https://www.facebook.com/share/p/19W6a4f5rV/
*#ಅಡಿಕೆ_ಯಂತ್ರದ_ಪಿತಾಮಹರು*
*ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಮುಂಡಿಗೆಸರದವರು.*
*ನೆನಪಿರಲಿ ಈಗ ಮಾರುಕಟ್ಟೆಯಲ್ಲಿರುವ ಎಲ್ಲಾ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಇವರ ಅವಿಷ್ಕಾರದ ತಂತ್ರಜ್ಞಾನ ಬಳಸಿಯೇ ತಯಾರಾಗಿ ಮಾರಾಟ ಆಗುತ್ತಿರುವುದು.*
*ಅವರಾರು ಇವರ ಹೆಸರು ಹೇಳುತ್ತಿಲ್ಲ ಆದರೆ ಉಡುಪಿಯ ಯೋಜನ್ ಸಂಸ್ಥೆ ಮಾತ್ರ ಇವರ ಹೆಸರು ಬಳಸಿಕೊಂಡು ಸುಮಾರು 15 ಸಾವಿರ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ತಯಾರಿಸಿ ಮಾರಾಟ ಮಾಡಿದೆ.*
*ಈ ಸಂಸ್ಥೆಗೆ ಅಡಿಕೆ ಬೆಳೆಗಾರರು ಪ್ರೋತ್ಸಾಹಿಸ ಬೇಕು.*
#arecanut #arecadehuskingmachine #yojanudupi #CorporationBank #shivamogga #karnatakarajyaraithasanga #thirthahalli #koppa #sringeri #hosanagara #sagar #sirsi #siddapura #soraba #chennagiri #Biruru #malenadu #campco #macOS
*ನಾನ್ಯಾಕೆ ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ಮುಂಡಿಗೆಸರದ ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಪಿತಾಮಹರಾದ ಮOಜಪ್ಪ ಮತ್ತು ಅವರ ಮಗ ರಾಮಮೂರ್ತಿ ಬಗ್ಗೆ ಲೇಖನ ಬರೆದೆ ಎಂದರೆ ನನಗೆ ನನ್ನ ಊರು- ಸಾಧಕರು ಅಂದರೆ ಹೆಮ್ಮೆ.*
*ಅದಕ್ಕಾಗಿ ಮತ್ತು ಗ್ರಾಮೀಣ ಪ್ರದೇಶದ ಸಾದಕರ ಸಂಶೋಧಕರ ಸಾಧನೆಗೆ ಸಿಗಬೇಕಾದ ಮನ್ನಣೆ ಸಿಗದ ಬಗ್ಗೆ ನನ್ನ ಅಸಮದಾನ ದಾಖಲಿಸಿದೆ ಇದು ನನಗೆ ತೃಪ್ತಿ ತಂದಿದೆ.*
*ಅಡಿಕೆ ಬೆಳೆ ವಿಸ್ತಾರ ಆಗುತ್ತಾ ಸಾಗಿತ್ತು ಆಗಲೇ ಸಂಪ್ರದಾಯಿಕ ಅಡಿಕೆ ಸುಲಿಯುವ ಹೆಣ್ಣು ಮಕ್ಕಳು ಕೊರತೆ ಪ್ರಾರಂಭವಾಗಿತ್ತು.*
*ಈ ಸಂದರ್ಭದಲ್ಲಿ ಅಲ್ಲಲ್ಲಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರಗಳು ಬರಲು ಪ್ರಾರಂಭವಾಗಿತ್ತು.*
*ಆಗಲೇ ಸಾಗರ ತಾಲೂಕಿನಾದ್ಯಂತ ಒಂದು ವಿಷಯ ಹರಡುತ್ತಿತ್ತು ಅದೇನೆಂದರೆ ಅಡಿಕೆ ಸುಲಿಯುವ ಮಿಷನ್ ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಮುಂಡಿಗೆಸರ ಮಂಜಪ್ಪನವರು ಕಂಡುಹಿಡದಿದ್ದಾರೆ ಅಂತ.*
*ಈ ಸುದ್ದಿ ಮುಂದುವರೆದು ಅಡಿಕೆ ಮಿಷನ್ ಸಿಪ್ಪೆ ತೆಗೆಯುವ ಯಂತ್ರ ಕಂಡು ಹಿಡಿದ ಮೊದಲ ವ್ಯಕ್ತಿ ಮುಂಡಿಗೇಸರ ಮಂಜಪ್ಪ ಅಂತ ಸುದ್ದಿ ಕೇಳಿ ಬರುತ್ತಿತ್ತು.*
*ಅವರ ಟೆಕ್ನಾಲಜಿ ಬಳಸಿಕೊಂಡೆ ಈ ಯಂತ್ರಗಳು ತಯಾರಾಗಿದ್ದು ಎನ್ನುವ ಸುದ್ದಿಯು ಬರುತ್ತಿತ್ತು.*
*ನಂತರ ಈ ಸುದ್ದಿ ಬದಲಾಯಿತು ಮಂಜಪ್ಪನವರಿಗೆ ಮೋಸ ಮಾಡಿ ಯಂತ್ರ ತಯಾರಕರು ಬೇರೆ ಹೆಸರಲ್ಲಿ ಅಡಿಕೆ ಸುಲಿಯುವ ಯಂತ್ರ ಮಾಡುತ್ತಿದ್ದಾರೆ ಅಂತ.*
*ಮುಂಡಿಗೆಸರದ ಮಂಜಪ್ಪನವರ ಅಡಿಕೆ ಸುಪ್ಪೇ ಸುಲಿಯುವ ಯಂತ್ರದ ಅವಿಷ್ಕಾರದ ದಿನಗಳಲ್ಲಿ ನಿನಾಸಂ ಕೆ. ವಿ. ಸುಬ್ಬಣ್ಣ ಮತ್ತು ಸಾಹಿತಿ ಶಿವರಾಮ ಕಾರಂತರು ವೀಕ್ಷಿಸುತ್ತಿದ್ದರು ಎನ್ನುವ ಸುದ್ದಿಗಳು ಹೆಚ್ಚು ಪ್ರಚಲಿತವಾಗಿತ್ತು.*
*ನಂತರದ ದಿನಗಳಲ್ಲಿ ಮುಂಡಿಗೆಸರದ ಮಂಜಪ್ಪನವರು ಈ ಯಂತ್ರದ ಸಂಶೋಧನೆಯನ್ನು ಹೆಚ್ಚು ತಲೆಗೆ ಹಚ್ಚಿಕೊಂಡು ಬುದ್ಧಿ ಭ್ರಮಣಕ್ಕೂ ಒಳಗಾದರೂ ಎಂಬ ಸುದ್ದಿಗಳು ಕೇಳಿ ಬರುತ್ತಿತ್ತು.*
*ನಂತರ ಮುಂಡಿಗೆಸರ ಮಂಜಪ್ಪನವರ ಮಗ ರಾಮಮೂರ್ತಿ ಅತ್ಯುತ್ತಮ ಯಂತ್ರ ಅವಿಷ್ಕಾರ ಮಾಡಿ ಅಡಿಕೆ ಬೆಳೆಗಾರರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂಬ ಸುದ್ದಿಯು ಬಂತು.*
*ಅದರ ನಂತರ ಪತ್ರಿಕೆಗಳಲ್ಲಿ ಶಿವಮೊಗ್ಗದ ಮಾಮ್ಕೋಸ್ ಸಂಸ್ಥೆ ಈ ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಆಧುನಿಕರಣಕ್ಕೆ ಮುಂಡಿಗೆಸರದ ಮಂಜಪ್ಪ ಮತ್ತು ಅವರ ಮಗ ರಾಮಮೂರ್ತಿಗೆ ಪ್ರೋತ್ಸಾಹ ಧನದೊಂದಿಗೆ ಸಹಾಯ ಮಾಡುತ್ತಿದೆ ಎಂಬ ಸುದ್ದಿ.*
*ಆನಂತರದಲ್ಲಿ ಬಂದ ಸುದ್ದಿ ಮುಂಡಿಗೆಸರ ಮಂಜಪ್ಪನವರು ಕಂಡುಹಿಡಿದ ಯಂತ್ರ ಅವರ ಮಗ ರಾಮ್ ಮೂರ್ತಿ ಯಶಸ್ವಿಯಾಗಿ ಆಧುನಿಕರಣ ಮಾಡಿದರೂ ಈ ಯಂತ್ರದ ಬಗ್ಗೆ ಯಾವುದೇ ಉತ್ಸಾಹ ತೋರುತ್ತಿಲ್ಲ ಪೇಟೆಂಟ್ ಮಾಡಿಸುತ್ತಿಲ್ಲ ಇತ್ಯಾದಿ ಸುದ್ದಿ.*
*ಅಡಿಕೆ ಸಂಘಟನೆಯಲ್ಲಿ ಇರುವ ಕೆಲವರು ದುರುದ್ದೇಶದಿಂದ ಇವರ ಸಾಧನೆಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ ಇವರ ಕೆಲಸವನ್ನು ಪ್ರೋತ್ಸಾಹಿಸುತ್ತಿಲ್ಲ ಇದೆಲ್ಲದರಿಂದ ಆರ್ಥಿಕ ನಷ್ಟ ಹೊಂದಿರುವ ಮತ್ತು ಸಂಸಾರಿಕ ತಾಪತ್ರಾಯಗಳಿಂದ ರಾಮಮೂರ್ತಿ ತಾವು ಕಂಡುಹಿಡಿದ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಮನೆಯಿಂದ ಹೊರ ತಂದು ಹಾಕಿ ಯಾರಾದರೂ ಇದನ್ನು ಮುಂದುವರಿಸಿಕೊಂಡು ಹೋಗಿ ಅನ್ನುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಹರಡಿತು.*
*ಆ ಸಂದರ್ಭದಲ್ಲಿ ಅಡಿಕೆ ಪತ್ರಿಕೆಯಲ್ಲಿ ಶ್ರೀ ಪಡ್ರೆ ಅವರು ಮುಂಡಿಗೆಸರ ಮಂಜಪ್ಪರ ಚಿತ್ರ ಸಹಿತ ಲೇಖನವೊಂದನ್ನು ಪ್ರಕಟಿಸಿದ್ದರು ಅದು ಅಡಿಕೆ ಬೆಳೆಗಾರರರಿಗೆ ಹೆಚ್ಚು ತಲುಪಿತ್ತು.*
*ಇದೆಲ್ಲ ಸುದ್ದಿಗಳ 10 -20 ವರ್ಷದ ನಂತರ ಅಡಿಕೆ ಬೆಳೆಗಾರರಿಗೆ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಅನಿವಾರ್ಯವಾಯಿತು, ಆದ್ದರಿಂದ ಕೆಲವು ಅಡಿಕೆ ಸಿಪ್ಪೆ ಸುಲಿಯುವ ಯಂತ್ರಗಳು ಮಾರುಕಟ್ಟೆಗೆ ಬಂದಿತು.*
*ಈ ವಿಚಾರದಲ್ಲಿ ನನ್ನಲ್ಲಿ ಕೆಲ ಪ್ರಶ್ನೆಗಳು ಹಾಗೇ ಉಳಿದು ಹೋಗಿತ್ತು.*
*ನಾನು ಅನೇಕ ಮೂಲಗಳಿಂದ ಈ ಕುಟುಂಬದ ಮಾಹಿತಿ ಪಡೆದನಾದರೂ ಅವರ ಸಾಧನೆಯನ್ನು ಕೇಳಿದೆನಾದರೂ ಮುಖತಃ ಭೇಟಿ ಸಾಧ್ಯವಾಗಿರಲಿಲ್ಲ.*
*ಇದೇ ಸಂದರ್ಭದಲ್ಲಿ ಸಾಗರದಲ್ಲಿ ಅಡಿಕೆ ಬೆಳೆಗಾರರ ಸಮಾವೇಶವೊಂದು ಆಯೋಜಿಸಲಾಗಿದೆ, ಡಿಸೆಂಬರ್ 6ನೇ ತಾರೀಕು ಕೇಂದ್ರ ಕೃಷಿ ಮಂತ್ರಿಗಳು ಬರುತ್ತಾರೆ, ವಿಶ್ವ ಸಂಸ್ಥೆಯ ಕೆಲವು ಪ್ರಕಟಣೆಗಳು ಅಡಿಕೆ ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ನಾನು ಅಡಿಕೆ ಬೆಳೆ ಮತ್ತು ಅಡಿಕೆ ಬೆಳೆಗಾರರಿಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಸರಣಿ ಲೇಖನ ಮಾಡಲು ಪ್ರಾರಂಭಿಸಿದೆ.*
*ಈ ಸಂದರ್ಭದಲ್ಲಿ ಕೆಲವು ವರ್ಷದ ಹಿಂದೆ ನನ್ನ ಬ್ಲಾಗ್ ನಲ್ಲಿ ಬರೆದಿದ್ದ ಮುಂಡಿಗೆಸರ ರಾಮಮೂರ್ತಿ ಅವರ ಬಗ್ಗೆ ಬರೆದ ಲೇಖನ ಪುನಃ ಪೋಸ್ಟ್ ಮಾಡಿದೆ.*
*ಈ ಲೇಖನದ ಮೂಲ ಯಾರು ಬರದಿದ್ದೆಂದು ತಿಳಿದಿರಲಿಲ್ಲ ಆದರೆ ಅದರಲ್ಲಿ ನಮೂದಾಗಿದ್ದ ಲೇಖಕರ ಹೆಸರು #ತಿರುಮಲ ಎಂದು ಇತ್ತು.*
*ಆ ಲೇಖನ ಎಷ್ಟು ಚೆಂದಾಗಿ ಬರೆದಿದ್ದಾರೆಂದರೆ ಪುನಹ ಪುನಹ ಓದ ಬೇಕು ಅನ್ನಿಸುತ್ತದೆ.*
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಆ ಲೇಖನ ಓದ ಬಹುದು
https://www.facebook.com/share/p/14yz4N7vbg/
*ಅಷ್ಟೇ ಅಲ್ಲ ಆ ಲೇಖನದಲ್ಲಿರುವ ಒಂದು ತರ್ಕ ಗಮನಿಸಬೇಕು ಅದೇನೆಂದರೆ ಕೆಲವೇ ಮೀಟರ್ ದೂರ ಹಾರಿದ ರೈಟ್ ಸಹೋದರರ ಸಂಶೋಧನೆಯ ವಿಮಾನ ಈಗಲೂ ವಿಮಾನ ಕಂಡು ಹಿಡಿದವರು ಯಾರು? ಎಂದರೆ ರೈಟ್ ಸಹೋದರರು ಎನ್ನುತ್ತೇವೆ ಅದೇ ರೀತಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಅವಿಷ್ಕಾರದ ಪಿತಾಮಹರಾದ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಮುಂಡಿಗೆಸರಮಂಜಪ್ಪ ಮತ್ತು ಅವರ ಮಗ ರಾಮಮೂರ್ತಿ ಎನ್ನಲು ಸಂಕೋಚ ಏಕೆ? ಅನ್ನುವುದು ಆ ಲೇಖನದಲ್ಲಿ ಗಮನ ಸೆಳೆಯುತ್ತದೆ.*
*ಅಷ್ಟೇ ಅಲ್ಲ ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಪಿತಾಮಹರನ್ನ ಬಳಸಿಕೊಂಡ ಬಿಸಾಡಿದ ಶಿವಮೊಗ್ಗ ಜಿಲ್ಲೆಯ ಅಡಿಕೆ ಸಿಪ್ಪೆ ತೆಗೆಯುವ ಯಂತ್ರದ ಮಾರಾಟಗಾರರ ಕರಾಮತ್ತಿನ ಬಗ್ಗೆ ಮತ್ತು ಆ ಯಂತ್ರದ ಅವಿಷ್ಕಾರ ತನ್ನದೇ ಎಂದು ಸನ್ಮಾನಗಳನ್ನು ಸ್ವೀಕರಿಸಿದ್ದು, ಸಮಾಜದ ಗಣ್ಯರು ಅವರನ್ನು ಸನ್ಮಾನಿಸಿದ್ದು ಅದೆಲ್ಲವೂ ಈ ಮಲೆನಾಡಿನ ಮುಗ್ಧ ವಿಜ್ಞಾನಿ ಮುಂಡಿಗೆಸರ ರಾಮಮೂರ್ತಿ ಎದುರಿನಲ್ಲೇ ಎಂಬ ಅಘಾತಕಾರಿ ಸುದ್ದಿ ಕೂಡ ದಾಖಲಿಸಿದ್ದರು.*
*ಈ ಸುದ್ದಿಯನ್ನೇ ನಾನು ಮತ್ತೆ ನನ್ನ ಫೇಸ್ಬುಕ್ ಅಲ್ಲಿ ಪ್ರಕಟಿಸಿದೆ ನನಗೆ ಆಶ್ಚರ್ಯ ಈ ಸುದ್ದಿ ವೀಕ್ಷಿಸಿದವರು ಹತ್ತಿರ ಹತ್ತಿರ ಐದು ಲಕ್ಷ ವೀಕ್ಷಕರು.*
*ಇದು ನನಗೆ ಆಶ್ಚರ್ಯ ಅನ್ನಿಸಿತು,ಅಸಂಖ್ಯಾತ ಅಡಿಕೆ ಬೆಳಗಾರರ ರೈತರಿಗೆ, ಮಲೆನಾಡಿನ ಹೋರಾಟಗಾರರಿಗೆ ಈ ಲೇಖನ ತಲುಪಿತು ಅವರು ಓದಿ ತಮ್ಮ ಅತೃಪ್ತಿಯನ್ನ ವ್ಯಕ್ತಪಡಿಸಲು ಪ್ರಾರಂಭಿಸಿದರು.*
*ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ರಾಜೇಂದ್ರ ನನಗೆ ಕರೆ ಮಾಡಿ ಈ ವಿಚಾರದ ಬಗ್ಗೆ ಮಾತಾಡಿದ್ದರು, ಮತ್ತು ಮುಂಡಿಗೆಸರ ಮಂಜಪ್ಪ ಮತ್ತು ಅವರ ಮಗ ರಾಮುಮೂರ್ತಿಯ ಫೋಟೋ, ದಾಖಲೆ, ಅಡಿಕೆ ಪತ್ರಿಕೆಯಲ್ಲಿ ಬಂದ ವರದಿಯ ಲೇಖನದ ಪ್ರತಿ ಕಳಿಸುವುದಾಗಿ ಭರವಸೆ ನೀಡಿದರು.*
*ಇದೇ ಸಂದರ್ಭದಲ್ಲಿ ದೂರದ ಮಹಾರಾಷ್ಟ್ರದ ಮುಂಬೈಯಿಂದ ಒಂದು ಹೆಣ್ಣು ಮಗಳು ಪ್ರತಿಕ್ರಿಯೆ ಮಾಡಿದ್ದರು ಅವರು "ಮುಂಡಿಗೆಸರ ಮಂಜಪ್ಪ ನನ್ನ ಅಜ್ಜ ಆಗಬೇಕು ಅವರ ಸಾಧನೆ ದೊಡ್ಡದು" ಎಂದಾಗ ಅವರಿಗೆ ಹೆಚ್ಚಿನ ಮಾಹಿತಿ ಕೇಳಿದಾಗ ಅವರು ಕೆಲವು ಫೋಟೋಗಳನ್ನು ಕಳಿಸಿದ್ದರು.*
*ಆ ನಂತರದ ಒಂದು ದಿನ ಬೆಳಿಗ್ಗೆ ರೈತ ಸಂಘದ ರಾಜೇಂದ್ರ ಸಾಗರ ಮಾರ್ಗದಲ್ಲಿ ಅವರ ಕೆಲಸದ ಮೇಲೆ ಉಡುಪಿಯ ಕಾರ್ಪೊರೇಷನ್ ಬ್ಯಾಂಕ್ ಸಂಸ್ಥಾಪಕರ ವಂಶಸ್ಥ ಯಾಸೀನ್ ಮತ್ತು ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಪಿತಾಮಹ ಮುಂಡಿಗೆಸರ ರಾಮಮೂರ್ತಿ ಜೊತೆ ಹೋಗುತ್ತಿರುವುದಾಗಿ ನೀವು ಸಿಗುವುದಾದರೆ ನಿಮ್ಮ ಭೇಟಿ ಮಾಡುತ್ತೇವೆ ಎಂದಿದ್ದರು.*
*ನಾನು ನನ್ನೆಲ್ಲಾ ಕೆಲಸ ಬದಿಗೊತ್ತಿ ಅವರಿಗಾಗಿ ಕಾದೆ ನಂತರ ಅವರೆಲ್ಲರ ಭೇಟಿಯಲ್ಲಿ ಈ ವಿಚಾರಗಳು ತಿಳಿಯಲು ಸಾಧ್ಯವಾಯಿತು ನನ್ನ ಮನಸ್ಸಿನಲ್ಲಿದ್ದ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿತು.*
*ಮುಂಡಿಗೆಸರ ರಾಮಮೂರ್ತಿ ಮತ್ತು ಅವರ ತಂದೆ ಮುಂಡಿಗೆಸರ ಮಂಜಪ್ಪನವರ ಸಾಧನೆಯಾದ ಅಡಿಕೆ ಬೆಳೆಗಾರರ ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಅವಿಷ್ಕಾರದಿಂದ ಅಡಿಕೆ ಬೆಳೆಗಾರರಿಗೆ ದೊಡ್ಡ ಉಪಕಾರ ಆಗಿದೆ.*
*ಈ ಅವಿಷ್ಕಾರ ಮಾಡಿದ ಈ ವಿಜ್ಞಾನಿ ಮುಂಡಿಗೆಸರ ರಾಮಮೂರ್ತಿ ಮತ್ತು ಇವರ ಅವಿಷ್ಕಾರದ ತಂತ್ರಜ್ಞಾನವನ್ನು ಬಳಸಿಕೊಂಡು ಅದು ಕಂಡು ಹಿಡಿದವರು ಮುಂಡಿಗೆಸರದ ಮಂಜಪ್ಪ ಮತ್ತು ರಾಮಮೂರ್ತಿ ಎಂದು ಹೇಳಿಕೊಳ್ಳುವ ಏಕೈಕ ದೊಡ್ಡ ಮನಸ್ಸಿನ ಉಡುಪಿಯ ಯೋಜನ್ ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ತಯಾರಕ ಉದ್ಯಮಿ ಯಾಸಿನ್ ಅವರಿಗೆ ನಮ್ಮ ಸಂಸ್ಥೆಯ ವತಿಯಿಂದ ಸನ್ಮಾನಿಸಿದೆ.*
*ಈಗಾಗಲೇ ಮುಂಡಿಗೆಸರದ ಮಂಜಪ್ಪ ಮತ್ತು ಅವರ ಮಗ ರಾಮಮೂರ್ತಿ ಆವಿಷ್ಕಾರದ ಯಂತ್ರಗಳು ಸುಮಾರು 15 ಸಾವಿರಕ್ಕೂ ಹೆಚ್ಚು ಮಾರಾಟವಾಗಿರುವ ಸುದ್ದಿ ಕೇಳಿದೆ ಇದು ಒಂದು ದಾಖಲೆ ಕೂಡ.*
*ಗ್ರಾಮೀಣ ಪ್ರದೇಶದ ಸಂಶೋದಕ ಮುಂಡಿಗೆಸರದ ಮಂಜಪ್ಪರ ಕುಟುಂಬಕ್ಕೆ ಸಿಕ್ಕಿದ ದೊಡ್ಡ ಗೌರವ ಇದು.*
*ನಂತರದಲ್ಲಿ ಈ ಅಡಿಕೆ ಯಂತ್ರ ಸಂಶೋದಕರ ನನ್ನ ಸತತ ಸರಣಿ ಲೇಖನಗಳು ನಾಡಿನಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿ ದೊಡ್ಡಮಟ್ಟದಲ್ಲಿ ವೀಕ್ಷಕರನ್ನು ತಲುಪಿರುವುದು ನಿಮಗೆಲ್ಲ ತಿಳಿದೇ ಇದೆ.*
*ಇದಕ್ಕೆಲ್ಲ ಕಾರಣ ಆದವರು ಶಿವಮೊಗ್ಗ ಜಿಲ್ಲೆಯ ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ತೀರ್ಥಹಳ್ಳಿ ರಾಜೇಂದ್ರ ಅವರು.*
*ಅವತ್ತು ಇವರ ಜೊತೆ ಶಿವಮೊಗ್ಗದ ಕಬ್ಬು ಬೆಳೆಗಾರರಾದ, ಸಂಶೋದಕರಾದ ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತರಾದ ದಿವಂಗತ ಪ್ರಫುಲ್ ಚಂದ್ರರ ಸಂಬಂಧಿ ತೀರ್ಥಹಳ್ಳಿ ರಘು ಮತ್ತು ಕೋಣಂದೂರಿನ ಇನ್ಸೂರೆನ್ಸ್ ಸಲಹೆಗಾರ ಜಾನ್ ಇದ್ದರು.*
*ಇನ್ನೊಂದು ವಿಶೇಷ ಎಂದರೆ ಅನೇಕ ವರ್ಷದ ಹಿಂದೆ ಮುಂಡಿಗೆಸರ ಮಂಜಪ್ಪ ಮತ್ತು ರಾಮಮೂರ್ತಿ ಪರವಾಗಿ #ತಿರುಮಲ ಹೆಸರಿನಲ್ಲಿ ಅತ್ಯುತ್ತಮ ಲೇಖನವನ್ನು ಬರೆದು ಪ್ರಕಟಿಸಿದವರು ಬೇರಾರೂ ಅಲ್ಲ ರೈತ ಸಂಘದ ಮಾಜಿ ಅಧ್ಯಕ್ಷರಾದ ತೀರ್ಥಹಳ್ಳಿ ರಾಜೇಂದ್ರ ಅವರು ಅಂತಲೂ ಗೊತ್ತಾಯಿತು.*
*ಆ ದಿನದಲ್ಲಿ ಅವರಿಗೆ ಅವರ ಹೆಸರನಲ್ಲಿ ಈ ಲೇಖನ ಬರೆಯುವುದು ಇಷ್ಟವಿರಲಿಲ್ಲ ಆದರೆ ಆ ಒಂದು ಲೇಖನ ಮುಗ್ದ ಮಲೆನಾಡಿನ ವಿಜ್ಞಾನಿ ಒಬ್ಬನಿಗೆ ನ್ಯಾಯ ದೊರಕಿಸಿ ಕೊಟ್ಟಿತ್ತು ಎನ್ನುವುದೇ ಸಮದಾನದ ವಿಷಯ.*
*ಇಂತಹ ಅದೆಷ್ಟೋ ಪ್ರತಿಬಾವಂತರ ಸಾಧನೆ ಇನ್ಯಾರೋ ಬಳಸಿಕೊಳ್ಳುವುದು ತಡೆಯಲು ಸಾಧ್ಯವೇ?*
Comments
Post a Comment