Blog number 1692. ಬ್ರಾಂತೇಶ - ಕಾಂತೇಶ - ಶಾಂತೇಶ ಎಂಬ ಮೂರು ಪುರಾಣ ಪ್ರಸಿದ್ಧ ಆಂಜನೇಯರ ದರ್ಶನ ಅಧಿಕ ಮಾಸದ ಶ್ರಾವಣ ಶನಿವಾರ ಸೂಯೋ೯ದಯದಿಂದ ಸೂರ್ಯಸ್ತದ ಒಳಗೆ ಮಾಡಿದರೆ ಕಾಶಿ ಯಾತ್ರೆಯಷ್ಟೇ ಪುಣ್ಯ ಎಂಬ ಶತಮಾನಗಳ ನಂಬಿಕೆ ಇದೆ.
#ಅದಿಕ_ಮಾಸದ_ಶ್ರಾವಣ_ಶನಿವಾರದಂದು.
#ಶಿಕಾರಿಪುರದ_ಹುಚ್ಚರಾಯಸ್ವಾಮಿ_ಕದರಮಂಡಲಗಿ_ಶ್ರೀಆಂಜನೇಯ_ಸಾತೇನಳ್ಳಿ_ಆಂಜನೇಯರನ್ನು
#ಸೂರ್ಯಾಸ್ತದ_ಒಳಗೆ_ದಶ೯ನ_ಮಾಡಿದರೆ_ಕಾಶಿಯಾತ್ರೆ_ಮಾಡಿದಷ್ಟು_ಪುಣ್ಯ.
#ಬ್ರಾ೦ತೇಶ_ಕಾಂತೇಶ_ಶಾಂತೇಶರೆಂದೇ_ಪ್ರಸಿದ್ದಿ .
#ನಿನ್ನೆ_ಶನಿವಾರ_ಈ_ಮೂರು_ಸ್ಥಳದಲ್ಲಿ_ಆಂಜನೇಯ_ದರ್ಶನ_ಸಾಧ್ಯವಾಯಿತು.
#ಕೊನೆಯ_ಅಧಿಕಶ್ರಾವಣ_ಮುಂದಿನ_ಶನಿವಾರ_ತಪ್ಪಿದರೆ_ನಾಲ್ಕು_ವರ್ಷ_ಕಾಯಬೇಕು.
1993ರಲ್ಲಿ ಶಿವಮೊಗ್ಗದ ಅಬಕಾರಿ ಜಿಲ್ಲಾಧಿಕಾರಿ ಆಗಿದ್ದ ಹೊಸನೇಮತಿ ಸಾಹೇಬರು ನನಗೆ ಕದರಮಂಡಲಗಿ ಕಾಂತೇಶರ ದರ್ಶನ ಮಾಡಿಸಿದ್ದರು ಆಗ ಅವರು ಈ ಮೂರು ಕ್ಷೇತ್ರ ದರ್ಶನ ಅಧಿಕ ಮಾಸದ ಶ್ರಾವಣದ ಶನಿವಾರ ಸೂರ್ಯೋದಯದಿಂದ ಸೂರ್ಯಾಸ್ತದ ಒಳಗೆ ಮಾಡಿದರೆ ಕಾಶಿ ಯಾತ್ರೆಯಷ್ಟೇ ಪುಣ್ಯ ಎಂಬ ಪ್ರತೀತಿ ಇದೆ ನೀವೂ ಮಾಡಿ ಅಂದಿದ್ದರು.
ಆದರೆ ಅದು ಸಾಧ್ಯವೇ ಆಗಿರಲಿಲ್ಲ, 2019ರ ಅಕ್ಟೋಬರ್ 14 ರಂದು ನನ್ನ ಮಗಳ ಮದುವೆ ಪೂರ್ವದಲ್ಲಿ ಈ ಯಾತ್ರೆ ಮಾಡಿದ್ದೆ (ಆಗ ಅಧಿಕ ಮಾಸ ಶ್ರಾವಣ ಮುಗಿದಿತ್ತು) ಆಗಲೂ ಮುಂದಿನ ಅಧಿಕ ಮಾಸ ಶ್ರಾವಣದಲ್ಲಿ ಈ ಯಾತ್ರೆ ಮಾಡಲೇ ಬೇಕೆಂದು ಮನಸ್ಸಲ್ಲೇ ನಿಶ್ಚಯ ಮಾಡಿದ್ದೆ.
ಆದರೆ ಈ ವಷ೯ ಅದಿಕ ಮಾಸದ ಶ್ರಾವಣ ಪ್ರಾರಂಭ ಆದರೂ ಈ ಯಾತ್ರೆಯ ನೆನಪಾಗಲೇ ಇಲ್ಲ.ಈ ಸಂದರ್ಭದಲ್ಲೇ ನನ್ನ ಆಪೀಸಿಗೆ ಬಂದಿದ್ದ ನಮ್ಮ ಊರಿನ ಶುಂಠಿ ವ್ಯಾಪಾರಿಗಳಾದ ಪ್ರಮೋದ ಶೇಟ್ ಅವರು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬ್ರಾಂತೇಶ ಕಾಂತೇಶ ಶಾಂತೇಶರ ದರ್ಶನ ತಪ್ಪದೇ ಮಾಡುವುದಾಗಿ ಮತ್ತು ಈ ವರ್ಷ ಅಧಿಕ ಮಾಸದ ಶ್ರಾವಣ ಬಂದಿರುವುದರಿಂದ ವಿಶೇಷವಾಗಿ ಶನಿವಾರ ದರ್ಶನ ಮಾಡಿದರೆ ಶ್ರೇಷ್ಟ ಅಂದಾಗ ಪುನಃ ನನಗೆ ನನ್ನ 2019 ರ ಸಂಕಲ್ಪ ನೆನಪಾಯಿತು.
ಅದಿಕಸ್ಯ ಅಧಿಕ ಫಲ ಎಂಬಂತೆ ನಿನ್ನೆ ಶನಿವಾರ (5- ಆಗಸ್ಟ್ -2023) ಬೆಳಿಗ್ಗೆ 7ಕ್ಕೆ ಆನಂದಪುರ೦ ಬಿಟ್ಟು ಶಿಕಾರಿಪುರ ಹುಚ್ಚರಾಯಸ್ವಾಮಿ(ಬ್ರಾಂತೇಶ) ದೇವಾಲಯ ದರ್ಶನ ಪೂಜೆ ಮಾಡಿಸಿ ಕೊಂಡು ಮಾಸೂರು ಮಾಗ೯ವಾಗಿ ಕದರಮಂಡಲಗಿ ತಲುಪಿ ಕಾಂತೇಶರ ದಶ೯ನ ಪೂಜೆ ಮುಗಿಸಿ ಸಾತೇನಳ್ಳಿಯ ಶಾಂತೇಶರ ದರ್ಶನ ಪೂಜೆ ಮುಗಿಸಿ ಹೊರಬರುವಾಗ ಮಧ್ಯಾಹ್ನ 3 ದಾಟಿತ್ತು.
ಅಧಿಕ ಮಾಸದ ಶ್ರಾವಣ ಶನಿವಾರವಾದ್ದರಿಂದ 30 ಸಾವಿರಕ್ಕೂ ಅಧಿಕ ಭಕ್ತರು ಈ ಯಾತ್ರೆ ಮಾಡಿದ್ದಾರೆ ಆದ್ದರಿಂದ ಈ ಮೂರು ದೇವಾಲಯದಲ್ಲಿ ಅಪಾರ ಜನ ಸಂದಣಿ ಮತ್ತು ನೂಕು ನುಗ್ಗಲು ಉಂಟಾಗಿತ್ತು.
ಕಡೆಯ ಅಧಿಕ ಮಾಸದ ಶ್ರಾವಣ ಶನಿವಾರ ಮುಂದಿನ ಶನಿವಾರ (12- ಆಗಸ್ಟ್ - 2023) ಕೂಡ ಇದಕ್ಕೂ ಹೆಚ್ಚಿನ ಭಕ್ತರು ಸೇರುವ ನಿರೀಕ್ಷೆ ಇದೆ.
ನಿಜ ಶ್ರಾವಣದ ಎಲ್ಲಾ ಶನಿವಾರಗಳಲ್ಲೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ ಆದರೆ ನಾಲ್ಕು ವರ್ಷಕೊಮ್ಮೆ ಬರುವ ಅಧಿಕ ಮಾಸದ ಶನಿವಾರಗಳು ಹೆಚ್ಚು ಅಧಿಕ ಫಲ ಎಂಬ ನಂಬಿಕೆ ಇದೆ.
ನನ್ನಣ್ಣ ಮತ್ತು ಅವರ ಮಗ, ನಾನೂ ನನ್ನ ಮಗ, ನನ್ನ ಸಣ್ಣ ಬಾವ, ಗೆಳೆಯರಾದ ರಿಪ್ಪನಪೇಟೆ ಶಿವಕುಮಾರ್ ಮತ್ತು ಪ್ರಮೋದ್ ಶೇಟ್ ಸೇರಿ ಈ ಯಾತ್ರೆ ಮಾಡಿದ ಸಂತೃಪ್ತಿ ನನ್ನದು.
Comments
Post a Comment