#ಶುಂಠಿ_ವ್ಯಾಪಾರಿಗಳಾದ_ರಾಜು
#ಹೊಸನಗರ_ತಾಲ್ಲೂಕಿನ_ಚಿಕ್ಕಜೇನಿ_ಗ್ರಾಮ_ಪಂಚಾಯತಿ_ಅದ್ಯಕ್ಷರಾಗಿದ್ದಾರೆ.
#ಗ್ರಾಮ_ಪಂಚಾಯತಿಗಳ_ಎರಡನೆ_ಅವಧಿ_ಅಧ್ಯಕ್ಷ_ಉಪಾದ್ಯಕ್ಷ_ಚುನಾವಣೆ.
#ಕೃಷಿ_ವ್ಯಾಪಾರದ_ಜೊತೆ_ಓದುವ_ಬರೆಯುವ_ಹವ್ಯಾಸದ_ಸಮಾಜ_ಸೇವೆ_ಇವರದ್ದು.
ನಾಗರಳ್ಳಿ ರಾಜು ಎಂದು ಸ್ಥಳಿಯರು ಹೊಸನಗರ ತಾಲೂಕಿನಲ್ಲಿ ಕರೆದರೆ ಇವರಿಗೆ ಸಾಗರ ತಾಲೂಕಿನಲ್ಲಿ ಶುಂಠಿ ರಾಜಣ್ಣ ಅಂತ ಕರೆಯುತ್ತಾರೆ ಇವರು ತಮ್ಮ ಬತ್ತ ಮತ್ತು ಅಡಿಕೆ ಕೃಷಿ ಜೊತೆ ಶುಂಠಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ ಅಷ್ಟೆ ಅಲ್ಲ ಇವರು ಶುಂಠಿ ವ್ಯಾಪಾರಿಗಳೂ ಹೌದು ಶುಂಠಿ ಒಣಗಿಸಿ ಸಂಸ್ಕರಿಸಿ ಕೋಲ್ಡ್ ಸ್ಟೋರೇಜ್ ನಲ್ಲಿ ಇಡುತ್ತಾರೆ ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವ ಮಾದರಿ ಕೃಷಿಕರು ಕೂಡ.
ಈ ಎರೆಡೂ ತಾಲೂಕಿನ ಶುಂಠಿ ವ್ಯಾಪಾರಿಗಳಿಗೆ ಆನಂದಪುರಂನ ಸಂತೋಷ್ ಆಗ್ರೋ ಕೋಲ್ಡ್ ಸ್ಟೋರೇಜ್ ಮತ್ತು ರಿಪ್ಪನ್ ಪೇಟೆಯ ಶಾರದಾ ಸಹಕಾರಿ ಸಂಸ್ಥೆಯ ಕೋಲ್ಡ್ ಸ್ಟೋರೇಜ್ ವರದಾನ ಕೇವಲ 10 ಕಿ.ಮಿ. ನಲ್ಲಿ ಸುಮಾರು 8000 ಟನ್ ಒಣ ಶುಂಠಿ ಸಂಗ್ರಹ ಯೋಗ್ಯವಾದ ಕೋಲ್ಡ್ ಸ್ಟೋರೇಜ್ ಅಲ್ಲದೆ ಸಮೀಪದ ಬ್ಯಾಡಗಿಯ ಕೋಲ್ಡ್ ಸ್ಟೋರೇಜ್ ಕೂಡ ಒಣ ಶುಂಠಿಯಿಂದ ತುಂಬಿ ತುಳುಕುತ್ತದೆ.
ಹೆಚ್ಚಿನ ಶುಂಠಿ ವ್ಯಾಪಾರಿಗಳಿಗೆ ಮುಖ್ಯ ಜೋಯಿಂಟ್ ಪ್ಲೇಸ್ ನಮ್ಮ ಮಲ್ಲಿಕಾ ವೆಜ್ ಇಲ್ಲಿ ವ್ಯಾಪಾರ ಖರೀದಿ ಜೊತೆ ವ್ಯಾಪಾರಸ್ಥರ ವ್ಯಾಜ್ಯ ತಕರಾರುಗಳು ಲಾಭ ನಷ್ಟಗಳ ಪಂಚಾಯಿತಿ ಕೂಡ ನಡೆಯುತ್ತದೆ ಆ ಸಂದರ್ಭದಲ್ಲಿ ಅಂತಿಮ ಜಡ್ಜಮೆಂಟ್ ರಾಜು ಅವರದ್ದೆ.
ತಕರಾರು ಸುಖಾಂತ್ಯಗೊಳಿಸುವ ಜೊತೆಗೆ ನಷ್ಟದಿಂದ ತತ್ತರಿಸುವ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಹತಾಶ ಮನಸ್ಥಿತಿ ಬದಲಿಸಿ ಅವರಲ್ಲಿ ಜೀವನೋತ್ಸವ ತುಂಬುವ ಅತ್ಯುತ್ತಮ ಕೌನ್ಸಿಲಿಂಗ್ ಮಾಡುವ ರಾಜು ಅವರ ಚಾಕಚಕ್ಯತೆ ನನಗೆ ತುಂಬಾ ಮೆಚ್ಚುಗೆ ಆಗಿದೆ.
ನಮ್ಮ ಊರಿನ ವರಸಿದ್ಧಿವಿನಾಯಕ ದೇವರ ಜಾತ್ರೆಯಲ್ಲೂ ಭಾಗವಹಿಸುತ್ತಾರೆ ಇವರು ಹೊಸನಗರ ಸಾಗರ ಸೊರಬ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಸಂಪರ್ಕ ಪ್ರಭಾವ ಹೊಂದಿದ್ದಾರೆ ಆದರೆ ಎಲ್ಲೂ ತೋರ್ಪಡಿಸಿಕೊಳ್ಳದೆ ಎಲೆ ಮರೆಯ ಕಾಯಿಯಂತೆ ಇರುತ್ತಾರೆ.
ಮೂರು ಬಾರಿ ಗ್ರಾಮ ಪಂಚಾಯಿತಿಗೆ ಆಯ್ಕೆ ಆಗಿರುವ ಇವರಿಗೆ ಎರಡನೆ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ ಮುಂದಿನ ದಿನಗಳಲ್ಲಿ ಅವಕಾಶ ಬಂದರೆ ತಾಲ್ಲೂಕ್ ಪಂಚಾಯ್ತಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಹುಮ್ಮಸ್ಸು ಇವರಿಗಿದೆ.
ಅಧ್ಯಕ್ಷರಾಗಿ ಆಯ್ಕೆ ಆದ ರಾಜು ಅವರು ನಂದಿನಿ ಹಾಲಿನ ಪೇಡಾ ತಂದು ನನಗೆ ಮತ್ತು ನನ್ನ ಸಂಸ್ಥೆಯ ಸಿಬ್ಬಂದಿಗಳಿಗೆ ಬಾಯಿ ಸಿಹಿ ಮಾಡಿದ್ದಾರೆ ಇವರ ಶುಂಠಿ ವ್ಯಾಪಾರಿ ಜೊತೆಗಾರರಾದ ಪ್ರಮೋದ್ ಶೇಟ್ ಮತ್ತು ಉಳುವಿಯ ಸಾಹೇಬರ ಜೊತೆ ಬಂದಿದ್ದರು.
Comments
Post a Comment