Blog number 1698. ಮುಂಗಾರು ಮಳೆಯಲ್ಲಿ ನೆನೆಯುತ್ತಾ ಪೈನಾಪಲ್ ಸ್ಲೈಸ್ ಸವಿಯುತ್ತಾ ಜೋಗ್ ಜಲಪಾತ ವೀಕ್ಷಣೆ ಮಾಡುವ ಪ್ರವಾಸಿಗರ ಹೊಸ ಟ್ರೆಂಡ್.
#ಜೋಗ್_ಪಾಲ್ಸ್_ಪ್ರವಾಸಿಗಳು_ಈಗ_ಬರುವ_ಕಾಲ
#ಈ_ಮಾರ್ಗದ_ಇಕ್ಕೆಲದಲ್ಲಿ_ಪೈನಾಪಲ್_ಸಂತೆ.
#ಮುಂಗಾರು_ಮಳೆಯಲ್ಲಿ_ನೆನೆಯುತ್ತಾ_ಹಣ್ಣು_ಸವಿಯುವ_ಈಗಿನ_ಯುವ_ಪ್ರವಾಸಿಗಳ_ಟ್ರೆಂಡ್.
#ರಸ್ತೆ_ಬದಿಯ_ಅಂಗಡಿಯಲ್ಲಿ_ಸ್ಥಳಿಯವಾಗಿ_ಬೆಳೆಯುವ_ಹಣ್ಣುಗಳ_ಕತ್ತರಿಸಿ_ಉಪ್ಪು_ಖಾರದೊಂದಿಗೆ.
#ಪ್ರಯಾಣದ_ಆಯಾಸ_ಪರಿಹಾರ_ಮುಂಗಾರು_ಮಳೆ_ಹನಿಯ_ಜೊತೆ_ಜಲಪಾತದ_ವೀಕ್ಷಣೆಗೆ_ಹುಮ್ಮಸ್ಸು .
#ಮನೆಯಲ್ಲೂ_ವಿವಿಧ_ರುಚಿಯ_ಪೈನಾಪಲ್_ಖಾಧ್ಯ_ಮಾಡ_ಬಹುದು.
ಜೋಗ್ ಜಲಪಾತ ನೋಡಲು ಬರುವ ಪ್ರವಾಸಿಗಳು ಮುಂಗಾರು ಪ್ರಾರಂಭದಲ್ಲಿ ಜುಲೈ ತಿಂಗಳಲ್ಲಿ ವಾರಾಂತ್ಯದಲ್ಲಿ ಬರಲು ಪ್ರಾರಂಬಿಸಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸುತ್ತಾರೆ.
ಮೊದಲೆಲ್ಲ ಬೆಂಗಳೂರಿಂದ ಅತಿ ಹೆಚ್ಚು ಬರುತ್ತಿದ್ದ ಪ್ರವಾಸಿಗಳು ಈಗ ಕೊಡಗು ಮತ್ತು ಚಿಕ್ಕಮಗಳೂರು ದಾರಿ ಹಿಡಿದಿದ್ದಾರೆ ಆಗೆಲ್ಲ ನಮ್ಮ ಊರಲ್ಲಿ ಶನಿವಾರ ಮತ್ತು ಭಾನುವಾರ ರಸ್ತೆ ದಾಟಲು ಸಾಧ್ಯವಿರುತ್ತಿರಲಿಲ್ಲ, ಕಾರಿನಿಂದ ಗಾಜಿನ ಮಧ್ಯದ ಬಾಟಲಿ ರಸ್ತೆಗೆ ಎಸೆಯುತ್ತಿದ್ದ ವಿಕೃತಿಗಳೆಲ್ಲ ಜಾಸ್ತಿ ಇರುತ್ತಿತ್ತು.
ಈಗ ಜೋಗ ಜಲಪಾತ ವೀಕ್ಷಣೆಗೆ ಕರಾವಳಿ ಮಾರ್ಗವಾಗಿ ಮತ್ತು ಹುಬ್ಬಳ್ಳಿ ಸಿರ್ಸಿ ಮಾರ್ಗವಾಗಿ ಬರುವವರು ಹೆಚ್ಚು.
ಜೋಗ ಜಲಪಾತಕ್ಕೆ ತಲುಪುವ ಎಲ್ಲಾ ಮಾರ್ಗಗಳಲ್ಲಿ ಸ್ಥಳಿಯ ರೈತರು ತಾವು ಬೆಳೆದ ಫೈನಾಪಲ್ ತಂದು ಸ್ಥಳದಲ್ಲೇ ಗ್ರಾಹಕರಿಗೆ ಅದರ ಸಿಪ್ಪೆ ತೆಗೆದು ಅದನ್ನು ತುಂಡರಿಸಿ ಅದಕ್ಕೆ ರುಚಿಗೆ ತಕ್ಕ ಉಪ್ಪು ಮತ್ತು ಮೆಣಸಿನ ಪುಡಿ ಸವರಿ ತಿನ್ನಲು ನೀಡುತ್ತಾರೆ.
ಸತತ ಡ್ರೈವಿಂಗ್ ನಿಂದ ರಿಲಾಕ್ಸ್ ಪಡೆಯಲು ಇಲ್ಲಿ ನಿಲ್ಲುವ ವಾಹನಗಳು ಈ ಮುಂಗಾರಿನ ರಸಭರಿತ ರುಚಿಕರವಾದ ಪೈನಾಪಲ್ ಹಣ್ಣುಗಳನ್ನು ಸವಿಯುತ್ತಾರೆ ಮತ್ತು ಇಡೀ ಹಣ್ಣು ಮನೆಗೆ ತೆಗೆದುಕೊಂಡು ಹೋಗುತ್ತಾರೆ.
ಈ ಭರಪೂರ ವ್ಯಾಪಾರ ನೋಡಿ ವ್ಯಾಪಾರಸ್ಥರು ಈ ಮಾರ್ಗದಲ್ಲಿ ಅಂಗಡಿ ಹಾಕಿದ್ದಾರೆ,ಸ್ಥಳಿಯವಾಗಿ ಪೈನಾಪಲ್ ಸಿಗದಿದ್ದರೆ ಪಕ್ಕದ ಸೊರಬ ತಾಲೂಕಿನಿಂದ ಅಥವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮತ್ತು ಜನವಾಸಿಗಳಿಂದ ಹಣ್ಣು ತಂದು ಮಾರುತ್ತಾರೆ.
ಮುಂಗಾರಿನ ಮಳೆಯ ಹನಿಯಲ್ಲಿ ನೆನೆಯುತ್ತಾ ಪೈನಾಪಲ್ ಸವಿಯುವ ಅವಕಾಶ ಈ ಪ್ರವಾಸಿಗಳು ಅನುಭವಿಸಲು ಮರೆಯುವುದಿಲ್ಲ.
ಕೇಂದ್ರ ಸರ್ಕಾರ ಶಿವಮೊಗ್ಗ ಜಿಲ್ಲಾ ಬೆಳೆ ಅಂತಾ ಪೈನಾಪಲ್ ಘೋಷಿಸಿದೆ.
ಪೈನಾಪಲ್ ನಿಂದ ಕೇಸರಿ ಬಾತ್, ಕಾಯಿ ರಸ, ಸಾಸಿವೆ ಮತ್ತು ತಿಳಿ ಸಾರು ಮಾಡುತ್ತಾರೆ, ಜ್ಯೂಸ್, ಜಾಮ್, ಡ್ರೈ ಪ್ರೂಟ್ ಕೂಡ.
ಹಣ್ಣು ಸ್ಲೈಸ್ ಆಗಿ ಕತ್ತರಿಸಿ ಜೇನು ಸಕ್ಕರೆ ಸವರಿ ತಿನ್ನಬಹುದು ಅಥವ ಉಪ್ಪು ಖಾರದ ಪುಡಿ ಸವರಿಯೂ ಸೇವಿಸ ಬಹುದು.
ಇವತ್ತು ನಾನು ಪೈನಾಪಲ್ ಸ್ಲೈಸ್ ಮಾಡಿ ಸಕ್ಕರೆ ಜೇನುತುಪ್ಪದೊಂದಿಗೆ ಮತ್ತು ಉಪ್ಪು ಕಾಳು ಮೆಣಸಿನ ಪುಡಿ ಮತ್ತು ಚಾಟ್ ಮಸಾಲ ಉದುರಿಸಿ ಎರೆಡು ವಿದ ಮಾಡಿದ್ದೆ ಎರೆಡೂ ಸೂಪರ್ ಆಗಿತ್ತು.
ನೀವೂ ಮಾಡಿ ನೋಡಿ.
Comments
Post a Comment