು, ಈ ಕಡೆ ಬಂದಾಗ ಬರಬೇಕೆಂದು ಆಮOತ್ರಣ ನೀಡಿದ್ದೆ ಕಳೆದ ವಷ೯ ಸಿಗಂದೂರಿಗೆ ಹೋದವರು ಕಾಲಾವಕಾಶ ಆಗದೆ ಬೇಟಿ ಆಗಲಿಲ್ಲ ಅಂತೂ ಕೊನೆಗೂ ಪರಸ್ಪರ ಬೇಟಿ ಸಾಧ್ಯವಾಗಲೇ ಇಲ್ಲ.
16 ಆಗಸ್ಟ್ 2016ರಲ್ಲಿ ಅವರು ನನ್ನ ಬಗ್ಗೆ ಬರೆದ ಪೋಸ್ಟ್ ಇಲ್ಲಿದೆ ನೋಡಿ....
ಧನ್ಯವಾದಗಳು ಸರ್.ನಾನು 1998ರಲ್ಲಿ
ಆನಂದಪುರದಲ್ಲಿದ್ದೆ.ನೀವು ವಿಧಾನಸಭಾ
ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ನೀವೇ
ಗೆಲ್ಲಲೆಂದು ಹಾರೈಸಿದ್ದೆ.ನಿಮ್ಮಬಗ್ಗೆ ಅಂದು
ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಲೇಖನ
ಬಂದಿತ್ತು..ಶೀರ್ಷಿಕೆ ಇಂದೂ ನೆನಪಿದೆ.!!
ಎರಡು ತಿಮ್ಸ್ ಗಳಮಧ್ಯೆ ಒಬ್ಬ ಅರುಣ
ಪ್ರಸಾದ್. ನಿಮ್ಮ ಪ್ರಚಾರಸಭೆಗೆ ಗಣಪತಿ
ಯಪ್ಪನವರು ..ಚಿತ್ರನಟರಾದ ಅರವಿಂದ್
ಮತ್ತು ಹೊನ್ನವಳ್ಳಿ ಕೃಷ್ಣರವರು ಬಂದಿದ್ದರು..
ನಾನು ಸಾರಾಯಿ ಗುತ್ತಿಗೆದಾರರಲ್ಲಿ ಕೆಲಸಕ್ಕಿದ್ದೆ.
ಆನಂದಪುರದ ಪೋಲಿಸ್ ಠಾಣೆಯ ಪಕ್ಕದಲ್ಲಿ
.ಈಗಲೂ ಇರುವ. -ಕಟ್ಟಡದಲ್ಲಿ ವಾಸವಿದ್ದೆ....
ಇವರೊಳಗೆ ಒಬ್ಬ ಕವಿ ಇದ್ದ, ಪುಸ್ತಕ ಖರೀದಿಸಿ ಓದಿ ವಿಮಷೇ೯ ಮಾಡುತ್ತಿದ್ದರು, ಪ್ರತಿ ನಿತ್ಯ ನಾನು ಅವರ Post ಓದುತ್ತಿದ್ದೆ, 2015ರಿಂದಲೂ.
ಕಳೆದ ಎರೆಡು ಮೂರು ತಿಂಗಳಿOದ ಹತಾಷರಾದOತೆ ಬರೆಯುತ್ತಿದ್ದರು ನವೆಂಬರ್ 30ರ ನಂತರ FB ಯಲ್ಲಿ ವಿರಳರಾದರು ಇವತ್ತು ಇವರು ಇಹಲೋಕ ತ್ಯಜಿಸಿದ್ದು ಕೇಳಿ ದುಃಖವಾಯಿತು ಕಣ್ಣು ನೀರಾಯಿತು.
ಇಬ್ಬರು ಚಿಕ್ಕ ಹೆಣ್ಣು ಮಕ್ಕಳ ಸ್ವ೦ತ ಮನೆಯಲ್ಲಿ ಸುಖ ಸಂಸಾರ ನಡೆಸಿದ್ದರು ಅವರಿಗೆಲ್ಲ ಈ ದುಃಖ, ಅಗಲಿಕೆ ಎದುರಿಸುವ ಶಕ್ತಿ ದೇವರು ನೀಡಲಿ ಎಂದು ನಾವೆಲ್ಲ FB ಗೆಳೆಯರು ಪ್ರಾಥಿ೯ಸೋಣ.
Comments
Post a Comment