Skip to main content

Blog number 3374. ನಮ್ಮ ಆನಂದಪುರಂನ ವಿಶೇಷ ವ್ಯಕ್ತಿ

#ಯಾಹ್ಯಾ_ಸಾಹೇಬರು

ನಮ್ಮ ಊರಿನ ಸಜ್ಜನ ಉಪಕಾರಿ ಸಾಹುಕಾರರಾದ ಯಾಹ್ಯಾ ಸಾಹೇಬರ ನೆನಪುಗಳು.


ಅರವತ್ತರ ದಶಕದಲ್ಲಿ ಇಡೀ ಆನಂದಪುರಂ ಹೋಬಳಿಗೆ ದೊಡ್ಡ ವರ್ತಕರು.

ಆ ಕಾಲದ ಕೌಬಾಯ್ ಫ್ಯಾಷನ್ ಇವರದ್ದು.

ಆ ಕಾಲದ ಹಿಂದಿ ನಟ ರಾಜೇಶ್ ಖನ್ನಾ ರೀತಿ ಇದ್ದರು.

 ಕುದುರೆ ಸವಾರಿ ಶಿಕಾರಿ ಜೀಪ್ ಬೈಕ್ ಸವಾರಿ ಕೃಷಿ ವ್ಯಾಪಾರ ಇವರದ್ದು

 ರೈಪಲ್, ತೋಟಾ ಬಂದೂಕು,ರಿವಾಲ್ವಾರ್ ಸಂಗ್ರಹಣೆಯ ಶೋಕಿ ಇವರದ್ದು.

 ಇವರ ಅಂಗಡಿಯ ಕಡು ನೀಲಿ ಬಣ್ಣದ ಸಾಲದ ಪುಸ್ತಕ ಸಿಕ್ಕರೆ ಈಕಾಲದ ಬ್ಯಾಂಕ್ ಒಡಿ ಸಿಕ್ಕಿದಂತೆ

ಸಾಗರ ಮತ್ತು ಶಿವಮೊಗ್ಗ ತಾಲ್ಲೂಕು ಅಂಚಿನ ಕುಣೇಹೊಸೂರು ಸಮೀಪದ ಉದನೂರು ಎಂಬಲ್ಲಿ ನೂರು ಎಕರೆ ಅಡಿಕೆ ತೋಟ ಇತ್ತು.

ಯಡೇಹಳ್ಳಿಯಲ್ಲಿ  ಆರ್. ಆರ್.ರೈಸ್ ಮಿಲ್ ಇವರದ್ದೆ.

   1970 ರಲ್ಲಿ ಅವರಿಗೆ 50 ವಷ೯ ಇರಬಹುದು ನಮಗೆಲ್ಲ 5 ವಷ೯ ಆಗ ಅವರ ದಿನಸಿ ಅಂಗಡಿ ಇಡೀ ಊರಿಗೆ ದೊಡ್ಡದು.

 ಆ ಕಾಲದಲ್ಲಿ ಹುಬ್ಬಳ್ಳಿಯಿಂದ ಇವರ ಸ್ವಂತ ಲಾರಿಗಳಲ್ಲಿ ದಿನಸಿ ತರಿಸುತ್ತಿದ್ದರು.

   ಪೊಟ್ಟಣ ಕಟ್ಟಲು ಹತ್ತಾರು ಸಹಾಯಕರು,ದಿನಸಿ ಪಟ್ಟಿ ಬರೆಯಲು ನಾಕಾರು ರೈಟರು, ಹಣ ಪಡೆಯಲು ಮತ್ತಿಬ್ಬರು ಹೀಗೆ ದೊಡ್ಡ ಪ್ರಮಾಣದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು.
  
   ಮಾಲಿಕರಾದ ಯಾಹ್ಯ ಸಾಹೇಬರು ಮಿರ, ಮಿರ ಮಿಂಚುವ ಜೀಪಿನಲ್ಲಿ ಬರುತ್ತಿದ್ದರು, ನೈಲಾನ್ ಬಟ್ಟಿಯ ಬಣ್ಣದ ಶಟ್೯ ಆ ಕಾಲದ ರಾಜೇಶ್ ಖನ್ನರ ಸ್ಟೈಲ್ ನ ಟೈಟ್ ಪ್ಯಾಂಟ್, ಚೂಪು ಬೂಟು, ಸೊ೦ಟದಲ್ಲಿ ರಿವಾಲ್ವರ್, ಗಮ ಗಮ ಎನ್ನಿಸುವ ಪರಿಮಳ ಸಿಂಪಡಿಸಿಕೊಂಡು ಟಕ್ ಟಕ್ ಎನ್ನುವ ಚೂಪು ತುದಿಯ ಬೂಟಿನ ಸದ್ದಿನೊಂದಿಗೆ ಬಂದು ತಿರುಗುವ ಕುಚಿ೯ಯಲ್ಲಿ ಕುಳಿತು ಪಕ್ಕದಲ್ಲಿನ ದೊಡ್ಡ ಟ್ರಿಜರಿಯ ಬಾಗಿಲು ತೆಗೆದರೆ ಅದರಲ್ಲಿ ಕಂತೆ ಕಂತೆ ನೋಟುಗಳು.

      ಯಹ್ಯಾ ಸಾಹೇಬರಿಗೆ ಶಿವಮೊಗ್ಗ ಮತ್ತು ಸಾಗರ ತಾಲೂಕಿನ ಗಡಿಯಾದ ಕುಣೇಹೊಸೂರು ಸಮೀಪದ ದಟ್ಟ ಕಾಡಿನ ಮಧ್ಯದ ಬೆಟ್ಟಗಳ ಪ್ರದೇಶವಾದ ಉದನೂರು ಎಂಬಲ್ಲಿ ನೂರಾರು ಎಕರೆ ಜಮೀನು ಇತ್ತು.

   ಯಾಹ್ಯಾ ಸಾಹೇಬರಿಗೆ ಅಲ್ಲಿ ಕಾಡು ಪ್ರಾಣಿಗಳ ಶಿಕಾರಿ ಮಾಡುವ ಹವ್ಯಾಸ ಅದಕ್ಕಾಗಿ ತರಹೇವಾರಿ ಬಂದೂಕುಗಳ ಸಂಗ್ರಹ ಅವರಲ್ಲಿತ್ತು.

 ತಿರುಗಾಡಲು ಅತ್ಯುತ್ತಮ ತಳಿಯ ಕುದುರೆ ಮತ್ತು ಕುದುರೆ ಗಾಡಿ, ಆ ಕಾಲದ ಕೆಂಪು ಬುಲೆಟ್ ಬೈಕ್, ಮಿಲ್ಟ್ರಿ ಜೀಪ್, ಅತ್ಯುತ್ತಮ ದರ್ಜೆಯ ಉಡುಪು, ಬೂಟು, ಕೈ ಗಡಿಯಾರ, ಪರಿಮಳ ದ್ರವ್ಯಗಳು ಅವರನ್ನು ಆ ಕಾಲದ ಯಂಗ್ ಅಂಡ್ ಎನಜ೯ಟಿಕ್ ಹೀರೋ ಮಾಡಿತ್ತು, ಹೀಗೆ ಯಾಹ್ಯಾ ಸಾಹೇಬರದ್ದು ರಾಜಾ ಠೀವಿ.

  ಯಾರ ಜೊತೆಯೂ ಜಗಳವಿಲ್ಲ, ಎಲ್ಲರ ಜೊತೆ ಬೆರೆಯುತ್ತಿರಲಿಲ್ಲ ಅವರ ಸಿಬ್ಬಂದಿಗಳ ಮೂಲಕವೆ ಇವರನ್ನು ಸಂಪರ್ಕಿಸ ಬೇಕಾಗಿತ್ತು.

    ಇವರ ಅಂಗಡಿಯಲ್ಲಿ ನೀಲಿ ಬಣ್ಣದ ಸಾಲದ ಪುಸ್ತಕ ಸಿಕ್ಕಿದವರ ಮನೆಯಲ್ಲಿ ಆ ಕಾಲದಲ್ಲಿ ಹಸಿವು ಇರುತ್ತಿರಲಿಲ್ಲ, ಆದರೆ ಅದು ಸುಲಭವಾಗಿ ಸಿಗುವುದಲ್ಲ ಈಗೆಲ್ಲ ಬ್ಯಾಂಕಿನಲ್ಲಿ OD ಸಿಕ್ಕ೦ತೆ, ಆಗ ಬಡತನ ಹೆಚ್ಚು ಒಂದು ಹೊತ್ತು ಇದ್ದರೆ ಇನ್ನೊಂದು ಹೊತ್ತು ಇಲ್ಲದ ಕಾಲ. 

   ನಮ್ಮ ತಂದೆ ಇವರ ಅಂಗಡಿಯಲ್ಲಿ ಸಾಲದ ಖಾತೆ ಹೊಂದಿದ್ದರು ಹಾಗಾಗಿ ನಮ್ಮ ಮನೇಲೂ ಒಂದು ನೀಲಿ ಬಣ್ಣದ ಸಾಲದ ಪುಸ್ತಕ ಇತ್ತು ಅದನ್ನ ತೆಗೆದುಕೊಂಡು ದಿನಸಿ ತರಲು ನಮ್ಮ ಅಣ್ಣನೊಂದಿಗೆ ಇವರ ಅಂಗಡಿಗೆ ಹೋಗುತ್ತಿದ್ದೆ ಆಗೆಲ್ಲ ಯಾಹ್ಯಾ ಸಾಹೇಬರನ್ನೆ ಅಚ್ಚರಿಯಿ೦ದ ನೋಡುವುದೇ ನಮಗೆಲ್ಲ ಸಂಭ್ರಮ ಆಗಿತ್ತು.

   ಅಬ್ಬುಲ್ ಯಾಹ್ಯಾ ಸಾಹೇಬರು ಇಹ ಲೋಕ ತ್ಯಜಿಸಿ ಎಂಟು ವರ್ಷಗಳಾಯಿತು (13- ಡಿಸೆಂಬರ್ -2016), ಇವರ ಮೊದಲ ಪುತ್ರ ಅಬೀಬುಲ್ಲಾ ಸಾಹೇಬರೂ ಈಗಿಲ್ಲ, ಎರಡನೆ ಪುತ್ರ ರಹಮತುಲ್ಲಾ ಮತ್ತು ಕೊನೆಯ ಪುತ್ರರು ರೈಸ್ ಮಿಲ್ ಮತ್ತು ತೋಟ ನೋಡಿಕೊಳ್ಳುತ್ತಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...