Skip to main content

Posts

Showing posts with the label Yahya saheb special charector wealthy man

Blog number 3374. ನಮ್ಮ ಆನಂದಪುರಂನ ವಿಶೇಷ ವ್ಯಕ್ತಿ

#ಯಾಹ್ಯಾ_ಸಾಹೇಬರು ನಮ್ಮ ಊರಿನ ಸಜ್ಜನ ಉಪಕಾರಿ ಸಾಹುಕಾರರಾದ ಯಾಹ್ಯಾ ಸಾಹೇಬರ ನೆನಪುಗಳು. ಅರವತ್ತರ ದಶಕದಲ್ಲಿ ಇಡೀ ಆನಂದಪುರಂ ಹೋಬಳಿಗೆ ದೊಡ್ಡ ವರ್ತಕರು. ಆ ಕಾಲದ ಕೌಬಾಯ್ ಫ್ಯಾಷನ್ ಇವರದ್ದು. ಆ ಕಾಲದ ಹಿಂದಿ ನಟ ರಾಜೇಶ್ ಖನ್ನಾ ರೀತಿ ಇದ್ದರು.  ಕುದುರೆ ಸವಾರಿ ಶಿಕಾರಿ ಜೀಪ್ ಬೈಕ್ ಸವಾರಿ ಕೃಷಿ ವ್ಯಾಪಾರ ಇವರದ್ದು  ರೈಪಲ್, ತೋಟಾ ಬಂದೂಕು,ರಿವಾಲ್ವಾರ್ ಸಂಗ್ರಹಣೆಯ ಶೋಕಿ ಇವರದ್ದು.  ಇವರ ಅಂಗಡಿಯ ಕಡು ನೀಲಿ ಬಣ್ಣದ ಸಾಲದ ಪುಸ್ತಕ ಸಿಕ್ಕರೆ ಈಕಾಲದ ಬ್ಯಾಂಕ್ ಒಡಿ ಸಿಕ್ಕಿದಂತೆ ಸಾಗರ ಮತ್ತು ಶಿವಮೊಗ್ಗ ತಾಲ್ಲೂಕು ಅಂಚಿನ ಕುಣೇಹೊಸೂರು ಸಮೀಪದ ಉದನೂರು ಎಂಬಲ್ಲಿ ನೂರು ಎಕರೆ ಅಡಿಕೆ ತೋಟ ಇತ್ತು. ಯಡೇಹಳ್ಳಿಯಲ್ಲಿ  ಆರ್. ಆರ್.ರೈಸ್ ಮಿಲ್ ಇವರದ್ದೆ.    1970 ರಲ್ಲಿ ಅವರಿಗೆ 50 ವಷ೯ ಇರಬಹುದು ನಮಗೆಲ್ಲ 5 ವಷ೯ ಆಗ ಅವರ ದಿನಸಿ ಅಂಗಡಿ ಇಡೀ ಊರಿಗೆ ದೊಡ್ಡದು.  ಆ ಕಾಲದಲ್ಲಿ ಹುಬ್ಬಳ್ಳಿಯಿಂದ ಇವರ ಸ್ವಂತ ಲಾರಿಗಳಲ್ಲಿ ದಿನಸಿ ತರಿಸುತ್ತಿದ್ದರು.    ಪೊಟ್ಟಣ ಕಟ್ಟಲು ಹತ್ತಾರು ಸಹಾಯಕರು,ದಿನಸಿ ಪಟ್ಟಿ ಬರೆಯಲು ನಾಕಾರು ರೈಟರು, ಹಣ ಪಡೆಯಲು ಮತ್ತಿಬ್ಬರು ಹೀಗೆ ದೊಡ್ಡ ಪ್ರಮಾಣದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು.       ಮಾಲಿಕರಾದ ಯಾಹ್ಯ ಸಾಹೇಬರು ಮಿರ, ಮಿರ ಮಿಂಚುವ ಜೀಪಿನಲ್ಲಿ ಬರುತ್ತಿದ್ದರು, ನೈಲಾನ್ ಬಟ್ಟಿಯ ಬಣ್ಣದ ಶಟ್೯ ಆ ಕಾಲದ ರ...