https://youtu.be/U3F0stfmQ-c
#ನಮ್ಮ_ಮನೆಯಲ್ಲಿ_ಮಂದಾರ_ಹೂವುಗಳ_ರಾಶಿ.
#ಆಲೆಮನೆ_ಸಿನಿಮಾದ_ನಮ್ಮೂರ_ಮಂದಾರ_ಹೂವೆ_ಹಾಡು.
#ರ೦ಗನಾಯಕಿ_ಸಿನಿಮಾದ_ಮಂದಾರ_ಪುಷ್ಟವು_ನೀನು_ಹಾಡು_ನನ್ನ_ಪೆವರಿಟ್
#ಆ_ಹಾಡು_ಇಷ್ಟ_ಪಟ್ಟು_ಕೇಳುವಾಗ_ಈ_ಹೂವು_ನೋಡೇ_ಇರಲಿಲ್ಲ.
ರೇಷ್ಮೆಯಂತ ನಯವಾದ ಅತಿ ಸೂಕ್ಷ್ಮ ದಳಗಳ ತೆಳು ಹಳದಿ ಬಣ್ಣದ ಮಂದಾರ ಹೂವು ಹಾಡು ಇತ್ಯಾದಿಯಲ್ಲಿ ಸ್ತ್ರೀ ಸೌಂದರ್ಯ ಬಣ್ಣಿಸಲು ಹೆಚ್ಚು ಬಳಸಿದ್ದಾರೆ ಮತ್ತು ಮಂದಾರ ಹೂವಿನ ಹಾಡುಗಳು ಅತ್ಯಂತ ಜನಪ್ರಿಯವಾಗಿದೆ.
80 ರ ದಶಕದ ಪ್ರಾರಂಭದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ರೆಡಿಯೋ ಸಿಲೋನ್ ನಲ್ಲಿ ಈ ಹಾಡಿಗಾಗಿ ಅನೇಕರು ಅಂಚೆ ಕಾರ್ಡ್ ಮೂಲಕ ವಿನಂತಿಸುತ್ತಿದ್ದರು.
ಸಿಲೋನ್ ಭಾಷೆಯ ಆಕ್ಸೆಂಟಿನಲ್ಲಿ ಅಂಚೆ ಕಾರ್ಡ್ ನಲ್ಲಿ ವಿನಂತಿಸಿದವರ ಹೆಸರು ರೇಡಿಯೋದಲ್ಲಿ ಹೇಳಿ ನಂತರ ಈ ಆಲೆಮನೆ ಮತ್ತು ರಂಗನಾಯಕಿ ಸಿನಿಮಾದ ಮಂದಾರ ಹೂವಿನ ಹಾಡು ಕೇಳಿಸುತ್ತಿದ್ದರು.
ಈ ಹಾಡುಗಳಿಗೆ ಮಾರುದ್ದದ ಅಭಿಮಾನಿಗಳ ಪಟ್ಟಿ ರೇಡಿಯೋ ಜಾಕಿ ಮಹಿಳೆ ರಾಗವಾಗಿ ಹೇಳುವುದು ಕೇಳುವುದೇ ಒಂದು ವಿಶೇಷ ಮತ್ತು ಆ ಹೆಸರಿನ ಪಟ್ಟಿಯಲ್ಲಿ ಪ್ರತಿ ವಾರ ನನ್ನ ಹೆಸರೂ ತಪ್ಪದಂತೆ ಕಾರ್ಡ್ ಬರೆಯುತ್ತಿದ್ದೆ ಆಗ ನನ್ನ ಹೆಸರು ರೇಡಿಯೊದಲ್ಲಿ ಕೇಳಿ ನಿಜಕ್ಕೂ ಪುಳುಕಿತವಾಗುತ್ತಿದ್ದ ದಿನಗಳು.
ನನ್ನ ಆ ಅವತಾರ SSLC ಪೇಲ್ ಆಗಿ ದಿನಸಿ ಅಂಗಡಿ ತೆರೆದಿದ್ದ ಕಾಲ, ಅಂಗಡಿ ಹೊರಗೆ ಒಂದು ಸ್ವೀಕರ್ ನಮ್ಮ ಅಣ್ಣ ಜೋಡಿಸಿದ್ದ ಇದರಿಂದ ಒಳಗಿರುತ್ತಿದ್ದ ರೇಡಿಯೋ ಧ್ವನಿ ಅಂಗಡಿ ಹೊರಗಿನ ಕಟ್ಟೆಯ ಮೇಲೆ ಕುಳಿತಿರುತ್ತಿದ್ದ ಗ್ರಾಹಕರಿಗೆ ಕೂಡ ಕೇಳುತ್ತಿತ್ತು.
ಮಂದಾರ ಪುಷ್ಪದ ಮೇಲಿನ ಆ ಹಾಡು ಅಷ್ಟು ನಮಗೆಲ್ಲ ಇಷ್ಟವಾಗುತ್ತಿದ್ದ ಕಾಲದಲ್ಲಿ ನಮಗೆಲ್ಲ ಮಂದಾರ ಹೂವಿನ ಬಗ್ಗೆ ಬಾರೀ ಕುತೂಹಲ ಆದರೆ ಆ ಹೂವು ನಾವು ನೋಡೇ ಇರಲಿಲ್ಲ, ನಮ್ಮ ಊರಲ್ಲಿ ಯಾರಿಗೂ ಮಾಹಿತಿ ಇರಲಿಲ್ಲ.
Comments
Post a Comment