#ನಿನ್ನೆ_ಆಗಸ್ಟ್_23_ಮುಗಿದ_ಮೇಲೆ_ಗೊತ್ತಾಯಿತು.
#ಆಗಸ್ಟ್_23_1989_ನಾನು_ವಿವಾಹ_ಆದ_ದಿನಾಂಕ.
#ದಾಂಪತ್ಯ_ಜೀವನದ_34_ವಷ೯_ಕಳೆಯಿತು.
#ಹುಟ್ಟು_ಹಬ್ಬ_ವೆಡ್ಡಿಂಗ್_ಆನಿವರ್ಸರಿ_ಈವರೆಗೂ_ನಾನು_ಆಚರಿಸಿಲ್ಲ.
ನನ್ನ ಮದುವೆ ಮೊದಲಿಗೆ ಗುಟ್ಟಾಗಿ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಾಯಿಸಿದ್ದೆ ನಂತರ ಎರೆಡು ವರ್ಷದ ನಂತರ ನಮ್ಮ ತಂದೆಯ ಒಪ್ಪಿಸಿ ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನದಲ್ಲಿ 23 ಆಗಸ್ಟ್ 1989ರಲ್ಲಿ ಅಧಿಕೃತವಾಗಿ ಮದುವೆ ಆಗಿದ್ದೆ ಅಂದರೆ ನಿನ್ನೆಗೆ 34 ವರ್ಷ ಆಯಿತು.
ಅವತ್ತು ವಿಪರೀತ ಮಳೆ ಮತ್ತು ನಮ್ಮ ತಂದೆ ಕೊನೆಕ್ಷಣದಲ್ಲಿ ನನ್ನ ಮದುವೆಗೆ ಬರುವುದಿಲ್ಲ ಅಂದಾಗ ಸನ್ನಿವೇಶ ಕ್ಲೈಮ್ಯಾಕ್ಸ್ ಗೆ ಹೋಗಿ ಸುಖಾಂತ್ಯವಾಗಿ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯ ತಲುಪಲು ವಿಳಂಭವಾಗಿತ್ತು ಮತ್ತು ವಿವಾಹ ಮಹೂರ್ತ ತಪ್ಪಿ ಹೋಗಿತ್ತು.
ಮದುವೆ ಮಹೂರ್ತ ಇಲ್ಲದ ಅವೇಳೆಯಲ್ಲಿ ಮದುವೆ ಆಗಬಾರದು ಮತ್ತು ಪುರೋಹಿತ್ಯ ವಹಿಸಿದರೆ ತಮ್ಮದೂ ತಪ್ಪು ಎಂದು ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದ ಪ್ರದಾನ ಅರ್ಚಕರಾಗಿದ್ದ ಸಂತರ ಸಮಾವೇಶಗಳ ಸಂಚಾಲಕರಾಗಿದ್ದ ವಿಶ್ವ ಹಿಂದೂ ಪರಿಷತ್ ನ ಪ್ರಮುಖರಾಗಿದ್ದ ನರಸಿಂಹಮೂರ್ತಿ ಅಯ್ಯಂಗಾರರು ತಿಳಿಸಿದಾಗ ನನಗೆ ತಲೆಯ ಮೇಲೆ ಬಾಂಬ್ ಬಿದ್ದ ಹಾಗಾಯಿತು.
ನಂತರ ಅವರಿಗೆ ನನ್ನ ಪ್ರೇಮ ವಿವಾಹ ಮತ್ತು ಅಂತರ್ಜಾತಿ ವಿವಾಹ ಇದಕ್ಕೆ ಎರೆಡೂ ಕುಟುಂಬ ಒಪ್ಪಿಸಿ ಇಲ್ಲಿಗೆ ನನ್ನ ತಂದೆಯನ್ನ ಒಪ್ಪಿಸಿ ಕರೆತರಲು ವಿಳಂಭವಾಗಿ ಮಹೂರ್ತ ತಪ್ಪಿ ಹೋಯಿತು, ನನಗೆ ಏನೇ ತೊಂದರೆಯಾದರೂ ಪರವಾಗಿಲ್ಲ ದಯಮಾಡಿ ಮದುವೆ ಶಾಸ್ತ್ರ ಮಾಡಿ ಕೊಡಿ ಇಲ್ಲದಿದ್ದರೆ ಮುಂದೆ ಕಷ್ಟ ಅಂತ ವಿನಂತಿಸಿದ್ದೆ.
ನಂತರ ಮಹೂರ್ತ ಇಲ್ಲದ ಸಮಯದಲ್ಲಿ ವಿವಾಹ ನೆರವೇರಿತು ಮತ್ತು ನನ್ನ ಮದುವೆಗೆ ವಿವಾಹ ಆಹ್ವಾನ ಪತ್ರಿಕೆ ಮಾಡಿಸಿರಲಿಲ್ಲ ಅವತ್ತಿಗೆ ಅತ್ಯಾಪ್ತರಾಗಿದ್ದವರನ್ನು ಕರೆದಿದ್ದೆ ಅವತ್ತು ಮದುವೆಗೆ 25 ಜನ ಅಷ್ಟೇ ಸಾಕ್ಷಿದಾರರು.
ನಂತರ ಶಿವಮೊಗ್ಗದ ಜ್ಯೂವೆಲ್ ರಾಕ್ ಹೋಟೆಲ್ ನಲ್ಲಿ ಅತಿಥಿಗಳಿಗೆ ಅವರಿಷ್ಟದ ವೆಜ್ - ನಾನ್ ವೆಜ್ - ಆಲ್ಕೋಹಾಲ್ ಬೋಜನ ಮಾಡಿಸಿ ಮನೆ ಸೇರಿದ್ದೆ.
ಈವರೆಗೆ ನಾನು ನನ್ನ ಪತ್ನಿ ನನ್ನ ಇಬ್ಬರ ಮಕ್ಕಳು ಬರ್ತಡೇ ಸೆಲೆಬ್ರೇಷನ್ ಮಾಡಿಲ್ಲ ಕೇಕ್ ಕಟ್ ಮಾಡಿಲ್ಲ ಮತ್ತು ವಿವಾಹ ವಾರ್ಷಿಕೋತ್ಸವ ಕೂಡ ಆಚರಿಸುವುದಿಲ್ಲವಾದ್ದರಿಂದ ನಿನ್ನೆ ಆಗಸ್ಟ್ 23 ನನ್ನ ವಿವಾಹ ವಾರ್ಷಿಕೋತ್ಸವ ಅಂತ ನೆನಪು ನನಗೂ ಆಗಲಿಲ್ಲ ನನ್ನ ಪತ್ನಿಗೂ ನೆನಪಾಗಲಿಲ್ಲ ಕೆಲವೊಂದು ವರ್ಷ ಮಗ ಮಗಳಿಗೆ ನೆನಪಾಗಿ ಶುಭ ಹಾರೈಸುತ್ತಿದ್ದರು ಈ ವರ್ಷ ಅವರಿಗೂ ನೆನಪಾಗಲಿಲ್ಲ.
ಆದರೆ ಪೇಸ್ ಬುಕ್ ಇವತ್ತು ನನ್ನ ವಿವಾಹ ವಾರ್ಷಿಕೊತ್ಸವ ಒಂದು ದಿನದ ನಂತರ ನೆನಪಿಸಿದಾಗಲೇ ಗೊತ್ತಾಯಿತು ಮತ್ತು 34 ವರ್ಷದ ಹಿಂದಿನ ನನ್ನ ಮದುವೆ ದಿನದ ನೆನಪು ಆಯಿತು.
Comments
Post a Comment